ಬೆಳಗಾವಿ: ಸಾಹಿತ್ಯವು ಎಡವೂ ಅಲ್ಲ, ಬಲವೂ ಅಲ್ಲ, ಅದು ಬದುಕಿನ ಚಿಂತನೆ. ವೈಚಾರಿಕ ಆದ್ಯ ಪರಂಪರೆಯ ಮೂಲಕ ಪಡೆದ ಶಿಕ್ಷಣ ಅನ್ನವನ್ನು ಒದಗಿಸಬೇಕು, ಬರವಣಿಗೆ ಬದುಕನ್ನು ಕಟ್ಟಿಕೊಡಬೇಕು ಎಂದು ಡಾ. ಸತೀಶ ನಾಯ್ಕ ಅಭಿಪ್ರಾಯಪಟ್ಟರು.
- ಚುನಾವಣೆಗಳು ಮುಗಿಯುತ್ತಿದ್ದಂತೆಯೇ ಮೋದಿ ಸರ್ಕಾರ ಬೆಲೆಯೇರಿಕೆ ಮಾಡತೊಡಗಿದೆ: ಸಿದ್ದರಾಮಯ್ಯ
- ಬಿಜೆಪಿ ಮುುಕ್ತ ದಕ್ಷಿಣ ಭಾರತ ಆಗಲಿದೆ: ಬಿ.ಕೆ. ಹರಿಪ್ರಸಾದ್
- ಬುದ್ಧನಿಂದ ಆರಂಭವಾದ ಶ್ರಮಿಕರ ಹೋರಾಟದ ಬದುಕು ಇನ್ನೂ ಕೊನೆಗೊಂಡಿಲ್ಲ: ಡಾ. ಸತೀಶ ನಾಯ್ಕ
- ಮೇ ದಿನದ ಆಶಯ ಬುಡಮೇಲುಗೊಳಿಸಿದ ಜನವಿರೋಧಿ ಕಾರ್ಮಿಕ ಸಂಹಿತೆಗಳು: ಸುನಿಲ್ ಕುಮಾರ್ ಬಜಾಲ್
- ಕನ್ನಡ ಸಾಹಿತ್ಯದ ಅಲೆಗಳು ಬಹುಮುಖೀ ಆಯಾಮವನ್ನೊಳಗೊಂಡಿವೆ: ಪ್ರೊ.ಚಂದ್ರಶೇಖರ ನಂಗಲಿ
ಮಾನವ ಬಂದುತ್ವ ವೇದಿಕೆ ಬೆಳಗಾವಿಯ ಕೇಂದ್ರ ಕಚೇರಿಯಲ್ಲಿ, ಯುವ ಬರಹಗಾರರ ವೇದಿಕೆ ಬೌದ್ಧ ಪೌರ್ಣಿಮೆ ಮತ್ತು ಕಾರ್ಮಿಕ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಶ್ರಮಿಕರ ಒಡನಾಡಿಗಳು ಬುದ್ಧ, ಬಸವ, ಅಂಬೇಡ್ಕರ್ ಮತ್ತು ಕಾರ್ಲ್ ಮಾರ್ಕ್ಸ್ ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಬುದ್ಧನಿಂದ ಆರಂಭವಾದ ಶ್ರಮಿಕರ ಹೋರಾಟದ ಬದುಕು ಇನ್ನೂ ಕೊನೆಗೊಂಡಿಲ್ಲ. ಬಸವಣ್ಣನವರು ಕಟ್ಟಿದ ಸಮ ಸಮಾಜದ ಕನಸು ಕೈಗೂಡಿಲ್ಲ. ಅಂಬೇಡ್ಕರ್ ಸಾಂವಿಧಾನಿಕ ಆಶಯಗಳು ಪೂರ್ಣಗೊಂಡಿಲ್ಲ. ಕಾರ್ಲ್ ಮಾರ್ಕ್ಸ್ ಅವರ ಕಾರ್ಮಿಕರ ಪರವಾದ ಶ್ರಮ ಫಲ ನೀಡಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ್ ಚಂದರಗಿ ಮಾತನಾಡಿ, ಯುವ ಬರಹಗಾರರಿಗೆ ಪ್ರಶ್ನಿಸುವ ಮನೋಭಾವ ಮತ್ತು ಬದ್ಧತೆ ಇರಬೇಕು. ಬರವಣಿಗೆಯ ಶಕ್ತಿ ಅಗಾಧವಾದದ್ದು, ಅದರ ಆಂತರ್ಯವನ್ನು ಅರಿತುಕೊಂಡು ಸಾಹಿತ್ಯ ಕೃಷಿ ಮಾಡಿದರೆ ಪ್ರಶಸ್ತಿ ಮತ್ತು ಪದವಿಗಳಿಗಾಗಿ ಅರ್ಜಿ ಹಾಕಬೇಕಾದ ಅನಿವಾರ್ಯತೆ ಒದಗಿ ಬರಲಾರದು ಎಂದರು.
ಸಾಹಿತಿಯಾದವನು ಸಮಾಜದ ಸಮಸ್ಯೆಗಳೊಂದಿಗೆ ಸ್ಪಂದಿಸಬೇಕು, ಸಮ ಸಮಾಜದ ಕಲ್ಪನೆಗೆ ಬುದ್ಧ, ಬಸವ, ಅಂಬೇಡ್ಕರರ ವಿಚಾರಧಾರೆಗಳಿಂದ ಪ್ರೇರಿತರಾಗಿ ಯುವಕರು ಶ್ರಮಿಕರ ಧ್ವನಿ ಆಗಬೇಕು ಎಂದರು.
ಕಾರ್ಯಕ್ರಮದ ಆಶಯ ನುಡಿಗಳನಾಡಿದ ಡಾ. ಗೌತಮ ಮಾಳಗೆ, ಬುದ್ಧ, ಬಸವ, ಅಂಬೇಡ್ಕರರ ವಿಚಾರಧಾರೆಗಳು ಯುವಸಮುದಾಯಕ್ಕೆ ಹೊಸ ಆಲೋಚನಾ ಕ್ರಮಗಳನ್ನು ಅಳವಡಿಸಿಕೊಂಡು ವೈಚಾರಿಕ ಬರವಣಿಗೆಗೆ ಆದ್ಯತೆ ನೀಡುವಂತಾಗಲಿ ಎಂದರು.
ಕಾರ್ಯಕ್ರಮದ ಸಂಚಾಲಕ ಪ್ರೊ. ದೇಮಣ್ಣ ಸೊಗಲದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ಅ.ಬ. ಇಟಗಿ ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಬಾಲಕೃಷ್ಣ ನಾಯಕ ಹಾಗೂ ಸಂಗಡಿಗರು ಕಾರ್ಮಿಕ ಗೀತೆಯನ್ನು ಹಾಡಿದರು. ಡಾ. ಮಂಜುನಾಥ ಪಾಟೀಲ ವಂದಿಸಿದರು. ಕು. ಸುನಿತಾ ಬ್ಯಾಳಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸಿದ್ದರಾಮ ತಳವಾರ, ಕುಮಾರ ಬ. ತಳವಾರ, ಡಾ. ನೀಲಪ್ಪ ವಾಲಿಕಾರ, ಡಾ. ಸುನೀಲಕುಮಾರ, ಪ್ರಕಾಶ್ ಮಬನೂರ, ಡಾ. ಅಪ್ಪಣ್ಣ ಜಿರನಾಳ, ಡಾ ರುದ್ರಪ್ಪ ಅರಳಿಮಟ್ಟಿ, ಎಂ.ಪಿ. ಬಿರಾದಾರ, ಪ್ರಕಾಶ ಬೊಮ್ಮನ್ನವರ, ಸಾವಕ್ಕ ದೊಡಮನಿ, ಕು. ಅಪೂರ್ವ ಕುರುಬಗಟ್ಟಿ, ಕು. ರಾಧಿಕಾ ಲಮಾಣಿ, ಕು. ಪ್ರತಿಭಾ ಕಲ್ಲಿ, ಕು. ಲಕ್ಷ್ಮಿ ಬನ್ನೂರ, ಕು. ರೂಪಾಲಿ ಅನಿಲಗೋಡ, ಕು. ಜಯಶ್ರೀ ನಾಯ್ಕ್, ಕು. ಹರ್ಷ ಅಂಕಲಗಿ, ಕು. ಸಾವಿತ್ರಿ ಬೇಡರ, ಕು. ಕಾವೇರಿ ಕರೋಶಿ, ಕು. ರಾಧಿಕಾ ಅಜಾಣಿ, ಕು. ಶಕುಂತಲಾ ಪಾಟೀಲ, ಕು. ಲಕ್ಷ್ಮಿ ಕಲಕಾಂಬಕರ, ಕು. ಅಂಜಲಿ ಬೇವಿನಕಟ್ಟಿ, ಕು. ಸ್ಪಂದನ, ಕು. ಸುಪ್ರಿಯಾ ಅಲಕುಂಟೆ, ಕು. ಶ್ರೇಯಾ ಜನಗೌಡ, ಬರಮು ಕುರಲಿ, ಕು. ಯಲ್ಲಪ್ಪ ರೋಣಿ, ಸಿದ್ಧಪ್ಪ ಮರಪೂರ, ಬಸವರಾಜ ಪೂಜೇರಿ, ನಾಗೇಶ ಪಾಟೀಲ, ಮಹೇಶ ಹಾಲಭಾವಿ, ಗಣೇಶ, ಕು. ಉದಯ ಮಾಳೆಗೆನ್ನವರ, ಕು. ರಾಜು ಖನಗಾವಿ, ಕು. ರಂಗನಾಥ ರಂಗಣ್ಣವರ ಹಾಗೂ ಇತರರು ಉಪಸ್ಥಿತರಿದ್ದರು.




