ಬೆಳಗಾವಿ: ಪೆರಿಯಾರ್ ಇ.ವಿ.ರಾಮಸ್ವಾಮಿ ನಾಯ್ಕರ್ ನವಯುಗದ ಪ್ರವರ್ತಕ, ಆಗ್ನೇಯ ಏಷ್ಯಾದ ಸಾಕ್ರೆಟಿಸ್, ಸಾಮಾಜಿಕ ಸುಧಾರಣಾ ಚಳುವಳಿಗಳ ತಂದೆ, ಅಜ್ಞಾನ, ಮೌಢ್ಯ ಮತ್ತು ಕಂದಾಚಾರಗಳ ಪರಮ ಶತ್ರು ಎಂಬುದಾಗಿ ಯುನೆಸ್ಕೊ ದಾಖಲಿಸಿದೆ ಎಂದು ಎ.ಜಿ.ಕಾಂಬಳೆ ಅಭಿಪ್ರಾಯಪಟ್ಟರು.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಯುವ ಬರಹಗಾರರ ವೇದಿಕೆ ಕರ್ನಾಟಕ, ಬೆಳಗಾವಿಯ ಮಾನವ ಬಂಧುತ್ವ ವೇದಿಕೆಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಜಯಂತಿ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿನ ಜಾತಿ ತಾರತಮ್ಯ, ಅಸ್ಪೃಶ್ಯತೆ ಹಾಗೂ ಮಹಿಳೆಯರ ಮೇಲಿನ ಅನ್ಯಾಯಗಳನ್ನು ಕಂಡು ಅವುಗಳ ವಿರುದ್ಧ ಹೋರಾಡುವ ಮನೋಭಾವವನ್ನು ಪೆರಿಯಾರ್ ಬೆಳಸಿದರು. ಇತಿಹಾಸವನು ಅರಿಯದೆ ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂಬ ವಿಚಾರವನ್ನು ತಿಳಿಸಿ ಶಿಕ್ಷಣದ ಮೂಲಕ ಸ್ವಾಭಿಮಾನ ಮೂಡಬೇಕು; ಅದು ವಿಚಾರವಂತ ಹೊಸ ಪೀಳಿಗೆಯನ್ನು ರೂಪಿಸುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವೈಚಾರಿಕ ಚಿಂತಕ ಎಂ. ಎಸ್ ಲೋಕಳೆ, ಪೆರಿಯಾರ್ ತಮಿಳುನಾಡಿನ ಪ್ರಸಿದ್ಧ ವಿಚಾರವಾದಿ. ನಾಗರಿಕತೆಯ ಪ್ರಜ್ಞೆಯಿಂದ ಬಹುದೂರ ಉಳಿದಿದ್ದ ಹಿಂದುಳಿದ ಸಮುದಾಯಗಳನ್ನು ಮುಖ್ಯವಾಹಿನಿಗೆ ತರಬೇಕೆಂದು ಬಯಸಿದ ಹೋರಾಟಗಾರ ಮತ್ತು ದ್ರಾವಿಡ ಚಳುವಳಿಯ ಹರಿಕಾರ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೊ.ದೇಮಣ್ಣ ಸೊಗಲದ, ಸ್ವಾಭಿಮಾನ ಬರಬೇಕಾದರೆ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಪೆರಿಯಾರ್ ರಂತಹ ಮಹಾನ್ ಪುರುಷರ ವಿಚಾರಗಳು ಆದರ್ಶವಾಗಬೇಕು. ಸಾಮಾಜಿಕ ಸುಧಾರಣೆಯ ಭಾಗವಾಗಿದ್ದ ದೇವದಾಸಿ ಅಂತಹ ಅನಿಷ್ಠ ಆಚರಣೆಗಳ ನಿರ್ಮೂಲನೆಗೆ ನಡೆದ ಹೋರಾಟಗಳ ಮೂಲಕ ಪೆರಿಯಾರ್ ಪ್ರತಿಭಟಿಸಿದರು. ಜಗತ್ತಿನ ಇತರ ದೇಶಗಳಲ್ಲಿ ಇಲ್ಲದ ಅಸ್ಪೃಶ್ಯತೆ ಭಾರತದಲ್ಲಿ ಮಾತ್ರ ಏಕೆ? ಎಂದು ಪ್ರಶ್ನಿಸಿದರು ಎಂದರು.

ಕಾರ್ಯಕ್ರಮದಲ್ಲಿ ಯುವ ಬರಹಗಾರರ ವೇದಿಕೆಯ ಸಂಚಾಲಕರಾದ ಡಾ.ಬಾಲಕೃಷ್ಣ ನಾಯಕ, ಡಾ. ಮಂಜುನಾಥ ಪಾಟೀಲ, ಡಾ. ಗೌತಮ ಮಾಳಗೆ, ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ವಿಠ್ಠಲ ಮಾದರ, ದೌರ್ಜನ್ಯ ಸಮಿತಿ ಸದಸ್ಯ ಕರೆಪ್ಪ ಗುಡೆನ್ನವರ ಹಾಗೂ ರಾಜಶೇಖರ ತಳವಾರ, ಪ್ರೊ.ಸಂತೋಷ ನೀಲನ್ನವರ, ಪ್ರೊ. ಕೃಷ್ಣ ಮಾದರ, ಎಸ್.ಎಸ್.ಮೂಕನವರ, ಪ್ರಕಾಶ ಬೊಮ್ಮನವರ, ಅಂಕುಶ ಪಾಟೀಲ, ಸಾವಕ್ಕ ದೊಡಮನಿ, ಅರುಣ ಮಾದರ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕು.ಲಕ್ಷ್ಮೀ ಗಡಕರಿ ಕ್ರಾಂತಿ ಗೀತೆ ಹಾಡಿದರು. ಕು.ಪ್ರತಿಭಾ ಕಲ್ಲಿ ಸ್ವಾಗತಿಸಿದರು. ಕು.ಸರಿತಾ ಬೇಡರ ವಂದಿಸಿದರು. ಕು. ರವಿಚಂದ್ರನ್ ಕೊರವ ನಿರೂಪಿಸಿದರು.





