ಬೆಂಗಳೂರು: ನಾಟಕಗಳಲ್ಲಿ ಪಾತ್ರ ಮಾಡುತ್ತಾ, ತುಂಬಾ ಚೂಟಿಯಾಗಿದ್ದ ಹತ್ತು ವರ್ಷದ ಸ್ಪರ್ಶ. ನೀರಿನ ಟ್ಯಾಂಕಿಗೆ ಬಿದ್ದು ಅಕಾಲ ಮರಣಕ್ಕೀಡಾದಳು. ಸ್ಪರ್ಶಳ ನೆನಪಿನಲ್ಲಿ ಕಳೆದ 14ವರ್ಷಗಳಿಂದ ನಿರಂತರ ಮಕ್ಕಳ ರಂಗ ಶಿಬಿರ, ಮಕ್ಕಳ ನಾಟಕೋತ್ಸವ, ವಿಚಾರ ಸಂಕಿರಣ, ಮಹಿಳಾ ನಾಟಕೋತ್ಸವ, ಪ್ರೇಮಾ ಕಾರಂತ ನಾಟಕೋತ್ಸವವನ್ನು ಆಯೋಜಿಸುತ್ತಾ, ಜೊತೆಗೆ ಪ್ರತಿ ಭಾನುವಾರ ಮಕ್ಕಳ ರಂಗಶಾಲೆಯನ್ನು ತೆರೆದು ಕನ್ನಡ ರಂಗಭೂಮಿಯಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ.
- ಗಮನ ಬೇರೆಡೆ ಸೆಳೆದು ಮತದಾರರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ: ಪ್ರಕಾಶ್ ರಾಜ್
- ಪ್ರಜಾಪ್ರಭುತ್ವದಲ್ಲಿ ಪ್ರಧಾನಿಯೂ ವ್ಯಂಗ್ಯಕ್ಕೆ ಅತೀತರಲ್ಲ
- ಹಾಲಿನ ದರ ಏರಿಕೆ ಕುರಿತು ಸಂಪುಟದಲ್ಲಿ ಚರ್ಚಿಸಿ ತೀರ್ಮಾನ: ಡಿ ಕೆ ಶಿವಕುಮಾರ್
- ಒಂದು ತಿಂಗಳ ಸಂಬಳವನ್ನು ಬರ ಪರಿಹಾರ ನಿಧಿಗೆ ನೀಡಿ
- ಕಾಮಗಾರಿ ಬಿಲ್ ಪಾವತಿ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ : ಕೃಷ್ಣ ಬೈರೇಗೌಡ
ಪ್ರತಿವರ್ಷ ಸರ್ಕಾರಿ ಶಾಲಾ ಮಕ್ಕಳಿಗೆ ಓದಲು ಬರೆಯಲು ಬೇಕಾಗುವ ಶೈಕ್ಷಣಿಕ ಸಾಮಗ್ರಿಗಳನ್ನು ನೀಡುತ್ತಿದ್ದೇವೆ ಹಾಗೂ ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಕರಿಗೆ ಕ್ರಿಯಾಶೀಲ ಶಿಕ್ಷಕ ಪ್ರಶಸ್ತಿಯನ್ನು ನೀಡುವ ಮೂಲಕ ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಾ ಬರುತ್ತಿದೆ.
ಸದಾ ಕಾಡುವ ಸ್ಪರ್ಶಳ ನೆನಪಿನಲ್ಲಿ “ಸ್ಪರ್ಶ ಮಕ್ಕಳ ರಂಗ ಪುರಸ್ಕಾರವನ್ನು”ನೀಡುತ್ತಾ ಬರುತ್ತಿದ್ದೇವೆ. ಈ ವರ್ಷದ ಸ್ಪರ್ಶ ಮಕ್ಕಳ ರಂಗ ಪುರಸ್ಕಾರವನ್ನು ಕೋಲಾರದ ಚಾಕರಸನಹಳ್ಳಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಇಂಚರ ನಾರಾಯಣಸ್ವಾಮಿ, ಚಾಮರಾಜನಗರದ ಯುವ ರಂಗಕರ್ಮಿ ಕಿರಣ್ ಗಿರ್ಗಿ, ಚಿಕ್ಕಬಳ್ಳಾಪುರದ ಯುವ ರಂಗಕರ್ಮಿ ಆರ್. ದಿಲೀಪ್ ಕುಮಾರ್ ಅವರಿಗೆ ನೀಡಿ ಗೌರವಿಸಲಾಗುತ್ತಿದೆ.
ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ 12 ಆಗಸ್ಟ್ 2026 ಬುಧವಾರ ಬೆಳಿಗ್ಗೆ 11.30ರಿಂದ ಸಂಜೆ 6ರ ವರೆಗೆ ಸ್ಪರ್ಶ ಮಕ್ಕಳ ನಾಟಕೋತ್ಸವ ಜರುಗಲಿದೆ. ನಾಟಕೋತ್ಸವದಲ್ಲಿ ಚಾಮರಾಜನಗರದ ಅಭ್ಯಾಸಿ ರಂಗ ತಂಡದ ಮಕ್ಕಳು ಕೋಟಿಗಾನಹಳ್ಳಿ ರಾಮಯ್ಯ ಅವರ ಒಗಟಿನರಾಣಿ ನಾಟಕವನ್ನು ಕಿರಣ್ ಗಿರ್ಗಿ ಅವರ ನಿರ್ದೇಶನದಲ್ಲಿ ಪ್ರದರ್ಶನ ಮಾಡಲಿದ್ದು, ಎರಡನೇ ನಾಟಕವಾಗಿ ಕೋಲಾರದ ಚಾಕರಸನಹಳ್ಳಿ ಸರ್ಕಾರಿ ಶಾಲೆಯ ಮಕ್ಕಳು ಇಂಚರ ನಾರಾಯಣಸ್ವಾಮಿ ರಚನೆಯ ನಾನು ಸ್ಮಾರ್ಟ್ ಫೋನ್, ಬದುಕು ಡ್ಯೂಟಿ.ಕಾಮ್ ನಾಟಕವನ್ನು ಪ್ರದರ್ಶಿಸಲ್ಲಿದ್ದು, ಮೂರನೇ ನಾಟಕವಾಗಿ ಚಿಕ್ಕಬಳ್ಳಾಪುರ ಸಕಲ ರಂಗ ಹೆಜ್ಜೆ ಸಂಸ್ಥೆಯ ಮಕ್ಕಳು ಚಂದ್ರಶೇಖರ ಕಂಬಾರರ ಕಲ್ಯಾಣದ ಕೂಗು ನಾಟಕವನ್ನು ಪ್ರದರ್ಶನ ಮಾಡಲಿದೆ.








