ಯಾವ ರೀತಿಯಲ್ಲಿ ರಾಜ್ಯದ ಸಂಪುಟ ಸಭೆಗಳನ್ನು ಆಯಾ ರಾಜ್ಯದ ಬೇರೆಬೇರೆ ಜಿಲ್ಲೆಗಳಲ್ಲಿ ಕೆಲವು ಬಾರಿ ನಡೆಸಿ, ಜಿಲ್ಲಾ ಸಮಸ್ಯೆಗಳಿಗೆ ಹೆಚ್ಚಿನ ಗಮನವನ್ನು ಹರಿಸಿ, ಆ ಜಿಲ್ಲೆಯ ಜನರಲ್ಲಿ ಭರವಸೆಯನ್ನು ಮೂಡಿಸುವಂತಹ ಕಾರ್ಯಕ್ರಮಗಳನ್ನು ನೀಡಿ ಹೊಸತನವನ್ನು ಪ್ರದರ್ಶಿಸುತ್ತಾರೋ ಅದೇ ರೀತಿಯಲ್ಲಿ ಕೇಂದ್ರ ಸರಕಾರ ಸಹ ದೆಹಲಿಯಲ್ಲಿ ಸಂಪುಟ ಸಭೆಯನ್ನ ನಡೆಸುವುದರ ಜೊತೆಗೆ, ಕೆಲವೊಂದು ರಾಜ್ಯಗಳಲ್ಲಿ ಕೇಂದ್ರ ಸಂಪುಟ ಸಭೆಯನ್ನ ನಡೆಸುವಂತಹ ಪದ್ಧತಿಯನ್ನು ಅನುಸರಿಸಿದರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವಿನ ಬಾಂಧವ್ಯಕ್ಕೆ ಹೆಚ್ಚಿನ ಮಹತ್ವ ಬರುತ್ತದೆ.
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
- UPI ಡಿಜಿಟಲ್ ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು
- ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪೌರ ಕಾರ್ಮಿಕರಿಗೆ ಸನ್ಮಾನ
ಮುಖ್ಯಮಂತ್ರಿಗಳು ರಾಜ್ಯಗಳಲ್ಲಿ ಜಿಲ್ಲಾ ಪ್ರವಾಸ ಮಾಡಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಿದ ರೀತಿಯಲ್ಲಿ, ಪ್ರಧಾನ ಮಂತ್ರಿಗಳು ಸಹ ವರ್ಷದಲ್ಲಿ ಒಂದು ದಿನವಾದರೂ ದೇಶದ ಎಲ್ಲ ರಾಜ್ಯಗಳಲ್ಲಿ ಅಲ್ಲಿನ ವಿಧಾನಸೌಧದಲ್ಲಿ ಕುಳಿತು ಒಂದು ದಿನದ ಮಟ್ಟಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ವಿಚಾರದಲ್ಲಿ ಚರ್ಚೆಯನ್ನ ನಡೆಸಿದರೆ ದೇಶದ ಪ್ರಗತಿಗೆ ಮತ್ತು ರಾಜ್ಯಗಳ ಸಮಾನಾಂತರ ಅಭಿವೃದ್ಧಿಗೆ ಅನುಕೂಲವಾಗುತ್ತದೆ.
ಪ್ರಧಾನ ಮಂತ್ರಿಗಳು ಕೇವಲ ಚುನಾವಣಾ ಸಮಯದಲ್ಲಿ ರಾಜ್ಯಗಳಿಗೆ ಭೇಟಿ ಕೊಡುವುದು ಇಲ್ಲವೇ ಯಾವುದಾದರೂ ಕಾರ್ಯಕ್ರಮಗಳಲ್ಲಿ ಉದ್ಘಾಟನೆ ಅಥವಾ ಶಂಕುಸ್ಥಾಪನ ಸಮಾರಂಭಗಳಲ್ಲಿ ಕೆಲವು ಗಂಟೆಗಳ ಕಾಲ ಪಾಲ್ಗೊಂಡು ವೇದಿಕೆಯಲ್ಲಿ ಭಾಷಣವನ್ನು ಮಾಡಿ ನಿರ್ಗಮಿಸುವಂತಹ ಪದ್ಧತಿ ಜಾರಿಯಲ್ಲಿದೆ. ಇದರ ಬದಲಿಗೆ ಪ್ರಧಾನಮಂತ್ರಿಗಳು ಆಡಳಿತಾತ್ಮಕವಾದಂತಹ ಚರ್ಚೆಯನ್ನ ನಡೆಸುವ ಸಲುವಾಗಿ ದೇಶದ ಎಲ್ಲಾ ರಾಜ್ಯಗಳಿಗೂ ಒಂದೊಂದು ದಿನ ಭೇಟಿ ಕೊಡುವಂತಹ ಹೊಸ ಸಂಪ್ರದಾಯವನ್ನು ಆರಂಭಿಸಲಿ.
ಯಾವ ರೀತಿಯಲ್ಲಿ ರಾಜ್ಯದ ಸಚಿವರು ಜಿಲ್ಲಾ ಉಸ್ತುವಾರಿ ಸಚಿವರಾಗಿರುತ್ತಾರೋ ಅದೇ ರೀತಿಯಲ್ಲಿ ಕೇಂದ್ರದ ಸಚಿವರಿಗೂ ಸಹ ಒಂದೊಂದು ರಾಜ್ಯದ ಜವಾಬ್ದಾರಿಯನ್ನು ನೀಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸೇತುವೆಯ ರೀತಿಯಲ್ಲಿ ಕರ್ತವ್ಯವನ್ನು ನಿರ್ವಹಿಸಲು ನಿರ್ದಿಷ್ಟ ಹೊಣೆಗಾರಿಕೆಯನ್ನು ನೀಡುವಂತಹ ನಿಟ್ಟಿನಲ್ಲಿ ಆಲೋಚಿಸುವುದು ಸಹ ಒಳ್ಳೆಯ ಬೆಳವಣಿಗೆ ಆಗುತ್ತದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮನ್ವಯದ ಕೊರತೆ ಹೆಚ್ಚಾಗಿ ಕಾಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮನ್ವಯವನ್ನು ಸಾಧಿಸುವ ಸಲುವಾಗಿ ಈ ಹಿಂದೆ ಸರ್ಕಾರಿ ಆಯೋಗ ಮಾಡಿರುವ ಶಿಫಾರಸುಗಳನ್ನು ಸರ್ಕಾರಗಳು ಅನುಷ್ಠಾನಗೊಳಿಸಿರುವುದಿಲ್ಲ. ಕೇಂದ್ರ ಸರ್ಕಾರ ರಾಜ್ಯಗಳ ವಿಚಾರದಲ್ಲಿ ಪಕ್ಷಪಾತವನ್ನು ಮಾಡುವುದು ಮತ್ತು ತಮ್ಮ ಪಕ್ಷ ಆಡಳಿತದಲ್ಲಿರುವ ರಾಜ್ಯಗಳಿಗೆ ಹೆಚ್ಚಿನ ನೆರವು ಅನುದಾನ ಮತ್ತು ಕೊಡುಗೆಗಳನ್ನು ನೀಡುವುದು ಸಾಮಾನ್ಯವಾಗಿದೆ. ವಿರೋಧ ಪಕ್ಷದ ಸರ್ಕಾರಗಳಿರುವ ರಾಜ್ಯಗಳಿಗೆ ಎಲ್ಲ ವಿಚಾರದಲ್ಲೂ ವಿಳಂಬ ನೀತಿಯನ್ನು ಅನುಸರಿಸುವುದು ಸಹ ಸಾಮಾನ್ಯವಾಗಿದೆ.
ವಿವಿಧ ದೇಶಗಳಿಂದ ಬರುವಂತಹ ದೊಡ್ಡದೊಡ್ಡ ಉದ್ಯಮಗಳು, ದೊಡ್ಡ ಪ್ರಮಾಣದ ಬಂಡವಾಳ ಹೂಡಿಕೆ ಎಲ್ಲವನ್ನು ಸಹ ಕೇವಲ ಕೆಲವು ರಾಜ್ಯಗಳಿಗೆ ಮಾತ್ರವೇ ಸೀಮಿತ ಮಾಡಿಕೊಂಡು ಅವುಗಳ ಅಭಿವೃದ್ಧಿ ಕಡೆಗೆ ಹೆಚ್ಚು ಗಮನವನ್ನು ಕೊಡುವುದು ಹೆಚ್ಚಾಗುತ್ತಿದೆ.
– ಕೆ ಎಸ್ ನಾಗರಾಜ್, ಬೆಂಗಳೂರು




