ಬೆಂಗಳೂರು: ಸಾಂಸ್ಕೃತಿಕ ಜಗತ್ತಿನಲ್ಲಿ ಯಾವುದೇ ವ್ಯಕ್ತಿಯನ್ನು ಗುರುತಿಸಿ ಸನ್ಮಾನಿಸಿದರೆ, ಅದು ಅಂತಹ ವ್ಯಕ್ತಿ ಸೇವೆ ಸಲ್ಲಿಸಿರುವ ಸಂಸ್ಥೆಯನ್ನು, ವ್ಯಕ್ತಿ ಪ್ರತಿನಿಧಿಸುತ್ತಿರುವ ಇಡೀ ಸಂಘಟನೆಯನ್ನು ಅಥವಾ ಇಡೀ ಸಮಾಜವನ್ನೇ ಗುರುತಿಸಿದಂತೆ ಎಂದು ಬಂಜಾರ ಸಂಸ್ಕೃತಿ ಹಾಗೂ ಭಾಷಾ ಅಕಾಡೆಮಿ ಅಧ್ಯಕ್ಷ ಡಾ. ಎ ಆರ್ ಗೋವಿಂದಸ್ವಾಮಿ ಅಭಿಪ್ರಾಯಪಟ್ಟರು.
- ವ್ಯಕ್ತಿಯನ್ನು ಗುರುತಿಸಿದರೆ ಸಮಾಜವನ್ನೇ ಗುರುತಿಸಿದಂತೆ: ಡಾ. ಎ ಆರ್ ಗೋವಿಂದಸ್ವಾಮಿ
- ಸಂವಿಧಾನ ಪೀಠಿಕೆ ದೇಶದ ಆತ್ಮವಿದ್ದಂತೆ: ಆದಿತ್ಯ ಚಟರ್ಜಿ
- ಕುಸಿಯುತ್ತಿರುವ ಪ್ರಜಾಪ್ರಭುತ್ವದ ವ್ಯಾಪ್ತಿ ಮತ್ತು ದೀರ್ಘಾವಧಿ ಪ್ರಧಾನಿಯ ಸಾಧನೆಗಳು
- ಜೀರಾ ರೈಸ್, ಘೀ ರೈಸ್ ಮತ್ತು ಲೆಮನ್ ರೈಸ್ ಮಾಡುವ ಸರಳ ವಿಧಾನ
- ಸಮಾಧಾನ್ ಸಮಾರೋಹ್ ಯಶಸ್ವಿಗೊಳಿಸಿ: ಡಾ.ಶಾಲಿನಿ ರಜನೀಶ್
ಆನಂದರಾವ್ ವೃತ್ತದ ಬಳಿಯಿರುವ ಕವಿಮಂ ಲೆಕ್ಕಾಧಿಕಾರಿಗಳ ಸಂಘಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕವಿಮಂ ಪಿಂಚಣಿದಾರರ ಸಂಘದ ಅಧ್ಯಕ್ಷ, ನಿವೃತ್ತ ಉಪ ಲೆಕ್ಕನಿಯಂತ್ರಣಾಧಿಕಾರಿ ಬಿ ಪಿ ಕುಮಾರಸ್ವಾಮಿ ಅವರು ಮಾತನಾಡುತ್ತಾ ಡಾಕ್ಟರ್ ಗೋವಿಂದಸ್ವಾಮಿ ಅವರು ರಂಗಪ್ರಪಂಚದಲ್ಲಿ ಅನೇಕ ಸಾಧನೆಗಳನ್ನು ಮಾಡಿ, ಡಾಕ್ಟರೇಟ್ ಪದವಿಯನ್ನು ಪಡೆದು ಉತ್ತಮ ಸೇವೆ ಸಲ್ಲಿಸುತ್ತಿರುವುದನ್ನು ಶ್ಲಾಘಿಸಿದರು. ಅವರು ಕೈಕೊಂಡ ಕಾರ್ಯಕ್ರಮಗಳಲ್ಲಿ ಹಲವನ್ನು ಪ್ರಸ್ತಾಪಿಸಿ ಇದನ್ನು ಮುಕ್ತ ಕಂಠದಿಂದ ಹೊಗಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕವಿಮಂ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಎಸ್ ಗಿರೀಶ್ ಮಾತನಾಡಿ, ಡಾ.ಎ ಆರ್ ಗೋವಿಂದಸ್ವಾಮಿ ಅವರನ್ನು ಸನ್ಮಾನಿಸಿರುವುದು ತುಂಬಾ ಸಂತೋಷ; ಅವರ ಸೇವೆ, ಸಾಂಸ್ಕೃತಿಕ ಚಟುವಟಿಕೆಗಳು ಸದಾ ಮುಂದುವರಿಯುತ್ತಿರಲಿ ಎಂದು ಆಶಿಸಿದರು.
ಖ್ಯಾತ ಅಂಕಣಕಾರ ಅಣಕು ರಾಮನಾಥ ಹಾಗೂ ಹಾಸ್ಯಪಟು ವೈ ವಿ ಗುಂಡೂರಾವ್, ನಟ ಶ್ರೀಪತಿ ಮಂಜನಬೈಲ್ ಮುಂತಾದವರು ನಡೆಸಿಕೊಟ್ಟ ಹಾಸ್ಯ ಕಾರ್ಯಕ್ರಮ ಸಭಿಕರನ್ನು ಹಾಸ್ಯಗಡಲಿನಲ್ಲಿ ತೇಲಿಸಿತು. ಅವರ ಔಚಿತ್ಯಪೂರ್ಣ ಮಾತುಗಳು, ಸಾಮಾಜಿಕ ಚಿಂತನೆಗಳು ಜನರ ಮನಸ್ಸಿಗೆ ನಾಟಿತು.
ಅಮರಾ ಕಾವ್ಯನಾಮದ ಖ್ಯಾತಿಯ ಅಣೆಕಟ್ಟು ಮಧುಸೂಧನ್ ರಾವ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಲೆಕ್ಕಾಧಿಕಾರಿಗಳ ಸಂಘದ ಕಾರ್ಯಕಾರಿ ಸಮಿತಿ ಸದಸ್ಯೆ ಭಾಗ್ಯ ಎ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು. ಸಂಘದ ಧುರೀಣ ಎಂ ಎ ಮುರಾರಿ, ನಿವೃತ್ತ ಬಿಎಸ್ಎನ್ಎಲ್ ಅಧಿಕಾರಿ ಶ್ರೀಮತಿ ಇಂದಿರಾ ಪಾಂಡುರಂಗ ರಾವ್ ಅವರು ಸನ್ಮಾನಿತರ ಹಾಗೂ ಕಲಾವಿದರ ಪರಿಚಯ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸದಸ್ಯರುಗಳಾದ ಎಸ್ ವಿ ಗೋಪಿನಾಥ್ , ಬಿ ಸತ್ಯನಾರಾಯಣ, ಈರಪ್ಪ, ಡಾ. ಪೂರ್ಣಿಮಾ ಗೋಪಾಲ್, ಸಾಹಿತಿಗಳಾದ ಕೊಪ್ಪರಂ ಅನ್ನಪೂರ್ಣ, ಸಿದ್ದಣ್ಣ ಸೊನ್ನದ, ಪ್ರಭಾಕರ ಗಂಗೊಳ್ಳಿ , ಬಿ ವಿ ರಾವ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.


