ಬೆಂಗಳೂರಿನ ಕುಡಿತ, ಅಸಭ್ಯ ವರ್ತನೆ, ಅನಾಗರಿಕ ಚಟುವಟಿಕೆಗಳು ಇವುಗಳಿಗೆ ಅನೇಕ ಬಾರಿ ಸುದ್ದಿ ಆಗುವ ರಸ್ತೆ ಎಂಜಿ ರಸ್ತೆ. ಮಹಾತ್ಮ ಗಾಂಧೀಜಿ ರವರ ಹೆಸರನ್ನು ನಾಮಕರಣ ಮಾಡಿರುವ ಈ ರಸ್ತೆಯಲ್ಲಿ ನಡೆಯುವ ಚಟುವಟಿಕೆಗಳು ಮತ್ತು ಇಲ್ಲಿ ಕಾಣುವ ಸಂಸ್ಕೃತಿ ಯಾವುದೂ ಸಹ ಗಾಂಧೀಜಿ ರವರ ಆತ್ಮಕ್ಕೆ ಸಂತೋಷವನ್ನು ನೀಡುವುದಿಲ್ಲ.
- ಸುರೇಶ್ ಕುಮಾರ್ ರಿಂದ ಕಾಂಗ್ರೆಸ್ ವಿರುದ್ದ ‘ಸಂವಿಧಾನಿಕ’ ಪೊಳ್ಳು ವಾದ !
- ಬುದ್ಧಿಜೀವಿ ನಟ ಎಂದು ಕರೆಯಲ್ಪಡುವ ಅನಂತನಾಗ್ ಅವರೊಂದಿಗಿನ ಒಂದು ಪ್ರಸಂಗ
- ಆರ್ಎಸ್ಎಸ್ ಮುಖ್ಯಸ್ಥರ ಪ್ರಕಾರ ಹಿಂದೂಗಳ ವಿಧಗಳು
- ರಾಹುಲ್ ಗಾಂಧಿ ಅವರು ತಕ್ಷಣವೇ ನಾಡಿನ ಜನತೆಯ ಕ್ಷಮೆಯಾಚಿಸಬೇಕು!: ಆರ್ ಅಶೋಕ್
- ಬೆಂಗಳೂರು ಪೇಟೆಯ ವೈಟ್ ಟಾಪಿಂಗ್ ರಸ್ತೆಯಲ್ಲಿ ಪ್ರಥಮ ‘ಫೈರ್ ಹೈಡ್ರೆಂಟ್’ ವ್ಯವಸ್ಥೆ: ಕೃಷ್ಣ ಬೈರೇಗೌಡ
ಪ್ರತಿ ವರ್ಷ ವರ್ಷದ ಆರಂಭದ ಆಚರಣೆಯ ಹಿನ್ನೆಲೆಯಲ್ಲಿ ಕುಡಿದು ತೂರಾಡಿ, ಕುಡಿದು ಕುಪ್ಪಳಿಸಿ, ಅಸಭ್ಯವಾಗಿ ವರ್ತಿಸಿ ಹಲವಾರು ರೀತಿಯ ದೂರುಗಳಿಗೆ ಕಾರಣವಾಗುವ ಈ ರಸ್ತೆಗೆ ಗಾಂಧೀಜಿ ರವರ ಹೆಸರನ್ನು ಇಟ್ಟಿರುವುದು ಸರಿಯಲ್ಲ.
ಮಹಾತ್ಮ ಗಾಂಧೀಜಿ ರವರ ಬಗ್ಗೆ ಸ್ವಲ್ಪವಾದರೂ ಗೌರವ ಇರುವುದಾದರೆ ಕೂಡಲೇ ಈ ರಸ್ತೆಯ ಹೆಸರನ್ನು ಆ ಸಂಸ್ಕೃತಿಗೆ ಅನುಗುಣವಾಗಿ ಯಾರ ಹೆಸರನ್ನು ಬೇಕಾದರೂ ನಾಮಕರಣ ಮಾಡಿ ಆದರೆ ಗಾಂಧೀಜಿಯವರ ಹೆಸರನ್ನು ಮಾತ್ರ ತೆಗೆದುಹಾಕಿ ಅವರ ಆತ್ಮಕ್ಕೆ ಶಾಂತಿಯನ್ನು ಕೊಡಿ ಜೊತೆಗೆ ಮಹಾತ್ಮ ಗಾಂಧೀಜಿಯವರನ್ನ ಆರಾಧಿಸುವ ಮತ್ತು ಗೌರವಿಸುವ ಮನಸ್ಸುಗಳಿಗೆ ಪದೇಪದೇ ಆಗುವ ಹಿಂಸೆಯನ್ನು ತಪ್ಪಿಸಿ.
ಜನರಿಗೆ ಬದುಕನ್ನು ಕಟ್ಟಿಕೊಡುವ ಗ್ರಾಮೀಣ ಪ್ರದೇಶದ ಜನರ ಆರ್ಥಿಕ ಸುಧಾರಣೆಗೆ ಕಾರಣವಾದ ವಿಶ್ವ ಮೆಚ್ಚಿದ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಈಗಾಗಲೇ ಗಾಂಧೀಜಿಯವರ ಹೆಸರನ್ನು ಕಿತ್ತುಹಾಕಿ ತಮಗೆ ಇಷ್ಟ ಬಂದ ರೀತಿಯಲ್ಲಿ ಯೋಜನೆಯನ್ನು ಬದಲಾಯಿಸಿ ಹೆಸರನ್ನು ಪುನರ್ ನಾಮಕರಣ ಮಾಡಿದ್ದಾರೆ ಕೇಂದ್ರ ಸರ್ಕಾರದವರು.
ಇರಬೇಕಾದ ಕಡೆ ಗಾಂಧಿ ಹೆಸರು ಇಲ್ಲ ಆದರೆ ಅವಶ್ಯಕೆತೆ ಇಲ್ಲದ ಕಡೆ ಗಾಂಧಿ ರವರ ಹೆಸರನ್ನು ಇಟ್ಟು ಅವರ ಮೂಲ ಆಶಯಗಳು ಅವರ ವಿಚಾರಗಳು ಮತ್ತು ಅವರ ಬದುಕಿನ ನಡವಳಿಕೆ ಇವುಗಳಿಗೆ ಅಪಚಾರವನ್ನು ಮಾಡುತ್ತಲೇ ಬಂದಿರುತ್ತದೆ ಸರ್ಕಾರಗಳು.
ಆ ರಸ್ತೆಯಲ್ಲಿ ಇಂತಹ ಕಾರ್ಯಕ್ರಮಗಳನ್ನು ನಿಯಂತ್ರಿಸುವ ಅಥವಾ ರದ್ದುಪಡಿಸುವ ಸಾಮರ್ಥ್ಯವಿಲ್ಲದ ಸರ್ಕಾರ ಕಡೆಯ ಪಕ್ಷ ಅವರ ಹೆಸರನ್ನು ಆ ರಸ್ತೆಗೆ ತೆಗೆದುಹಾಕಿ ಸದ್ಯದಲ್ಲಿಯೇ ಗಾಂಧೀಜಿಯವರ ಪುಣ್ಯಸ್ಮರಣೆಯ ದಿನ ಸಮೀಪಿಸುತ್ತಿರುವ ಸಂದರ್ಭದಲ್ಲಿ ಗಾಂಧೀಜಿ ರವರ ವಿಚಾರಧಾರೆಗಳ ಮೇಲೆ ನಡೆಯುತ್ತಿರುವ ಆಕ್ರಮಣಗಳು ಕೊನೆಗೊಳ್ಳಲಿ ರಸ್ತೆ ಗಾಂಧೀಜಿಯವರ ಹೆಸರಿಂದ ಮುಕ್ತವಾಗಲಿ.
– ಕೆ ಎಸ್ ನಾಗರಾಜ್, ಬೆಂಗಳೂರು




