ರಾಯಚೂರಿನಲ್ಲಿ ಶಾಂತರಸ ಜನ್ಮ ಶತಮಾನೋತ್ಸವ

1 year ago

ರಾಯಚೂರು: ಸಂಸ ಥಿಯೇಟರ್, ಬೆಂಗಳೂರು ಮತ್ತು ಗುರುಪುಟ್ಟಿ ಕಲಾ ಬಳಗ (ರಿ) ಆಸ್ಕಿಹಾಳ್, ರಾಯಚೂರು ಸಹಯೋಗದಲ್ಲಿ ಶಾಂತರಸ ಶತಮಾನೋತ್ಸವ ಆಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಶಾಂತರಸ 100: ಮೂವತ್ತೊಂದು ಜಿಲ್ಲೆಗಳು, ಒಂದೇ ಕರ್ನಾಟಕ ಹೆಸರಿನಲ್ಲಿ ಕಾರ್ಯಕ್ರಮ ರಾಜ್ಯದ 31 ಜಿಲ್ಲೆಗಳಲ್ಲಿ ನಡೆಯಲಿದೆ.

ದಿನಾಂಕ:07 ಸೋಮವಾರ ಏಪ್ರಿಲ್ 2025
ಸಮಯ: ಬೆಳಿಗ್ಗೆ 10-30 ರಿಂದ ರಾತ್ರಿ 8:30
ಸ್ಥಳ: ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರ, ‘ರಾಯಚೂರು.
ಸಂಪರ್ಕ ಸಂಖ್ಯೆ: 9742067427 / 9741685672

ದಿನಾಂಕ:07 ಸೋಮವಾರ ಏಪ್ರಿಲ್ 2025

ಸಮಯ: ಬೆಳಿಗ್ಗೆ 10-30: ವಚನ ಸಂಗೀತ, ಸ್ಥಳೀಯ ಕಲಾವಿದರಿಂದ

ಉದ್ಘಾಟನೆ: ಸಿದ್ದನಗೌಡ ಪಾಟೀಲ್, ಹೋರಾಟಗಾರು ಹಾಗೂ ಪ್ರಗತಿಪರ ಚಿಂತಕರು

ಅಧ್ಯಕ್ಷತೆ: ಬಂಡುರಾವ್ ಚಾಗಿ ಶಾಂತರಸರ ಒಡನಾಡಿಗಳು

ಅನ್ವೇಷಣೆ ಸಾಹಿತ್ಯ ಪತ್ರಿಕೆಯ ಶಾಂತರಸರ ಕುರಿತ ವಿಶೇಷಾಂಕ ಬಿಡುಗಡೆ: ಡಾ. ಬಸವಪ್ರಭು ಪಾಟೀಲ್ ಬೆಟ್ಟದೂರು ವೈದ್ಯರು ಹಾಗೂ ಚಿಂತಕರು
ಉಷಾ ಜ್ಯೋತಿಯವರ ಇರುವಿಕೆಯ ಹಾದಿಯಲ್ಲಿ ಗಜಲ್ ಪುಸ್ತಕ ಬಿಡುಗಡೆ: ಆರ್. ಜಿ. ಹಳ್ಳಿ ನಾಗರಾಜ್ ಸಂಪಾದಕರು, ಅನ್ವೇಷಣೆ ಸಾಹಿತ್ಯ ಪತ್ರಿಕೆ ಹಾಗೂ ಪ್ರಗತಿಪರ ಚಿಂತಕರು

ಮುಖ್ಯ ಅತಿಥಿಗಳು: ರಾಮಣ್ಣ ಹವಳೆ, ಶಾಂತರಸರ ಒಡನಾಡಿಗಳು

ಬಸವಪ್ರಭು, ಶಾಂತರಸರ ಮಗ

ಶಾಂತ ಕುಲಕರ್ಣಿ, ರಂಗಕರ್ಮಿಗಳು, ರಾಯಚೂರು

ಕೃಷ್ಣ ರಾಯಚೂರು, ಚಿತ್ರ ಕಲಾವಿದರು

ಎಚ್. ಎಸ್.ಮುಕ್ತಾಯಕ್ಕ ಅವರ ‘ಅಪ್ಪ ನಾನು ಕಂಡಂತೆ’ ಶಾಂತರಸರ ನೆನಪುಗಳ ಓದು
ಪ್ರಸ್ತುತಿ: ಪ್ರವೀಣ್ ಗುಂಜಳ್ಳಿ, ರಂಗ ನಿರ್ದೇಶಕರು, ರಾಯಚೂರು

ಸ್ವಾಗತ: ಸಂಸ ಸುರೇಶ್, ರಂಗ ಸಂಘಟಕ

ವಿಚಾರ ಗೋಷ್ಠಿ 1:

ವಿಷಯ: ಶಾಂತರಸರ ಸಾಹಿತ್ಯ: ಡಾ. ಅಪ್ಪಗೆರೆ ಸೋಮಶೇಖರ್, ಪ್ರಾಧ್ಯಾಪಕರು, ಕನ್ನಡ ವಿಭಾಗ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿ

ಶಾಂತರಸರ ಬದುಕು: ಮಹಾಂತೇಶ್ ನವಲಕಲ್, ಕತೆಗಾರರು ಹಾಗೂ ನಾಟಕಕಾರರು

ಶಾಂತರಸರನ್ನು ಕಂಡಂತೆ: ವೀರ ಹನುಮಾನ್ ಸಾಹಿತಿಗಳು, ರಾಯಚೂರು

ನಿರೂಪಣೆ: ಲಕ್ಷ್ಮಣ್ ಮೆಂಡಲಗೇರಾ, ರಂಗಕರ್ಮಿ

ಗೋಷ್ಠಿ 2

ಶಾಂತರಸರ ಗಜಲ್‌ಗಳ ವಾಚನ

ಮಹಾಂತೇಶ್ ಮಸ್ಕಿ

ಡಾ. ಮಲ್ಲಯ್ಯ ಅತ್ತನೂರು

ರವಿ ರಾಯಚೂರ್‌ ಕರ್

ಬಶೀರ್ ಅಹ್ಮದ ಹೊಸಮನಿ

ಡಾ. ವಿಜಯರಾಜೇಂದ್ರ

ನರಸಿಂಹಲು ವಡಿವಾಟಿ

ಸೈಯದ್ ವಲಿ

ಪ್ರತಿಭಾ ಗೋನಾಳ್

ರುದ್ರಪ್ಪ ಪಗಡದಿನ್ನಿ

ಅಧ್ಯಕ್ಷತೆ: ಮಹಿಪಾಲರೆಡ್ಡಿ ಮುನ್ನೂರು, ಸಾಹಿತಿಗಳು
ಮುಖ್ಯ ಅತಿಥಿಗಳು: ಮಕಾನದಾರ ಎ.ಎಸ್., ಸಾಹಿತಿಗಳು, ಗದಗ
ನಿರೂಪಣೆ: ನರಸಿಂಹಲು ರಂಗಕರ್ಮಿ

ಗೋಷ್ಠಿ 3: ಗಜಲ್ ವಾಚನ

ಅಧ್ಯಕ್ಷತೆ: ಅಬ್ದುಲ್ ಹೈ ತೋರಣಗಲ್ ಕವಿಗಳು ಹಾಗೂ ವಿಮರ್ಶಕರು

ಆಶಯ ನುಡಿ: ಮಂಡಲಗಿರಿ ಪ್ರಸನ್ನ ಕವಿಗಳು

ಮುಖ್ಯ ಅತಿಥಿ: ರಂಗಸ್ವಾಮಿ ಸಿದ್ದಯ್ಯ, ಅಧ್ಯಕ್ಷರು, ಕರ್ನಾಟಕ ಗಜಲ್ ಅಕಾಡೆಮಿ,

ನಿರೂಪಣೆ : ರಂಗಸ್ವಾಮಿ ರಾಯಚೂರು ರಂಗಕರ್ಮಿ

ಗಜಲ್ ವಾಚನ ಮಾಡಲಿರುವ ಕವಿಗಳು

ಈರಣ್ಣ ಬೆಂಗಾಲಿ
ಉಮರ್ ದೇವರಮನಿ
ಸಾವನ್ ಕೆ. ಸಿಂಧನೂರು
ಎಂ.ಎಸ್.ಕೆ.ಸ್ವಾಮಿ ರಾಯಚೂರು
ನೀಲಮ್ಮ ಬಿ ಮಲ್ಲೆ
ವೆಂಕಟೇಶ್ ದಿನ್ನಿ
ಡಾ. ಶರೀಫ್ ಹಸಮಕಲ್
ಅಂಬಮ್ಮ
ಅಭಿಷೇಕ್ ಬಳೆ ಮಸರಕಲ್
ಸಿಕಂದ‌ರ್ ಅಲಿ
ಪ್ರಕಾಶ್ ಬಿ ಜಾಲಹಳ್ಳಿ
ವೇಣು ಜಾಲಿಬೆಂಚಿ
ಮಲ್ಲೇಶ್ ಭೈರವ
ಕವಿತಾ ಹಿರೇಮಠ ರಾಯಚೂರು
ಉಷಾ ಜ್ಯೋತಿ ಮಾನ್ವಿ
ಶಂಕಸುತ ಮಹಾದೇವ ರಾಯಚೂರು
ಸುವರ್ಣ ರಾಥೋಡ್
ಸುರೇಶ್ ಬಾಬು
ಕೊರೆನಲ್ ರಾಯಚೂರು
ಗಿರಿಜಾ ಮಾಲಿ ಪಾಟೀಲ್
ಯಲ್ಲಪ್ಪ ಮರ್ಚೇಡ್ ರಾಯಚೂರು

ಸಮಾರೋಪ ನುಡಿ: ರಾಘವೇಂದ್ರ ಕುಷ್ಟಗಿ, ಪ್ರಗತಿಪರ ಹೋರಾಟಗಾರರು

ಅಧ್ಯಕ್ಷತೆ: ವಿ. ಎನ್. ಅಕ್ಕಿ, ಹಿರಿಯ ರಂಗಕರ್ಮಿಗಳು, ರಾಯಚೂರು

ಅತಿಥಿಗಳು: ಡಾ.ಕೂಡೂರು ವೆಂಕಟಪ್ಪ, ಅಧ್ಯಕ್ಷರು, ಷಡಕ್ಷರ ಪೀಠ, ಧನಗೂರು

ಮೆಹಬೂಬ್ ಬೀ ಕವಿಗಳು, ರಾಯಚೂರು

ನಿರೂಪಣೆ : ಜೋಸೆಫ್, ಕಲಾವಿದರು

ವಂದನಾರ್ಪಣೆ : ಸುಧಾಕರ್ ಆಸ್ಕಿಹಾಳ್, ಕಲಾವಿದರು

ನಮ್ಮೊಂದಿಗೆ

ಕರ್ನಾಟಕ ಗಜಲ್ ಅಕಾಡೆಮಿ, ಬೆಂಗಳೂರು
ಸಮುದಾಯ, ರಾಯಚೂರು
ಸ್ನೇಹಾ ಸಾಂಸ್ಕೃತಿಕ ಕಲಾಬಳಗ (ರಿ), ಆಶಾಪೂರ
ಶ್ರೀ ಸೂಗೂರೇಶ್ವರ ಸಾಂಸ್ಕೃತಿಕ ನಾಟ್ಯ ಕಲಾಬಳಗ, ದೇವಸೂಗೂರು, ಜಿ॥ರಾಯಚೂರು
ರಂಗಸಂಗಮ ಸಾಂಸ್ಕೃತಿಕ ಸೇವಾ ಸಂಘ (ರಿ), ರಾಯಚೂರು
ಕಲಾದೇವಿ ಕಲಬಳ ಗಾನಾಟ್ಯನಂಘ (ರಿ), ಚಿಕ್ಕಸಗೂರು ಜಿರಾಯಚೂರು
ರಂಗಸಿರಿ ಸಾಂಸ್ಕೃತಿಕ ಕಲಾ ಬಳಗ (ರಿ), ರಾಯಚೂರು
ಭಗತ ಸಾಂಸ್ಕೃತಿಕ ಸೇವಾ ಸಂಸ್ಥೆ, ರಾಯಚೂರು
ಅಂಕಿತಾ ಸಾಂಸ್ಕೃತಿಕ ಮತ್ತುಸಾಹಿತ್ಯಿಕ ಸಂಸ್ಥೆ, ಶಕ್ತಿನಗರ, ಜಿ|| ರಾಯಚೂರು
ರಂಗ ಕನಸು ರಂಗಕೇಂದ್ರ ಮಂಡಲಗೇರ
ಸಪ್ತಗಿರಿ ಸಾಂಸ್ಕೃತಿಕ ಕಲಾ ಬಳಗ, ಬಿಚ್ಚಾಲಿ, ಜಿ।।ರಾಯಚೂರು
ಗಾನಯೋಗಿ ಸಂಗೀತ ಪಾಠಶಾಲೆ ರಾಮಲಿಂಗೇಶ್ವರ ದೇವಸ್ಥಾನ
ಬಸವ ಸಂಗೀತ ಪಾಠಶಾಲೆ ಬಸವೇಶ್ವರ ಕಾಲೋನಿ
ಶಂಭುಲಿಂಗೇಶ್ವರ ಸಂಗೀತ ಪಾಠಶಾಲೆ ನಿಜಲಿಂಗಪ್ಪ ಕಾಲೋನಿ
ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆ

ಲಾವಾರಸದಂತಹ ಶಾಂತರಸ

ಶಾಂತರಸರು ಕತೆ, ಕವಿತೆ, ಕಾದಂಬರಿ, ನಾಟಕ, ಗಜಲ್, ಸಂಪಾದನೆ, ಸಂಶೋಧನೆ, ಅನುವಾದ ಕ್ಷೇತ್ರಗಳಲ್ಲಿ ಅಚ್ಚಳಿಯದಂತಹ ಛಾಪು ಮೂಡಿಸಿದ್ದಾರೆ. ಜೊತೆಗೆ ಪ್ರಕಾಶನ ಸಂಸ್ಥೆಯನ್ನು ಕೂಡ ಸ್ಥಾಪಿಸಿ ಹಲವು ಸಾಹಸಗಳನ್ನು ಮೆರೆದಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿಕೊಂಡು ಜೂನಿಯರ್ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆಯಿಂದ ನಿವೃತ್ತರಾದವರು. ಮಾನವೀಯತೆಯ ಪ್ರತಿಪಾದನೆ, ಪುಸ್ತಕಪ್ರೇಮ, ಪ್ರಜಾಸತ್ತಾತ್ಮಕ ಮೌಲ್ಯಗಳು ಅವರಲ್ಲಿ ನಿರಂತರವಾಗಿ ಅಭಿವ್ಯಕ್ತಿ ರೂಪಪಡೆಯುತ್ತಿದ್ದವು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ತಮ್ಮ ನಡೆನುಡಿಯಲ್ಲಿ ಅಳವಡಿಸಿಕೊಂಡಿದ್ದ ಇವರು, ಶರಣರ ನಿರ್ಭೀತ ಮನೋಧರ್ಮವನ್ನು ಜೀವನದ ಉಸಿರಾಗಿಸಿಕೊಂಡಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಕೂಡ ತಿರಸ್ಕರಿಸುವಷ್ಟು ನಿಷ್ಠುರತೆ ಅವರ ವ್ಯಕ್ತಿತ್ವದಲ್ಲಿ ನೆಲೆಯಾಗಿತ್ತು. ಜನರ ಆಶೋತ್ತರಗಳನ್ನು ಈಡೇರಿಸದ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿರುವ ಸರ್ಕಾರದಿಂದ ಪ್ರಶಸ್ತಿ ಸ್ವೀಕರಿಸುವುದಿಲ್ಲವೆಂದು ಬಂಡಾಯದ ಬಾವುಟ ಹಾರಿಸಿ ಶಾಂತರಸರು ಲಾವಾರಸವಾಗಿ ಚಿಮ್ಮಿದ್ದರು. ಹೀಗೆ ಪ್ರಭುತ್ವವನ್ನು ಅತ್ಯಂತ ವಿಮರ್ಶಾತ್ಮಕವಾಗಿ ನೋಡುತ್ತಿದ್ದ ಅವರ ಕ್ರಮ ವಿಶಿಷ್ಟವಾದುದು. ವಿವಿಧ ಪ್ರಕಾರಗಳಲ್ಲಿ ಸುಮಾರು 46 ಕೃತಿಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿಚಿತರಾಗಿದ್ದಾರೆ. ಅವರ ಶತಮಾನೋತ್ಸವವನ್ನು ಕರ್ನಾಟಕದ ನೂರಾರು ಕಡೆಗೆ ಆಚರಿಸುವ ಮೂಲಕ ಅವರ ಬರಹ – ಬದುಕನ್ನು ಯುವ ಜನರಿಗೆ ತಲುಪಿಸುವ ಶಾಂತರಸ 100 ಮೂವತ್ತೊಂದು ಜಿಲ್ಲೆಗಳು, ಒಂದೇ ಕರ್ನಾಟಕ ಎಂಬ ಕಾರ್ಯಕ್ರಮವನ್ನು ಸಂಸ ಥಿಯೇಟರ್‌ ಜೊತೆ ಕರ್ನಾಟಕದ 31 ಜಿಲ್ಲೆಗಳ ಸಂಘ-ಸಂಸ್ಥೆಗಳು ಕೈ ಜೋಡಿಸಿವೆ.ಈ ಪ್ರಯತ್ನಕ್ಕೆ ನೀವೆಲ್ಲ ಬನ್ನಿ ನಮ್ಮ ಜೊತೆಗೂಡಿ.

Leave a Reply