ಬೆಂಗಳೂರು: ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಕರ್ನಾಟಕ ಸರ್ಕಾರ, ಬೆಂಗಳೂರು ಅವರ ಯೋಜನೆಯಂತೆ ಮತ್ತು ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಸಾಂಸ್ಕೃತಿಕ ವಿಶ್ವಕೋಶ ರಚನಾ ಸಮಿತಿಸಲಹೆಯಂತೆ “ಬಂಜಾರ ಸಾಂಸ್ಕೃತಿಕ ವಿಶ್ವಕೋಶ”ವನ್ನು ರಚಿಸಲು ವಿಶೇಷ ಅನುದಾನ ಕೋರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್ ತಂಗಡಗಿ ಅವರಿಗೆ ಮನವಿ ಸಲ್ಲಿಸಲಾಯಿತು. ಹಾಗೂ ಬಂಜಾರ ಅಕಾಡೆಮಿ ವತಿಯಿಂದ ʻಪ್ರಥಮಶ್ರೀ ಸಂತಸೇವಾಲಾಲ್ ಪ್ರಶಸ್ತಿ’ಯನ್ನು ಸ್ಥಾಪಿಸಿದ್ದಕ್ಕೆ ಸಮಸ್ತ ಬಂಜಾರ ಸಮುದಾಯದ ಪರವಾಗಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ. ಎ.ಆರ್. ಗೋವಿಂದಸ್ವಾಮಿ ಅವರ ನೇತೃತ್ವದಲ್ಲಿ ಅಭಿನಂದಿಸಿ, ಮನವಿ ಸಲ್ಲಿಸಲಾಯಿತು.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಇದೇ ಸಂದರ್ಭದಲ್ಲಿ ವಿಶ್ವಕೋಶ ರಚನೆಗೆ ತಗಲುವ ಆರಂಭದ ಅನುದಾನವನ್ನು ಬಿಡುಗಡೆ ಮಾಡುವುದಾಗಿ ಸಚಿವರು ಭರವಸೆ ನೀಡಿದರು. ನಿಯೋಗದಲ್ಲಿ ಡಾ. ಎ.ಆರ್. ಗೋವಿಂದಸ್ವಾಮಿ, ಹಿರಿಯ ಸಾಂಸ್ಕೃತಿಕ ಚಿಂತಕರು ಹಾಗೂ ಭಾಷಾ ತಜ್ಞರಾದ ಡಾ.ಹಂಪ.ನಾಗರಾಜಯ್ಯ, ಬಂಜಾರ ಸಮುದಾಯದ ಹಿರಿಯ ಸಾಹಿತಿ, ಮಾಜಿ ಸಚಿವೆ ಹಾಗೂ ಶ್ರೀ ಸಂತ ಸೇವಾಲಾಲ್ ಪ್ರಶಸ್ತಿ ವಿಜೇತರಾದ ಡಾ. ಬಿ.ಟಿ. ಲಲಿತಾನಾಯಕ್, ಪರಿಸರ ತಜ್ಞ, ಡಾ. ಡಿ. ಪರಮೇಶ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು.




