ಸಾಧಕ/ ಸಾಧಕಿಯರಿಗೆ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಪ್ರಶಸ್ತಿ ಪ್ರದಾನ
ಬೆಂಗಳೂರು: ಬಿಬಿಎಂಪಿ ನೌಕರರ ಕನ್ನಡ ಸಂಘದ ವತಿಯಿಂದ ಪಾಲಿಕೆ ಕೇಂದ್ರ ಕಛೇರಿಯ ಆವರಣದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಅಚರಣೆ ಮತ್ತು ಸಾಧಕ/ ಸಾಧಕಿಯರಿಗೆ ಡಾ.ಪುನೀತ್ ರಾಜ್ ಕುಮಾರ್ ಪ್ರಶಸ್ತಿ ಪ್ರಧಾನ ಸಮಾರಂಭ ಆಯೋಜಿಸಲಾಗಿತ್ತು.
- ವ್ಯಕ್ತಿಯನ್ನು ಗುರುತಿಸಿದರೆ ಸಮಾಜವನ್ನೇ ಗುರುತಿಸಿದಂತೆ: ಡಾ. ಎ ಆರ್ ಗೋವಿಂದಸ್ವಾಮಿ
- ಸಂವಿಧಾನ ಪೀಠಿಕೆ ದೇಶದ ಆತ್ಮವಿದ್ದಂತೆ: ಆದಿತ್ಯ ಚಟರ್ಜಿ
- ಕುಸಿಯುತ್ತಿರುವ ಪ್ರಜಾಪ್ರಭುತ್ವದ ವ್ಯಾಪ್ತಿ ಮತ್ತು ದೀರ್ಘಾವಧಿ ಪ್ರಧಾನಿಯ ಸಾಧನೆಗಳು
- ಜೀರಾ ರೈಸ್, ಘೀ ರೈಸ್ ಮತ್ತು ಲೆಮನ್ ರೈಸ್ ಮಾಡುವ ಸರಳ ವಿಧಾನ
- ಸಮಾಧಾನ್ ಸಮಾರೋಹ್ ಯಶಸ್ವಿಗೊಳಿಸಿ: ಡಾ.ಶಾಲಿನಿ ರಜನೀಶ್
ಉದ್ಘಾಟನೆ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಆಡಳಿತಗಾರ ಎಸ್.ಆರ್ ಉಮಾಶಂಕರ್, ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್, ವಿಶೇಷ ಆಯುಕ್ತ ಡಾ. ಕೆ. ಹರೀಶ್ ಕುಮಾರ್, ಅವಿನಾಶ್ ಮೆನನ್ ರಾಜೇಂದ್ರನ್, ಉಪ ಆಯುಕ್ತ ಮಂಜುನಾಥ ಸ್ವಾಮಿ, ಪ್ರಧಾನ ಅಭಿಯಂತರ ಪ್ರಹ್ಲಾದ್, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್, ಬಿಬಿಎಂಪಿ ನೌಕರರ ಕನ್ನಡ ಸಂಘದ ಅಧ್ಯಕ್ಷ ಸಾಯಿಶಂಕರ್ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.
ಎಸ್.ಆರ್.ಉಮಾಶಂಕರ್ ಮಾತನಾಡಿ, ಕರ್ನಾಟಕ ಸಂಸ್ಕೃತಿಯನ್ನು ಹಲವಾರು ವಿದೇಶಿಗರು ಹೊಗಳಿದ್ದಾರೆ. ಕುವೆಂಪು ಕನ್ನಡ ಸಾಹಿತ್ಯದ ಎಲ್ಲ ಪ್ರಕಾರದಲ್ಲಿ ಬರೆದರು. ಕರ್ನಾಟಕಕ್ಕೆ ಯಾರೇ ಬಂದರು ವಾಪಸ್ಸು ಹೋಗುವುದಿಲ್ಲ. ಅಂತಹ ಉತ್ತಮ ವಾತವರಣವಿದೆ, ವಿಶ್ವದಾದ್ಯಂತ ಬೆಂಗಳೂರು ಎಂದರೆ ಎಲ್ಲರು ಗುರುತಿಸುತ್ತಾರೆ ಎಂದರು.
ಬೆಂಗಳೂರು ಹೆಮ್ಮೆಯ ನಗರವಾಗಿ ಬೆಳಯುತ್ತಿದೆ, ಇದಕ್ಕೆ ಶ್ರಮಿಸುತ್ತಿರುವ ಬಿಬಿಎಂಪಿ ಅಧಿಕಾರಿ, ನೌಕರರ ಪರಿಶ್ರಮವಿದೆ. ಮಳೆ ನಿಂತ ನಂತರ ಗುಂಡಿ ಮುಚ್ಚುವ ಕಾರ್ಯ ಮಾಡಲಾಗುವುದು. ಬಿಬಿಎಂಪಿಯು ಕನ್ನಡ ಸಂಸ್ಕೃತಿ, ಭಾಷೆ ಉಳಿಸುವಲ್ಲಿ ಕೊಡುಗೆ ನೀಡಿದೆ. ನಾಮಫಲಕದಲ್ಲಿ ಕನ್ನಡ ಭಾಷೆ ಬಳಕೆ ಕಡ್ಡಾಯವಾಗಿ ಕಾನೂನು ಜಾರಿ ಮಾಡಲಾಗುವುದು, ಕನ್ನಡಭಿಮಾನಿಗಳು ಕಾನೂನು ಕೈಗೆತ್ತಿಕೊಳ್ಳ ಬೇಡಿ, ನಮಗೆ ಸಹಕಾರ ನೀಡಿ ಎಂದದರು.
ತುಷಾರ್ ಗಿರಿನಾಥ್ ಮಾತನಾಡಿ, ಬಿಬಿಎಂಪಿ ಅಧಿಕಾರಿ ಮತ್ತು ನೌಕರರು ಒಗ್ಗಾಟಗಿ ಬೆಂಗಳೂರು ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ. ಸಾವಿರಾರು ವರ್ಷಗಳಿಂದ ಎಲ್ಲರನ್ನು ಪ್ರೀತಿಸುವ ಗುಣ ಸಂಸ್ಕೃತಿ ಕನ್ನಡಿಗರು ಬೆಳೆಸಿಕೊಂಡಿದ್ದಾರೆ, ಕನ್ನಡ ನಾಡಿನ ಜನರ ನನಗೆ ಹೆಚ್ಚಿನ ಸಹಕಾರ ನೀಡಿದ್ದಾರೆ. ಬೆಂಗಳೂರಿನಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಿದೆ. ನಾಮಫಲಕದಲ್ಲಿ ಕನ್ನಡ ಭಾಷೆ ಶೇಕಡ 60ರಷ್ಟು ಇರಬೇಕು, ಇದನ್ನ ಸಮರ್ಪಕವಾಗಿ ಜಾರಿಗೆ ತರಲು ಜನರ ಸಹಕಾರ ನೀಡಬೇಕು. ಕನ್ನಡ ಭಾಷೆ ನಿರಂತರ ಅಭ್ಯಾಸ ಮಾಡಬೇಕು ಇದರಿಂದ ಭಾಷೆ ಬರೆಯಲು ಸುಲಭವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಎ.ಅಮೃತ್ ರಾಜ್ ಮಾತನಾಡಿ, ಬಿಬಿಎಂಪಿ ನೌಕರರ ಕನ್ನಡ ಸಂಘ ಪ್ರತಿವರ್ಷ ಅರ್ಥಪೂರ್ಣವಾಗಿ ಅಚರಿಸಲಾಗುತ್ತಿದೆ. ಕಾಶಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಕರ್ನಾಟಕ ರಾಜ್ಯೋತ್ಸವ ಮತ್ತು ನೇಪಾಳದಲ್ಲಿ ಅಂತರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಈ ತಿಂಗಳು ನವಂಬರ್ 16ರಂದು ಉತ್ತರಖಂಡ್ ಹರಿದ್ವಾರದ ಗಂಗಾತೀರದಲ್ಲಿ ಕರ್ನಾಟಕ ರಾಜ್ಯೋತ್ಸವ ಮಾಡಲಾಗುತ್ತಿದೆ. ನಾಡು, ನುಡಿಗೆ ಉಳಿಸಿ, ಬೆಳಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಪುನೀತ್ ರಾಜ್ ಕುಮಾರ್ ಬಿಬಿಎಂಪಿ ಕೇಂದ್ರ ಕಛೇರಿಗೆ ಆಗಮಿಸಿ ಡಾ.ರಾಜ್ ಕುಮಾರ್ ರವರ ಪ್ರತಿಮೆ ಉದ್ಘಾಟನೆ ಮಾಡಿದ್ದರು, ಪುನೀತ್ ರಾಜ್ ಕುಮಾರ್ ರವರು ಬಿಬಿಎಂಪಿ ಅಧಿಕಾರಿ, ನೌಕರರ ಕನ್ನಡಭಿಮಾನದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದು ತಿಳಿಸಿದರು
ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಪ್ರಶಸ್ತಿ ಪುರಸ್ಕೃತರ ಪಟ್ಟಿ:
ಪತ್ರಕರ್ತ ಇಂದ್ರಜಿತ್ ಲಂಕೇಶ್, ಚಲನಚಿತ್ರ ರಂಗದ ಗಿರೀಜಾ ಲೋಕೇಶ್, ಅಭಿಜಿತ್, ಮಂಡ್ಯ ರಮೇಶ್, ಮಿಮಿಕ್ರಿಗೋಪಿ ಹಾಗೂ ಡಾ. ರಾಜಶೇಖರ ಮಠಪತಿ,ಡಾ. ಸತ್ಯಮಂಗಲ ಮಹದೇವ, ವ.ಚ. ಚನ್ನೇಗೌಡ, ನಾ. ಶ್ರೀಧರ್, ಆರ್.ಎ. ಪ್ರಸಾದ್, ಡಾ. ಜಿ. ಸುಕುಮರನ್, ಸಿ.ಎಂ.ಶಿವಕುಮಾರ್ ನಾಯ್ಕ್, ಪತ್ರಕರ್ತರುಗಳಾದ ಶಿವರಾಜ್ ಕುಮಾರ್, ದಿವ್ಯ ರಘುನಾಥ್, ಈರಣ್ಣ ಎನ್ ಶ್ರೀನಿವಾಸಲು ಜಿ.ಹೆಚ್.ಕನ್ನಡ, ಚಂದ್ರು.ರಘು, ಮುನಿರಾಜು, ಅವಿರಾಜ್, ವೆಂಕಟೇಶ್ ಎಲ್.ಗಂಗಾಧರ್, ಚಂದ್ರಕಾಂತ, ಶ್ರೀನಿವಾಸ್, ರವಿಚಂದ್ರು ಬಿ.ವಿ.ಮಂಜುನಾಥ್ ಮತ್ತು ಬಿಬಿಎಂಪಿ ಅಧಿಕಾರಿ, ನೌಕರರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.


