ಡಾ. ಡಿ. ಎಸ್. ಚೌಗಲೆ ಅವರು ಬೆಳಗಾವಿ ಜಿಲ್ಲೆ, ನಿಪ್ಪಾಣಿ ತಾಲೂಕಿನ ಬೇಡಕಿಹಾಳದಲ್ಲಿ ಜೂನ್ 10, 1961ರಂದು ಜನಿಸಿದರು. ಚಿತ್ರ ಕಲಾವಿದ, ನಾಟಕಕಾರ, ಅನುವಾದಕ ಮತ್ತು ಅಂಕಣಕಾರರಾಗಿ ಪ್ರಸಿದ್ಧರಾಗಿದ್ದಾರೆ. ತೈಲ ಮತ್ತು ಅಕ್ರಿಲಿಕ್ ಪೇಯಿಂಟಿಂಗ್ ಕೃತಿಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರ ಕಲಾಕೃತಿಗಳು ಮುಖ್ಯವಾಗಿ ಭಾರತದ ಗ್ರಾಮೀಣ ಜೀವನ ಮತ್ತು ಆಚರಣೆಗಳನ್ನು ಆಧರಿಸಿವೆ. ಅವರ ಸಾಂಕೇತಿಕ ಮತ್ತು ಅಮೂರ್ತ ಕಲೆಗಳಲ್ಲಿ, ಸ್ಟ್ರೋಕ್‌ಗಳಲ್ಲಿ ಅನನ್ಯ ಶೈಲಿಯನ್ನು ಗುರುತಿಸಬಹುದು.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಸಮಕಾಲೀನ ಕನ್ನಡ ನಾಟಕಕಾರರಲ್ಲಿ ಡಾ. ಡಿ.ಎಸ್. ಚೌಗಲೆ ಅವರದು ಪ್ರಮುಖವಾಗಿ ಕೇಳಿಬರುವ ಹೆಸರು. ಬೇಡಕಿಹಾಳದ ಬಿ.ಎಸ್.ಹೈಸ್ಕೂಲ್ ನಲ್ಲಿ ಆರಂಭದ ಶಿಕ್ಷಣ ಪಡೆದ ಇವರು, ನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ., ಪದವಿ, ಪಿಎಚ್.ಡಿ., ಪದವಿ ಪಡೆದಿದ್ದಾರೆ. ಬೆಳಗಾವಿಯ ಭಾವುರಾವ ಕಾಕತಕರ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಕನ್ನಡ, ಮರಾಠಿ ಭಾಷೆಯ ನಡುವೆ ಅನುಸಂಧಾನ ನಡೆಸುತ್ತಿರುವ ಅವರು ಎರಡೂ ಭಾಷೆಗಳ ಮೇಲೆ ಸಮಾನ ಪ್ರಭುತ್ವ ಹೊಂದಿದ ಸಮರ್ಥ ಅನುವಾದಕರಾಗಿದ್ದಾರೆ.
‘ದಿಶಾಂತರ’, ‘ವಖಾರಿಧೂಸ’, ‘ಕಸ್ತೂರಬಾ’, ‘ಉದ್ವಸ್ಥ’, ‘ಉಚಲ್ಯಾ’, ‘ಜನಮಿತ್ರ ಅರಸು’, ‘ತಮಾಶಾ’, ‘ಸಾವಿತ್ರಿಬಾಯಿ ಫುಲೆ’, ‘ಡಿ.ಎಸ್. ಚೌಗಲೆಯವರ ಏಳು ನಾಟಕಗಳು’ ಇವು ಅವರ ಬಹುಚರ್ಚಿತ ಪ್ರಮುಖ ನಾಟಕಗಳು. 1998ರಲ್ಲಿ ಮೈಸೂರಿನ ರಂಗಾಯಣ ಪ್ರಯೋಗಿಸಿದ ಅನುವಾದಿತ ನಾಟಕ ‘ಗಾಂಧಿ ವರ್ಸಸ್ ಗಾಂಧಿ’ ಕನ್ನಡ ರಂಗಭೂಮಿಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿ ಕನ್ನಡ ರಂಗಭೂಮಿಯಲ್ಲಿ ಮೈಲುಗಲ್ಲು ಎಂದೇ ಪರಿಗಣಿತವಾಗಿದೆ. ಈ ನಾಟಕ 2020ರವರೆಗೆ ಸುದೀರ್ಘ ಪ್ರಯೋಗಗಳನ್ನು ಕಂಡಿದೆ.

‘ಗಾಂಧಿ- ಅಂಬೇಡಕರ’, ‘ಪೇಯಿಂಗ್ ಗೆಸ್ಟ್’, ‘ಕಿರವಂತ’, ‘ಶುದ್ಧವಂಶ’, ‘ಚದುರಂಗ ಮತ್ತು ಕತ್ತೆ’, ‘ಸತ್ಯಶೋಧಕ’ ಮುಂತಾದ ಮಹತ್ವದ ನಾಟಕಗಳನ್ನು ಕನ್ನಡಕ್ಕೆ ಕೊಟ್ಟಿದ್ದಾರೆ. ‘ನೆರಳುಗಳು’ ಅನುವಾದಿತ ಕಾದಂಬರಿ, ‘ನಿನ್ನ ಮೇಲೆ ಸಿಟ್ಟಿಲ್ಲ ಮಾಯೀ’ ಆಯ್ದ ಮರಾಠಿ ಕತೆಗಳ ಸಂಕಲನ, ‘ಮರಾಠಿ ಕೈದಿಗಳ ಕವಿತೆಗಳು’ ವಿವಿಧ ಕಾರಾಗೃಹದಲ್ಲಿರುವ ಸಾಮಾನ್ಯ ಕಾರಾಗೃಹವಾಸಿಗಳು ಬರೆದ ಕವಿತೆಗಳ ಕವನ ಸಂಕಲನವಾಗಿದೆ. ಇವು ಡಿ.ಎಸ್.ಚೌಗಲೆಯವರ ಪ್ರಮುಖ ಅನುವಾದಿತ ಕೃತಿಗಳಾಗಿವೆ.

‘ವಾರಸಾ’, ‘ಒಡಲ ಉರಿಯ ಹೊತ್ತು’, ‘ಚೌಗಲೆ ಕತೆಗಳು’, ‘ಜಂಗು ಹಿಡಿದ ಬ್ಲೇಡು’, ‘ಸೀಮಿಗೊಂದ ಅಟಾಟಿ’ ಅವರ ಕಥಾಸಂಕಲನಗಳು. ‘ಸದರಬಜಾರ್’ ಕಾದಂಬರಿ. ‘ಸುಡು ಕಾವಿನ ಒಣ ಎಲೆ’ ಕವನ ಸಂಕಲನ. ‘ಕನ್ನಡ-ಮರಾಠಿ ಆಧುನಿಕ ರಂಗಭೂಮಿ’ ಪಿಎಚ್.ಡಿ., ಸಂಶೋಧನ ಕೃತಿ. ಪ್ರಜಾವಾಣಿಯಲ್ಲಿ ಎರಡು ವರ್ಷಗಳ ಅವಧಿಗೆ ಪ್ರತಿ ತಿಂಗಳು ಬರೆದ ಅಂಕಣ ಬರಹಗಳ ಸಂಕಲನ ‘ಖಾತೆಕೀರ್ದಿ’ ಪ್ರಕಟವಾಗಿದೆ.
ಮುಂಬಯಿ ವಿಶ್ವವಿದ್ಯಾಲಯದ ‘ಜಾನಪದ ನಾಟಕ ವಿಭಾಗ’, ಔರಂಗಾಬಾದಿನ ಡಾ. ಬಿ.ಆರ್ಾ. ಅಂಬೇಡಕರ ಮರಾಠವಾಡಾ ವಿಶ್ವವಿದ್ಯಾಲಯದ ‘ನಾಟಕ ವಿಭಾಗ’, ಮಹಾರಾಷ್ಟ್ರ ನಾಂದೇಡ್ ನ ಸ್ವಾಮಿ ರಾಮಾನಂದತೀರ್ಥ ಮರಾಠವಾಡಾ ವಿಶ್ವವಿದ್ಯಾಲಯದ ‘ನಾಟಕ ವಿಭಾಗ’, ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದ ‘ನಾಟಕ ವಿಭಾಗ’ದಲ್ಲಿ ಮರಾಠಿ ರಂಗತಜ್ಞರಾಗಿ ಸದ್ಯ ಸೇವೆ ಸಲ್ಲಿಸುತ್ತಿದ್ದಾರೆ.
ಇವರ ಕಲಾಪ್ರದರ್ಶನಗಳು ಮುಂಬೈ, ಪುಣೆ, ಬೆಂಗಳೂರು, ಚೆನ್ನೈ, ಹೈದರಾಬಾದ್, ಕೊಚ್ಚಿನ್, ದಿಲ್ಲಿ ಸೇರಿದಂತೆ ಹಲವೆಡೆ ಏಕವ್ಯಕ್ತಿ ಪ್ರದರ್ಶನ ಹಾಗೂ ಕಲಾವಿದರ ಚಿತ್ರಕಲಾ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಕಂಡಿದ್ದು, ಕಲಾರಸಿಕರ ಮನಸೂರೆಗೊಂಡಿವೆ.
ಕರ್ನಾಟಕ ಸರ್ಕಾರದ ಕರ್ನಾಟಕ ಲಲಿತಕಲಾ ಅಕಾಡೆಮಿ (ಲಲಿತಕಲಾ) ಮತ್ತು ಕರ್ನಾಟಕ ನಾಟಕ ಅಕಾಡೆಮಿ (ನಾಟಕ) ಸದಸ್ಯರಾಗಿ ಮತ್ತು ರಂಗ ಸಮಾಜದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. 16 ವಿವಿಧ ಪ್ರಶಸ್ತಿಗಳು ಅವರಿಗೆ ಸಂದಿದ್ದು, 2 ಅಕಾಡೆಮಿ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ.




