ಸಾವಯವ ಕೃಷಿಯೆಡೆಗೆ ಮುಖ ಮಾಡಿದ ಅಂತನಹಳ್ಳಿ

1 week ago

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರ ದೂರದೃಷ್ಟಿ

ಪುಟ್ಟಣ್ಣಯ್ಯ ಫೌಂಡೇಶನ್‌, ಗ್ರಾಮ ಪಂಚಾಯಿತಿ, ಅಸರ್‌, ಅನೋಡ್‌ ಗವರ್ನೆನ್ಸ್‌ ಲ್ಯಾಬ್‌, ಕೃಷಿ ಇಲಾಖೆಗಳ ಸಹಯೋಗ

ಮಂಡ್ಯ: ಮೇಲುಕೋಟೆ ವಿಧಾನಸಭೆ ವ್ಯಾಪ್ತಿಯ ಬನ್ನಂಗಾಡಿ ಗ್ರಾಮ ಪಂಚಾಯಿತಿಯ ಅಂತನಹಳ್ಳಿ ಗ್ರಾಮದಲ್ಲಿ ಈಗ ಸಾವಯವ ಕೃಷಿಯ ಸದ್ದು ಜೋರಾಗಿದೆ. ಮೇಲುಕೋಟೆ ವಿಧಾನಸಭೆ ಕ್ಷೇತ್ರವನ್ನು ಕಳೆದ ಬಜೆಟ್‌ ನಲ್ಲಿ ಸಾವಯವ ತಾಲೂಕು ಆಗಿ ಘೋಷಣೆ ಮಾಡಿಸಲು ಕಾರಣರಾದ ದರ್ಶನ್‌ ಪುಟ್ಟಣ್ಣಯ್ಯ ಅವರ ಕನಸಿಗೆ ಅಂತನಹಳ್ಳಿ ಗ್ರಾಮ ರೆಕ್ಕೆಕಟ್ಟುತ್ತಿದೆ. ಇಡೀ ತಾಲೂಕನ್ನು ಸಾವಯವಗೊಳಿಸಲು ಪೂರಕವಾದ, ಅಗತ್ಯ ದಿಟ್ಟ ಮತ್ತು ಧೃಡ ಹೆಜ್ಜೆಗಳಿಗೆ ಈ ಗ್ರಾಮ ಸಾಕ್ಷಿಯಾಗಿದೆ.

ಪುಟ್ಟಣ್ಣಯ್ಯ ಫೌಂಡೇಶನ್‌ ನಡೆಸಿದ ನಮ್ಮ ಊರು ನಮ್ಮ ಹೆಮ್ಮೆ ಕಾರ್ಯಕ್ರಮದಲ್ಲಿ ಜನ ಕೃಷಿ ಮತ್ತು  ಮಣ್ಣಿನ ಆರೋಗ್ಯ ಅಭಿವೃದ್ಧಿ ಪಡಿಸುವ  ಬಗ್ಗೆ ಮಾಹಿತಿ ನೀಡಲು ಕೋರಿಕೆ ಸಲ್ಲಿದ್ದರು. ಅವರ ಕೋರಿಕೆಯ ಮೇರೆಗೆ ಗ್ರಾಮ ಪಂಚಾಯಿತಿ, ಅಸರ್‌, ಅನೋಡ್‌ ಗವರ್ನೆನ್ಸ್‌ ಲ್ಯಾಬ್‌, ಕೃಷಿ ಇಲಾಖೆಗಳ ಜತೆಗೂಡಿ ರೈತರು ಆಯ್ಕೆ ಮಾಡಿದ  ಜಮೀನಿನ ಮಣ್ಣುಗಳನ್ನು ಪರೀಕ್ಷಿಸಿ ಮಣ್ಣು ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲಾಗಿತ್ತು.

ಈ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯನ್ನು ದಿನಾಂಕ 22ನೇ ತಾರೀಖು ತೋಟಗಾರಿಕೆ ಇಲಾಖೆಯ ಸಹಕಾರದೊಂದಿಗೆ ಪುಟ್ಟಣ್ಣಯ್ಯ ಫೌಂಡೇಶನ್‌, ಅಸರ್‌, ಅನೋಡ್‌ ಗವರ್ನೆನ್ಸ್‌ ಲ್ಯಾಬ್‌ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್‌ಗಳನ್ನು ಓದುವ, ಕೃಷಿ ಭೂಮಿಯಲ್ಲಿ ಸಾವಯವ ಇಂಗಾಲವನ್ನು ಹೆಚ್ಚಿಸುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ನಂತರ ಸುಮಾರು 50 ಜನ ರೈತರಿಗೆ ಟ್ರೈಕೊಡರ್ಮಾ ಜೀವಾಣುಗಳನ್ನು ವಿತರಿಸಿ ಅದನ್ನು ಬಳಸುವ ಬಗ್ಗೆ ತಿಳಿಸಲಾಯಿತು. ಕಾರ್ಯಕ್ರಮದ ನಂತರ ರೈತರು ಸಾವಯವ ಕೃಷಿ ಮಾಡುವ ಬಗ್ಗೆ ಉತ್ಸುಕತೆ ತೋರಿದ್ದು ಇದು ಸರ್ಕಾರ ಘೋಷಿಸಿರುವ ಸಾವಯವ ತಾಲೂಕು ಕಾರ್ಯಕ್ರಮಕ್ಕೆ ಕೈಗೊಂಡ ಪ್ರಥಮ ಹೆಜ್ಜೆಯಾಗಿದೆ.

Leave a Reply