ಅಂಗವೈಕಲ್ಯ ಮತ್ತು ಬುದ್ಧಿಮಾಂದ್ಯತೆ ಇರುವವರಿಗೆ ವೈದ್ಯರ ದೃಢೀಕರಣ ಪತ್ರಕ್ಕಾಗಿ ಮೇಳಗಳನ್ನು ಕಂದಾಯ ಇಲಾಖೆ ಆಯೋಜಿಸಬೇಕು.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಅಂಗವಿಕಲರು ಮತ್ತು ಬುದ್ಧಿಮಾಂದ್ಯ ಮಕ್ಕಳನ್ನು ಹೊಂದಿರುವ ಪೋಷಕರು ಇವರುಗಳಿಗೆ ಸರ್ಕಾರದಿಂದ ದೊರೆಯುವ ಸೌಲತ್ತುಗಳು ಮತ್ತು ಪಿಂಚಣಿಗಳಿಗಾಗಿ ಸಂಬಂಧಪಟ್ಟ ವೈದ್ಯರುಗಳಿಂದ ದೃಢೀಕರಣ ಪತ್ರವನ್ನ ತರಬೇಕಾಗುತ್ತದೆ. ಈ ಸಂದರ್ಭದಲ್ಲಿ ಅಂಗವಿಕಲರು ಮತ್ತು ಬುದ್ಧಿಮಾಂದ್ಯ ಮಕ್ಕಳನ್ನು ಹೊಂದಿರುವ ಪೋಷಕರು ಇಂತಹ ವೈದ್ಯಕೀಯ ದೃಢೀಕರಣ ಪತ್ರಕ್ಕಾಗಿ ಹಲವಾರು ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.
ಇಂತಹ ಪತ್ರಗಳನ್ನು ಪಡೆದುಕೊಳ್ಳಲು ಪೋಷಕರುಗಳು ಮತ್ತು ಅಂಗವಿಕಲರು ಕಷ್ಟಪಡುವ ಸಂದರ್ಭದಲ್ಲಿ ಮಧ್ಯವರ್ತಿಗಳು ಇವುಗಳನ್ನ ಕೊಡಿಸಿ ಕೊಡುವ ಹಿನ್ನೆಲೆಯಲ್ಲಿ ಹತ್ತಾರು ಸಾವಿರ ರೂಪಾಯಿಗಳನ್ನು ಇಂತಹ ಬಡ ಜನರಿಂದ ಪಡೆದುಕೊಳ್ಳುತ್ತಿದ್ದಾರೆ. ಇವರಿಗೆ ಇಂತಹ ಪತ್ರಗಳ ಅನಿವಾರ್ಯತೆ ಇರುವುದರಿಂದ ಸಾಲ ಮಾಡಿ ಈ ವೇಳೆಯಲ್ಲಿ ಕೊಡುತ್ತಿದ್ದಾರೆ.
ಯಾವ ರೀತಿಯಲ್ಲಿ ಕಂದಾಯ ಇಲಾಖೆಯ ಉಪ ತಹಸೀಲ್ದಾರರು ತಾಲೂಕುಗಳಲ್ಲಿ ಪಿಂಚಣಿ ಮೇಳವನ್ನು ಆಯೋಜಿಸುತ್ತಿರೋ, ಅದೇ ರೀತಿಯಲ್ಲಿ ಅಂಗವಿಕಲರು ಮತ್ತು ಬುದ್ಧಿಮಾಂದ್ಯ ಮಕ್ಕಳಿಗೆ ವೈದ್ಯಕೀಯ ದೃಢೀಕರಣ ಪತ್ರವನ್ನು ನೀಡಲು ಮೇಳಗಳನ್ನು ನಡೆಸಿ. ಇದರಿಂದ ಇವರಿಗೆ ಅಲೆದಾಡುವ ವ್ಯವಸ್ಥೆ ತಪ್ಪುತ್ತದೆ ಮಧ್ಯವರ್ತಿಗಳ ಅವಲಂಬನೆ ಯಾಗುವುದು ತಪ್ಪುತ್ತದೆ ಜೊತೆಗೆ ವಿಶೇಷವಾಗಿ ಬುದ್ಧಿಮಾಂದ್ಯ ಮಕ್ಕಳನ್ನ ಕರೆದುಕೊಂಡು ಸೌಲಭ್ಯ ಮತ್ತು ಸೌಕರ್ಯಗಳಿಗಾಗಿ ಪೋಷಕರು ಪಡುವ ಪಾಡು ಹೇಳುತಿರದು. ಆದುದರಿಂದ ಕಂದಾಯ ಇಲಾಖೆಯ ಸಚಿವರು ಸಂಬಂಧ ಪಟ್ಟ ಇಲಾಖೆಗಳೊಂದಿಗೆ ಸಮನ್ವಯವನ್ನ ಸಾಧಿಸಿ ಇಂತಹ ಮೇಳಗಳನ್ನು ಆಯೋಜಿಸಿದರೆ ಲಕ್ಷಾಂತರ ಮಂದಿಗೆ ಅನುಕೂಲವಾಗುತ್ತದೆ. ಅವರ ತೊಂದರೆಗಳಿಗೆ ಪರಿಹಾರವೂ ಆಗುತ್ತದೆ. ದಯಮಾಡಿ ಈ ನಿಟ್ಟಿನಲ್ಲಿ ತುರ್ತಾಗಿ ಮಾನವೀಯ ನೆಲೆಯಲ್ಲಿ ಆಲೋಚಿಸಬೇಕಾಗಿ ಕೋರುತ್ತೇನೆ.
– ಕೆ ಎಸ್ ನಾಗರಾಜ್, ಬೆಂಗಳೂರು




