ಕಾರವಾರ: ಡಾ. ರಾಜಕುಮಾರ್ ಅವರು ಚಿತ್ರರಂಗದಲ್ಲಿ ಅತ್ಯಂತ ಉತ್ತುಂಗಕ್ಕೆ ಬೆಳೆದ, ಅಪಾರ ಪ್ರಖ್ಯಾತಿ ಪಡೆದರೂ ಕೂಡ ಅವರ ಸರಳ ಜೀವನ ಶೈಲಿ ಎಂದಿಗೂ ಬದಲಾಗಲಿಲ್ಲ. ಕನ್ನಡ ನೆಲ ಜಲದ ಬಗ್ಗೆ ಅವರಿಗಿದ್ದ ಅಭಿಮಾನವನ್ನು ಚಲನ ಚಿತ್ರಗಳ ಮೂಲಕ ಮತ್ತು ವೈಯಕ್ತಿಕವಾಗಿ ತಮ್ಮ ಜೀವನದುದ್ದಕ್ಕೂ ತಿಳಿಸುತ್ತಾ ಬಂದಿದ್ದು, ಅವರು ಕನ್ನಡ ನಾಡು ಮತ್ತು ನುಡಿಯ ಬಗ್ಗೆ ಹೊಂದಿದ್ದ ಅಭಿಮಾನ ಪ್ರತಿಯೊಬ್ಬರಿಗೂ ಮಾದರಿಯಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಹೇಳಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಾರವಾರ ಉತ್ತರ ಕನ್ನಡ ಜಿಲ್ಲೆ ಹಾಗೂ ಡಾ. ರಾಜ್ಕುಮಾರ್ ಅಭಿಮಾನಿಗಳ ಸಂಘ, ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಡಾ. ರಾಜ್ ಕುಮಾರ್ ರವರ 97 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ರಾಜ್ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಡಾ. ರಾಜಕುಮಾರ್ ಅವರು ಕಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿ ಯಶಸ್ವಿಯಾಗಿ, ಇಡೀ ಸಮಾಜಕ್ಕೆ ಮಾದರಿಯಾಗಿ, ಚಿತ್ರರಂಗ ಮತ್ತು ನಾಟಕ ರಂಗಕ್ಕೆ ತನ್ನದೇ ಆದ ಕೊಡುಗೆ ನೀಡಿ ಕಲಾ ಕ್ಷೇತ್ರವನ್ನು ಹೆಮ್ಮರವಾಗಿ ಬೆಳೆಸಿದ್ದಾರೆ. ನಾಟಕದಿಂದ ಪ್ರಾರಂಭವಾದ ಅವರ ನಟನೆ ಇಡೀ ಭಾರತೀಯ ಚಿತ್ರರಂಗ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡಿದ ಮೇರುನಟರಾಗಿದ್ದರು ಎಂದರು.
ವರನಟ ಡಾ.ರಾಜಕುಮಾರ್ ಅವರ ಬಗ್ಗೆ ಕನ್ನಡ ನಾಡಿನ ಮನೆ ಮನೆಗೂ ತಿಳಿದಿದೆ. ತಮ್ಮ ಆಭಿನಯದ ಮೂಲಕ ದೇಶ ಮತ್ತು ರಾಜ್ಯಕ್ಕೆ ಕೊಡುಗೆಯನ್ನು ನೀಡಿದ ಅವರ ಚಲನಚಿತ್ರಗಳು ಮತ್ತು ಹಾಡುಗಳು ನಮಗೆಲ್ಲ ಮಾದರಿ. ಎಷ್ಟೇ ಪ್ರಖ್ಯಾತಿ ಗಳಿಸಿದರೂ ಸಿನಿಮಾ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿ ಅದರಲ್ಲೇ ಜೀವನ ಕಳೆಯುವ ಮೂಲಕ ಮೇರು ನಟರಾಗಿ ಮೇಲ್ಪಂಕ್ತಿಯಲ್ಲಿದ್ದಾರೆ. ಅವರ ನಡೆದು ಬಂದ ದಾರಿ, ಆಚಾರ ವಿಚಾರ, ಕೊಡುಗೆಯನ್ನು ಯುವ ಪೀಳಿಗೆ ಅರಿತುಕೊಳ್ಳಬೇಕು ಎಂದರು.
ಕಾರವಾರದ ಡಾ. ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಟಿ.ಬಿ ಹರಿಕಾಂತ್ ಮಾತನಾಡಿ, ಡಾ. ರಾಜ್ಕುಮಾರ್ ಒಂದು ಶಕ್ತಿಯಿದ್ದಂತೆ, ಅವರು ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿತ್ವವುಳ್ಳ ವ್ಯಕ್ತಿಯಾಗಿದ್ದು, ಅವರ ಬಹುತೇಕ ಚಲನಚಿತ್ರಗಳಲ್ಲಿ ಸಮಾಜದಲ್ಲಿನ ಆಗು ಹೋಗುಗಳ ಕುರಿತು ಬೆಳಕು ಚಲ್ಲಿದ್ದಾರೆ. ಅವರ ಹಲವು ಚಿತ್ರಗಳನ್ನು ಅನ್ಯ ಭಾಷೆಗಳಿಗೆ ಡಬ್ಬಿಂಗ್ ಮಾಡಲಾಗಿದೆ ಎಂದರು.
ಡಾ. ರಾಜ್ ಕುಮಾರ್ ಕುರಿತು ವಿಶೇಷ ಉಪನ್ಯಾಸ ನೀಡಿದ ಹಿರಿಯ ಪತ್ರಕರ್ತ ನಾಗರಾಜ ಹರಪನಹಳ್ಳಿ , ಡಾ.ರಾಜ್ಕುಮಾರ್ ಅವರು ಸಾಗರವಿದ್ದಂತೆ, ಭಾರತಿಯ ಚಿತ್ರರಂಗದ ಮೇರು ನಟ, ಅತ್ಯಂತ ಸರಳ, ವಿನಯ ಮತ್ತು ವಿಧೇಯತೆ ವ್ಯಕ್ತಿತ್ವದ ಅವರು ಕನ್ನಡ ಬಿಟ್ಟು ಬೇರೆ ಭಾಷೆಗಳಲ್ಲಿ ನಟಿಸಲು ಹೇರಳವಾಗಿ ಅವಕಾಶಗಳು ದೊರೆತರು ಕೂಡಾ ಕನ್ನಡ ಬಿಟ್ಟು ಬೇರೆ ಭಾಷೆಗಳಲ್ಲಿ ನಟಿಸದೇ ಕನ್ನಡ ಅಭಿಮಾನವನ್ನು ವ್ಯಕ್ತಪಡಿಸಿದ ಮೇಲ್ಪಂಕ್ತಿಯ ನಟರಾಗಿ ಸದಾ ನಾಡಿನ ಜನರ ಜನಮಾನಸಲ್ಲಿ ಅಜರಾಮರರಾಗಿದ್ದಾರೆ, ಗೋಕಾಕ್ ಚಳುವಳಿಯ ಮೂಲಕ ಕನ್ನಡ ಭಾಷೆಯ ಬೆಳವಣಿಗೆಗೆ ಅತ್ಯಂತ ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಬಂಟದೇವ ಯುವಕ ಸಂಘ ಅಮದಹಳ್ಳಿ ಇವರಿಂದ ಡಾ. ರಾಜ್ಕುಮಾರ್ ಅವರ ಚಲನಚಿತ್ರಗಳ ಗೀತ ಗಾಯನ ಕಾರ್ಯಕ್ರಮ ನಡೆಯಿತು. ಡಾ. ರಾಜ್ಕುಮಾರ್ ರವರ ಜೀವನ ಚರಿತ್ರೆಯ ಕುರಿತು ಸಾಕ್ಷ್ಯ ಚಿತ್ರ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಶಿವಕುಮಾರ್, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ನಾವಿ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ಎಂ. ನಾಯ್ಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಿಬ್ಬಂದಿಗಳು, ಕ್ರಿಮ್ಸ್ ನ ನರ್ಸಿಂಗ್ ಹಾಗೂ ಸರಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಡಾ. ರಾಜ್ ಕುಮಾರ್ ಅಭಿಮಾನಿಗಳು ಹಿಂದೂ ಹೈಸ್ಕೂಲ್ ಶಿಕ್ಷಕಿ ವನಿತಾ ಮತ್ತಿತರರು ಹಾಜರಿದ್ದರು.




