“ಮಾತ ತುಳುವೆರೆಗ್ ಎನ್ನ ಮೋಕೆದ ಸೊಲ್ಮೆಲು ❤”
ತುಳುವಿನ ಗೌರವದ ಹೆಜ್ಜೆಗೆ ಅಂದು ನಾನು ಮುಖ್ಯಮಂತ್ರಿಯಾಗಿ ಹಾಕಿದ ಅಡಿಪಾಯ, ಇಂದು ಸಾಕಾರಗೊಂಡಿದ್ದನ್ನು ನೋಡಿ ಖುಷಿಯಾಗುತ್ತಿದೆ. ನಿನ್ನೆಯಿಂದ ತುಳು ಭಾಷಿಗರು ವ್ಯಕ್ತಪಡಿಸುತ್ತಿರುವ ಸಂತಸಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರ ಕಾರಣವಾಗಿರುವ ಬಗ್ಗೆ ನನಗೆ ಹೆಮ್ಮೆಯಿದೆ.
- ಸಂಗೀತ ಬಾರ್ & ರೆಸ್ಟೋರೆಂಟ್ ಚಿತ್ರದ ಟೀಸರ್ ಬಿಡುಗಡೆಗೆ ಮುಹೂರ್ತ ನಿಗದಿ
- ಅನರ್ಹ ಕಂಪನಿಗೆ ಕಸದ ಟೆಂಡರ್: ಆರ್.ಅಶೋಕ
- ಮಾಂಜಾ ದಾರ ಮಾರಾಟ, ಬಳಕೆ ನಿಷೇಧಕ್ಕೆ ಕಠಿಣ ಕ್ರಮ: ಡಾ.ಜಿ.ಪರಮೇಶ್ವರ್
- ಶೂದ್ರ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
- ಕಬ್ಬಿಗೆ ಬೆಂಬಲ ಬೆಲೆ, ಸಾಲ ಮನ್ನಾಗೆ ಆಗ್ರಹಿಸಿ ಗಣಂಗೂರು ಟೋಲ್ ಬಳಿ ರೈತರ ಹೆದ್ದಾರಿ ಬಂದ್
ತುಳು ಭಾಷೆಗೆ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ನಮ್ಮ ಸರ್ಕಾರದ ಅವಧಿಯಲ್ಲಿ ಮಹತ್ವದ ಹೆಜ್ಜೆಯಿರಿಸಲಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿದ್ದ ಕೆ.ಎಂ.ಗಾಯತ್ರಿ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ, ಆಂಧ್ರಪ್ರದೇಶದಲ್ಲಿ ಪ್ರಾದೇಶಿಕ ಭಾಷೆಗೆ ನೀಡಿರುವ ಅಧಿಕೃತ ಭಾಷಾ ಸ್ಥಾನಮಾನದ ಮಾದರಿಯನ್ನು ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದೆ.
ಆ ಅಧ್ಯಯನ ಮತ್ತು ವರದಿಯ ಮೂಲಕ ರೂಪುಗೊಂಡ ಪ್ರಕ್ರಿಯೆ ಮುಂದುವರಿದು, ಇದೀಗ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಸೀಮಿತವಾಗಿ ತುಳುವನ್ನು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ ನೀಡಲು ಸಚಿವ ಸಂಪುಟ ನಿರ್ಣಯ ಕೈಗೊಂಡಿರುವುದು ಸಂತಸದ ಸಂಗತಿ.
ಭಾಷೆ ಎಂದರೆ ಕೇವಲ ಸಂವಹನದ ಮಾಧ್ಯಮವಲ್ಲ. ಅದು ಜನರ ಇತಿಹಾಸ, ಸಂಸ್ಕೃತಿ, ಪರಂಪರೆ ಮತ್ತು ಅಸ್ಮಿತೆಯ ಪ್ರತೀಕ.
ತುಳು ಭಾಷಿಗರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ, ಅದಕ್ಕೆ ಸಾಂಸ್ಥಿಕ ಗೌರವ ದೊರಕುವ ನಿಟ್ಟಿನಲ್ಲಿ ಅಂದು ಆರಂಭಿಸಿದ ಪ್ರಯತ್ನ ಇಂದು ಐತಿಹಾಸಿಕ ನಿರ್ಣಯವಾಗಿ ರೂಪುಗೊಂಡಿದೆ.
ತುಳುವಿನ ಶ್ರೀಮಂತ ಪರಂಪರೆಗೆ ಗೌರವ ಸಲ್ಲಿಸುವ ರಾಜ್ಯ ಸಚಿವ ಸಂಪುಟದ ನಿರ್ಧಾರವನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.
– ಸಿದ್ದರಾಮಯ್ಯ, ಮಾಜಿ ಸಿಎಂ




