ಡಾ. ಬಸವರಾಜ ಕಲ್ಗುಡಿ (01-02-1954)
ಕನ್ನಡದ ಮಹತ್ವದ ವಿಮರ್ಶಕರೆಂದು ಪರಿಚಿತವಾಗಿರುವ ಡಾ.ಬಸವರಾಜ ಕಲ್ಗುಡಿಯವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬಿಎ ಆನರ್ಸ್ (1973) ಎರಡನೇ ರ್ಯಾಂಕ್, ಎಂಎ ಪದವಿ (1975) ಎರಡನೇ ರ್ಯಾಂಕ್ ಮತ್ತು ಚಿನ್ನದ ಪದಕ, ಪಿಎಚ್.ಡಿ., (1983) ಪದವಿಯನ್ನು ಜಿ ಎಸ್ ಶಿವರುದ್ರಪ್ಪ ಅವರ ಮಾರ್ಗದರ್ಶನದಲ್ಲಿ ಗಳಿಸಿದ್ದಾರೆ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಕನ್ನಡ ಅಧ್ಯಯನ ಕೇಂದ್ರದಲ್ಲಿ 1975ರಿಂದ ನಿವೃತ್ತಿಯವರೆಗೆ ಸಂಶೋಧನ ವೃತ್ತಿಯಿಂದ ಪ್ರಾಧ್ಯಾಪಕ ವೃತ್ತಿಯವರೆಗೆ ನಿರಂತರ ಮೂವತ್ತೈದು ವರ್ಷಗಳವರೆಗೆ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ವಿಶ್ವವಿದ್ಯಾಲಯ ಹಾಗೂ ಸಾಹಿತ್ಯ ಅಕಾಡೆಮಿಗಳಲ್ಲಿ ಹಾಗೂ ವಿವಿಧ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಮಂಡಲಿಗಳಲ್ಲಿ ಶೈಕ್ಷಣಿಕ ಅಭಿವೃದ್ಧಿಗಾಗಿ ಹಲವು ರೀತಿಯಲ್ಲಿ ಶ್ರಮಿಸಿದ್ದಾರೆ.
ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧಿಸಲಾದ ಅಂಶಗಳು:
ಸಂಸ್ಕೃತಿ ಚಿಂತನೆಯಲ್ಲಿ ಕನ್ನಡದಲ್ಲಿ ತಾತ್ವಿಕ ಗ್ರಹಿಕೆಗಳನ್ನು ರೂಪಿಸಿದ ಕೆಲವರಲ್ಲಿ ಬಸವರಾಜ ಕಲ್ಗುಡಿಯವರ ಹೆಸರೂ ಕೂಡ ಪ್ರಧಾನವಾಗಿದೆ. ಮಧ್ಯಕಾಲೀನ ಭಾರತೀಯ ಸಾಂಸ್ಕೃತಿಕ, ಧಾರ್ಮಿಕ ಗ್ರಹಿಕೆಗಳಿಗೆ ಸಂಬಂಧಿಸಿದ ಇವರ ಚಿಂತನೆ ಕನ್ನಡದ ಆಧುನಿಕ ಸಂದರ್ಭದಲ್ಲಿ ಹೊಸ ದಾರಿಗೆ ಕಾರಣವಾಗಿದೆ.
ಇವರ ವಿದ್ಯಾರ್ಥಿಗಳಾಗಿ ಸ್ನಾತಕೋತ್ತರ ಮತ್ತು ಪಿಎಚ್ ಡಿ ಪದವಿ ಗಳಿಸಿದ ವಿದ್ಯಾರ್ಥಿಗಳ ಪೈಕಿ ಮೂವತ್ತು ವರ್ಷಗಳ ಅವಧಿಯಲ್ಲಿ ಬಹುತೇಖ ವಿದ್ಯಾರ್ಥಿಗಳು ಪ್ರತಿಭಾನ್ವಿತರಾಗಿ, ಸೃಜನ, ವಿಮರ್ಶಾಕ್ಷೇತ್ರದಲ್ಲಿ ಹೆಸರು ಪಡೆಯುತ್ತಿರುವ ಹಾಗೂ ಆಡಳಿತಾತ್ಮಕವಾಗಿ ಉನ್ನತ ಪದವಿಯಲ್ಲಿರುವ ವ್ಯಕ್ತಿತ್ವ ಹೊಂದಿದ್ದಾರೆ.

ಬಸವರಾಜ ಕಲ್ಗುಡಿಯವರು ಆಡಳಿತಾತ್ಮಕವಾಗಿ ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾಗಿ ಹಲವು ಮುಖ್ಯ ಕೃತಿಗಳ ಪ್ರಕಟಣೆಗೆ ದಾರಿ ಮಾಡಿದ್ದಾರೆ. ಗಾಂಧಿ ಅಧ್ಯಯನ ಕೇಂದ್ರ ಹಾಗೂ ಡಾ.ಅಂಬೇಡ್ಕರ್ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕರಾಗಿ ಮೌಲಿಕ ಪ್ರಕಟಣೆ ಮತ್ತು ಪಠ್ಯಕ್ರಮಗಳು ರೂಪುಗೊಳ್ಳಲು ಕಾರಣರಾಗಿದ್ದಾರೆ.
ಪ್ರಮುಖವಾದ ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಸಾಹಿತ್ಯ ಚಿಂತನೆ, ವಿಚಾರಸಂಕಿರಣಗಳಲ್ಲಿ ಆಧುನಿಕ ಸಾಮಾಜಿಕ, ಸಾಂಸ್ಕೃತಿಕ ಚಿಂತನೆಗಳು ಶೈಕ್ಷಣಿಕ ವಲಯದಲ್ಲಿ ವಿಸ್ತರಿಸುವಂತೆ ಚಿಂತನೆಗಳನ್ನು ಮಂಡಿಸಿದ್ದಾರೆ.
ಕನ್ನಡ ಅಧ್ಯಯನ ಮಂಡಳಿಯ ಅಧ್ಯಕ್ಷ ಹಾಗೂ ಸದಸ್ಯನಾಗಿ ಮಹತ್ವದ ಕೆಲಸ: ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ (2006-08), ಮೂವತ್ತೈದು ವರ್ಷಗಳಿಂದ ಬದಲಾಗದೇ ಇದ್ದ ಪಠ್ಯಕ್ರಮವನ್ನು ಬದಲಾವಣೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದರು. ಸ್ನಾತಕ ಮತ್ತು ಸ್ನಾತಕೋತ್ತರ ಪಠ್ಯಕ್ರಮದಲ್ಲಿ ಆಧುನಿಕ ಕಾಲಮಾನಕ್ಕೆ ತಕ್ಕ ಬದಲಾವಣೆಯನ್ನು ಮಾಡುವಲ್ಲಿ ಇವರು ಶ್ರಮಿಸಿದರು. ಸ್ನಾತಕೋತ್ತರ ಪದವಿಯಲ್ಲಿ ಭಾಷಾಂತರ ಅಧ್ಯಯನ, ಸಂಸ್ಕೃತಿ ಅಧ್ಯಯನ ಹಾಗೂ ಆಕರ ಶಾಸ್ತ್ರಗಳೆಂಬ ಹೊಸ ವಿಶೇಷ ಅಧ್ಯಯನ ವಿಷಯಗಳನ್ನು ಸೇರಿಸಿ ವಿದ್ಯಾರ್ಥಿಗಳನ್ನು ಸಮಕಾಲೀನ ಜ್ಞಾನಕ್ಕೆ ಅನುವಾಗುವಂತೆ ಮಾಡುವದಕ್ಕೆ ಪೂರಕವಾಗಿ ಪಠ್ಯಗಳನ್ನು ರೂಪಿಸಿದರು. ಸ್ನಾತಕ ಪದವಿಯ ತರಗತಿಗಳು ಇದುವರೆಗೆ ಯಾವುದೇ ಭಾಷಾಕೌಶಲ್ಯಗಳ ಕಲಿಕೆಯನ್ನು ಮೂವತ್ತೈದು ವರ್ಷಗಳಲ್ಲಿ ಪರಿಗಣಿಸಿರಲಿಲ್ಲ. ಸಾಹಿತ್ಯದ ಸ್ನಾತಕ ವಿದ್ಯಾರ್ಥಿಗಳ ಪಠ್ಯವನ್ನು ಗ್ರಹಿಸುವ ವಿವಿಧ ಆಯಾಮಗಳ ದೃಷ್ಟಿಯನ್ನು ಮುಖ್ಯವೆಂದು ಪರಿಗಣಿಸಿ, ತಜ್ಞರ ಸಮಿತಿಯ ಸೂಚನೆಯನ್ನು ಆಧರಿಸಿ ಹೊಸ ಪಠ್ಯಕ್ರಮವನ್ನು ರೂಪಿಸಿದರು.

ಅನುಭವ ಬೋಧನೆ:
1. ಪ್ರಾಧ್ಯಾಪಕ 1999 – 2016
2. ಪ್ರವಾಚಕ 1993 – 1999
3. ಅಧ್ಯಾಪಕ 1986 – 1993
4. ಅಧ್ಯಾಪಕ (ತಾತ್ಕಾಲಿಕ) 1980 – 1986
5. ಸಂಶೋಧನಾ ಸಹಾಯಕ 1975 ರಿಂದ 1980
ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು- ಇಲ್ಲಿ ಸಾಹಿತ್ಯ, ತೌಲನಿಕ ಅಧ್ಯಯನ, ಶಾಸನ, ಆಕರಶಾಸ್ತ್ರ, ಸಂಸ್ಕೃತಿ ಅಧ್ಯಯನ, ಭಾಷಾಂತರ ಅಧ್ಯಯನದ ವಿದ್ಯಾರ್ಥಿಗಳಿಗೆ ಸತತವಾಗಿ ಮೂವತ್ತು ವರ್ಷಗಳ ಬೋಧನೆಯ ಅನುಭವ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆಸುವ ಕನ್ನಡೇತರ ವಿದ್ಯಾರ್ಥಿಗಳಿಗೆ ಕನ್ನಡ ಬೋಧನೆಯನ್ನು ಸುಮಾರು 15 ವರ್ಷಗಳ ಕಾಲ ಮಾಡಿದ ಅನುಭವ.
ಸಂಶೋಧನೆ: ಕರ್ನಾಟಕದಲ್ಲಿ ಸತಿಪದ್ಧತಿಯನ್ನು ಕುರಿತ ಕರ್ನಾಟಕದಾದ್ಯಂತ ವ್ಯಾಪಕ ಕ್ಷೇತ್ರಾಧ್ಯಯನ ಉಳ್ಳ ಸಂಶೋಧನೆಯನ್ನು ಕೈಗೊಂಡು ವಿಸ್ತೃತವಾದ ಸಂಶೋಧನೆ ಅಧ್ಯಯನವನ್ನು ಮಾಡಿ ಪಿಎಚ್ ಡಿ ಪ್ರಬಂಧವನ್ನು ಸಲ್ಲಿಸಿದರು. ಬೆಂಗಳೂರು ವಿಶ್ವವಿದ್ಯಾಲಯ 400 ಪುಟಗಳ ಈ ಸಂಶೋಧನೆಯನ್ನು ಪ್ರಕಟಿಸಿದೆ.
ಎಂ.ಫಿಲ್., ವಿದ್ಯಾರ್ಥಿಗಳಿಗೆ ಸಂಶೋಧನ ಪ್ರಬಂಧದ ಮಾರ್ಗದರ್ಶನ:
1. ಎಂ.ಶೀಲಾ – ವಚನಕಾರರು ಮತ್ತು ಹರಿಹರ – 1986
2. ಎಲ್.ವಿ.ಪಾಟೀಲ್ – ಬೆಳುವಲ ನಾಡಿನ ಸಾಂಸ್ಕೃತಿಕ ಚರಿತ್ರೆ -1987
3. ಎಸ್.ತ್ಯಾಗರಾಜ್ – ನವೋದಯ ಸಂದರ್ಭದ ಕನ್ನಡ ಸಾಹಿತ್ಯ ಹಾಗೂ ಸಾಹಿತ್ಯ ಪತ್ರಿಕೆಗಳು – 1994
4. ಟಿ.ಟಿ. ಈಶ್ವರ್ – ಬಸವಣ್ಣನವರ ವಚನಗಳು – ವ್ಯಕ್ತಿ ಮತ್ತು ಸಮಾಜ – 1996
5. ಕೆ.ವೈ.ನಾರಾಯಣ ಸ್ವಾಮಿ – ನೀರು: ಒಂದು ಸಾಂಸ್ಕೃತಿಕ ಅಧ್ಯಯನ – 1996
6. ಎನ್.ಸಿ.ಸುಮಾ – ಬೇಂದ್ರೆಯವರ ಕಾವ್ಯದಲ್ಲಿ ಕಾವ್ಯಮೀಮಾಂಸೆಯ ಪರಿಕಲ್ಪನೆಗಳು –1996-97
7. ಟಿ.ಡಿ.ರಾಜಣ್ಣ – ಕನ್ನಡ ಶಾಸನಗಳಲ್ಲಿ ಶಾಪಾಶಯಗಳು -1998
12 ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ
1. ಡಾ.ಎಚ್.ಎಸ್.ಶ್ರೀಮತಿ – ಹಳಗನ್ನಡ ಸಾಹಿತ್ಯದ ಅಧ್ಯಯನದ ಸ್ವರೂಪ
2. ಡಾ. ಸೆಲ್ವಕುಮಾರಿ – ವೈಷ್ಣವ ಭಕ್ತಿ ಸಾಹಿತ್ಯ ಚಳುವಳಿಯ ಅಧ್ಯಯನ (ಅಪ್ರಕಟಿತ)
3. ಡಾ.ರಾಜೇಗೌಡ ಹೊಸಳ್ಳಿ – ತಂಬೂರಿಯವರ ಸಂಸ್ಕೃತಿ ಸಾಹಿತ್ಯದ ಅಧ್ಯಯನ
4. ಡಾ.ಪಮ್ಮಾರ್ – ಬುಡಬುಡಿಕೆಯವರ ಸಂಸ್ಕೃತಿ – ಸಾಹಿತ್ಯದ ಅಧ್ಯಯನ (ಅಪ್ರಕಟಿತ)
5. ಡಾ.ಪ್ರಭಾವತಿ – ಅಕ್ಕಮಹಾದೇವಿಯ ವಚನಗಳ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಅಧ್ಯಯನ
6. ಡಾ.ಸಿ.ನಾಗಭೂಷಣ – ಏಕಾಂತ ರಾಮಯ್ಯ ಮತ್ತು ವೀರಶೈವ ಚಳುವಳಿ
7. ಡಾ.ಎಚ್.ಶಶಿಕಲಾ – ತೇಜಸ್ವಿಯವರ ಸಾಹಿತ್ಯದಲ್ಲಿ ಸಂಸ್ಕೃತಿಯ ಗ್ರಹಿಕೆಗಳು
8. ಡಾ.ಬಿ.ಯು.ಸುಮಾ – ಕನ್ನಡ ಸಾಹಿತ್ಯ ಪ್ರತಿಭೆ ಮತ್ತು ಪ್ರಭುತ್ವ (ಅಪ್ರಕಟಿತ)
9. ಡಾ.ವಿಶಾಲ ಸತ್ಯಮೂರ್ತಿ – ಕರ್ನಾಟಕದ ಕೈಮಗ್ಗದ ಸಂಸ್ಕೃತಿಯ ತೌಲನಿಕ ಅಧ್ಯಯನ (ಅಪ್ರಕಟಿತ)
10. ಡಾ.ಸುಜಾತ – ಆಧುನಿಕ ಕನ್ನಡ ಸಾಹಿತ್ಯದ ಪ್ರಮುಖ ತಾತ್ವಿಕ ಆಯಾಮಗಳು (ಅಪ್ರಕಟಿತ)
11. ಡಾ.ಹೇಮಾ – ಆಧುನಿಕ ಕನ್ನಡ ಸಾಹಿತ್ಯದ ನಾಲ್ಕು ಪ್ರಮುಖ ವಸ್ತುಗಳು (ಅಪ್ರಕಟಿತ)
12. ಡಾ.ಚಂದ್ರಶೇಖರ ನಂಗಲಿ – ಕನ್ನಡದಲ್ಲಿ ಚಾರಣ ಸಾಹಿತ್ಯ – ಒಂದು ಸಾಂಸ್ಕೃತಿಕ ಅಧ್ಯಯನ
ಪೋಸ್ಟ್ ಡಾಕ್ಟರೇಟ್ ಗಾಗಿ ಡಾ.ಗೀತಾ ಅವರು ‘ಇಂಡಿಯನ್ ಕೌನ್ಸಿಲ್ ಫಾರ್ ಹಿಸ್ಟಾರಿಕಲ್ ರೀಸರ್ಚ್’ ಸಂಸ್ಥೆಯ ವತಿಯಿಂದ ಮಾಡಿದ ಸಂಶೋಧನಾ ವಿಷಯಕ್ಕೆ ಮಾರ್ಗದರ್ಶನ.
ವಿಷಯ: ಆಧುನಿಕ ಪೂರ್ವ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಸಂಬಂಧಗಳ ಚಿಂತನೆ (ಕನ್ನಡ ಸಾಹಿತ್ಯ ಪರಿಷತ್ತು ಈ ಕೃತಿಯನ್ನು ಪ್ರಕಟಿಸಿದೆ)
ಪ್ರಕಟಣೆಗಳು:
1. ಮಹಾಸತಿ ಆಚರಣೆ – ಒಂದು ಅಧ್ಯಯನ, ಬೆಂಗಳೂರು ವಿಶ್ವವಿದ್ಯಾಲಯ, 1985
2. ಅನುಭಾವ: ಸಾಂಸ್ಕೃತಿಕ ಸಮಸ್ಯೆ ಮತ್ತು ಹುಡುಕಾಟ, (ಪುಸ್ತಕ ಪ್ರಾಧಿಕಾರ 2001; ಮೂರನೆ ಮುದ್ರಣ)
3. ನಕ್ಷೆ ನಕ್ಷತ್ರ, ವಿಮರ್ಶಾ ಸಂಕಲನ, ಕ್ರೈಸ್ಟ್ ಕಾಲೇಜು, ಬೆಂಗಳೂರು (ಪುನರ್ ಮುದ್ರಣ 2011, ಕನ್ನಡ ಮತ್ತು ಸಂಸ್ಕೃತಿ ಇಲಾಖೆ)
4. ಬೇಂದ್ರೆಯವರ ಕಾವ್ಯದಲ್ಲಿ ಪ್ರೇಮ ಆವಿಷ್ಕಾರದ ಸ್ವರೂಪ, ಕ್ರೈಸ್ಟ್ ಕಾಲೇಜು, ಬೆಂಗಳೂರು
5. ಮೈಯೇ ಸೂರು, ಮನವೇ ಮಾತು (ಸಾಹಿತ್ಯ, ಸಂಸ್ಕೃತಿ, ಸಂಶೋಧನೆ ಕುರಿತ ಲೇಖನಗಳ ಸಂಕಲನ) ಅಭಿನವ ಪ್ರಕಾಶನ, ಬೆಂಗಳೂರು, 2013
6. ಹಾಡು ಹಾವೇ, ಕೇಂದ್ರ ಸಾಹಿತ್ಯ ಅಕಾಡೆಮಿ 2001, ( ತಮಿಳು ಕಾವ್ಯದ ಭಾಗಗಳ ಸಂಪಾದಿತ ಕೃತಿ (ಮುನ್ನುಡಿ)
7. ಕರ್ನಾಟಕ ಸಂಗಾತಿ (ಸಂ) ಕನ್ನಡ ಅಭಿವೃದ್ಧಿ ಪ್ರಾಧಿಕಾರ
8. ಕನ್ನಡ ವಾರ್ಷಿಕ (ಸಂ) ಕನ್ನಡ ವಿ.ವಿ. ಹಂಪಿ
9. ಬಹುರೂಪಿ (ಸಂ) ಬೆಂಗಳೂರು ವಿಶ್ವವಿದ್ಯಾಲಯ
10. ಆಧುನಿಕ ಕನ್ನಡ ಕಥಾ ಸಾಹಿತ್ಯ (ಸಂ) ಬೆಂಗಳೂರು ವಿಶ್ವವಿದ್ಯಾಲಯ
11. ಸುವರ್ಣ ವಿಚಾರ ಸಾಹಿತ್ಯ (ಸಂ) ಕನ್ನಡ ಮತ್ತು ಸಂಸ್ಕೃತಿ ಇಲಾಖೆ, 2006
12. ಅಂಬೇಡ್ಕರ್ ಚಿಂತನೆಯ ಅನಂತ ಸಾಧ್ಯತೆಗಳು(ಸಂ), ಬೆಂಗಳೂರು ವಿಶ್ವವಿದ್ಯಾಲಯ, 2009
13 ‘ಸಾಹಿತ್ಯ ಸಂವಾದ’ ಹಾಗೂ ‘ಬಹುಮುಖ’ ಪಠ್ಯ ಪುಸ್ತಕಗಳ ಪ್ರಧಾನ ಸಂಪಾದಕ (ಬಿ.ಎ, ಬಿಎಸ್ಸಿ, ಬಿಕಾಂ., ಎರಡು ರ್ಷಗಳ ದ್ವಿತೀಯ ಭಾಷೆಯ ಹಾಗೂ ಮೂರು ವರ್ಷಗಳ ಬಿ.ಎ., ಐಚ್ಚಿಕ ಪಠ್ಯ ಪುಸ್ತಕಗಳ ಪ್ರದಾನ ಸಂಪಾದಕ)
ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ವಿಚಾರಸಂಕಿರಣಗಳು ಹಾಗೂ ಅಂತರಾಷ್ಟ್ರೀಯ ಭೇಟಿ
ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯ ತಂಡದ ಗೌರವಾನ್ವಿತ ದೇಶದ ಬರಹಗಾರನಾಗಿ ದಕ್ಷಿಣ ಕೊರಿಯಾದ ಜಾಗತಿಕ ಪುಸ್ತಕ ಮೇಳದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ವತಿಯಿಂದ ಭಾಗವಹಿಸಿ ಎರಡು ಉಪನ್ಯಾಸಗಳನ್ನು ನೀಡಿದರು. (ಜೂನ್ 18ರಿಂದ 25.ಸಿಯೊಲ್), 2013
National seminar cum workshop: “Historiography of Translation: from Sanskrit To Indian languages, and from other Indian languages to Sanskrit”.21 to 23 rd Jan 2012.CIIL, Mysore. Presented a paper on: “Creativity in translations”. 2012
International conference on Influence of Jainism in ART, culture & LITERATURE. Presided over one session & gave a lecture on Kannada Literature and Jaina Culture. Jain University, Center for Management Studies.
ದೇವನೂರ ಮಹಾದೇವ ಸಾಹಿತ್ಯ ವಿಚಾರ ಸಂಕಿರಣ, ಉಪನ್ಯಾಸ, ಕನ್ನಡ ಸಾಹಿತ್ಯ ಮತ್ತು ದೇವನೂರ ಮಹಾದೇವ, ಗ್ರಾಮ ಭಾರತ ಸಂಸ್ಥೆ, ಗಾಂಧಿ ಭವನ, ಬೆಂಗಳೂರು.
ಕನ್ನಡ ಉರ್ದು ಸಾಹಿತ್ಯ ಸಂಸ್ಕೃತಿ ಸಂಬಂಧ ಕುರಿತ ರಾಷ್ಟ್ರೀಯ ವಿಚಾರಸಂಕಿರಣ, ಕೇಂದ್ರ ಸಾಹಿತ್ಯ ಅಕಾಡೆಮಿ, ಪ್ರಜ್ಞಾ ಕಾನೂನು ಸಮಿತಿ, ಗುಲ್ಬರ್ಗ. ಒಂದು ಗೋಷ್ಠಿಯ ಅಧ್ಯಕ್ಷತೆ ಹಾಗೂ ಕನ್ನಡ ಉರ್ದು ಭಾಷಾಂತರದ ಸಮಸ್ಯೆ ಕುರಿತು ಉಪನ್ಯಾಸ, (ಇಂಗ್ಲಿಷಿನಲ್ಲಿ). 2011
‘ವಚನ ಮತ್ತು ಗುರುಗ್ರಂಥಸಾಹಿಬ್ – ತೌಲನಿಕ ಅಧ್ಯಯನ’ ಕುರಿತು ರಾಷ್ಟ್ರೀಯ ವಿಚಾರಸಂಕಿರಣ, ಕೇಂದ್ರ ಸಾಹಿತ್ಯ ಅಕಾಡೆಮಿ, ಪ್ರಬಂಧ ಮಂಡನೆ, ಮೈಸೂರು,(ಇಂಗ್ಲಿಷಿನಲ್ಲಿ). 2011
‘ಭೂಸನೂರ ಮಠ ಅವರ ಸಾಹಿತ್ಯಕ ಸಾಧನೆ’ ವಿಚಾರ ಸಂಕಿರಣ, ಕೇಂದ್ರ ಸಾಹಿತ್ಯ ಅಕಾಡೆಮಿ, ಗೋಷ್ಠಿಯ ಹಾಗೂ ಉಪನ್ಯಾಸ, ಬೆಳಗಾವಿ 2011
‘ಸಂಶೋಧನೆಯಲ್ಲಿ ಸಮಸ್ಯೀಕರಣ’ ವಿಶೇಷ ಉಪನ್ಯಾಸ ‘ಅಲ್ಲಂ ಸುಮಂಗಳ ದತ್ತಿ ನಿಧಿ’, ಕನ್ನಡ ವಿಶ್ವವಿದ್ಯಾಲಯ. ಹಂಪಿ 2011
‘ಬೇಂದ್ರೆ ಕಾವ್ಯ- ನವೋದಯದ ಅನುಸಂಧಾನದ ವಿಭಿನ್ನ ನೆಲೆಗಳು’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಉಪನ್ಯಾಸ, ದೆಹಲಿ ಕರ್ನಾಟಕ ಸಂಘ, ದೆಹಲಿ 2011
ಸಮಕಾಲೀನ ವಿಮರ್ಶೆ: ಸಾಂಸ್ಕೃತಿಕ ಬಿಕ್ಕಟ್ಟು, ಉಪನ್ಯಾಸ, ಕುವೆಂಪು ವಿಶ್ವವಿದ್ಯಾಲಯ, ಕರ್ನಾಟಕ ಸಾಹಿತ್ಯ ಅಕಾಡೆಮಿ 2011
ಜನ ಸಂಸ್ಕೃತಿ ನಿರ್ವಚನ: ರಾಜ್ಯ ಮಟ್ಟದ ವಿಚಾರ ಸಂಕಿರಣ, ಶಿರಸಿ ಉದ್ಘಾಟನೆ ಮತ್ತು ಉಪನ್ಯಾಸ 2011
ನಾಗವರ್ಮ- ಪುನರಾವಲೋಕನ, ರಾಷ್ಟ್ರೀಯ ವಿಚಾರ ಸಂಕಿರಣ, ಬೆಂಗಳೂರು ವಿಶ್ವವಿದ್ಯಾಲಯ 2011
ಕನಕನ ಸುತ್ತಮುತ್ತ: ಸಂಕಥನಗಳ ಜಿಜ್ಞಾಸೆ – ರಾಷ್ಟ್ರೀಯ ಸಂಕಿರಣದ ಉದ್ಘಾಟನೆಯಲ್ಲಿ ವಿಶೇಷ ಪ್ರಸ್ತಾವನಾ ಭಾಷಣ 2010
ದಾಸ ಸಾಹಿತ್ಯ ಸಂಶೋಧಾ ಕಮ್ಮಟ: ವಿಶೇಷ ಉಪನ್ಯಾಸ ದಾಸಸಾಹಿತ್ಯದ ಅಗತ್ಯ ಹೊಸ ಹಾದಿಯ ಹುಡುಕಾಟ 2010
‘ಆಳ್ವಾಸ್ ನುಡಿಸಿರಿ’ಯಲ್ಲಿ ಕನ್ನಡ ಸಾಹಿತ್ಯ ಲಕ್ಷಣ ಕುರಿತ ವಿಶೇಷ ಉಪನ್ಯಾಸ, ಮೂಡಬಿದಿರೆ 2010
‘ಶಾಸ್ತ್ರೀಯ ಭಾಷೆಯಾಗಿ ಕನ್ನಡ’ ರಾಷ್ಟ್ರೀಯ ಸಮಾವೇಶ, ಸಿ.ಐ.ಐ.ಎಲ್. ಮೈಸೂರು- ವಿಶೇಷ ಚರ್ಚೆಯಲ್ಲಿ ಭಾಗವಹಿಸುವಿಕೆ 2010
‘ಕನ್ನಡದ ನವೋದಯ’ ಕುರಿತು ವಿಚಾರಸಂಕಿರಣದಲ್ಲಿ ವಿಶೇಷ ಉಪನ್ಯಾಸ, ಕುವೆಂಪು ವಿಶ್ವವಿದ್ಯಾಲಯ 2010
‘ಪ್ರಾಚೀನ ಜೈನಸಾಹಿತ್ಯದ ಲಕ್ಷಣಗಳು’ ಕುರಿತು ಉಪನ್ಯಾಸ- ಕುವೆಂಪು ವಿಶ್ವವಿದ್ಯಾಲಯ 2010
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉಪನ್ಯಾಸ, ಚಿತ್ರದುರ್ಗ 2010.
ಇತರೆ
1. ಪುಸ್ತಕ ಸಂಸ್ಕೃತಿಯ ತಾತ್ವಿಕತೆ: ವಿಚಾರಸಂಕಿರಣ, ಕನ್ನಡ ಪುಸ್ತಕ ಪ್ರಾಧಿಕಾರ, ಮುಂಬೈನಲ್ಲಿ ನಡೆದ ವಿಚಾರಸಂಕಿರಣ, ಸಮಾರೋಪ ಭಾಷಣ, 2001
2. ಕನ್ನಡದಲ್ಲಿ ಚಾರಿತ್ರಿಕ ಬರಹಗಳ ತಾತ್ವಿಕತೆ ‘ಇತಿಹಾಸ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿಶೇಷ ಉಪನ್ಯಾಸ, 2001
3. ‘ಜೈನ ಸಾಹಿತ್ಯದಲ್ಲಿ ಅಹಿಂಸೆ’ ಉಪನ್ಯಾಸ, ಸಾಹಿತ್ಯ ಅಕಾಡೆಮಿ, ಮಂಗಳೂರು, 2000
4. ‘ಸಾಹಿತ್ಯ ಮತ್ತು ಧಾರ್ಮಿಕ ಸಾಮರಸ್ಯ’ ಕನ್ನಡ ಪ್ರಾಧಿಕಾರ, ಬೆಂಗಳೂರು, 2000
5. ‘ಮಾಸ್ತಿಯವರ ಕಾದಂಬರಿಗಳಲ್ಲಿ ಚಾರಿತ್ರಿಕ ಪರಿಕಲ್ಪನೆ’ ಕುರಿತ ಉಪನ್ಯಾಸ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು,1985
6. ‘ಸತಿ ಪದ್ಧತಿಯನ್ನು ಕುರಿತು ಜಾನಪದಗೀತೆಗಳಿಂದ ಸಾಂಸ್ಕೃತಿಕ ವಿವರ’ ಉಪನ್ಯಾಸ, ಕರ್ನಾಟಕ ಇತಿಹಾಸ ಅಕಾಡೆಮಿ, ಧಾರವಾಡ, 1984
7. ಅಖಿಲ ಭಾರತ ಶಾಸನ ಸಮಾವೇಶ, ಮದ್ರಾಸ್. ಇಲ್ಲಿ ‘ಸ್ಮಾರಕಶಿಲೆಗಳು ಮತ್ತು ಆತ್ಮ ಕುರಿತ ನಂಬಿಕೆ’ ಕುರಿತು ಉಪನ್ಯಾಸ, 1978,(ಇಂಗ್ಲಿಷಿನಲ್ಲಿ; Ancient memorial stones and the concept of soul)
ಪ್ರಕಟವಾದ ಕೆಲವು ಪ್ರಮುಖ ಲೇಖನಗಳು:
1. ಸ್ಮಾರಕ ಶಿಲೆಗಳು ಮತ್ತು ಆತ್ಮ ಕುರಿತ ಪ್ರಾಚೀನ ನಂಬಿಕೆ: ಸಾಧನೆ, ಬೆಂಗಳೂರು ವಿಶ್ವವಿದ್ಯಾಲಯ, 1978
2. ನಾಣ್ಯಗಳ ಅಧ್ಯಯನ ಕೆಲವು ಚಿಂತನೆ, ಸಾಧನೆ, ಬೆಂಗಳೂರು ವಿಶ್ವವಿದ್ಯಾಲಯ, 1978
3. ಸಾಹಿತ್ಯ-ಸಮಾಜ: ಕೆಲವು ಚಿಂತನೆಗಳು, ‘ಆಲೋಕ’ 1979
4. ‘ಮೂರು ಸಾಹಿತ್ಯಕ ದಾಖಲೆಗಳು’ ಅಂಕಣ 08. 1979
5. ಮಾಸ್ತಿಯವರ ಕಥೆಗಳಲ್ಲಿ ಪ್ರವೃತ್ತಿ ಮತ್ತು ಸಂಸ್ಕೃತಿಗಳ ಮುಖಾಮುಖಿ- ಅಂಕಣ, 1980
6. ‘ಸಾಹಿತ್ಯ-ಸಮಾಜ-ಗತಿಶೀಲತೆ’, ಸಾಧನೆ, 1982
7. ‘ಚರಿತ್ರೆ ಮತ್ತು ಜಾನಪದದಲ್ಲಿ ನಡೆದ ಹತ್ತು ವರ್ಷಗಳ ಸಂಶೋಧನೆ’ಲೇಖನ, ‘ದಶವಾರ್ಷಿಕ ಸಾಹಿತ್ಯ’ (ಸಂ:ಶಿವರುದ್ರಪ್ಪ) 1981
8. ‘ಸಂಸ್ಕೃತಿಯಲ್ಲಿ ಹಗಲು-ರಾತ್ರಿಗಳ ಸಮಸ್ಯೆ’ ಶಂಬಾ ಚಿಂತನೆ ಕುರಿತ ಲೇಖನ, ‘ಅಧ್ಯಯನ’ ಶಂಬಾ ಅಭಿನಂದನ ಸಂಪುಟ.(ಸಂ: ಎಂ.ಚಿದಾನಂದಮೂರ್ತಿ), 1980
9. ‘ಮಾಸ್ತಿಯವರ ಕಾದಂಬರಿಗಳಲ್ಲಿ ಚರಿತ್ರೆಯ ಸ್ವರೂಪ’ ಲೇಖನ, 1980, ಮಾಸ್ತಿಯವರ ಸಾಹಿತ್ಯ ಕೃತಿಗಳ ಅಧ್ಯಯನ. (ಸಂ: ಜಿ.ಎಸ್.ಶಿವರುದ್ರಪ್ಪ), 1985
10. ‘ಕುವೆಂಪು ಕಾದಂಬರಿಗಳಲ್ಲಿ ಸಾಮಾಜಿಕ ಆಯಾಮಗಳು’ ಲೇಖನ, ಕನ್ನಡ ಕಾದಂಬರಿಗಳು ಒಂದು ಸಮೀಕ್ಷೆ.(ಸಂ:ಜಿ.ಎಸ್.ಶಿವರುದ್ರಪ್ಪ), ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು
11. ಅತ್ಯಂತ ದುರ್ಬಲರಿಗೆ ಅವಕಾಶ – ಹೊಸಚಿಂತನೆಯ ಅವಶ್ಯಕತೆ: ‘ಸಂವಾದ’- 2006
12. ಭಾಷೆಗೆ ಶಾಸ್ತ್ರೀಯ ಪಟ್ಟಿ: ಯಾಕೆ?ಹೇಗೆ?, ವಿಜಯ ಕರ್ನಾಟಕ, 2004
13. ಕಂಬಾರರೊಂದಿಗೆ: ಸೃಜನಶೀಲತೆಯ ಸುತ್ತಮುತ್ತ: ಮಯೂರ, 2009
14. ‘ಆಧುನಿಕ ಕನ್ನಡ ಕಾವ್ಯ’ ಲೇಖನ, ಸುವರ್ಣ ಕರ್ನಾಟಕ ಸಂಪುಟ, ಸಾಹಿತ್ಯಕ ಕರ್ನಾಟಕ ಸಂ: ಎಲ್.ಹನುಮಂತಯ್ಯ, ಕರ್ನಾಟಕ ವಿಧಾನ ಮಂಡಲ, ವಿಧಾನಸೌಧ, ಬೆಂಗಳೂರು, 2010
15. ‘ಪ್ರೀತಿಸುವುದೆಂದರೇನು?’ ಎರಿಕ್ ಫ್ರಾಂ ಅವರ ಕೃತಿಯ ಕನ್ನಡ ಅನುವಾದಕ್ಕೆ ಬರೆದ ಮುನ್ನುಡಿ: 2007
16. ನಾಗಾರ್ಜುನನ ‘ಪ್ರತೀತ್ಯಸಮುದ್ಯತ’ ಒಂದು ಚಿಂತನೆ, ಬೌದ್ಧಚಿಂತನೆಯನ್ನು ಕುರಿತ ಲೇಖನ, ನಾಗಾರ್ಜುನನ ಕೃತಿಯ ಕನ್ನಡ ಅನುವಾದದ ವಿಮರ್ಶೆ, 2009
17. ರವೀಂದ್ರನಾಥ ಠಾಕೂರ್ ಮತ್ತು ಗಾಂಧಿ ವಾಗ್ವಾದದ ನೆಲೆಗಳು, ಲೇಖನ, ಸಂವಾದ (ಸಂ) ಶಿವಾನಂದ, 2011
18. ‘ಸೋಮದೇವ-ವಾದಿರಾಜ-ಜನ್ನ’: ಯಶೋಧರ ಚರಿತೆಯ ಕಥನ ಸ್ವರೂಪ, (ಸಂ) ಗಿರಡ್ಡಿ ಗೋವಿಂದರಾಜ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು -2008
19. ಕವಿರಾಜಮಾರ್ಗ – ಲೇಖನ, ಕವಿರಾಜಮಾರ್ಗ: ಸಾಹಿತ್ಯಕ ಮುಖಾಮುಖಿ’ಯಲ್ಲಿ, ಕನ್ನಡ ವಿಶ್ವವಿದ್ಯಾಲಯ, ಹಂಪಿ
ನಿಯತಕಾಲಿಕಗಳ ಸಂಪಾದಕತ್ವ:
1. ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ (ಕನ್ನಡ ಸಾಹಿತ್ಯ ಪರಿಷತ್ ದೈವಾರ್ಷಿಕ) 1998
2. ಸಾಧನೆ (ಬೆಂಗಳೂರು ವಿಶ್ವವಿದ್ಯಾಲಯದ ನಿಯತಕಾಲಿಕ) 1990, 1997,1998 ರಿಂದ 2003
3. ಅನಿಕೇತನ (ಕರ್ನಾಟಕ ಸಾಹಿತ್ಯ ಅಕಾಡೆಮಿ) 1996-97
4. ಅನಿಕೇತನ (ಇಂಗ್ಲಿಷ್ ಭಾಷೆ) (ಕರ್ನಾಟಕ ಸಾಹಿತ್ಯ ಅಕಾಡೆಮಿ) 1996-97
ಶೈಕ್ಷಣಿಕ ಆಯ್ಕೆ ಮಂಡಳಿಗಳ ಸಮಿತಿ ಸದಸ್ಯತ್ವ
1. ಕನ್ನಡ ವಿಶ್ವವಿದ್ಯಾಲಯ, ಹಂಪಿಯ 1997ರ ಡಿ.ಲಿಟ್. ಆಯ್ಕೆ ಸಮಿತಿಯ ಸದಸ್ಯ
2. ಕೇಂದ್ರೀಯ ವಿಶ್ವವಿದ್ಯಾಲಯ ಗುಲಬರ್ಗ 2010ರ ಅಧ್ಯಾಪಕ, ಪ್ರವಾಚಕ ಹಾಗೂ ಪ್ರಾಧ್ಯಾಪಕ ಹುದ್ದೆಯ ಆಯ್ಕೆ ಸಮಿತಿ ಸದಸ್ಯ
3. ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗ 2010ರ ಅಧ್ಯಾಪಕ, ಪ್ರವಾಚಕ ಹಾಗೂ ಪ್ರಾಧ್ಯಾಪಕ ಹುದ್ದೆಯ ಆಯ್ಕೆ ಸಮಿತಿ ಸದಸ್ಯ
4. ಗುಲಬರ್ಗ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಹುದ್ದೆಯ ಬಡ್ತಿ ಆಯ್ಕೆ ಸಮಿತಿ ಸದಸ್ಯ 2008
5. ಕರ್ನಾಟಕ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಹುದ್ದೆಯ ಬಡ್ತಿ ಅಯ್ಕೆ ಸಮಿತಿ ಸದಸ್ಯ 2008
6. ತುಮಕೂರು ವಿಶ್ವವಿದ್ಯಾಲಯ ಅಧ್ಯಾಪಕ ಹುದ್ದೆಯ ಆಯ್ಕೆಸಮಿತಿ ಸದಸ್ಯ 2008
7. ಬಿಜಾಪುರ ವಿಶ್ವವಿದ್ಯಾಲಯ ಅಧ್ಯಾಪಕ ಹುದ್ದೆಯ ಆಯ್ಕೆಸಮಿತಿ ಸದಸ್ಯ 2006
8. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ –2003-06
ಅಧ್ಯಯನ ಮಂಡಳಿಗಳ ಸದಸ್ಯತ್ವ
1. ಬೆಂಗಳೂರು ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಗಳ ಸ್ನಾತಕ ಹಾಗೂ ಸ್ನಾತಕೋತ್ತರ ಅಧ್ಯಯನ ಮತ್ತು ಡಿಪ್ಲೊಮಾ ಅಧ್ಯಯನ ಮಂಡಳಿಗಳ ಸದಸ್ಯ.
2. ಮೌಂಟ್ ಕಾರ್ಮಲ್ ಹಾಗೂ ಜ್ಯೋತಿ ನಿವಾಸ್ ಸ್ವಾಯತ್ತ ಕಾಲೇಜುಗಳ ಸ್ನಾತಕ ಅಧ್ಯಯನ ಮಂಡಳಿಗಳ ಸದಸ್ಯ
ಪರೀಕ್ಷಾ ಮಂಡಳಿಗಳ ಸದಸ್ಯ
1. ಬೆಂಗಳೂರು ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಗಳ ಪರೀಕ್ಷಾ ಮಂಡಳಿಗಳ ಸದಸ್ಯ
ಇತರ ಸಂಸ್ಥೆಗಳ ಸದಸ್ಯತ್ವ
1. ಕರ್ನಾಟಕ ಹಿಸ್ಟರಿ ಕಾಂಗ್ರೆಸ್‌ನ ಸ್ಥಾಯಿ ಸದಸ್ಯ 1978 ರಿಂದ
2. ಕರ್ನಾಟಕ ಸರ್ಕಾರದ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ವಿಕಲಚೇತನ ರಾಜ್ಯಪ್ರಶಸ್ತಿಯ ಆಯ್ಕೆ ಸಮಿತಿಯ ಸದಸ್ಯ
3. ಸರಸ್ವತಿ ಸಮ್ಮಾನ್ ಪ್ರಶಸ್ತಿಯ ಕನ್ನಡ ಆಯ್ಕೆ ಸಮಿತಿಯ ಸದಸ್ಯ 1995-97
ಸಾಹಿತ್ಯ ಕಾರ್ಯಾಗಾರಗಳ ನಿರ್ದೇಶಕತ್ವ:
1. ಹೆಗ್ಗೋಡಿನ ನೀನಾಸಂ ಸಂಸ್ಥೆಯವರು ಏರ್ಪಡಿಸಿದ್ದ ಸಾಹಿತ್ಯ ಕಾರ್ಯಾಗಾರಗಳ ಸಂಪನ್ಮೂಲ ವ್ಯಕ್ತಿ. ಈ ಕಾರ್ಯಾಗಾರವನ್ನು ಮ್ಯಾಗ್ಸೆಸೆ ಪ್ರಶಸ್ತಿಯಿಂದ ಬಂದ ಮೊತ್ತದಿಂದ ವರ್ಷವಿಡೀ ಕರ್ನಾಟಕಾದಾಂತ್ಯ ಏರ್ಪಡಿಸಲಾಗಿತ್ತು.
2. ಕರ್ನಾಟಕ ಸಾಹಿತ್ಯ ಅಕಾಡೆಮಿಯು ಬಿಜಾಪುರದಲ್ಲಿ 1985ರಲ್ಲಿ ಏರ್ಪಡಿಸಿದ್ದ ಕಾರ್ಯಾಗಾರದ ನಿರ್ದೇಶನ. ವಿಷಯ: ಕನ್ನಡ ಸಾಹಿತ್ಯದ ಮುಖ್ಯ ಪರಿಕಲ್ಪನೆಗಳು
3. ನಿರ್ದೇಶಕ: ದಾಸ ಸಾಹಿತ್ಯ ಸಂಶೋಧನ ಕಮ್ಮಟ. 24, 25, 26ನೇ ನವೆಂಬರ್ 2010. ಕನ್ನಡ ವಿಶ್ವವಿದ್ಯಾಲಯ ಮತ್ತು ಉದಯಭಾನು ಉನ್ನತ ಅಧ್ಯಯನ ಕೇಂದ್ರ, ಬೆಂಗಳೂರು ಇವರು ಜಂಟಿಯಾಗಿ ಏರ್ಪಡಿಸಿದ್ದ ಕಮ್ಮಟ
4. ನಿರ್ದೇಶಕ: ಕಾವ್ಯ ರಚನಾ ಕಮ್ಮಟ: 2005, ಕನ್ನಡ ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ ಆಯೋಜಿಸಿದ್ದು, ಸ್ಥಳ: ಜಾನಪದ ಲೋಕ, ಬೆಂಗಳೂರು
ಪ್ರಶಸ್ತಿಗಳು
1. ಶಂಬಾ ಪ್ರಶಸ್ತಿ, ಕರ್ನಾಟಕ ಸಂಘ, ಶಿವಮೊಗ್ಗ,
2. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ವಿಮರ್ಶೆ) – 1998, 2013
3. ಜಿ.ಎಸ್.ಎಸ್. ವಿಶ್ವಸ್ಥ ಮಂಡಳಿ ಪ್ರಶಸ್ತಿ 1998
4. ಜೆ.ಎಸ್.ಎಸ್. (ಮೈಸೂರು) ಪೀಠ ಪ್ರಶಸ್ತಿ 1998
5. ಎಂ.ಎಂ.ಕಲಬುರ್ಗಿ ಪ್ರಶಸ್ತಿ
6. ವರ್ಧಮಾನ ಪ್ರಶಸ್ತಿ
7. ದ.ರಾ.ಬೇಂದ್ರೆ ಪ್ರಶಸ್ತಿ
8. ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ
9 ಡಾ.ಎಚ್.ಎನ್.ಪ್ರಶಸ್ತಿ (ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ, ಬಳ್ಳಾರಿ)
10. ವಚನಶ್ರೀ ಪ್ರಶಸ್ತಿ- 2011 ದಾನಪ್ರಕಾಶ ಎಸ್.ತಿಮ್ಮಪ್ಪ ಟ್ರಸ್ಟ್, ಬೆಂಗಳೂರು
11. ಬುದ್ದ ಪೂರ್ಣಿಮೆ ಗೌತಮ ಪ್ರಶಸ್ತಿ, ರಂಗೋತ್ರಿ ರಂಗಶಾಲೆ, ಬೆಂಗಳೂರು
ಆಡಳಿತಾತ್ಮಕ ಅನುಭವ
1. ನಿರ್ದೇಶಕ, ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ 2002-06
2. ನಿರ್ದೇಶಕ, ಮುದ್ರಣಾಲಯ, ಬೆಂಗಳೂರು ವಿಶ್ವವಿದ್ಯಾಲಯ 2002-06
3. ನಿರ್ದೇಶಕ, ಗಾಂಧಿ, ಅಧ್ಯಯನಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ, 2005-06
4. ನಿರ್ದೇಶಕ, ಅಂಬೇಡ್ಕರ್ ಅಧ್ಯಯನ ಕೇಂದ್ರ, ಬೆಂಗಳೂರುವಿಶ್ವವಿದ್ಯಾಲಯ, 2005-06
5. ನಿರ್ದೇಶಕ, ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ, 2006-08
6. ನಿರ್ದೇಶಕ, ಬೆಂಗಳೂರು ವಿಶ್ವವಿದ್ಯಾಲಯ ಕೆಂಪೇಗೌಡ ಸಂಶೋಧನಾ ಕೇಂದ್ರ, 2008 ರಿಂದ
ವಿಭಿನ್ನ ಕೇಂದ್ರಗಳಲ್ಲಿ ನಿರ್ದೇಶಕನಾಗಿ ಮಾಡಿದ ಪ್ರಕಟಣೆಗಳು:
1. ನಿರ್ದೇಶಕ, ಪ್ರಸಾರಾಂಗ -ಸುಮಾರು 100 ಕೃತಿಗಳು
2. ನಿರ್ದೇಶಕ, ಗಾಂಧಿ ಅಧ್ಯಯನ ಕೇಂದ್ರ ಪ್ರಸ್ತುತ ಗಾಂಧಿಗಳ ಮಾಲಿಕೆ ಸುಮಾರು 15 ಕೃತಿಗಳು
3. ನಿರ್ದೇಶಕ, ಅಂಬೇಡ್ಕರ್ ಅಧ್ಯಯನ ಕೇಂದ್ರ ಅಂಬೇಡ್ಕರ್ ಕುರಿತ ಚಿಂತನ ಮಾಲೆಯ ಪ್ರಾರಂಭ, ಎರಡು ಕೃತಿಗಳ ಪ್ರಕಟಣೆ.
4. ಪ್ರಸಾರಾಂಗದ ನಿರ್ದೇಶಕನಾಗಿ, ಬೆಂಗಳೂರು ವಿಶ್ವವಿದ್ಯಾಲಯದ ಪುಸ್ತಕ ಪ್ರಕಟಣೆ, ಪ್ರಚಾರ ಉಪನ್ಯಾಸಮಾಲೆ ಹಾಗೂ ವಿಶೇಷ ಉಪನ್ಯಾಸಗಳನ್ನು ತೀವ್ರಗತಿಯಿಂದ ಮಾಡಿದರು. ವರ್ಷಕ್ಕೆ ಸುಮಾರು 50 ಉಪನ್ಯಾಸಮಾಲೆಗಳನ್ನು ಮಾಡಿಸಿ ಅವುಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಿದರು. ವಿಜ್ಞಾನ, ಸಾಹಿತ್ಯ, ಸಮಾಜವಿಜ್ಞಾನಕ್ಕೆ ಸಂಬಂಧಿಸಿದ ಪ್ರಸ್ತುತ ಕಾಲದ ಸಮಸ್ಯೆ ಮತ್ತು ಶೋಧಗಳನ್ನು ಕನ್ನಡದಲ್ಲಿ ತಿಳಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಬಹುಮುಖ್ಯ ಕೃತಿಗಳನ್ನು ಪುನರ್ ಮುದ್ರಣಗೊಳಿಸಿದ್ದಾರೆ. ಅಷ್ಟೇ ಅಲ್ಲದೆ ವಿಶ್ವದ ಖ್ಯಾತ ರಾಜಕೀಯತಜ್ಞ ಡಾ.ಭಿಖು ಫರೇಖ್, ಮ್ಯಾಗ್ನೆಸೆ ಪ್ರಶಸ್ತಿವಿಜೇತರು. ಇವರನ್ನು ವಿಶ್ವವಿದ್ಯಾಲಯಕ್ಕೆ ಆಹ್ವಾನಿಸಿ, ಇಡೀ ವಿಶ್ವವಿದ್ಯಾಲಯದ ಅಧ್ಯಾಪಕ, ವಿದ್ಯಾರ್ಥಿ, ಸಂಶೋಧಕರ ಸಮ್ಮುಖದಲ್ಲಿ ಉಪನ್ಯಾಸ ನೀಡಿಸಿ, ಆ ಉಪನ್ಯಾಸವನ್ನು ಕೃತಿ ರೂಪದಲ್ಲಿ ತರಲು ಕ್ರಮ. ಅಂತರರಾಷ್ಟ್ರೀಯ ಬ್ರಿಟಿಷ್ ಇತಿಹಾಸಜ್ಞ ಡಾ.ಜಾನ್ ಕೀ ಯವರನ್ನು ಸಹ ವಿಶ್ವವಿದ್ಯಾಲಯಕ್ಕೆ ಬ್ರಿಟಿಷ್ ಕೌನ್ಸಿಲ್‌ನವರ ಸಹಯೋಗದೊಂದಿಗೆ ಕರೆಸಿ, ಭಾರತದ ಸೈಸ್ ದಾರಿಯನ್ನು ((spice Route of India) ಕುರಿತು ವಿಶೇಷ ಉಪನ್ಯಾಸ ಏರ್ಪಡಿಸಿದರು. ಜಾನ್ ಕೀ ಭಾರತವನ್ನು ಕುರಿತು ಬರೆಯುತ್ತಿರುವ ಶ್ರೇಷ್ಠ ಇತಿಹಾಸಜ್ಞರು.
ಡಾ.ಅಂಬೇಡ್ಕರ್ ಅವರ ಚಿಂತನೆಯ ಪುನರ್ ಮೌಲ್ಯೀಕರಣದ ದಿಸೆಯಲ್ಲಿ ಅವರ ಕೃತಿಗಳ ಚಿಂತನೆಗೆ ಚಾಲನೆ ನೀಡಿದರು. ಪ್ರಸಾರಾಂಗ ಮತ್ತು ಮುದ್ರಣಾಲಯದ ನಿರ್ದೇಶಕರಾಗಿ ಮಾಡಿದ ಗಮನಾರ್ಹ ಸಾಧನೆಗಾಗಿ ವಿಶ್ವವಿದ್ಯಾಲಯದ ಉನ್ನತ ಮಂಡಳಿಯಾದ ಸಿಂಡಿಕೇಟ್ ಸಭೆಯು ಇಲ್ಲಿಯ ಕಾರ್ಯ ಶ್ಲಾಘನೆಯನ್ನು ತನ್ನ ನಿರ್ಣಯಗಳಲ್ಲಿ ಮಂಡಿಸಿ ಪ್ರತಿಕ್ರಿಯೆ ವ್ಯಕ್ತಪಡಿಸಿತು.
ಸಿ.ಜಿ.ಕೃಷ್ಣಸ್ವಾಮಿಯವರ ನಿಧನದ ನಂತರ ಗಾಂಧಿ ಅದ್ಯಯನ ಕೇಂದ್ರದ ನಿರ್ದೇಶಕರಾಗಿ ಜವಾಬ್ದಾರಿಯನ್ನು ವಹಿಸಿಕೊಂಡು, ‘ನಮ್ಮ ಸುತ್ತಣ ಗಾಂಧಿಗಳು’ ಮಾಲಿಕೆಯನ್ನು ಪ್ರಾರಂಭಿಸಿ ಅದರ ಪ್ರಕಟಣೆಯ ಜವಾಬ್ದಾರಿಯನ್ನು ವಹಿಸಿಕೊಂಡು ಬದುಕಿರುವ ಹಾಗೂ ಆಧುನಿಕ ಕರ್ನಾಟಕದಲ್ಲಿ ಗಾಂಧಿ ಚಿಂತನೆಯನ್ನು ಬದುಕುತ್ತಿರುವವರ ಕುರಿತು ಹೊತ್ತಿಗೆಗಳನ್ನು ವಿಶ್ವವಿದ್ಯಾಲಯದ ಪ್ರಸಾರಾಂಗದ ವತಿಯಿಂದ ಪ್ರಕಟಿಸಿದರು.
ರಾಷ್ಟ್ರೀಯಮಟ್ಟದ ವಿಚಾರಸಂಕಿರಣವನ್ನು ಮಾಡಿಸಿ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ರಾಜೇಂದ್ರ ಸಿಂಗ್ ಅವರನ್ನು ಕರೆಸಿ, ವಿದ್ಯಾರ್ಥಿಗಳಿಗೆ ಅವರು ರಾಜಾಸ್ಥಾನದಲ್ಲಿ ಮಳೆ ನೀರು ಕೃಷಿ ಮಾಡಿದ ವಿಧಾನವನ್ನು ಕುರಿತ ವಿಶೇಷ ತಿಳುವಳಿಕೆಯ ಉಪನ್ಯಾಸ ಕೊಡಿಸಿದರು.
ಗಾಂಧೀಜಯಂತಿಯಂದು, ವಿಶ್ವವಿದ್ಯಾಲಯದಿಂದ ರವೀಂದ್ರ ಕಲಾಕ್ಷೇತ್ರದವರೆಗೆ ರಾಜೇಂದ್ರ ಸಿಂಗ್ ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ಜಾಥಾ ಹೋಗಿ, ನೀರಿನ ಮಹತ್ವವನ್ನೂ ಅದರ ಬಳಕೆಗೆ ಮಾಡಬೇಕಾದ ಪ್ರಯತ್ನಗಳನ್ನೂ ವಿವಿರಿಸಿ, ರವೀಂದ್ರ ಕಲಾಕ್ಷೇತ್ರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದರು.
ವಿಶ್ವವಿದ್ಯಾಲಯದ ಡಾ.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕರಾಗಿ ಅತ್ಯಂತ ಮಹತ್ವದ ಯೋಜನೆಗಳನ್ನು ಮೊದಲಬಾರಿಗೆ ಜಾರಿಗೊಳಿಸಿದರು. ಅಂಬೇಡ್ಕರ್ ಅಧ್ಯಯನಕ್ಕೆ ಸಂಬಂಧಪಟ್ಟಂತೆ ಡಿಪ್ಲೊಮಾ ಕೋರ್ಸ್ ಅನ್ನು ಹಾಗೂ ದಲಿತ ಅಧ್ಯಯನದ ಸರ್ಟಿಫಿಕೇಟ್ ಕೋರ್ಸನ್ನು ಆರಂಭಿಸುವ ಯೋಜನೆಯನ್ನು ಹಾಕಿ, ಪಠ್ಯಕ್ರಮವನ್ನು ಪರಿಣಿತ ಮಂಡಳಿಯ ಸಮ್ಮುಖದಲ್ಲಿ ಒಪ್ಪಿಗೆ ಪಡೆದು ಕೋರ್ಸ್ ಪ್ರಾರಂಭಿಸಿದರು.
ಅಂಬೇಡ್ಕರ್ ಭವನದಲ್ಲಿ ಜಗತ್ತಿನ ಖ್ಯಾತ ಶಿಲ್ಪತಜ್ಞರಾದ ಗೌತಮ್ ಪಾಲ್ ಅವರನ್ನು ಒಪ್ಪಿಸಿ, ಕಲ್ಕತ್ತೆಯಿಂದ ಬಾಬಾಸಾಹೇಬ್ ಅಂಬೇಡ್ಕರ್ ಅವರ ಕಂಚಿನ ಹಾಗೂ ಫೈಬರ್ ಗ್ಲಾಸಿನ ಪ್ರತಿಮೆಯನ್ನು ಮಾಡಿಸಿ ಸ್ಥಾಪನೆಗೊಳಿಸಲಾಯಿತು. ಮೇಧಾ ಪಾಟ್ಕರ್ ಅವರ ಸಹವರ್ತಿ, ದಲಿತ ಚಿಂತಕರೊಬ್ಬರನ್ನು ಚಿಂತನಾ ಸಮ್ಮೇಳನಕ್ಕೆ ಕರೆತರಲಾಗಿತ್ತು. ಸ್ಥಗಿತಗೊಂಡಿದ್ದ ಅಂಬೇಡ್ಕರ್ ಸಂಶೋಧನ ಕೇಂದ್ರವನ್ನು ಈ ರೀತಿಯಲ್ಲಿ ಕ್ರಿಯಾಶೀಲಗೊಳಿಸಿದ ಪ್ರಯತ್ನವನ್ನು ಬಸವರಾಜ ಕಲ್ಗುಡಿಯವರು ಮಾಡಿದರು.















