2025ರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಅನುಬಂಧದ ಕಾಲಂ 15ರಲ್ಲಿ ಮಾತೃಭಾಷೆ ವಿಭಾಗದಲ್ಲಿ ಹಲವು ಭಾಷೆಗಳು ಸೇರಿಸಲ್ಪಟ್ಟಿದ್ದರೂ, ದೇಶದ ಬಹುತೇಕ ರಾಜ್ಯಗಳಲ್ಲಿ ಬಹುಸಂಖ್ಯೆಯ ಜನರು ಮಾತನಾಡುವ ಬಂಜಾರರ ಗೋರಬೋಲಿ (ಬಂಜಾರ ಭಾಷೆ/ ಲಂಬಾಣಿ ಭಾಷೆ) ಕೈ ಬಿಡಲಾಗಿದೆ.
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
- UPI ಡಿಜಿಟಲ್ ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು
- ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪೌರ ಕಾರ್ಮಿಕರಿಗೆ ಸನ್ಮಾನ
ಬಂಜಾರರ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರವೇ “ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ” ಸ್ಥಾಪಿಸಿರುವ ಹಿನ್ನಲೆಯಲ್ಲಿ, ಗೋರಬೋಲಿ/ ಬಂಜಾರ ಭಾಷೆಯನ್ನು ಕಡ್ಡಾಯವಾಗಿ ಈ ಕಾಲಂನಲ್ಲಿ ಸೇರಿಸಲು ಕ್ರಮವಹಿಸಬೇಕೆಂದು ಮನವಿ ಮಾಡುತ್ತೇನೆ.
ಬಂಜಾರ ಅಕಾಡೆಮಿ ಸರ್ವ ಸದಸ್ಯರ ನಿರ್ಣಯದಂತೆ ಬಂಜಾರರು ಇನ್ನು ಮುಂದೆ ಯಾರನ್ನಾದರು ಭೇಟಿಯಾದ ಸಂದರ್ಭದಲ್ಲಿ ಮತ್ತು ಸಭೆ, ಸಮಾರಂಭಗಳಲ್ಲಿ ನಮಸ್ಕಾರ ಬದಲಿಗೆ ʻಅರಾಮ್ ಭರಾಮ್ʼ ಎಂದು ಬಂಜಾರರು ವಿನಿಮಯ ಮಾಡಿಕೊಳ್ಳಬೇಕೆಂದು ಸಭೆಯಲ್ಲಿ ನಿರ್ಣಯಿಸಲಾಗಿದೆ. ಹಾಗೂ ನಾಡೋಜ ಬರಗೂರು ರಾಮಚಂದ್ರಪ್ಪ, ಕಾ.ತ ಚಿಕ್ಕಣ್ಣ, ಪ್ರೊ. ಸಣ್ಣರಾಮ ನಾಯ್ಕ, ಪ್ರೊ. ಸಿ.ನಾಗಣ್ಣ, ಡಾ.ಶ್ರೀದೇವಿ ಎಲ್ ಅವರ ನೇತೃತ್ವದಲ್ಲಿ ಅಕಾಡೆಮಿಯ ಪ್ರತಿಷ್ಠಿತ ಸಾಂಸ್ಕೃತಿಕ ವಿಶ್ವಕೋಶ ರಚನೆಗೆ ಕ್ರಮಕೈಗೊಂಡಿದ್ದು, ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈ ಯೋಜನೆಗೆ ಆರಂಭಿಕವಾಗಿ ಒಂದೆರೆಡು ಸಂಪುಟಗಳಿಗೆ ಆಗುವಷ್ಟಾದರು ಧನ ಸಹಾಯವನ್ನು ಸರ್ಕಾರ ತುರ್ತಾಗಿ ಬಿಡುಗಡೆ ಮಾಡಲು ನಿರ್ಣಯಿಸಲಾಯಿತು.
– ಡಾ.ಎ.ಆರ್. ಗೋವಿಂದಸ್ವಾಮಿ, ಅಧ್ಯಕ್ಷ, ಕರ್ನಾಟಕ ಬಂಜಾರ ಅಕಾಡೆಮಿ




