ಬಸವನಗುಡಿ ಭಾಗದಲ್ಲಿ ಅನೇಕ ಶ್ರೇಷ್ಠ ಸಾಹಿತ್ಯ ರತ್ನಗಳು ಇದ್ದರೂ ಎನ್ನುವುದು ನಮಗೆ ಹೆಮ್ಮೆಯ ಸಂಗತಿ, ಇಂಥವರ ಸಾಲಿನಲ್ಲಿ ಎಂ ವಿ ಸೀತಾರಾಮಯ್ಯನವರು ಒಬ್ಬರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಇವರು ಬಹಳಷ್ಟು ವರ್ಷಗಳ ಕಾಲ ಗವಿಪುರಂ ಬಡಾವಣೆಯಲ್ಲಿ ವಾಸವಾಗಿದ್ದರು ಎನ್ನುವುದು ಮತ್ತಷ್ಟು ಸಂತೋಷದ ಸಂಗತಿ.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಕಾರದಲ್ಲಿ ಸೇವೆಯನ್ನು ಸಲ್ಲಿಸಿರುವ ಇವರು 1910 ರ ಸೆಪ್ಟೆಂಬರ್ 9ರಂದು ಜನಿಸಿ 1990 ಮಾರ್ಚ್ 12ರಂದು ನಿಧನರಾಗಿರುತ್ತಾರೆ.
ಇವರು ಕನ್ನಡದ ವ್ಯಾಕರಣ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆಯನ್ನು ನೀಡಿದ್ದಾರೆ. ಎನ್ ಆರ್ ಕಾಲೋನಿಯಲ್ಲಿರುವ ಬಿ ಎಂ ಶ್ರೀ ಭವನದ ನಿರ್ಮಾಣದ ಹಿಂದೆ ಇವರ ಶ್ರಮವಿದೆ. ತಮ್ಮ ಗುರುಗಳಾಗಿದ್ದ ಬಿಎಂಶ್ರೀರವರ ಹೆಸರಿನಲ್ಲಿ ಭವನ ಮತ್ತು ಸಂಶೋಧನಾ ಸಂಸ್ಥೆಯನ್ನ ಸ್ಥಾಪಿಸಿದ್ದಾರೆ. ಬಿ ಎಂ ಶ್ರೀ ಸಂಸ್ಥೆಯು ಇಂದು ಹಲವಾರು ರೀತಿಯಲ್ಲಿ ಕನ್ನಡದ ಸಾಹಿತ್ಯಕ್ಕೆ ಸೇವೆಯನ್ನು ಸಲ್ಲಿಸುತ್ತಿದೆ ವಿಶೇಷವಾಗಿ ಕನ್ನಡದಲ್ಲಿ ಪ್ರಾಚೀನ ಸಾಹಿತ್ಯ ಅಧ್ಯಯನ ಮಾಡುವವರಿಗೆ ಇಲ್ಲಿ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿದೆ.
ಇವರ ಸೇವೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಹ ಲಭ್ಯವಾಗಿರುತ್ತದೆ. ಬೆಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಬೋಧಕರಾಗಿ ಕೆಲಸವನ್ನು ಮಾಡಿರುತ್ತಾರೆ.
ಹಕ್ಕಿಹಾಡು, ಆ ಚಿತ್ರಗಳು, ಮತ್ತು ಇತರೆ ಕಥನ ಕವನಗಳು, ಅಶೋಕ ಚಕ್ರ, ಮುಗಿಯದ ಮಾಯೆ, ಗೀತಾ ಭಾರತಿ, ಮೊದಲ ಹೆಜ್ಜೆ, ಸೌಂದರ್ಯ ಲಹರಿ, ಇವು ಕವಿತಾ ಸಂಕಲನಗಳು. ಇವರು ಬರೆದ ಹಲವಾರು ಕವನಗಳು ಆಕಾಶವಾಣಿ ಕೇಂದ್ರದಲ್ಲಿ ಬಿತ್ತರಗೊಂಡವು. ಇವರು ಬರೆದ ಶಾರದೆಯನ್ನು ಕುರಿತ ದೇವಿ ವೀಣಾ ಪಾಣಿ ನಾದ ಸ್ವರೂಪಿಣಿ ಕವಿತೆಯನ್ನು ಗಾಯಕರು ಹಾಡಿ ಜನಪ್ರಿಯಗೊಳಿಸಿದ್ದಾರೆ. ಪ್ರಬಂಧಗಳನ್ನು ಬರೆಯುವುದರಲ್ಲಿ ಎತ್ತಿದ ಕೈ. ಕನ್ನಡ ಸಾಹಿತ್ಯದಲ್ಲಿ ಶಾಂತರಸ, ಭಾರತೀಯ ಕಾವ್ಯಮೀಮಾಂಸೆಗೆ ಕನ್ನಡ ಕವಿಗಳ ಕೊಡುಗೆ, ಇವು ಮೀಮಾಂಸ ಕುರಿತು ರಚಿಸಿರುವ ಗಮನೀಯ ಕೃತಿಗಳು. ಕವಿರಾಜ ಮಾರ್ಗದ ಮಹಾನ್ ಕೃತಿಗೆ ಹೊಸ ರೂಪವನ್ನು ನೀಡಿರುತ್ತಾರೆ. ಮಕ್ಕಳ ಕವಿತೆಗಳನ್ನು ಇವರು ರಚಿಸಿರುತ್ತಾರೆ ಧೂಮ ಲೀಲೆ ಇವರ ಪ್ರಬಂಧಗಳ ಸಂಕಲನವಾಗಿರುತ್ತದೆ.
ವಿಶೇಷವಾಗಿ ಡಿವಿಜಿಯವರ ಆತ್ಮಕಥನ ಧೀಮಂತ ಇವರ ಪ್ರಮುಖವಾದಂತಹ ಮತ್ತೊಂದು ಸಾಹಿತ್ಯದ ಕೊಡುಗೆ ಆಗಿರುತ್ತದೆ. ಸಂಗೀತ ಕ್ಷೇತ್ರದಲ್ಲೂ ಆಸಕ್ತರಿದ್ದ ಇವರು ಹಲವಾರು ವಾದ್ಯಗಳನ್ನು ನುಡಿಸುತ್ತಿದ್ದರು ಜೊತೆಗೆ ಚಿತ್ರ ರಚನೆಯಲ್ಲೂ ಆಸಕ್ತರಾಗಿದ್ದರು.
ಕನ್ನಡ ಸಾಹಿತ್ಯಕ್ಕೆ ವಿಶೇಷವಾದ ರೀತಿಯಲ್ಲಿ ಕೃತಿಗಳನ್ನ ನೀಡಿ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತ ಗೊಳಿಸಿದ ನಾಡಿನ ಶ್ರೇಷ್ಠ ಸರಸ್ವತಿ ಪುತ್ರರು.
– ಕೆ ಎಸ್ ನಾಗರಾಜ್, ಬೆಂಗಳೂರು




