ಸಂತಕವಿ ಕನಕದಾಸ ಮತ್ತು ತತ್ತ್ವಪದಕಾರರ ಅಧ್ಯಯನ ಕೇಂದ್ರದಿಂದ ಫೆಲೋಶಿಪ್‌ಗೆ ಅರ್ಜಿ ಆಹ್ವಾನ
₹1.50 ಲಕ್ಷ ಧನಸಹಾಯ!
ಬೆಂಗಳೂರು: ಸಂತಕವಿ ಕನಕದಾಸ ಮತ್ತು ತತ್ತ್ವಪದಕಾರರ ಅಧ್ಯಯನ ಕೇಂದ್ರ 2026-27ನೇ ಸಾಲಿನಲ್ಲಿ ಕಿರು ಸಂಶೋಧನೆ ನಡೆಸಲು ಆಸಕ್ತ ಸಂಶೋಧಕರಿಂದ ಫೆಲೋಶಿಪ್‌ಗಾಗಿ ಅರ್ಜಿಗಳನ್ನು ಕರೆದಿದೆ.
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್‌ಗೆ ಅರ್ಜಿ ಆಹ್ವಾನ
- ಮ್ಯಾಥ್ಎರಾ ಟೆಕ್ ಪ್ರೈವೇಟ್ ಲಿಮಿಟೆಡ್ ನಿಂದ ಪದವೀಧರರಿಗೆ ಉದ್ಯೋಗಾವಕಾಶ
ಸಾಹಿತ್ಯ, ಭಕ್ತಿ ಚಳುವಳಿ ಹಾಗೂ ತತ್ತ್ವಪದಗಳ ಕುರಿತು ಸಂಶೋಧನೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಆಯ್ಕೆಯಾಗುವ ಸಂಶೋಧನಾರ್ಥಿಗಳಿಗೆ ತಲಾ ₹1.50 ಲಕ್ಷ ಧನಸಹಾಯ ನೀಡಲಾಗುವುದು. ಇದು 12 ತಿಂಗಳ ಅಧ್ಯಯನ ಯೋಜನೆ.
ಸಂಶೋಧನೆಗೆ ನಿಗದಿಪಡಿಸಲಾಗಿರುವ ವಿಷಯಗಳು
ಅಭ್ಯರ್ಥಿಗಳು ಕೆಳಗಿನ ವಿಷಯಗಳ ಪೈಕಿ ಒಂದನ್ನು ಆಯ್ಕೆ ಮಾಡಿ ಅಧ್ಯಯನ ನಡೆಸಬೇಕು:
- ಕನಕದಾಸರ ಸಾಹಿತ್ಯದಲ್ಲಿ ಧರ್ಮ
- ತತ್ತ್ವಪದಕಾರರ ಲೋಕಪ್ರಜ್ಞೆ ಮತ್ತು ಸಮಕಾಲೀನತೆ
- ಭಾರತೀಯ ಭಕ್ತಿ ಮಾರ್ಗ ಮತ್ತು ತಳಸಮುದಾಯದ ಸಂತರು
- ಕೀರ್ತನ ಸಾಹಿತ್ಯ ಮತ್ತು ಸಮುದಾಯ
- ಕೀರ್ತನ ಸಾಹಿತ್ಯ ಮತ್ತು ಸಮುದಾಯ: ಪ್ರಸಾರ ಮತ್ತು ಪ್ರಭಾವದ ಬಹುಮುಖೀ ನೆಲೆಗಳು
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಮಾನದಂಡಗಳು:
• ಅಗತ್ಯ ದಾಖಲೆಗಳು: ಆಸಕ್ತ ಸಂಶೋಧನಾರ್ಥಿಗಳು ತಮ್ಮ ಶೈಕ್ಷಣಿಕ ವಿದ್ಯಾರ್ಹತೆ, ಸಂಶೋಧನಾ ಅನುಭವ, ಆಸಕ್ತ ಕ್ಷೇತ್ರ ಹಾಗೂ ಆಯ್ಕೆ ಮಾಡಿಕೊಂಡ ವಿಷಯಕ್ಕೆ ಸಂಬಂಧಿಸಿದ ಸಂಕ್ಷಿಪ್ತ ಅಧ್ಯಯನ ಸಾರಲೇಖನವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.
• ಕಡೆಯ ದಿನಾಂಕ: ಭರ್ತಿ ಮಾಡಿದ ಅರ್ಜಿಗಳನ್ನು ಆಗಸ್ಟ್ 25ರೊಳಗೆ ತಲುಪುವಂತೆ ಸಲ್ಲಿಸಬೇಕು.
• ಅರ್ಜಿ ನಮೂನೆ: ಅರ್ಜಿ ನಮೂನೆಯನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್ kanakadasaresearchcenter.karnataka.gov.in ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಅರ್ಜಿ ತಲುಪಿಸಬೇಕಾದ ವಿಳಾಸ:
ಅರ್ಜಿಗಳನ್ನು ಅಂಚೆ ಮೂಲಕ ಅಥವಾ ಇ-ಮೇಲ್ ಮೂಲಕ ಕಳುಹಿಸಲು ಕೂಡ ಅವಕಾಶವಿದೆ:
ಅಂಚೆ ವಿಳಾಸ: ಸಂತಕವಿ ಕನಕದಾಸ ಮತ್ತು ತತ್ತ್ವಪದಕಾರರ ಅಧ್ಯಯನ ಕೇಂದ್ರ, ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು – 560 056.
ಇ-ಮೇಲ್ ವಿಳಾಸ: kanakaresearchcentre@gmail.com
ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ಕೇಂದ್ರದ ಸದಸ್ಯ ಕಾರ್ಯದರ್ಶಿ ಕೋರಿದ್ದಾರೆ.




