ಮಂಗಳೂರು: ಸಮಾಜದಲ್ಲಿ ಮಹಿಳೆಯರನ್ನು ಅತ್ಯಂತ ತುಚ್ಛವಾಗಿ ಕಾಣುವ ಪ್ರವ್ರತ್ತಿ ವ್ಯಾಪಕಗೊಳ್ಳುತ್ತಿದೆ ಎಂದು ಎಂದು ಜನವಾದಿ ಮಹಿಳಾ ಸಂಘಟನೆಯ ದ.ಕ.ಜಿಲ್ಲಾಧ್ಯಕ್ಷರಾದ ಜಯಂತಿ ಶೆಟ್ಟಿ ಹೇಳಿದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಕುತ್ತಾರಿನ ಮುನ್ನೂರು ಯುವಕ ಮಂಡಲದಲ್ಲಿ ಜರುಗಿದ ಜನವಾದಿ ಮಹಿಳಾ ಸಂಘಟನೆಯ ಉಳ್ಳಾಲ ವಲಯ ಸಮ್ಮೇಳನವನ್ನು ಉದ್ಘಾಟಿಸುತ್ತಾ ಈ ಮಾತುಗಳನ್ನು ಹೇಳಿದರು.
ಪ್ರತಿಗಾಮಿ ಶಕ್ತಿಗಳು ಮಹಿಳೆಯರನ್ನು ನಿಕೃಷ್ಠವಾಗಿ ಕಾಣುವ ಮೂಲಕ ಭೋಗದ ಸರಕನ್ನಾಗಿಸಿದೆ. ಇಂತಹ ಸಂದರ್ಭದಲ್ಲಿ ಮಹಿಳಾಪರ ಚಿಂತನೆಯನ್ನು ಬೆಳೆಸುವ ಮೂಲಕ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿಲ್ಲೆಯ ಹಿರಿಯ ಮಹಿಳಾ ಮುಖಂಡರಾದ ಪದ್ಮಾವತಿ ಶೆಟ್ಟಿ ಮಾತನಾಡಿ, ರಾಜಕೀಯದಲ್ಲಿ ಉದ್ಯೋಗದಲ್ಲಿ ಮಹಿಳಾ ಮೀಸಲಾತಿ ಜಾರಿಯಾಗುತ್ತಿಲ್ಲ. ಸಮಾನ ದುಡಿಮೆಗೆ ಸಮಾನ ವೇತನ ನೀಡುತ್ತಿಲ್ಲ. ಶೈಕ್ಷಣಿಕವಾಗಿ ಮಹಿಳೆಯರ ಪ್ರಮಾಣ ಜಾಸ್ತಿಯಿದ್ದರೂ ಯೋಗ್ಯ ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ ಎಂದರು.
ಸಭೆಯನ್ನುದ್ದೇಶಿಸಿ JMS ಜಿಲ್ಲಾ ಕಾರ್ಯದರ್ಶಿ ಭಾರತಿ ಬೋಳಾರ, ಹಿರಿಯ ಮಹಿಳಾ ಮುಖಂಡರಾದ ಪದ್ಮಾವತಿ ಕುತ್ತಾರ್ ರವರು ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಹಿರಿಯ ಮುಖಂಡರಾದ ವಿಲಾಸಿನಿ ತೊಕ್ಕೋಟು ವಹಿಸಿದ್ದರು.
ವೇದಿಕೆಯಲ್ಲಿ ಮಹಿಳಾಪರ ಚಿಂತಕಿ ಅರ್ಚನಾ ರಾಮಚಂದ್ರ, ಪಂಚಾಯತ್ ಸದಸ್ಯರಾದ ರಾಜೇಶ್ವರಿ, ಮಹಿಳಾ ನಾಯಕರಾದ ಪ್ರೀತಾ ರೋಹಿದಾಸ್, ಪ್ರಮೋದಿನಿಯವರು ಉಪಸ್ಥಿತರಿದ್ದರು.
ಸಮ್ಮೇಳನವು ಮಹಿಳೆಯರು ಅನುಭವಿಸುವ ಸಂಕಷ್ಟಗಳ ಬಗ್ಗೆ ಗಂಭೀರವಾಗಿ ಚರ್ಚಿಸಿ ಮುಂಬರುವ ದಿನಗಳಲ್ಲಿ ಬಲಿಷ್ಠವಾದ ಮಹಿಳಾ ಚಳುವಳಿಯನ್ನು ಕಟ್ಟಲು ಧೃಢ ತೀರ್ಮಾನ ಕೈಗೊಂಡಿತು. ಈ ಹಿನ್ನೆಲೆಯಲ್ಲಿ ನೂತನ ತಾಲೂಕು ಸಮಿತಿಯನ್ನು ಆಯ್ಕೆಗೊಳಿಸಿತು.
ನೂತನ ಅಧ್ಯಕ್ಷರಾಗಿ ಮಾಲತಿ ಸುಧೀರ್ ತೊಕ್ಕೋಟು, ಕಾರ್ಯದರ್ಶಿಯಾಗಿ ಪ್ರಮೋದಿನಿ ಕಲ್ಲಾಪು, ಖಜಾಂಚಿಯಾಗಿ ಅರ್ಚನಾ ರಾಮಚಂದ್ರ ಆಯ್ಕೆಗೊಂಡರು. ಉಪಾಧ್ಯಕ್ಷರುಗಳಾಗಿ ಪದ್ಮಾವತಿ ಶೆಟ್ಟಿ, ರಾಜೇಶ್ವರಿ, ಶಾಲಿನಿ ಪೂಜಾರಿ, ರತ್ನಮಾಲಾ, ಉಮಾವತಿ,ವಿನೋದಾ ಅಸೈಗೋಳಿ ಹಾಗೂ ಜತೆಕಾರ್ಯದರ್ಶಿಗಳಾಗಿ ಪ್ರೀತಾ ರೋಹಿದಾಸ್, ವಿಲಾಸಿನಿ, ಕಮರುನ್ನೀಸಾ, ಗುಣವತಿ, ಗುಲಾಬಿಯವರನ್ನು ಆರಿಸಲಾಯಿತು. 16 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆರಿಸಲಾಯಿತು.








