ಡಾ.ಚಿ.ನಾ.ರಾಮು ಅವರಿಗೆ ಅಭಿನಂದನಾ ಸಮಾರಂಭ

2 years ago

ಕರ್ನಾಟಕ ರಕ್ಷಣಾ ಸಮಿತಿ 25ರ ಸಂಭ್ರಮ

ಸಾಧಕರಿಗೆ ಸನ್ಮಾನ ಸಮಾರಂಭ

ಬೆಂಗಳೂರು: ನಗರದ ಗಾಂಧಿಭವನದಲ್ಲಿ ಕರ್ನಾಟಕ ರಕ್ಷಣಾ ಸಮಿತಿ 25ರ ಸಂಭ್ರಮ ಮತ್ತು ಬಿಜೆಪಿ ನಾಯಕ ಡಾ.ಚಿ.ನಾ.ರಾಮು ಅವರಿಗೆ ಅಭಿನಂದನಾ ಸಮಾರಂಭ ಮತ್ತು ಕನ್ನಡ ಕಾಯಕ ಪ್ರಶಸ್ತಿ ಕನ್ನಡ ಪರ ಹೋರಾಟಗಾರ ಪಾಲನೇತ್ರ ಮತ್ತು ಭೀಮರತ್ನ ಪ್ರಶಸ್ತಿ, ಕ್ರಾಂತಿ ರಾಜು ಹಾಗೂ ಸಮಾಜ ಸೇವಾ ರತ್ನ ಪ್ರಶಸ್ತಿ ಸೋಮಶೇಖರ್ ಕಾರ್ಯಕ್ರಮ ನಡೆಯಿತು.

ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನಿಸಿ ಮಾತನಾಡಿದ ಮಾಜಿ ಸಚಿವ ವಿ.ಸೋಮಣ್ಣ, ಬಡತನ ಶಾಶ್ವತವಲ್ಲ, ಬಡತನವನ್ನು ಮೆಟ್ಟಿ ನಿಲ್ಲಬೇಕು. ಪ್ರತಿಯೊಬ್ಬರಲ್ಲೂ ಜೀವನದಲ್ಲಿ ಗುರಿ ಮತ್ತು ಸಾಧನೆ ಮಾಡುವ ಛಲ ಇದ್ದರೆ ಸಾಧನೆ ಮಾಡಲು ಸಾಧ್ಯ. ಸಮಾಜದಲ್ಲಿ ನೋವಿನಲ್ಲಿರುವ ಜನರ ಸಂಕಷ್ಟಗಳನ್ನು ನಿವಾರಿಸುವ ಕಾರ್ಯ ಮಾಡಬೇಕು. ಸಮಾಜ ನನಗೆ ಏನು ಕೊಟ್ಟಿದೆ ಎನ್ನುವ ಬದಲು ನಾವು ಸಮಾಜಕ್ಕೆ ಏನು ಕೊಟ್ಟಿದ್ದೇವೆ ಎಂದು ಅರಿತುಕೊಳ್ಳಬೇಕು ಎಂದು ಕರೆನೀಡಿದರು.

ಚಿ.ನಾ.ರಾಮುರವರು ಚಿನ್ನದಂತ ಮನುಷ್ಯ. ಭಾರತರತ್ನ ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ ಸಿದ್ದಾಂತವನ್ನು ದೇಶದ ಪ್ರತಿ ಮೂಲೆಗೆ ತಲುಪಿಸುವ ಸಂದೇಶ ಕಾರ್ಯವನ್ನು ಯಶ್ವಸಿಯಾಗಿ ಮಾಡುತ್ತಿದ್ದಾರೆ ಎಂದರು.

ನಿವೃತ್ತ ಐ.ಪಿ.ಎಸ್. ಅಧಿಕಾರಿ ಮತ್ತು ಬಿಜೆಪಿ ನಾಯಕ ಭಾಸ್ಕರ್ ರಾವ್ ಮಾತನಾಡಿ, ಪರಿಕ್ರಮ ಮತ್ತು ಪರಾಕ್ರಮ ಎರಡು ವಿಧ ಇದೆ. ಕಷ್ಟಪಟ್ಟು ಜೀವನದಲ್ಲಿ ಸಾಧನೆ ಮಾಡಿದರೆ ಪರಾಕ್ರಮ ಎಂದು ಹೇಳಬಹುದು. ರಾಜಕಾರಣಿಗಳ ಸುತ್ತ ಸುತ್ತಿ ಅಧಿಕಾರ ಪಡೆಯುವುದು ಎಂದರೆ ಪರಿಕ್ರಮ ವಿಧಾನ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಜೀವನದಲ್ಲಿ ಅಷ್ಟುಕಷ್ಟಗಳು ಜೀವನದಲ್ಲಿ ಇದ್ದರು, ಸಮಾಜದಲ್ಲಿ ಇರುವ ಶಕ್ತಿಯನ್ನ ಎದುರಿಸಿ ಉನ್ನತ ವ್ಯಾಸಂಗ ಪಡೆದು ವಿಶ್ವಮಾನ್ಯರಾದರು. ಅಂಬೇಡ್ಕರ್ ಅವರ ತತ್ವ ಸಿದ್ದಾಂತ ಜೀವನದಲ್ಲಿ ಆಳವಡಿಸಿಕೊಂಡಿರುವ ಚಿ.ನಾ.ರಾಮುರವರು ದೇಶ, ವಿದೇಶಗಳಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸಿದ್ದಾಂತ ಪ್ರಚಾರ ಮಾಡುತ್ತಿದ್ದಾರೆ ಎಂದರು.

ಸನ್ಮಾನ ಸ್ವೀಕರಿಸಿ ಮಾತಾಡಿದ ಡಾ.ಚಿ.ನಾ.ರಾಮು, ಕನ್ನಡ ತಾಯಿಯ ಸೇವೆ ಮಾಡುವುದು ಪುಣ್ಯದ ಕೆಲಸ, ಕನ್ನಡ ಚಳುವಳಿ ಪ್ರಾಮಾಣಿಕ ಹೋರಾಟಗಾರರನ್ನ ಗೌರವಿಸಬೇಕು. ಇಂಗ್ಲಿಷ್ ಭಾಷೆ ಕಲಿಯಬೇಕು ವ್ಯವಹಾರಿಕ ಭಾಷೆಯಾಗಿ ಬಳಕೆ ಮಾಡಬೇಕು. ಸಮಾಜದ ಬದಲಾವಣೆಗಾಗಿ ಶ್ರಮಿಸಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಯನ್ನು ವಿಶ್ವದ ಎಲ್ಲಡೆ ಪ್ರಚಾರ ಮಾಡುವ ಸಂಕಲ್ಪ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಅ.ದೇವೇಗೌಡ, ಬಿಜೆಪಿ ಮುಖಂಡರು, ಕರ್ನಾಟಕ ರಕ್ಷಣಾ ಸಮಿತಿ ನಗರ ಅಧ್ಯಕ್ಷ ಕನ್ನಡ ಕೃಷ್ಣ, ನಗರ ಅಧ್ಯಕ್ಷ ಚಂದ್ರಕುಮಾರ್, ರಾಜ್ಯ ಯುವ ಘಟಕದ ಅಧ್ಯಕ್ಷ ಜೆನಿತ್ ಅಯ್ಯಪ್ಪ ಮೊದಲಾದವರು ಇದ್ದರು.

Leave a Reply