ಕರ್ನಾಟಕವು ಸೇರಿದಂತೆ ಅನೇಕ ರಾಜ್ಯಗಳಲ್ಲಿ ಅಲ್ಲಿನ ಮುಖ್ಯಮಂತ್ರಿಗಳು ಹಲವಾರು ಬಾರಿ ಸಂಪುಟ ಸಭೆಗಳನ್ನ ತಮ್ಮ ರಾಜ್ಯದ ಬೇರೆಬೇರೆ ಜಿಲ್ಲೆಗಳಲ್ಲಿ ನಡೆಸಿ ಆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ನೀಡಿ, ವಿನೂತನ ಕಾರ್ಯಕ್ರಮಗಳನ್ನ ರೂಪಿಸುತ್ತಿದ್ದಾರೆ. ಇತ್ತೀಚಿಗೆ ಕರ್ನಾಟಕದಲ್ಲಿ ಚಾಮರಾಜನಗರದಲ್ಲಿ ಸಂಪುಟ ಸಭೆ ನಡೆದಿದೆ. ಮುಂದಿನ ದಿನದಲ್ಲಿ ವಿಜಯಪುರದಲ್ಲಿ ಈ ಸಭೆ ನಡೆಸಲು ಚರ್ಚೆಯಾಗುತ್ತಿದೆ. ಈ ಹಿಂದೆ ಬೇರೆ ಜಿಲ್ಲೆಯಲ್ಲೂ ಸಹ ಸಂಪುಟ ಸಭೆಗಳು ನಡೆದಿವೆ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಪ್ರಧಾನ ಮಂತ್ರಿಗಳು ಸಹ ತಮ್ಮ ಕೇಂದ್ರದ ಸಂಪುಟ ಸಭೆಯನ್ನು ಬೇರೆಬೇರೆ ರಾಜ್ಯಗಳಲ್ಲಿ ಮಾಡಿ ಆ ರಾಜ್ಯ ಸರ್ಕಾರಗಳ ಜೊತೆಯಲ್ಲಿ ಒಂದು ದಿನದಲ್ಲಿ ಕುಳಿತು ಚರ್ಚಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಇರುವ ಹಲವಾರು ಯೋಜನೆಗಳ ಬಗ್ಗೆ ಪರಿಹಾರವನ್ನ ಸೂಚಿಸಿ ರಾಜ್ಯಗಳ ಸಮಗ್ರ ಯೋಜನೆಗೆ ಕಾರ್ಯಕ್ರಮಗಳನ್ನ ನೀಡಿದರೆ ಇದರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ಬಾಂಧವ್ಯ ಹೆಚ್ಚಾಗುತ್ತದೆ.
ಮಾನ್ಯ ಪ್ರಧಾನ ಮಂತ್ರಿಗಳು ಮುಂದಿನ ದಿನಗಳಲ್ಲಿ ವರ್ಷದಲ್ಲಿ ಕನಿಷ್ಠ ಮೂರರಿಂದ ನಾಲ್ಕು ರಾಜ್ಯಗಳಲ್ಲಿ ಕೇಂದ್ರ ಸಂಪುಟ ಸಭೆಯನ್ನ ನಡೆಸಿ ಹೊಸತನಕ್ಕೆ ನಾಂದಿಯಾಗಲಿ. ಐದು ವರ್ಷದ ಅವಧಿಯಲ್ಲಿ ಒಂದಲ್ಲ ಒಂದು ಸಂಪುಟ ಸಭೆ ಎಲ್ಲ ರಾಜ್ಯಗಳಲ್ಲೂ ನಡೆದರೆ ವಿಕೇಂದ್ರೀಕರಣಕ್ಕೆ ಮತ್ತಷ್ಟು ಬಲ ತುಂಬುತ್ತದೆ.
ಯಾವ ರೀತಿಯಲ್ಲಿ ಮುಖ್ಯಮಂತ್ರಿಗಳು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಪ್ರಗತಿ ಪರಿಶೀಲನ ಸಭೆಗಳನ್ನು ನಡೆಸುತ್ತಾರೋ, ಅದೇ ರೀತಿಯಲ್ಲಿ ಪ್ರಧಾನ ಮಂತ್ರಿಗಳು ಸಹ ಆಯಾ ರಾಜ್ಯದ ವಿಧಾನಸೌಧದಲ್ಲಿ ಕುಳಿತು ರಾಜ್ಯಗಳ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರಗಳನ್ನ ನೀಡಲಿ. ಅದೇ ರೀತಿಯಲ್ಲಿ ಕೇಂದ್ರದ ಸಚಿವರುಗಳು ಸಹ ಮೇಲಿಂದ, ಮೇಲೆ ರಾಜ್ಯಗಳ ಪ್ರವಾಸ ಮಾಡುವ ಸಂದರ್ಭದಲ್ಲಿ ಆ ರಾಜ್ಯದಲ್ಲಿನ ತಮ್ಮ ಇಲಾಖೆಯ ಯೋಜನೆಗಳ ಬಗ್ಗೆ ಚರ್ಚಿಸುವಂತಹ ಕೆಲಸವನ್ನು ಮಾಡಲಿ. ಕೇವಲ ಶಂಕುಸ್ಥಾಪನೆ ಇಲ್ಲವೇ ಉದ್ಘಾಟನೆ, ಅದು ಇಲ್ಲದಿದ್ದರೆ ರಾಜಕೀಯ ಸಭೆಗಳಿಗೆ ರಾಜ್ಯಗಳಿಗೆ ಭೇಟಿಕೊಟ್ಟು ಅಲ್ಲೊಂದು ಭಾಷಣವನ್ನು ಮಾಡಿ ಬರುವುದರಿಂದ ಏನು ಅನುಕೂಲವಾಗುವುದಿಲ್ಲ.
ಪ್ರಧಾನ ಮಂತ್ರಿಗಳಿಗೆ ನಿಜಕ್ಕೂ ಸಮಗ್ರವಾಗಿ ದೇಶದ ಅಭಿವೃದ್ಧಿಯ ಬಗ್ಗೆ ಕಳಕಳಿ ಇರುವುದಾದರೆ ಕೂಡಲೇ ಇಂತಹ ಕಾರ್ಯಕ್ರಮಗಳ ಬಗ್ಗೆ ಆಲೋಚಿಸಲಿ.
ಪ್ರಧಾನ ಮಂತ್ರಿಗಳು ವರ್ಷದಲ್ಲಿ ಒಂದು ದಿನವಾದರೂ ಪ್ರತಿಯೊಂದು ರಾಜ್ಯದ ಮುಖ್ಯಮಂತ್ರಿಗಳು ಮತ್ತು ಸಂಪುಟದ ಸಚಿವರೊಂದಿಗೆ ತಮ್ಮ ಕಚೇರಿಯಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳೊಂದಿಗೆ ಕುಳಿತು ಚರ್ಚೆ ಮಾಡುವಂತಹ ಸಂಪ್ರದಾಯವನ್ನು ಸ್ಥಾಪಿಸಿ ಇದರಿಂದ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು ಸಹ ಒಂದು ವರ್ಷದಲ್ಲಿ ಒಂದು ದಿನವಾದರೂ ಪ್ರಧಾನಮಂತ್ರಿಗಳೊಂದಿಗೆ ತಮ್ಮ ರಾಜ್ಯದ ವಿಚಾರಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಈಗಲೂ ಸಹ ಪ್ರಧಾನ ಮಂತ್ರಿಗಳನ್ನು ಮುಖ್ಯಮಂತ್ರಿಗಳು ಮತ್ತು ರಾಜ್ಯದ ಮಂತ್ರಿಗಳು ಭೇಟಿ ಮಾಡುತ್ತಾರೆ. ಆದರೆ ಆ ಭೇಟಿ ಕೆಲವು ನಿಮಿಷ ಇಲ್ಲವೇ ಕೆಲವು ಗಂಟೆಗಳಿಗೆ ಸೀಮಿತವಾಗಿರುತ್ತದೆ. ಇಲ್ಲಿ ಕೇವಲ ರಾಜ್ಯದ ಪ್ರತಿನಿಧಿಗಳ ಬೇಡಿಕೆಗಳನ್ನ ಮಂಡಿಸುವುದಾಗುತ್ತದೆ. ಅದು ಕಾರ್ಯರೂಪಕ್ಕೆ ಬರಲು ಮತ್ತಷ್ಟು ಸಮಯ ಹಿಡಿಯುತ್ತದೆ. ಇದರ ಬದಲಿಗೆ ಪ್ರತಿಯೊಂದು ರಾಜ್ಯದ ಮುಖ್ಯಮಂತ್ರಿಗಳು ಮತ್ತು ಅವರ ಸಂಪುಟದ ಸದಸ್ಯರು ಮತ್ತು ಪ್ರಮುಖ ಅಧಿಕಾರಿಗಳ ತಂಡದೊಂದಿಗೆ ಪ್ರಧಾನ ಮಂತ್ರಿಗಳೇ ಒಂದು ದಿನದ ಮಟ್ಟಿಗೆ ವರ್ಷದಲ್ಲಿ ಚರ್ಚೆಯನ್ನು ಮಾಡಿದರೆ ಕೂಡಲೇ ಸಾಕಷ್ಟು ಸಮಸ್ಯೆಗಳು ಪರಿಹಾರವಾಗುತ್ತವೆ ಮತ್ತು ಉತ್ತಮವಾದ ಸಲಹೆಗಳು ಪರಸ್ಪರ ವಿನಿವಯೋಗವಾಗುತ್ತವೆ.
– ಕೆ ಎಸ್ ನಾಗರಾಜ್, ಬೆಂಗಳೂರು



