ಜಾತ್ಯತೀತ ಸಿದ್ದಾಂತದ ಪ್ರತಿಪಾದಕ ನಾಡಪ್ರಭು ಕೆಂಪೇಗೌಡ

2 years ago

ಎಲ್ಲ ವರ್ಗ, ಧರ್ಮದವರನ್ನು ಸಮಾನವಾಗಿ ಕಂಡ ಜಾತ್ಯತೀತ ಸಿದ್ದಾಂತದ ಪ್ರತಿಪಾದಕ ನಾಡಪ್ರಭು ಕೆಂಪೇಗೌಡ: ಶ್ರೀ ಸೌಮ್ಯನಾಥ ಸ್ವಾಮೀಜಿ 

ನಾಡಪ್ರಭು ಕೆಂಪೇಗೌಡರ ಆಡಳಿತ ಶೈಲಿಯನ್ನು ರಾಜ್ಯ ಸರ್ಕಾರ ಆಡಳಿತದಲ್ಲಿ ಆಳವಡಿಸಿಕೊಳ್ಳಬೇಕು 

ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ನಾಡಪ್ರಭು ಕೆಂಪೇಗೌಡರ 515ನೇ ಜನ್ಮ ದಿನಾಚರಣೆ

ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಬಿಎಂಪಿ ವತಿಯಿಂದ ನಾಡಪ್ರಭು ಕೆಂಪೇಗೌಡರ 515ನೇ ಜನ್ಮ ದಿನಾಚರಣೆ ಸಮಾರಂಭ ಮತ್ತು ಬೃಹತ್ ರಥಯಾತ್ರೆ ಕಾರ್ಯಕ್ರಮ ನಡೆಯಿತು.

ಆದಿಚುಂಚನಗಿರಿ ಮಹಸಂಸ್ಥಾನದ ಶ್ರೀ ಸೌಮ್ಯನಾಥ ಸ್ವಾಮೀಜಿ, ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ಕಾರ್ಯಪಾಲಕ ಅಭಿಯಂತರ ಗಂಗಾಧರ್, ಕಂದಾಯಧಿಕಾರಿ ಬಸವರಾಜ್, ಒಕ್ಕಲಿಗರ ವೇದಿಕೆ ಅಧ್ಯಕ್ಷ ರಾಜಣ್ಣ ನಾಡಪ್ರಭು ಕೆಂಪೇಗೌಡರಿಗೆ ಮಾಲಾರ್ಪಣೆ ಮಾಡಿ, ಕೆಂಪೇಗೌಡರ ಪ್ರತಿಮೆ ಇರುವ ರಥವನ್ನು ಶಿವನಗರ ಬಸವೇಶ್ವರನಗರ ಮತ್ತು ಕಾಮಾಕ್ಷಿಪಾಳ್ಯ ವಾರ್ಡ್ ಭವ್ಯ ಮೆರವಣಿಗೆ ಸಾಗಿತು.

ಶ್ರೀ ಸೌಮ್ಯನಾಥ ಸ್ವಾಮೀಜಿ ಮಾತನಾಡಿ, ಎಲ್ಲ ವರ್ಗ, ಧರ್ಮದವರಿಗೆ ಸರಿಸಮಾನವಾಗಿ ಕಂಡ ಜಾತ್ಯತೀತ ಸಿದ್ದಾಂತದ ಪ್ರತಿಪಾದಕ ನಾಡಪ್ರಭು ಕೆಂಪೇಗೌಡರು. ಬೆಂಗಳೂರು ನಗರ ಜಾತ್ಯತೀತ ನಗರವಾಗಿದೆ, ನಗರ ವಾಸಿಗಳು ಬೆಳಗ್ಗೆ ಎದ್ದು ಕೆಂಪೇಗೌಡರ ಸ್ಮರಣೆ ಮಾಡಬೇಕು. ಬೆಂಗಳೂರು ನಗರ ಸೌಂದರ್ಯೀಕರಣ, ಪರಿಸರ ಪ್ರಕೃತಿಯನ್ನು ಕಟ್ಟಿಕೊಟ್ಟವರು ಕೆಂಪೇಗೌಡರು ಎಂದರು.

ರಾಜ್ಯ ಸರ್ಕಾರ ಮತ್ತು  ಅಧಿಕಾರಿ, ಸಿಬ್ಬಂದಿ ಕೆಂಪೇಗೌಡ ಆಡಳಿತ ಸಿದ್ದಾಂತ ಅನುಕರಿಸಬೇಕು. ಕೆರೆ, ಮರಗಳು ಇದ್ದರೆ ಬದುಕು ಬಂಗಾರವಾಗುತ್ತದೆ. ಗಿಡಮರ ಬೆಳಸಲು, ಸ್ವಚ್ಛತೆ ಕಾಪಾಡಲು ಸ್ವಯಂಪ್ರೇರಿತರಾಗಿ ನಾವು ಕೆಲಸ ಮಾಡಬೇಕು. ಸರ್ಕಾರ, ಬಿಬಿಎಂಪಿ ಮಾಡುತ್ತದೆ ಎಂದು ಕಾಯಬಾರದು. ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರ ವಿಶ್ವಮಟ್ಟದಲ್ಲಿ ಮಾನ್ಯತೆ ಪಡೆದಿದೆ ಎಂದರು.

ಎಸ್.ಸುರೇಶ್ ಕುಮಾರ್ ಮಾತನಾಡಿ, ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಕೆಂಪೇಗೌಡರ ಋಣವಿದೆ. ಕೋಟೆ, ಕೆರೆ ಕಟ್ಟೆ, ವ್ಯವಸ್ಥಿತ ನಗರ ನಿರ್ಮಾಣವನ್ನು ನಾಡಪ್ರಭು ಕೆಂಪೇಗೌಡರು ಕಟ್ಟಿದರು. 1900 ಕೆರೆಗಳನ್ನು ನಿರ್ಮಾಣ ಮಾಡಿದರು, ನಗರ ಎಷ್ಟು ಬೆಳೆಯಬೇಕು ಎಂಬುದು ಎಂದು ಗಡಿಗೋಪುರ ನಿರ್ಮಾಣ ಮಾಡಿದರು ಎಂದರು.

ಬೆಂಗಳೂರು ನಗರದ ತಂದೆ ನಾಡಪ್ರಭು ಕೆಂಪೇಗೌಡರು. ನಗರ ನಿವಾಸಿಗಳು ಬೆಂಗಳೂರು ನಗರದ ಬಗ್ಗೆ ಪ್ರಿತಿ ಇರಬೇಕು, ನಮ್ಮ ನೆಲ, ಜಲ ಪರಿಸರ ಎಂಬ ಅಭಿಮಾನ ಬೆಳಸಿಕೊಳ್ಳಬೇಕು. ಅಭಿವೃದ್ದಿಯಲ್ಲಿ ರಾಜಕೀಯ ಇರಬಾರದು, ರಾಜಕೀಯದಲ್ಲಿ ಅಭಿವೃದ್ದಿ ಇರಬೇಕು. ನಾಡಪ್ರಭು ಕೆಂಪೇಗೌಡರ ಆಡಳಿತ ಸಿದ್ದಾಂತವನ್ನು ಸರ್ಕಾರ ಆಳವಡಿಸಿಕೊಳ್ಳಬೇಕು ಎಂದರು.

ಮಾಜಿ ಉಪಮೇಯರ್ ರಂಗಣ್ಣ, ಮಾಜಿ ಪಾಲಿಕೆ ಸದಸ್ಯರಾದ ಎಂ.ಮುನಿರಾಜು, ರಾಜಣ್ಣ, ಹೆಚ್.ಆರ್.ಕೃಷ್ಣಪ್ಪ, ಹೆಚ್.ವಿಜಯಕುಮಾರ್, ಸಹಕಂದಾಯಧಿಕಾರಿ ಕೃಷ್ಣ, ಬಿಬಿಎಂಪಿ ಆರೋಗ್ಯ ಇಲಾಖೆಯ ಆರೋಗ್ಯ ಮುಖ್ಯಧಿಕಾರಿ ಡಾ.ರಾಮು, ಆರೋಗ್ಯ ಮೇಲ್ವಿವಿಚಾರಕ ಸುಬ್ರಮಣ್ಯ ಪದಕಿ, ರಾಜೇಶ್ವರಿ ಮತ್ತು ಸಿಬ್ಬಂದಿ ಶಾಲೆಯ ಸಾವಿರಾರು ಮಕ್ಕಳು ಭಾಗವಹಿಸಿದ್ದರು.

Leave a Reply