ಲೋಕಕಲ್ಯಾಣಾರ್ಥಾಕ್ಕಾಗಿ 5000 ಸುಮಂಗಲಿಯರಿಂದ ಶ್ರೀ ಲಲಿತಾ ಸಹಸ್ರನಾಮ ಪೂಜಾ ಕಾರ್ಯಕ್ರಮ
ಭಾರತೀಯ ಸನಾತನ ಸಂಸ್ಕೃತಿ ವಿಶ್ವ ಶೇಷ್ಠ ಸಂಸ್ಕೃತಿ
ಬೆಂಗಳೂರು: ಜಯನಗರದ ಚಂದ್ರಗುಪ್ತಮೌರ್ಯ (ಶಾಲಿನಿ) ಆಟದ ಮೈದಾನದಲ್ಲಿ ರಕ್ಷಾ ಫೌಂಡೇಷನ್( ರಿ) 13ನೇ ವರ್ಷದ ಸುಮಂಗಲಿಯರಿಂದ ಶ್ರೀ ಲಲಿತಾ ಸಹಸ್ರನಾಮ ಪೂಜೆ ಕಾರ್ಯಕ್ರಮ ಮತ್ತು ಮಂತ್ರಾಲಯ ಮಠದ ಶ್ರೀ ಶ್ರೀ ಶ್ರೀ ಸುಭುದೇಂದ್ರ ತೀರ್ಥ ಸ್ವಾಮೀಜಿರವರಿಂದ ಆಶೀರ್ವಚನ ಕಾರ್ಯಕ್ರಮ ನಡೆಸಲಾಯಿತು.
- 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದುಗೆ ಸ್ಥಾನ ಎಲ್ಲಿದೆ?
- ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್
- ರಾಜ್ಯದ ಅಭಿವೃದ್ಧಿಗೆ ಆರ್.ಅಶೋಕ್ ಅಡ್ಡಗಾಲು: ಕೆಪಿಸಿಸಿ
- ಎನ್ಜಿಟಿಯಲ್ಲಿ ವಕೀಲರನ್ನು ನೇಮಿಸಿ ಹೋರಾಟ ಮಾಡಬೇಕು: ಆರ್.ಅಶೋಕ
- ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ಮಂತ್ರಾಲಯ ಮಠದ ಶ್ರೀಶ್ರೀಶ್ರೀ ಸುಭುದೇಂದ್ರ ತೀರ್ಥ ಸ್ವಾಮೀಜಿ, ಸುಪ್ರಿಂಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್, ಸಂಸದ ತೇಜಸ್ವಿ ಸೂರ್ಯ, ಶಾಸಕರು ಹಾಗೂ ರಕ್ಷಾ ಫೌಂಡೇಸನ್ ಸಂಸ್ಥಾಪಕ ಸಿ.ಕೆ.ರಾಮಮೂರ್ತಿ, ಶಾಸಕ ಸತೀಶ್ ರೆಡ್ಡಿ, ಬಿಬಿಎಂಪಿ ಮಾಜಿ ಸದಸ್ಯೆ ನಾಗರತ್ನರಾಮಮೂರ್ತಿ ಚಾಲನೆ ನೀಡಿದರು.
ಶ್ರೀ ಶ್ರೀ ಶ್ರೀ ಸುಭುದೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನದಲ್ಲಿ ಮಾತನಾಡಿ ಬೆಂಗಳೂರು ಮಹಾನಗರದ ಜಯನಗರದಲ್ಲಿ ಪ್ರತಿವರ್ಷ ಶ್ರೀ ಲಲಿತಾ ಸಹಸ್ರನಾಮ ಪೂಜಾ ಕಾರ್ಯಕ್ರಮವನ್ನು ಯಶ್ವಸಿಯಾಗಿ ಆಚರಿಸಿಕೊಂಡು ಬರುತ್ತಿದ್ದಾರೆ ಎಂದರು.
ಶ್ರೀ ಲಲಿತಾ ತಾಯಿಯಿಂದ ಎಲ್ಲರಿಗೂ ಆಶೀರ್ವಾದ, ಕೃಪೆಯು ಎಲ್ಲರಿಗೂ ಸಿಗಬೇಕು. ಭಾರತೀಯ ಸನಾತನ ಸಂಸ್ಕೃತಿ ವಿಶ್ವ ಶೇಷ್ಠ ಸಂಸ್ಕೃತಿಯಾಗಿದೆ. ನಮ್ಮ ಧರ್ಮದಲ್ಲಿ ಮಹಿಳೆಯರಿಗೆ ವಿಶೇಷ ಮಾನ್ಯತೆ ನೀಡಲಾಗಿದೆ. ಸನಾತನ ಹಿಂದೂ ಪರಂಪರೆಯಲ್ಲಿ ಮಹಿಳೆಯರಿಗೆ ದೇವಸ್ಥಾನ ಪ್ರವೇಶ, ಪೂಜೆ ಮಾಡುವ ಹಕ್ಕು ನೀಡಿದೆ ಎಂದರು.
ವೇದಗಳಲ್ಲಿ ಶ್ರೀಲಲಿತಾ ಸಹಸ್ರನಾಮ ವಿಶೇಷತೆ, ಮಹಿಮೆ, ಉಪಾಸನೆ ಕುರಿತು ತಿಳಿಸಲಾಗಿದೆ. ಲಲಿತಾ ಎಂದರೆ ಸರಳ, ಮಕ್ಕಳಿಗೆ ತಾಯಿಯ ಅನುಗ್ರಹ, ಪ್ರೀತಿ ಗಳಿಸುವುದು ಸರಳ. ಸಮಸ್ತ ಲೋಕಕ್ಕೆ ಮಾತೃಸ್ವರೂಪಿಣಿಯಾದ ಶ್ರೀ ಲಲಿತಾದೇವಿಯ ಸಹಸ್ರನಾಮದಿಂದ ಸಕಲ ಸಂಕಷ್ಟಗಳು ನಿವಾರಣೆಯಾಗುತ್ತವೆ ಎಂದರು.
ನ್ಯಾ. ಅರವಿಂದ್ ಕುಮಾರ್ ಮಾತನಾಡಿ, ರಕ್ಷಾ ಫೌಂಡೇಷನ್ ಶಿಸ್ತುಬದ್ಧ ಸಂಘಟನೆಯ ಮೂಲಕ ಸಮಾಜ ಸೇವೆ ಮಾಡುತ್ತಿದೆ. ಲಲಿತಾ ಸಹಸ್ರನಾಮ ಲಲಿತಾಂಬೆ ಪೂಜೆ ಮಾಡುವುದರಿಂದ ಸಂಕಷ್ಟಗಳು ನಿವಾರಣೆಯಾಗುತ್ತವೆ ಎಂದು ಪುರಾಣದಲ್ಲಿ ಉಲ್ಲೇಖವಿದೆ ಎಂದರು.
ಶಾಸಕ ಸಿ.ಕೆ.ರಾಮಮೂರ್ತಿ ಮಾತನಾಡಿ, ರೈತ ಮತ್ತು ಸೈನಿಕ ದೇಶಕ್ಕೆ ಎರಡು ಕಣ್ಣುಗಳು ಇದ್ದಂತೆ ಮತ್ತು ದೇಶ, ರಾಜ್ಯ ಸುಭೀಕ್ಷೆಯಾಗಿರಬೇಕು ಮತ್ತು ನಾಡಿನ ಸಮಸ್ತ ಜನರು ಸುಖ, ಶಾಂತಿ ನೆಮ್ಮದ್ದಿಯಿಂದ ಬಾಳಬೇಕು ಎಂದು ಮತ್ತು ಸಮಸ್ತ ಲೋಕ ಸುಖಿನೊ ಭವಂತು ಎಂಬಂತೆ ಲೋಕಕಲ್ಯಾಣಾರ್ಥಾಕ್ಕಾಗಿ ಶ್ರೀ ಲಲಿತಾ ಸಹಸ್ರನಾಮ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ನಾಡಿನಲ್ಲಿ ಉತ್ತಮ ಮಳೆ, ಬೆಳೆಯಾಗಲಿ. ಬಂದ ಸಂಕಷ್ಟಗಳು ನಿವಾರಣೆಯಾಗಲಿ, ಎಲ್ಲರ ಬಾಳಿನಲ್ಲಿ ಬೆಳಕು ಮೂಡಲಿ ಎಂಬ ಶುಭಾ ಹಾರೈಕೆ ಮಾಡುತ್ತೇನೆ ಎಂದರು.
ಚಲನಚಿತ್ರ ನಟಿ ಮಾಳವಿಕ ಅವಿನಾಶ್, ತಿರುಪತಿ ದೇವಸ್ಥಾನದ ಸದಸ್ಯ ನರೇಶ್, ಪಾಲಿಕೆ ಮಾಜಿ ಸದಸ್ಯರುಗಳಾದ ಸೋಮಶೇಖರ್, ಮಾಲತಿ ಸೋಮಶೇಖರ್, ಜಲ್ಲಿ ರಮೇಶ್, ಧನರಾಜ್, ಗೋವಿಂದನಾಯ್ಡು, ಚಂದ್ರಶೇಖರರಾಜು, ದೀಪಿಕಾ ಮಂಜುನಾಥ್ ರೆಡ್ಡಿ, ಚನ್ನಗಿರಿಯಪ್ಪ ಮೊದಲಾದವರು ಹಾಜರಿದ್ದರು.








