ಅಭಿನಂದನೆಗಳು, ಅಭಿನಂದನೆಗಳು, ಅಭಿನಂದನೆಗಳು
“ಸಂಭ್ರಮ ಮತ್ತು ಎಚ್ಚರ”
ಆತ್ಮೀಯರೇ,
ದೇವನಹಳ್ಳಿ ರೈತರ ತ್ಯಾಗ ಬದ್ಧತೆಗಳ ದಿಟ್ಟ ಹೋರಾಟಕ್ಕೆ ಅಭಿನಂದನೆಗಳು.ಅವರ ಜೊತೆಗೆ ಗಟ್ಟಿಯಾಗಿ ನಿಂತ ಎಲ್ಲಾ ಜನಪರ ಸಂಘಟನೆಗಳು ಮತ್ತು ಸಂಗಾತಿಗಳಿಗೆ ಅಭಿನಂದನೆಗಳು. ಈ ಯಶಸ್ಸು ಹೋರಾಟದ ಬಲವನ್ನು ಇನ್ನೂ ಹೆಚ್ಚು ಮಾಡಲಿ.
- ಪ್ರತಾಪ್ ಸಿಂಹ ‘ದೇಶಭ್ರಷ್ಟರ’ ಪೋಸ್ಟ್ಗೆ ನೆಟ್ಟಿಗರ ಕಟು ವಿಮರ್ಶೆ
- ಹೆರಿಗೆಯಾದ ಗಂಟೆಯೊಳಗೆ ಮಗುವಿಗೆ ಎದೆಹಾಲು ನೀಡಿ: ಶಿವಾನಂದ ವಿ.ಪಿ
- ಪ್ರೊ. ಬರಗೂರು ಅವರ ದಿಟ್ಟ ಹೆಜ್ಜೆ – 25 ವರ್ಷಗಳ ಸಾರ್ಥಕ ಯಾನ!
- ಸಂಪುಟದಿಂದ ಹೊರಗಿಟ್ಟಿರುವುದು ನನಗೆ ಸಿಕ್ಕ ಪ್ರತಿಫಲವೇ?: ಬಿ ಆರ್ ಪಾಟೀಲ್
- ಸಂಪುಟದಲ್ಲಿ ಭ್ರಷ್ಟಾಚಾರಿಗಳು, ಪೇಮೆಂಟ್ ಕೋಟಾ ಮೂಲಕ ಅವಕಾಶ ಗಿಟ್ಟಿಸಿಕೊಂಡವರು ಇದ್ದಾರೆ: ಆರ್.ಅಶೋಕ
ಈ ಯಶಸ್ಸು ಸರ್ಕಾರಕ್ಕೆ ಯಾವುದೇ ಕಾನೂನು ತೊಡಕಿರಲಿಲ್ಲ ಎಂಬ ಸತ್ಯವನ್ನು ಕೂಡ ಬಯಲು ಮಾಡಿದೆ..
ಇಮೇಜು, ಹಾಗೂ ವರ್ಗ ಹಿತಾಸಕ್ತಿ ಗಳ ನಡುವೆ ಒಂದು ಮಧ್ಯದ ದಾರಿಯನ್ನು ಸರ್ಕಾರ ಅಂತಿಮವಾಗಿ ಕಂಡುಕೊಂಡಿದೆ.
ಆದರೆ ಅಂತ ಅನಿವಾರ್ಯತೆಯನ್ನು ಸೃಷ್ಟಿಸಿದ ಕೀರ್ತಿ ದೇವನಹಳ್ಳಿ ಯ ರೈತರ ನಿರಂತರ ಹೋರಾಟಕ್ಕೆ ಮತ್ತು ಅದನ್ನು ಗೆಲ್ಲಿಸಲೇ ಬೇಕು ಎಂದು ಹಠ ತೊಟ್ಟು , ತನು ಮನದಿಂದ ಜೊತೆಗೆ ನಿಂತ ಎಲ್ಲಾ ಸಂಘಟನೆಗಳು ಮತ್ತು ಸಂಗಾತಿಗಳಿಗೆ ಸೇರಬೇಕು.. ಆದ್ದರಿಂದ ಈ ಅರ್ಹ ಯಶಸ್ಸನ್ನು ದೇವನಹಳ್ಳಿ ರೈತರ ಜೊತೆಗೆ ಸೇರಿ ಸಂಭ್ರಮಿಸೋಣ..
ಅದೇ ಸಮಯದಲ್ಲಿ ಮುಖ್ಯಮಂತ್ರಿಗಳು…
“ಈ ತೀರ್ಮಾನ ಕೇವಲ ಈ 1777 ಎಕರೆಗೆ ಮಾತ್ರ ಸೀಮಿತ ಮತ್ತು ಇಲ್ಲೂ ಸ್ವ ಇಚ್ಛೆಯಿಂದ ಭೂಮಿ ಕೊಡುವ ರೈತರ ಜಮೀನು ಕೊಳ್ಳುತ್ತೇವೆ ” ಎಂದು ಹೇಳಿರುವುದು ಒಡ್ಡಿರುವ ಸವಾಲನ್ನು ಮರೆಯದಿರೋಣ.
ಹಾಗೆಯೇ 2013ರ ಕಾಯಿದೆಯಂತೆ ಎಲ್ಲಾ ಕಡೆಯು ಶೇ. 80ರಷ್ಟು ಜನರ ಸಮ್ಮತಿಯನ್ನು ಮಾನ್ಯ ಮಾಡದೆ ಇರುವುದು ಕಾಂಗ್ರೆಸ್ಸಿನ ಬಂಡವಾಳ ಶಾಹಿ ಪರ ಹಿತಆಸಕ್ತಿಯನ್ನು ಸ್ಪಷ್ಟ ಪಡಿಸುತ್ತಿರುವುದನ್ನು ಮತ್ತು ಜನಪರ ಸಂಘಟನೆಗಳು ಇನ್ನೂ ಗಟ್ಟಿಯಾಗಿ ಒಗ್ಗೂಡುವ ಅಗತ್ಯವನ್ನು ಸಾರುತ್ತಿರುವುದು ಸ್ಪಷ್ಟ…
ಆದ್ದರಿಂದ 2013 ಕಾಯಿದೆಯನ್ನು ಸರ್ಕಾರ ಯಥಾವತ್ ಕರ್ನಾಟಕದಲ್ಲಿ ಜಾರಿಗೆ ತರಬೇಕೆಂಬ ರಾಜ್ಯ ಮಟ್ಟದ ಹೋರಾಟದ ಅಗತ್ಯವನ್ನೂ ಸಾಧ್ಯತೆಯನ್ನೂ ಈ ಹೋರಾಟದ ಯಶಸ್ಸು ತೆರೆದಿಟ್ಟಿದೆ…
ಅದರ ನಡುವೆಯೂ, ಸರ್ಕಾರ 1774 ಎಕರೆಯ ಅಂತಿಮ ನೋಟಿಫಿಕೇಶನ್ ರದ್ದು ಮಾಡಲು ಮಾತ್ರ ದೇವನಹಳ್ಳಿ ರೈತರ ಹೋರಾಟ ಮತ್ತು ಅದಕ್ಕೆ ಬೆಂಬಲಿಸಿದ ಸಂಘಟನೆ ಗಳೇ ಕಾರಣ…
ಮತ್ತೊಮ್ಮೆ ಎಲ್ಲರಿಗೂ ಅಭಿನಂದನೆಗಳು…
– ಶಿವಸುಂದರ್, ಸಾಮಾಜಿಕ ಹೋರಾಟಗಾರರು



