ಬೆಂಗಳೂರು: 2011ರಿಂದ ಜನಸಂಸ್ಕೃತಿ ಮತ್ತು ಕಾವ್ಯಮಂಡಲ ಸಂಯುಕ್ತ ಆಶ್ರಯದಲ್ಲಿ ನಡೆಸಿಕೊಂಡು ಬರುತ್ತಿರುವ ಕಾಡುವ ಕಿರಂ ಕಾರ್ಯಕ್ರಮ 2024ರ ಆಗಸ್ಟ್ ನಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಎಂದಿನಂತೆ ಈ ಬಾರಿ ಕೂಡ ಕಾರ್ಯಕ್ರಮದಲ್ಲಿ ಕವಿಗಳಿಂದ ಕವಿತೆ ವಾಚನ ಆಯೋಜಿಸಲಾಗುತ್ತಿದೆ. ಕರ್ನಾಟಕ ಮತ್ತು ಹೊರ ರಾಜ್ಯ, ದೇಶಗಳಲ್ಲಿರುವ ಕವಿಗಳು ಕವಿತೆಗಳನ್ನು ಕಳಿಸಬಹುದು. ಆದರೆ, ಆಗಸ್ಟ್ 7, 2024ರಂದು ನಡೆಯುವ ಅಹೋರಾತ್ರಿ ಕಾಡುವ ಕಿರಂ ಕಾರ್ಯಕ್ರಮದಲ್ಲಿ ಖುದ್ದು ಭಾಗವಹಿಸಿ ಕವಿತೆಯನ್ನು ವಾಚಿಸಬೇಕು. ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗದ ಕವಿಗಳು ಕವಿತೆಗಳನ್ನು ಕಳುಹಿಸಬಾರದು.
ವಿಶೇಷ ಸೂಚನೆಗಳು :-
- ಒಬ್ಬರು ಒಂದು ಕವಿತೆಯನ್ನು ಮಾತ್ರ ಕಳಿಸಬೇಕು
- ಸ್ವರಚಿತ ಕನ್ನಡ ಕವಿತೆಯಾಗಿರಬೇಕು
- ಭಾವಾನುವಾದ ಅಥವಾ ಭಾಷಾಂತರ ಕವಿತೆಯಾಗಿರಬಾರದು
- ಕವಿತೆಯನ್ನು ನುಡಿ ಅಥವಾ ಯುನಿಕೋಡ್ ನಲ್ಲಿ ಟೈಪ್ ಮಾಡಿ ಕಳಿಸಬೇಕು
ಆಯ್ಕೆಯಾದ ಕವಿತೆಗಳನ್ನು ಕಿರಂ ಪ್ರಕಾಶನದಿಂದ ಹೊರ ತರುವ ರಾಜ್ಯ ಮಟ್ಟದ ಕವಿತೆಗಳ ಸಂಕಲನದಲ್ಲಿ ಪ್ರಕಟಿಸಲಾಗುವುದು ಮತ್ತು ಬೆಂಗಳೂರಿನಲ್ಲಿ ನಡೆಯುವ ಅಹೋರಾತ್ರಿ ಕಾಡುವ ಕಿರಂ ಕಾರ್ಯಕ್ರಮದ ಕವಿಗೋಷ್ಠಿಗೆ ಕವಿಗಳನ್ನು ಆಹ್ವಾನಿಸಲಾಗುವುದು.
ಕವಿಗಳು ಕವಿತೆಗಳನ್ನು ಕಳುಹಿಸುವಾಗ ಕಡ್ಡಾಯವಾಗಿ ತಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ತಪ್ಪದೆ ನಮೂದಿಸಬೇಕು.
ಕವಿತೆಗಳನ್ನು ಈ ಕೆಳಗಿನ ಮಿಂಚಂಚೆಯ ಮೂಲಕ ಜೂನ್ 30, 2024ರ ಒಳಗೆ ನಮಗೆ ಕಳುಹಿಸಬೇಕು.
ಕವಿತೆಯ ಆಯ್ಕೆ ಆಯ್ಕೆ ಸಮಿತಿ ಮತ್ತು ಸಂಪಾದಕರ ವಿವೇಚನೆಗೆ ಬಿಟ್ಟದ್ದು, ಈ ಕುರಿತು ಯಾವುದೇ ಪತ್ರ, ದೂರವಾಣಿ ವ್ಯವಹಾರಕ್ಕೆ ಅವಕಾಶವಿಲ್ಲ.
ಕವಿತೆಗಳನ್ನು ತಿರಸ್ಕರಿಸುವ ಅಥವಾ ಆಯ್ಕೆ ಮಾಡುವ ಪೂರ್ಣ ಸ್ವಾತಂತ್ರ್ಯ ಆಯ್ಕೆ ಸಮಿತಿ ಮತ್ತು ಸಂಪಾದಕರ ವಿವೇಚನೆಗೆ ಸೇರಿದೆ.
ವಾಟ್ಸಪ್ ನಲ್ಲಿ ಕಳುಹಿಸುವವರಿಗೆ: 9844086993
ಮಿಂಚಂಚೆ: pradeeplmalgudi@gmail.com




