ರಾಹುಲ್ ಗಾಂಧಿಯ ಜಾತಿ ವಿಚಾರ ಪ್ರಸ್ತಾಪಿಸಿದ ಕೊಳಕು ಮನಸ್ಸಿನ ಸದಸ್ಯನನ್ನ ಪ್ರೋತ್ಸಾಹಿಸಿದ ಪ್ರಧಾನಿಗೆ ಏನನ್ನಬೇಕು?
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
- ದಶಕ ಮೀರಿದ ಕಾನೂನು ಹಾದಿ ಮತ್ತು ಉತ್ತರವಿಲ್ಲದ ಪ್ರಶ್ನೆಗಳು
- ಪರಿಸರವನ್ನೂ ಉಳಿಸಬೇಕು, ಮಲೆನಾಡಿನ ರೈತರ ಬದುಕನ್ನೂ ಉಳಿಸಬೇಕು: ಮಧು ಬಂಗಾರಪ್ಪ
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
ಈ ದೇಶದಲ್ಲಿ ನೆಹರುರವರಂತಹ ಪ್ರಜಾಪ್ರಭುತ್ವದ ಪ್ರೀತಿಸುವ ನಾಯಕರನ್ನ ಪ್ರಧಾನಿ ಸ್ಥಾನದಲ್ಲಿ ಕಂಡಿದ್ದೇವೆ .ಅದೇ ರೀತಿಯಲ್ಲಿ ವಿರೋಧ ಪಕ್ಷದ ನಾಯಕರುಗಳನ್ನು ಸಹ ಪ್ರೀತಿಯಿಂದ ಮತ್ತು ಗೌರವದಿಂದ ನಡೆಸಿಕೊಂಡು ಅಟಲ್ ಬಿಹಾರಿ ವಾಜಪೇಯಿ ಅವರ ವ್ಯಕ್ತಿತ್ವವನ್ನು ಕಂಡಿದ್ದೇವೆ. ಹಾಗೂ ಇತರೆ ಅನೇಕ ಪ್ರಧಾನಿಗಳು ಎಂದು ಸಹ ಸಂಸತ್ ಕಲಾಪದ ಸಂದರ್ಭದಲ್ಲಿ ಯಾವುದೇ ಪಕ್ಷದ ಸದಸ್ಯರ ವೈಯಕ್ತಿಕ ವಿಚಾರಗಳನ್ನ ತೆಗೆದು ಅಪಮಾನಗೊಳಿಸಿ, ಕೇಕೆ ಹಾಕಿ ಸಂಭ್ರಮಿಸಿದಂತಹ ಉದಾಹರಣೆಗಳು ಇಲ್ಲವೇ ಇಲ್ಲ.
ಇಂತಹ ಸಂದರ್ಭದಲ್ಲಿ ಇಂದು ನಮ್ಮ ದೇಶದ ಪಾರ್ಲಿಮೆಂಟ್ ನಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಮತ್ತು ನಮ್ಮ ಪ್ರಧಾನಿಗಳಿಗೆ ಪ್ರತಿಯೊಂದು ದಿನವು ಪ್ರತಿಯೊಂದು ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರ ಮತ್ತು ಸದಸ್ಯರುಗಳ ಮೇಲೆ ಕೀಳು ಮಟ್ಟದ ಮಾತುಗಳನ್ನಾಡುವುದು, ಅಸೂಯೆಯ ಮಾತುಗಳ ನಾಡುವುದು ,ಸಾಮಾನ್ಯವಾಗಿದೆ. ಕಳೆದ ಹತ್ತು ವರ್ಷದಲ್ಲಿ ಪಾರ್ಲಿಮೆಂಟಿನ ಅಧಿವೇಶನದಲ್ಲಿ ಒಂದು ಪ್ರೀತಿಯ ಮಾತಿಲ್ಲ ,ಒಂದು ಹಾಸ್ಯದ ಸನ್ನಿವೇಶವಿಲ್ಲ ,ಒಂದು ನಗೆ ಇಲ್ಲ ,ಕೇವಲ ದ್ವೇಷದ ಮಾತು ಕುಚೇಷ್ಟೆ ಮಾತುಗಳು. ಪ್ರತಿ ದಿನವೂ ಕೇಳಿ ಕೇಳಿ ಸಾಕಾಗಿದೆ ಇದಕ್ಕೆ ಇಂಬು ಕೊಡುವಂತೆ ಅನುರಾಗ ಠಾಕೂರ್ ಎಂಬ ಕೊಳಕು ಮನಸ್ಸಿನ ಸದಸ್ಯ ರಾಹುಲ್ ಗಾಂಧಿ ರವರು ಜಾತಿ ಜನಗಣತಿ ಮಾಡಬೇಕೆಂಬ ತಮ್ಮ ಒತ್ತಾಯದ ಮಾತುಗಳಿಗೆ ಪ್ರತಿಯಾಗಿ ರಾಹುಲ್ ಗಾಂಧಿ ರವರನ್ನು ಜಾತಿ ತಿಳಿಯದ ವ್ಯಕ್ತಿಯಿಂದ ಜಾತಿ ಗಣತಿಯ ಮಾತು ಎಂಬ ಕೆಳಹಂತದ ಅತ್ಯಂತ ರಾಕ್ಷಸತನದಿಂದ ಕೂಡಿದ ಟೀಕೆಯನ್ನು ಮಾಡಿದಾಗ ದೇಶದ ಯಜಮಾನ ಸ್ಥಾನದಲ್ಲಿರುವ ಪ್ರಧಾನಿಗಳು ಕೂಡಲೇ ಆ ಸದಸ್ಯನಿಗೆ ಬುದ್ಧಿ ಹೇಳುವ ಬದಲು ಚಪ್ಪಾಳೆ ಕಟ್ಟಿ ಸಂಭ್ರಮಿಸಿ ಸದನದ ಕಡತದಲ್ಲಿ ಕಿತ್ತು ಹಾಕಿದ್ದ ಆ ಪದಗಳನ್ನು ಸೇರಿಸಿ ತಮ್ಮ ಪ್ರಚಾರದ ಸಾಧನೆಗಳಲ್ಲಿ ಬಳಸಿ ಮೆರೆದಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ ಪ್ರಧಾನಮಂತ್ರಿಗಳು ಈ ರೀತಿಯಲ್ಲಿ ವಿರೋಧ ಪಕ್ಷದ ನಾಯಕರ ವಿಚಾರದಲ್ಲಿ ವಿಕೃತಿಯನ್ನು ಮೆರೆದ ಸದಸ್ಯನಿಗೆ ತಿಳಿ ಹೇಳದೆ ಪ್ರೋತ್ಸಾಹಿಸಿ ಹೊಸ ಸಂಪ್ರದಾಯವನ್ನೇ ಹಾಕಿಕೊಟ್ಟಿದ್ದಾರೆ ಈ ದೇಶದ ಪ್ರಜಾಪ್ರಭುತ್ವದಲ್ಲಿ ಇಂತಹ ಸ್ಥಿತಿಯಲ್ಲಿ ವ್ಯವಸ್ಥೆ ಇರುವುದು ಮತ್ತೊಂದು ದುರಂತವೇ ಸರಿ.
– ಕೆ ಎಸ್ ನಾಗರಾಜ್, ಬೆಂಗಳೂರು



