ನಾಡಪ್ರಭು ಕೆಂಪೇಗೌಡ ಆದರ್ಶಗುಣಗಳನ್ನು ಬೆಳಸಿಕೊಂಡಾಗ ನಾಡಿಗೆ ಒಳಿತಾಗುತ್ತದೆ: ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿ
ಬೆಂಗಳೂರಿನ ಜನ ಕೆಂಪೇಗೌಡರ ಋಣ ತೀರಿಸುವ ಕೆಲಸ ಮಾಡಬೇಕು: ಎಸ್.ಸುರೇಶ್ ಕುಮಾರ್
ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಹಾಗೂ ಕೆಂಪೇಗೌಡರ ಪ್ರತಿಮೆ ಹೊತ್ತ ಭವ್ಯ ಮೆರವಣಿಗೆ ಸಮಾರಂಭವನ್ನು ಆಯೋಜಿಸಲಾಗಿತ್ತು.
ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿ, ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ಕಾರ್ಯಪಾಲಕ ಇಂಜಿನಿಯರ್ ಗಂಗಾಧರ್, ಪೊಲೀಸ್ ಇನ್ಸಪೆಕ್ಟರ್ ಚಿಕ್ಕಸ್ವಾಮಿ ನಾಡಪ್ರಭು ಕೆಂಪೇಗೌಡ ಜಯಂತ್ಯೋತ್ಸವಕ್ಕೆ ಚಾಲನೆ ನೀಡಿದರು.
- ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಮಾದರಿ ಕಾರ್ಯಕ್ರಮ
- ಕನ್ನಡ ಸಿನಿಮಾ: ಮುಳುಗುತ್ತಿರುವ ಟೈಟಾನಿಕ್
- RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ?: ಆರ್. ಅಶೋಕ್
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
ಶ್ರೀ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿ ಮಾತನಾಡಿ, ಇಂದಿನ ಯುವ ಸಮಾಜ ಮತ್ತು ಮಕ್ಕಳಿಗೆ ನಾಡಪ್ರಭು ಕೆಂಪೇಗೌಡರ ಇತಿಹಾಸ ತಿಳಿಯಬೇಕು. ಉತ್ತಮ ಚಿಂತನೆಯಿಂದ ಬೆಂಗಳೂರು ನಗರ ನಿರ್ಮಾಣ ಮಾಡಿದ ಕೆಂಪೇಗೌಡರ ಬೆಂಗಳೂರು ಇನ್ನು ಬೆಳಯುತ್ತಿದೆ ಎಂದರು.
ದೇಶ, ವಿದೇಶಗಳಿಂದ ಬಂದವರು ಇಲ್ಲೆ ನೆಲಸುತ್ತಿದ್ದಾರೆ, ಉತ್ತಮ ವಾತವರಣವಿದೆ. ಬರಿ ಕೈಯಲ್ಲಿ ಬಂದವರಿಗೆ ಇಲ್ಲಿ ಉದ್ಯೋಗ ಆಶ್ರಯ ನೀಡುತ್ತಿದೆ. ಐ.ಟಿ. ಮತ್ತು ಬಿಟಿ ಕಂಪನಿಗಳಿಂದ ಲಕ್ಷಾಂತರ ಕೋಟಿ ರೂಪಾಯಿ ತೆರಿಗೆ ನೀಡುತ್ತಿದೆ. ಎಲ್ಲ ಜಾತಿ ವರ್ಗ, ಧರ್ಮದವರಿಗೆ ಬೆಂಗಳೂರು ನಗರ ಆಶ್ರಯ ನೀಡಿದೆ ಎಂದರು.
ಅಧಿಕಾರ, ಆಸ್ತಿ ಡೊಡ್ಡದಲ್ಲ, ಸರಳತೆ, ವಿನಯತೆ ಡೊಡ್ಡದು. ಹಿರಿಯರು ಗಣ್ಯರು ನೀಡಿದ ಚಿಂತನೆ ಮಾರ್ಗದರ್ಶನದಲ್ಲಿ ಸಾಗಬೇಕು. ನಾಡಪ್ರಭು ಕೆಂಪೇಗೌಡರ ಆದರ್ಶ ಗುಣಗಳನ್ನು ಎಲ್ಲರು ಬೆಳಸಿಕೊಂಡು ಬೆಳದಾಗ ನಾಡಿಗೆ ಒಳಿತಾಗುತ್ತದೆ ಎಂದರು.
ಎಸ್.ಸುರೇಶ್ ಕುಮಾರ್ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಮುಂದಾಲೋಚನೆ ಮಾಡಿ ಅಕ್ಕಿಪೇಟೆಯಿಂದ ಎತ್ತು ಬಿಟ್ಟು ಎಲ್ಲಿಯವರಗೆ ಹೋಗುತ್ತದೆ ಅಲ್ಲಿಯವರೆಗೆ ಬೆಂಗಳೂರು ನಗರ ನಿರ್ಮಾಣ ಮಾಡಿದರು. ಇಲ್ಲಿ ನೆಲ, ಉದ್ಯೋಗ, ಆಶ್ರಯ ನೀಡಿದ ನಾಡಪ್ರಭು ಕೆಂಪೇಗೌಡರ ಋಣ ತೀರಿಸುವ ಕೆಲಸ ಮಾಡಬೇಕು ಎಂದರು.
ಬೆಂಗಳೂರು ನಗರದ ಸುತ್ತಮುತ್ತಲ ನದಿ ಇಲ್ಲದ ಕಾರಣದಿಂದ 300ಕ್ಕೂ ಹೆಚ್ಚು ಕೆರೆಗಳ ನಿರ್ಮಾಣವನ್ನು ನಾಡಪ್ರಭು ಕೆಂಪೇಗೌಡರು ಮಾಡಿದರು. ಎಲ್ಲ ವರ್ಗ, ಜಾತಿಯವರಿಗೆ 30ಕ್ಕೂ ಹೆಚ್ಚು ಪೇಟೆಗಳನ್ನು ನಿರ್ಮಾಣ ಮಾಡಿದರು. ಉತ್ತಮ ಆಡಳಿತಗಾರ ದಾರ್ಶನಿಕ ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ಅಜರಾಮರವಾಗಿ ಉಳಿಯಬೇಕು ಎಂದರು.
ಡೊಳ್ಳು, ವೀರಗಾಸೆ, ಕಂಸಾಳೆ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಭಾಗವಹಿಸಿದ್ದವು ಮತ್ತು ಶಿವನಗರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಶಿವನಗರ ಮುಖ್ಯದ್ವಾರದ 3 ಕಿಲೋ ಮೀಟರ್ ವರೆಗೆ ಭವ್ಯ ಮೆರವಣಿಗೆ ಸಾಗಿತು.
ಮಾಜಿ ಉಪ ಮೇಯರ್ ರಂಗಣ್ಣ, ಪಾಲಿಕೆ ಮಾಜಿ ಸದಸ್ಯರುಗಳಾದ ಎಂ.ಮುನಿರಾಜು, ರಾಜಣ್ಣ, ಹೆಚ್.ಆರ್.ಕೃಷ್ಣಪ್ಪ, ಹೆಚ್.ವಿಜಯಕುಮಾರ್, ದೀಪಾ ನಾಗೇಶ್, ಪ್ರತಿಮಾ ಮತ್ತು ಮಂಡಲ ಅಧ್ಯಕ್ಷ ಸುದರ್ಶನ್ ಮತ್ತು ಶಾಲೆಯ ಸಾವಿರಾರು ಮಕ್ಕಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.








