ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ದಾಖಲೆ
ಬೆಂಗಳೂರು: ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರು ಬರೆದ ಆಯ್ದ ಕೃತಿಗಳಿಗೆ ವಿವಿಧ ರಾಜ್ಯಗಳಿಂದ ಆಗಮಿಸಿದ್ದ 2,000ಕ್ಕೂ ಅಧಿಕ ಮಕ್ಕಳು ಹಾಗೂ ಕಲಾವಿದರು ಸಾಮೂಹಿಕ ಭರತನಾಟ್ಯ ಪ್ರದರ್ಶಿಸಿ ಲಂಡನ್ ಬುಕ್ ಆಫ್ ವಿಶ್ವ ದಾಖಲೆ ನಿರ್ಮಿಸಿದರು. ಈ ಕಾರ್ಯಕ್ರಮ ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ಗೆ ಸೇರ್ಪಡೆಯಾಯಿತು.
- ಕೃಷ್ಣ ಬೈರೇಗೌಡ ಅವರಿಗೆ ಪ್ರಕಾಶ್ ಕೋನಾಪುರ ಬರೆದ ಪತ್ರ
- ಆಹಾರ, ಔಷಧ ಕ್ಷೇತ್ರದ ಯಾವುದೇ ಅಕ್ರಮ ಜಾಲವನ್ನು ಸರ್ಕಾರ ಸಹಿಸದು: ಯು.ಟಿ.ಖಾದರ್
- ಜಯಚಾಮರಾಜೇಂದ್ರ ಒಡೆಯರ್ ಕೃತಿಗಳಿಗೆ ಭರತನಾಟ್ಯ ಪ್ರಯೋಗ
- ಕಿದ್ವಾಯಿ ಕ್ಯಾನ್ಸರ್ ಮತ್ತು ಜಯದೇವ ಹೃದ್ರೋಗ ಆಸ್ಪತ್ರೆ ಆರಂಭಿಸುವಂತೆ ಒತ್ತಾಯ
- ರೈತರ ವಿಮೆ ಹಣ ಕಟ್ಟದ, ಸೊಸೈಟಿ ಕಾರ್ಯದರ್ಶಿ ವಜಾಕ್ಕೆ ಡಿ ಕೆ ಶಿವಕುಮಾರ್ ಸೂಚನೆ
ಸರಸ್ಪತಿ ನೃತ್ಯಕಲಾ ಕೇಂದ್ರ ಮತ್ತು ನಾಟ್ಯ ಕುಸುಮಾಂಜಲಿ ಸಾಂಸ್ಕೃತಿಕ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕನಕಪುರದ ಮರಳೆಗವಿ ಮಠದ ಡಾ. ಮುಮ್ಮಡಿ ಶಿವರುದ್ರ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ. ಮಂಜುನಾಥ್ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ, ಆಯೋಜಕರಾದ ಶ್ರೀನಾಥ್, ಎಂ.ಮಂಜುನಾಥ್, ಡಾ.ಎ.ಆರ್.ಗೋವಿಂದಸ್ವಾಮಿ, ರಾಮಣ್ಣ ಮುಂತಾದವರು ಭಾಗವಹಿಸಿದ್ದರು.




