ಮೇಲುಕೋಟೆಯಲ್ಲಿ ಆರೋಗ್ಯ ಜಾಗೃತಿ ಮತ್ತು ಸೈಕ್ಲಿಂಗ್ ಪ್ರಮೋಷನ್
ನಾಗಮಂಗಲದಿಂದ 111 ಕಿ.ಮೀ. ಬೃಹತ್ ಸೈಕ್ಲಿಂಗ್ ಜಾಥಾ!
ಮಂಡ್ಯ: ಮೇಲುಕೋಟೆ ಕ್ಷೇತ್ರದ ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಹಾಗೂ ಸೈಕ್ಲಿಂಗ್ ಕ್ರೀಡೆಯನ್ನು ಪ್ರೋತ್ಸಾಹಿಸುವ ಉದಾತ್ತ ಉದ್ದೇಶದಿಂದ, ‘ನಮ್ಮ ಸೈಕ್ಲಿಂಗ್ ಕ್ಲಬ್’ ಹಾಗೂ ‘ಪುಟ್ಟಣ್ಣಯ್ಯ ಫೌಂಡೇಶನ್’ ಸಹಯೋಗದಲ್ಲಿ ಬೃಹತ್ 111 ಕಿ.ಮೀ. ಸೈಕ್ಲಿಂಗ್ ಕಾರ್ಯಕ್ರಮವನ್ನು ಅತ್ಯಂತ ವೈಭವದಿಂದ ಆಯೋಜಿಸಲಾಗಿತ್ತು.
- ಕಾವೇರಿ ವಿಚಾರವಾಗಿ ವಿಪಕ್ಷಗಳ ನಾಯಕ ವಿಶ್ವಾಸದ ಬಳಿಕ ಮುಂದಿನ ತೀರ್ಮಾನ: ಡಿ.ಕೆ.ಶಿವಕುಮಾರ್
- ಸಂಸದೀಯ ಪ್ರಜಾಪ್ರಭುತ್ವ ಉಳಿಯಬೇಕಾದರೆ ಕಾಯ್ದೆ ಕಾನೂನುಗಳು ಚರ್ಚಿತವಾಗಬೇಕು: ಡಾ.ಎಚ್.ಸಿ.ಮಹದೇವಪ್ಪ
- ನೀಟ್ NEET ಹೋರಾಟದ ನಡುವೆ ವೈರಲ್ ಆದ ರಾಹುಲ್ ಗಾಂಧಿ, ದೀಪ್ಕೆ, ಗ್ರೆಟಾ, ಸೊರೊಸ್ ಫೋಟೋ!
- ಸಾವಯವ ರೈತರನ್ನು ಬೆಂಬಲಿಸಲು ಸಾವಯವ ಸಂತೆಯಲ್ಲಿ ಪಾಲ್ಗೊಳ್ಳಿ: ದರ್ಶನ್ ಪುಟ್ಟಣ್ಣಯ್ಯ
- ಕನಿಷ್ಠ ವೇತನ ಕೂಡಲೇ ಜಾರಿಗೊಳಿಸದಿದ್ದರೆ ತೀವ್ರ ಪ್ರತಿರೋಧ: ಜೆ ಬಾಲಕೃಷ್ಣ ಶೆಟ್ಟಿ
ಕಾರ್ಯಕ್ರಮಕ್ಕೆ ನಾಗಮಂಗಲದ ಪುರಾತನ ಶ್ರೀ ಸೌಮ್ಯಕೇಶವ ದೇವಸ್ಥಾನದ ಆವರಣದಲ್ಲಿ ಚಾಲನೆ ನೀಡಲಾಯಿತು. ಮೇಲುಕೋಟೆ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಅವರು ಸ್ವತಃ ಸೈಕ್ಲಿಸ್ಟ್‌ಗಳ ಜೊತೆಗೂಡಿ ಮೇಲುಕೋಟೆಯಿಂದ ದುದ್ದ ಗ್ರಾಮದವರೆಗೆ ಸೈಕ್ಲಿಂಗ್ ಮಾಡುವ ಮೂಲಕ ಭಾಗವಹಿಸಿದವರಲ್ಲಿ ಹೊಸ ಚೈತನ್ಯ ತುಂಬಿದರು.
ಸೈಕ್ಲಿಂಗ್ ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ಸೈಕ್ಲಿಂಗ್ ನಲ್ಲಿ ಭಾಗವಹಿಸಿದ ಎಲ್ಲ ಸೈಕ್ಲಿಸ್ಟ್ ಗಳನ್ನು ಮಾತನಾಡಿಸಲು ಸಾಧ್ಯವಾಗಲಿಲ್ಲ. ಕೆಲವರ ಜೊತೆಗಾದರೂ ಮಾತನಾಡಿದ್ದು ನನಗೆ ಸಂತಸ ತಂದಿದೆ. ಕೆಲವರ ಜೊತೆಗೆ ಮಾತನಾಡಿದ ಸಂದರ್ಭದಲ್ಲಿ ಸೈಕ್ಲಿಂಗ್ ಅನ್ನು ಪ್ಯಾಷನ್ ಆಗಿ ತೆಗೆದುಕೊಂಡು ನೀವೆಲ್ಲ ಭಾಗವಹಿಸಿರುವುದು ನನಗೆ ಖುಷಿ ತಂದಿದೆ. ಮೇಲುಕೋಟೆ ಭಾಗದಲ್ಲಿ ನೀವೆಲ್ಲ ಸೈಕ್ಲಿಂಗ್ ಸಂಘಟಿಸಲು ಅವಕಾಶ ಕೊಟ್ಟಿದ್ದಕ್ಕಾಗಿ ನಿಮಗೆಲ್ಲ ಧನ್ಯವಾದಗಳು ಎಂದರು.
ಸೈಕ್ಲಿಂಗ್ ನಲ್ಲಿ ಭಾಗವಹಿಸಿದ ನನ್ನ ವೈಯಕ್ತಿಕ ಅನುಭವವನ್ನು ಹೇಳುವುದಾದರೆ, ನಾನೂ ಕೂಡ ಸೈಕ್ಲಿಂಗ್ ಹವ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು, ಇದನ್ನು ಜೀವನದ ದಿನನಿತ್ಯದ ಭಾಗವಾಗಿಸಿಕೊಳ್ಳಬೇಕು ಎನಿಸುತ್ತಿದೆ. ಸೈಕ್ಲಿಸ್ಟ್ ಗಳೆಲ್ಲ ನನಗೆ ಒಂದು ಕುಟುಂಬದ ಅನುಭವವನ್ನು ನೀಡಿದ್ದೀರಿ. ಸೈಕ್ಲಿಂಗ್ ನಿಂದ ಸಮುದಾಯವನ್ನು ಕಟ್ಟುವುದರ ಜೊತೆಗೆ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು ಎಂದು ನನಗೆ ಅನಿಸಿದೆ. ಇಂತಹ ಇವೆಂಟ್ ಗಳನ್ನು ಇನ್ನಷ್ಟು ಹೆಚ್ಚು ಮಾಡಿ ಎಂದು ಆಯೋಜಕರು ಮತ್ತು ಸೈಕ್ಲಿಸ್ಟ್ ಗಳಲ್ಲಿ ನಾನು ಮನವಿ ಮಾಡುತ್ತೇನೆ ಎಂದರು.
ಸಾಂಸ್ಕೃತಿಕ ಮೆರುಗು ಹಾಗೂ ಹಾದಿಯ ವಿವರ: ಬೆಳಗಿನ ಜಾವದಿಂದಲೇ ಸೈಕ್ಲಿಂಗ್ ಪಟುಗಳ ಉತ್ಸಾಹ ಮೇರೆ ಮೇರಿತ್ತು.
ಕಾರ್ಯಕ್ರಮದ ಪ್ರಮುಖ ಹಂತಗಳು ಹೀಗಿದ್ದವು:
- ಸಾಂಸ್ಕೃತಿಕ ಚಾಲನೆ: ಮುಂಜಾನೆ 7:30ಕ್ಕೆ ಜಾನಪದ ಕಲೆಯಾದ ‘ವೀರಗಾಸೆ ನೃತ್ಯ’ದ ಜಾನಪದ ಮೆರುಗಿನೊಂದಿಗೆ ಕಾರ್ಯಕ್ರಮ ಆರಂಭವಾಗಿ, ಸರಿಯಾಗಿ 8:00 ಗಂಟೆಗೆ ಸೈಕ್ಲಿಂಗ್ ಜಾಥಾಕ್ಕೆ ಅಧಿಕೃತ ಚಾಲನೆ ಸಿಕ್ಕಿತು.
- ಉಪಾಹಾರ ಮತ್ತು ಪೋಷಣೆ: ಸೈಕ್ಲಿಸ್ಟ್‌ಗಳಿಗೆ ‘ಪುಟ್ಟನರಸಮ್ಮ ಜವರೇಗೌಡ ಕನ್ವೆನ್ಷನ್ ಹಾಲ್’ನಲ್ಲಿ ಬೆಳಗಿನ ತಿಂಡಿ ವ್ಯವಸ್ಥೆ ಮಾಡಲಾಗಿತ್ತು.
- ಧಾರ್ಮಿಕ ಹಾಗೂ ಶಕ್ತಿ ತಾಣ (ಹೈಡ್ರೇಶನ್): ಪ್ರಸಿದ್ಧ ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ ದೇವಸ್ಥಾನ ಹಾಗೂ ದುದ್ದ ಗ್ರಾಮದ ಕರಿಯಪ್ಪ ಟೀ ಅಂಗಡಿ ಬಳಿ ಸೈಕ್ಲಿಸ್ಟ್‌ಗಳಿಗೆ ರಿಫ್ರೆಶ್‌ಮೆಂಟ್ ಮತ್ತು ಹೈಡ್ರೇಶನ್ ಪಾಯಿಂಟ್‌ಗಳನ್ನು ನಿರ್ಮಿಸಲಾಗಿತ್ತು.
- ಮಧ್ಯಾಹ್ನದ ಭೋಜನ: ಬಸರಾಳುವಿನ ‘ಚೇರ್ಮನ್ ರೆಸ್ಟೋರೆಂಟ್’ನಲ್ಲಿ ಸೈಕ್ಲಿಂಗ್ ಪಟುಗಳಿಗೆ ಮಧ್ಯಾಹ್ನದ ಮೃಷ್ಟಾನ್ನ ಭೋಜನದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಅದ್ದೂರಿ ಸಮಾರೋಪ: ನಾಗಮಂಗಲದಿಂದ ಆರಂಭವಾದ ಈ 111 ಕಿ.ಮೀ. ಸೈಕ್ಲಿಂಗ್ ಪ್ರಯಾಣವು ಪುನಃ ಆರಂಭದ ತಾಣವಾದ ಶ್ರೀ ಸೌಮ್ಯಕೇಶವ ದೇವಸ್ಥಾನದಲ್ಲೇ ಯಶಸ್ವಿಯಾಗಿ ಮುಕ್ತಾಯವಾಗಲಿದೆ.
ಭಾಗವಹಿಸಿದ ಸೈಕ್ಲಿಸ್ಟ್‌ಗಳ ವಾಹನಗಳಿಗೆ ‘ಒಕ್ಕಲಿಗರ ಕಲ್ಯಾಣ ಮಂಟಪ’ದಲ್ಲಿ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಸಂಜೆ 5:00 ಗಂಟೆಗೆ ಸೈಕ್ಲಿಸ್ಟ್‌ಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಸಂಜೆ 5:30ಕ್ಕೆ ಲಘು ಉಪಾಹಾರ, 6:00 ಗಂಟೆಗೆ ‘ಫೋಟೋ ಸೆಷನ್’ ಹಾಗೂ ರಾತ್ರಿ 7:00 ಗಂಟೆಗೆ ರಾತ್ರಿಯ ಭೋಜನದೊಂದಿಗೆ ಈ ಅಭೂತಪೂರ್ವ ಸೈಕ್ಲಿಂಗ್ ಹಬ್ಬಕ್ಕೆ ತೆರೆ ಬೀಳಲಿದೆ.
“ನಮ್ಮ ಮೇಲುಕೋಟೆ ಕ್ಷೇತ್ರದ ಜನತೆಯ ಆರೋಗ್ಯ ಜಾಗೃತಿಗಾಗಿ ಈ 111 ಕಿ.ಮೀ. ಸೈಕ್ಲಿಂಗ್ ಆಯೋಜಿಸಿದ್ದು ನಮಗೆ ಹೆಮ್ಮೆಯ ವಿಷಯ. ಮೇಲುಕೋಟೆಯಿಂದ ದುದ್ದದವರೆಗೆ ಕ್ರೀಡಾಪಟುಗಳ ಜೊತೆ ನಾನೂ ಸೈಕ್ಲಿಂಗ್ ಮಾಡಿದ್ದು ಅತ್ಯಂತ ಖುಷಿ ಮತ್ತು ಸಂತಸ ನೀಡಿದೆ.”
— ದರ್ಶನ್ ಪುಟ್ಟಣ್ಣಯ್ಯ, ಶಾಸಕರು, ಮೇಲುಕೋಟೆ










