ಮಕ್ಕಳಿಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹತ್ವ ತಿಳಿಸಿ: ನ್ಯಾ. ಆರ್.ದೇವದಾಸ್

1 year ago

ಡಾ. ಬಿ.ಆರ್.ಅಂಬೇಡ್ಕರ್ ಸಮಾಜ ಸೇವಾ ರತ್ನ ಪ್ರಶಸ್ತಿ, ಡಾ.ಬಿ.ಆರ್.ಅಂಬೇಡ್ಕರ್ ರತ್ನ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಭೂಷಣ ಪ್ರಶಸ್ತಿ ಪ್ರದಾನ

ಬೆಂಗಳೂರು: ಟೌನ್ ಹಾಲ್ ನಲ್ಲಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರ 134ನೇ ಜನ್ಮದಿನಾಚರಣೆ ಮತ್ತು ಸಾಧಕ ಸಾಧಕಿಯರಿಗೆ ಮತ್ತು ಬಿಬಿಎಂಪಿ ಅಧಿಕಾರಿ, ನೌಕರರಿಗೆ ಡಾ.ಬಿ.ಆರ್.ಅಂಬೇಡ್ಕರ್ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಹೈಕೋರ್ಟ್ ನ್ಯಾಯಾಲಯದ  ನ್ಯಾಯಮೂರ್ತಿಗಳಾದ  ಕೃಷ್ಣ ಎಸ್.ದಿಕ್ಷೀತ್ ಅವರು, ನ್ಯಾಯಮೂರ್ತಿಗಳಾದ ಆರ್.ದೇವದಾಸ್ ಅವರು ಮತ್ತು ವಿಶ್ರಾಂತ ಕುಲಪತಿಗಳಾದ ಮಲ್ಲೇಪುರಂ ಜಿ.ವೆಂಕಟೇಶ್, ಸುಮಂಗಲಿ ಸೇವಾಶ್ರಮ ಡಾ. ಎಸ್.ಟಿ.ಸುಶೀಲಮ್ಮ,  ವಕೀಲರಾದ ಎ.ರಾಜೇಶ್ , ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು ದೀಪ ಬೆಳಗಿಸಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಪ್ರಶಸ್ತಿ ಪ್ರದಾನ ಮಾಡಿದರು.

ನ್ಯಾ. ಕೃಷ್ಣ ಎಸ್.ದೀಕ್ಷಿತ್ ಅವರು ಮಾತನಾಡಿ, ಬಾಬಸಾಹೇಬ್ ಡಾ: ಬಿ.ಆರ್. ಅಂಬೇಡ್ಕರ್ ಅವರು ದೈವಾಂಶ ಸಂಭೂತರು ಎಂದು ಹೇಳಿದ್ದೆ ಸರ್ವೋರ್ಚ ನ್ಯಾಯಾಲಯದಲ್ಲಿ. ವಾದ-ವಿವಾದ ನಡೆಯಿತು. ಅಂಬೇಡ್ಕರ್ ಅವರ ಹೆಸರು ಕೇಳಿದರೆ ಪುಳಕವುಂಟಾಗುತ್ತದೆ ಎಂದರು.

ಭರತ ಖಂಡದ ಅರ್ಧಕ್ಕಿಂತ ಹೆಚ್ಚು ಜನರಿಗೆ ಪ್ರಾಣಿಗಿಂತ ಕೀಳಾಗಿ ನೋಡುತ್ತಿದ್ದರು. ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಅಂಬೇಡ್ಕರ್ ಅವರು ಕಾರಣರಾದರು. ಪ್ರಾಣಿಗಳನ್ನು ಮುಟ್ಟುತ್ತಿದ್ದರು, ಆದರೆ ಮನುಷ್ಯರನ್ನ ಮುಟ್ಚುತ್ತಿರಲಿಲ್ಲ. ಆದರೆ ದೇವರು ಬಾಬಸಾಹೇಬ್ ಅವರನ್ನು ಸಮಾಜದ ಅಭಿವೃದ್ದಿಗೆ ಧರೆಗೆ ತಂದರು ಎಂದರು.

ಅಂಬೇಡ್ಕರ್ ಅವರು ಮೂರು ಪಿ.ಹೆಚ್.ಡಿ. ಹಲವಾರು ಪುಸ್ತಕಗಳನ್ನು ಬರೆದರೂ ಪಂಡಿತ್ ಎಂಬು ಬಿರುದು ನೀಡಲಿಲ್ಲ. ಕಾರಣ ತಳ ಸಮುದಾಯದವರು ಎಂದು ಇಂತಹ ಸಮಾಜದಿಂದ ಏನು ಪ್ರಯೋಜನವಿಲ್ಲ ಎಂದರು.

1942 ರಿಂದ 1947 ರವರೆಗೆ ದೇಶದಲ್ಲಿ ಹಲವಾರು ಕಾನೂನು ಬರಲು ಕಾರಣರಾದರು. ಮಹಿಳೆಯರಿಗೆ ಸಮಾನ ಹಕ್ಕು, 8 ಗಂಟೆ ಕೆಲಸ ನಿಗದಿ ಮಾಡಿದ್ದು ಇಡಿ ವಿಶ್ವಕ್ಕೆ ಆನ್ವಯವಾಗುವಂತೆ ಮಾಡಿದ್ದು ಅಂಬೇಡ್ಕರ್ ಅವರು. ಕಾರ್ಮಿಕರಿಗೆ ಕನಿಷ್ಠ ವೇತನ ನೀಡಬೇಕು ಎಂದು ಹೋರಾಟ ಮಾಡಿದರು, ರಿಸರ್ವ್ ಬ್ಯಾಂಕ್ ಸ್ಥಾಪನೆ ಕೊಡುಗೆ ನೀಡಿದರು. ಸಂವಿಧಾನ ಕರಡನ್ನು ಅಧ್ಯಯನ ಮಾಡಬೇಕು ಆಗ ಮಾತ್ರ ಅಂಬೇಡ್ಕರ್ ರವರ ಮಹತ್ವ ತಿಳಿಯುತ್ತದೆ ಎಂದರು.

ಅಲ್ಪಸಂಖ್ಯಾತ ಸಮುದಾಯದವರು ಬುರ್ಖಾ ಹಾಕುವ ಬಗ್ಗೆ ಚಿಂತನೆ ಮಾಡಬೇಕು ಎಂದು ಅಂಬೇಡ್ಕರ್ ರವರು ಹೇಳಿದ್ದರು. ಬಾಬಸಾಹೇಬ್ ಅವರು ಸಂವಿಧಾನ ರಚನೆ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಿದರು. ರಾಮಾಯಣವನ್ನು ಪರಿಶಿಷ್ಟ ಪಂಗಡದ ಬೇಡ ವಾಲ್ಮೀಕಿ ಬರೆಯುತ್ತಾರೆ. ವೇದವಾಙ್ಮಯವನ್ನು ನಾಲ್ಕು ಭಾಗವಾಗಿ ವಿಂಗಡಿಸಿದ್ದು, ಮೀನುಗಾರ  ಸಮುದಾಯದವರಾದ ವೇದವ್ಯಾಸರು. ಕುರುಬ ಸಮುದಾಯ ಕಾಳಿದಾಸ ನೂರಾರು ಗ್ರಂಥಗಳನ್ನು ಬರೆದರು. ಆರು ಉಪನಿಷತ್ ಬರೆದವರು ಅನ್ಯ ಸಮುದಾಯದವರು. ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ಕೊಟ್ಟರು. ಮೇಲ್ವರ್ಗದವರು ಸಂವಿಧಾನ ಬೇಕು ಆದರೆ ಅಂಬೇಡ್ಕರ್ ಬೇಡ ಎಂದು ಹೇಳುತ್ತಾರೆ ಎಂದರು.

ಅಮಾನವೀಯ ರೀತಿಯಲ್ಲಿ ಇರುವ ಸಮಾಜವನ್ನು ತಿದ್ದಲು ಡಾ. ಬಾಬಸಾಹೇಬ್ ಅಂಬೇಡ್ಕರ್ ಅವರು ಸೂರ್ಯನಾಗಿ ಬಂದರು. ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದರು, ಅವರ ವಿರುದ್ದ ಗೆದ್ದ ವ್ಯಕ್ತಿಗೆ ಭಾರತರತ್ನ ಕೊಟ್ಟರು. ಅಂಬೇಡ್ಕರ್ ಅವರ ಬಗ್ಗೆ   ಪುಂಖಾನುಪುಂಖವಾಗಿ ಮಾತನಾಡುವ ವ್ಯಕ್ತಿಗಳ ಬಗ್ಗೆ ಎಚ್ಚರವಾಗಿರಬೇಕು ಎಂದರು.

ಆರ್ಟಿಕಲ್ 370 ಮಸೂದೆ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ವಾಯುತ್ತತೆಯ ಮಸೂದೆಗೆ ಸಹಿ ಮಾಡಿಸಲು ಗೋಪಾಲ ಸ್ವಾಮಿ ಅಯ್ಯಂಗಾರ್ ಅವರು ಡಾ. ಬಿ.ಆರ್.ಅಂಬೇಡ್ಕರ್ ಮನ ಒಲಿಸಲು ಹೋದರು. ಆದರೆ ಅವರು ಅದಕ್ಕೆ ಸಹಿ ಮಾಡಲಿಲ್ಲ. ದಿಟ್ಟ ನೇರ ವ್ಯಕ್ತಿತ್ವ ಮಹಾನ್ ನಾಯಕ ಡಾ. ಬಿ.ಆರ್.ಅಂಬೇಡ್ಕರ್ ಅವರು ನಮ್ಮ ಉದ್ದಾರಕ್ಕೆ ಬಂದವರು. ಅವರನ್ನು ಪೂಜಿಸಿದರೆ ಏನೂ ತಪ್ಪಿಲ್ಲ ಮತ್ತೊಮ್ಮೆ ಹುಟ್ಟಿ ಬನ್ನಿ ಎಂದರು.

ನ್ಯಾ. ಆರ್.ದೇವದಾಸ್ ಅವರು ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಸಮಾಜಕ್ಕೆ ಕೊಟ್ಟ ಕೊಡುಗೆಯನ್ನು ಮಕ್ಕಳಿಗೆ ಅರಿವು ಮೂಡಿಸಬೇಕು, ಮುಂದಿನ ದಿನಗಳಲ್ಲಿ ಮಾದರಿ ದೇಶವಾಗಬೇಕು. ದೇಶದ ಅಭಿವೃದ್ದಿಗೆ ಸಹೋದರತ್ವದಲ್ಲಿ ಬಾಳಬೇಕು. ಎಲ್ಲರೂ ಕಾಯಕ ತತ್ವ ಆಳವಡಿಸಿಕೊಳ್ಳಿ. ಪ್ರಧಾನಿಯಿಂದ ಮುಖ್ಯಮಂತ್ರಿ ಹಾಗೂ ಎಲ್ಲರು ಸರಿಯಾಗಿ ಕೆಲಸ ಮಾಡಬೇಕು ಎಂದು ಅಂಬೇಡ್ಕರ್ ಅವರ ಚಿಂತನೆಯಾಗಿತ್ತು. ಜಪಾನ್ ದೇಶದಲ್ಲಿ ಬಾಂಬ್ ದಾಳಿಯಾದರೂ ಆತ್ಮಸ್ಥೈರ್ಯದಿಂದ ದೇಶ ಕಟ್ಟಿದರು, ಕಾರಣ ದೇಶಪ್ರೇಮ. ನಮ್ಮ ದೇಶದ ಜನರು ದೇಶಪ್ರೇಮವನ್ನು ಬೆಳೆಸಿಕೊಳ್ಳಿ ಎಂದರು.

ಸಮಾಜ ಸೇವೆಯ ಸಾಧಕರಿಗೆ  ಡಾ.ಬಿ.ಆರ್.ಅಂಬೇಡ್ಕರ್ ಸಮಾಜಸೇವಾ ರತ್ನ ಪ್ರಶಸ್ತಿ, ಸಾಧಕ/ಸಾಧಕಿಯರಿಗೆ  ಡಾ.ಬಿ.ಆರ್.ಅಂಬೇಡ್ಕರ್ ರತ್ನ ಪ್ರಶಸ್ತಿ ಮತ್ತು ಬಿಬಿಎಂಪಿ ಅಧಿಕಾರಿ ಮತ್ತು ನೌಕರರಿಗೆ  ಡಾ.ಬಿ.ಆರ್.ಅಂಬೇಡ್ಕರ್ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ಖ್ಯಾತ ಜನಪದ ಗಾಯಕ ಗುರುರಾಜ್ ಹೊಸಕೋಟೆ ಮತ್ತು ತಂಡದವರಿಂದ ಸಂಗೀತ ಸಂಜೆ ಏರ್ಪಡಿಸಲಾಗಿತ್ತು.

Leave a Reply