ಎಸ್‌ಡಿಪಿಐ ಗುಲ್ಬರ್ಗ ಜಿಲ್ಲಾ ಸಮಿತಿ ಸಭೆ
ಗುಲ್ಬರ್ಗ: ಸೋಷಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಗುಲ್ಬರ್ಗ ಜಿಲ್ಲೆ ಸಮಿತಿಯ ಸಭೆಯು ಇಂದು ಜಿಲ್ಲಾ ಅಧ್ಯಕ್ಷ ಮೊಹಮ್ಮದ್ ಮೊಹ್ಸಿನ್ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಅಫ್ಸರ್ ಕೊಡ್ಲಿಪೇಟೆ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಪ್ರಮುಖ ಮಾರ್ಗದರ್ಶನ ನೀಡಿದರು.
- ಎಲ್ಇಡಿ ಬೀದಿ ದೀಪ ಯೋಜನೆ ಅನುಷ್ಠಾನಗೊಂಡರೆ ಶೇ.61.01 ರಷ್ಟು ವಿದ್ಯುತ್ ಉಳಿತಾಯ: ಕೃಷ್ಣ ಬೈರೇಗೌಡ
- ಋಗ್ವೇದದ ಮಹತ್ವ ಮತ್ತು ಅಪೌರುಷೇಯ ತತ್ವದ ವಿಶ್ಲೇಷಣೆ
- ಸುರೇಶ್ ಕುಮಾರ್ ರಿಂದ ಕಾಂಗ್ರೆಸ್ ವಿರುದ್ದ ‘ಸಂವಿಧಾನಿಕ’ ಪೊಳ್ಳು ವಾದ !
- ಬುದ್ಧಿಜೀವಿ ನಟ ಎಂದು ಕರೆಯಲ್ಪಡುವ ಅನಂತನಾಗ್ ಅವರೊಂದಿಗಿನ ಒಂದು ಪ್ರಸಂಗ
- ಆರ್ಎಸ್ಎಸ್ ಮುಖ್ಯಸ್ಥರ ಪ್ರಕಾರ ಹಿಂದೂಗಳ ವಿಧಗಳು
ಸಭೆಯಲ್ಲಿ ಜಿಲ್ಲಾ ಸಂಘಟನೆಗೆ ಹೊಸ ಉತ್ಸಾಹ ತುಂಬುವಂತೆ, ಸದಸ್ಯತ್ವ ವಿಸ್ತರಣೆ, ವಿವಿಧ ಘಟಕಗಳ ಶಕ್ತಿಕೇಂದ್ರಿತ ಚಾಲನೆ, ಸಾರ್ವಜನಿಕ ಜಾಗೃತಿ ಅಭಿಯಾನಗಳು ಹಾಗೂ ರಾಜಕೀಯ ಚಟುವಟಿಕೆಗಳ ಬಗ್ಗೆ ವಿವರಣೆ, ಚರ್ಚೆ ನಡೆಯಿತು. ಸ್ಥಳೀಯ ಜನಸಾಮಾನ್ಯರ ಸಮಸ್ಯೆಗಳ ಪರಿಹಾರ ವಿಷಯಗಳು ಪ್ರಧಾನವಾಗಿ ಚರ್ಚೆಯಾದವು.
ಪಕ್ಷದ ಸಂಘಟನೆ ಬಲಗೊಳಿಸುವ ದೃಷ್ಟಿಕೋನದಿಂದ ಕಾರ್ಯಕರ್ತರಿಗೆ ಪ್ರೋತ್ಸಾಹ ನೀಡಿದ ಅಫ್ಸರ್ ಕೊಡ್ಲಿಪೇಟೆ ಮಾತನಾಡಿ, ಸಾರ್ವಜನಿಕ ಹಿತದೃಷ್ಟಿಯಿಂದ ಕಾರ್ಯ ನಿರ್ವಹಿಸುವ ಮೂಲಕ SDPIನ ರಾಜಕೀಯ ನೈತಿಕತೆಯು ಮತ್ತಷ್ಟು ಬಲಪಡಬೇಕು ಎಂಬ ಉದ್ದೇಶವನ್ನು ಹಂಚಿಕೊಂಡರು.
ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಮತ್ತು ಶಾಂತಿ ಈ ಮೂರೂ ಅಂಶಗಳ ನಿಷ್ಠಾವಂತ ಸೇವೆಯ ಕಡೆಗೆ ನಾವು ಇನ್ನಷ್ಟು ಗಂಭೀರರಾಗಬೇಕೆಂದು ಅವರು ಸಲಹೆ ನೀಡಿದರು.
ಈ ಸಭೆಯಲ್ಲಿ ಡಾ. ರಿಜ್ವಾನ್ ಮತ್ತು ಇಬ್ರಾಹಿಂ ಪಟೇಲ್ (ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು), ಶಕೀಲ್ ಪಟೇಲ್ (ಜಿಲ್ಲಾ ಕಾರ್ಯದರ್ಶಿ), ಗೌಸ್ ಕಾರಿಗಾರ್ (ಜಿಲ್ಲಾ ಖಜಾಂಚಿ) ಸೇರಿದಂತೆ ಜಿಲ್ಲಾ ಸಮಿತಿಯ ಹಲವಾರು ಪ್ರಮುಖ ಸದಸ್ಯರು ಉಪಸ್ಥಿತರಿದ್ದು, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು ಹಾಗೂ ಸಂಘಟನೆಯ ಮುಂದಿನ ಹೆಜ್ಜೆಗಳಿಗೆ ಬೆಂಬಲ ವ್ಯಕ್ತಪಡಿಸಿದರು.




