ಸಾಧಕ/ಸಾಧಕಿಯರಿಗೆ ಸಿಂಪೋನಿ ರಾಜ್ ರತ್ನ ಮತ್ತು ಸಿಂಪೋನಿ ಪುನೀತ್ ರತ್ನ ಪ್ರಶಸ್ತಿ ಪ್ರದಾನ
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಬೆಂಗಳೂರು: ಸಿಂಪೋನಿ ಸ್ವರ ಪ್ರತಿಷ್ಠಾನ ವತಿಯಿಂದ ಎರಡನೇ ವರ್ಷದ ರಾಜ ಪುನೀತೋತ್ಸವ ಸಮಾರಂಭ, ರಾಜ್ ನಮನ, ಪುನೀತ್ ನಮನ ಸಂಗೀತ ಸಂಜೆ ಮತ್ತು ಸಿಂಫೋನಿ ರಾಜರತ್ನ ಮತ್ತು ಸಿಂಪೋನಿ ಪುನೀತ್ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ದಿನಾಂಕ 28ರಂದು ಭಾನುವಾರ ಸಂಜೆ 6ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.
ಇದರ ಕುರಿತು ಸಿಂಪೋನಿ ಸ್ವರ ಪ್ರತಿಷ್ಠಾನದ ಅಧ್ಯಕ್ಷ ಸಿಂಪೋನಿ ಶಿವು, ಸೌಂಡ್ ಆಫ್ ಮ್ಯೂಜಿಕ್ ಮುಖ್ಯಸ್ಥ ಕೆ.ಗುರುರಾಜ್, ಚಲನಚಿತ್ರ ರಂಗದ ಸಮನ್ವಯಕಾರ ಎಸ್.ಕೆ.ಆನಂತ್, ಪ್ರಧಾನ ಕಾರ್ಯದರ್ಶಿ ಶ್ರೀಲತಾ ಮಾಹಿತಿ ನೀಡಿದರು.
ಇದೇ ವೇಳೆ ಮಾತನಾಡಿದ ಸಿಂಪೋನಿ ಶಿವು, ಕನ್ನಡ ನಾಡಿಗೆ ಎರಡು ಅಮೂಲ್ಯ ವಜ್ರಗಳು ಮೇರುನಟ ಡಾ||ರಾಜ್ ಕುಮಾರ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಚಲನಚಿತ್ರ ಅಭಿನಯದಂತೆ ನೀಜ ಜೀವನದಲ್ಲಿಯೊ ಸಹ ಆದರ್ಶ ಪುರುಷರಂತೆ ಬದುಕಿ ಇಡಿ ಸಮಾಜಕ್ಕೆ ಮಾದರಿಯಾದರು. ಡಾ.ರಾಜ್ ಮತ್ತು ಪುನೀತ್ ರವರ ಸವಿನೆನಪಿನಲ್ಲಿ ಸಿಂಪೋನಿ ಸ್ವರ ಪ್ರತಿಷ್ಠಾನ ರವೀಂದ್ರ ಕಲಾಕ್ಷೇತ್ರದಲ್ಲಿ 28ರಂದು ಸಂಜೆ 6ಗಂಟೆಗೆ ರಾಜ ಪುನೀತೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ರಾಜ ಪುನೀತೋತ್ಸವ ಕಾರ್ಯಕ್ರಮ ಉದ್ಘಾಟನೆಯನ್ನು ಚಲನಚಿತ್ರ ನಿರ್ಮಾಪಕರಾದ ಎಸ್.ಎ.ಚಿನ್ನೇಗೌಡ, ಮಾಜಿ ವಿಧಾನಪರಿಷತ್ ಸದಸ್ಯರಾದ ಡಿ.ಎಂ.ಸಾಲಿ, ಯುವ ನಾಯಕ ನಟ ಯುವ ರಾಜ್ ಕುಮಾರ್, ಐಪಿಎಸ್ ಪೊಲೀಸ್ ಅಧಿಕಾರಿ ಡಾ.ಬಿ.ಆರ್.ರವಿಕಾಂತೇಗೌಡ, ಲಹರಿ ಆಡಿಯೊ ಸಂಸ್ಥೆಯ ಲಹರಿ ವೇಲು, ಅಖಿಲ ಕರ್ನಾಟಕ ಡಾ.ರಾಜ್ ಕುಮಾರ್ ಅಭಿಮಾನಿಗಳ ಒಕ್ಕೂಟದ ಅಧ್ಯಕ್ಷ ಎನ್.ಆರ್.ರಮೇಶ್, ಸೌಂಡ್ ಆಫ್ ಮ್ಯೂಸಿಕ್ ಮಾಲೀಕ ಗುರುರಾಜ್, ಕರ್ನಾಟಕ ವಾದ್ಯಗೋಷ್ಠಿ ಕಲಾವಿದರ ಮಹಾಸಂಘದ ಅಧ್ಯಕ್ಷ ಶಂಕರ್ ಉದ್ಘಾಟನೆ ಮತ್ತು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ ಎಂದರು.
ಸಿಂಪೋನಿ ಸಂಸ್ಥೆಯ 100 ಗಾಯಕ, ಗಾಯಕಿಯರಿಂದ ಬೊಂಬೆ ಹೇಳುತೈತೆ ಸಮೂಹ ಗೀತೆ ಗಾಯನ
ಡಾ.ರಾಜ್ ಮತ್ತು ಪುನೀತ್ ರಾಜ್ ಕುಮಾರ್ ರವರ ಚಿತ್ರಗಳ ಭೀತಿ ಪತ್ರ ಪ್ರದರ್ಶನ ಮತ್ತು ವಿಶೇಷ ನೃತ್ಯಗಳು, ತುಣುಕು ಚಿತ್ರಗಳು, ಪ್ರತಿರೂಪಕಗಳು ಪ್ರದರ್ಶನ ಏರ್ಪಡಿಸಲಾಗಿದೆ ಎಂದರು
ಸಿಂಪೋನಿ ರಾಜ್ ರತ್ನ ಪ್ರಶಸ್ತಿಯನ್ನು ಡಿ.ಎಂ.ಸಾಲಿ, ಕೆ.ಗುರುರಾಜ್, ರಾಜಣ್ಣ ಕೊರವಿ, ಡಾ.ಪ್ರಶಾಂತ್, ವೇಣುಗೋಪಾಲ್ ನಾಯಕ್, ವಿ.ಪಿ.ಲಡ್ಡಾ, ಶ್ರೀರಾಜ್, ಹಾಲುಸ್ವಾಮಿ, ಸತ್ಯಣ್ಣ, ವೈ.ಬಿ.ಹೆಚ್.ಜಯದೇವ್ ರವರಿಗೆ ಪ್ರದಾನ ಮಾಡಲಾಗುವುದು ಎಂದರು.
ಸಿಂಪೋನಿ ಪುನೀತ್ ರತ್ನ ಪ್ರಶಸ್ತಿಯನ್ನು ಮಹೇಂದ್ರ ಮುನ್ನೋತ್, ಡಾ.ಗೋಪಾಲಕೃಷ್ಣ, ಪಿ.ಉಷಾಕಿರಣ್, ಸುಮಿತ್ರ ರಾಮ್ ದಾಸ್, ಸುರೇಶ್ ಗೌಡ, ಡಾ.ರಾಜೇಂದ್ರ, ಡಾ.ದೇವೇಂದ್ರ ರೆಡ್ಡಿ, ಕೆ.ಎನ್.ವಾಸುದೇವ ಅಡಿಗ, ಡಾ.ಪ್ರವೀಣ್ ಕುಮಾರ್, ಫ್ಲವರ್ ಧೃವರವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಹಾಸ್ಯನಟ ಬೆಂಗಳೂರು ನಾಗೇಶ್, ನಟಿ ಶೈಲಶ್ರೀರವರಿಗೆ ವಿಶೇಷ ಸನ್ಮಾನ ಮಾಡಲಾಗುವುದು. ಡಾ.ರಾಜ್ ನಮನ ಮತ್ತು ಪುನೀತ್ ನಮನ ಸಂಗೀತ ರಸ ಸಂಜೆಯಲ್ಲಿ ನಾಡಿನ ಪ್ರಖ್ಯಾತ ಗಾಯಕ, ಗಾಯಕಿಯರಿಂದ ಗೀತೆ ಗಾಯನ ಏರ್ಪಡಿಸಲಾಗಿದೆ ಎಂದರು.




