ಕಾರ್ಯಕರ್ತರು ಸಮರ್ಪಣೆ ಹಾಗೂ ಜನತೆಯೊಂದಿಗೆ ನೇರ ಸಂಪರ್ಕ ಗಟ್ಟಿಗೊಳಿಸುವ ಅಗತ್ಯವಿದೆ: ಅಪ್ಸರ್ ಕೊಡ್ಲಿಪೇಟೆ

1 year ago

ಎಸ್‌ಡಿಪಿಐ ಬೀದರ್ ಜಿಲ್ಲಾ ಸಮಿತಿ ಸಭೆ

ಬೀದರ್: ಸೋಷಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ ಬೀದರ್ ಜಿಲ್ಲಾ ಸಮಿತಿ ಸಭೆಯು ಇಂದು ನಗರದ ಹುಮನಾಬಾದ್‌ನಲ್ಲಿ ಜಿಲ್ಲಾ ಅಧ್ಯಕ್ಷ ಶೇಖ್ ಮಕ್ಸೂದ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಅಫ್ಸರ್ ಕೊಡ್ಲಿಪೇಟೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಸಭೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪಕ್ಷದ ಸಂಘಟನೆ, ಕಾರ್ಯವೈಖರಿ, ಮುಂದಿನ ಸಮಯದಲ್ಲಿ ನಡೆಯಲಿರುವ ಸಾರ್ವಜನಿಕ ಹಾಗೂ ರಾಜಕೀಯ ಚಟುವಟಿಕೆಗಳ ಕುರಿತು ವ್ಯಾಪಕ ಚರ್ಚೆ ನಡೆಯಿತು. ವಿವಿಧ ಘಟಕಗಳ ಕ್ರಿಯಾಶೀಲತೆ, ಸದಸ್ಯತ್ವ ವಿಸ್ತರಣೆ, ಮುಂಬರುವ ಮಹತ್ವದ ಕಾರ್ಯಕ್ರಮಗಳ ರೂಪುರೇಷೆ ಹಾಗೂ ಸ್ಥಳೀಯ ಸಮಸ್ಯೆಗಳ ಕುರಿತು  ಚರ್ಚೆ ನಡೆಯಿತು.

ಇದೇ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರಿಗೆ ಸಮರ್ಪಿತ ಕಾರ್ಯಪದ್ಧತಿ ಹಾಗೂ ಜನತೆಯೊಂದಿಗೆ ನೇರ ಸಂಪರ್ಕವನ್ನು ಗಟ್ಟಿಗೊಳಿಸುವ ಅಗತ್ಯತೆ ಕುರಿತು ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಅವರು ಮಾರ್ಗದರ್ಶನ ನೀಡಿದರು. ಜನತೆಯ ಹಕ್ಕುಗಳಿಗಾಗಿ ಹೋರಾಡುವಲ್ಲಿ ಎಚ್ಚರಿಕೆಯಿಂದ ಮತ್ತು ಸಂಯಮದಿಂದ ಕೆಲಸ ಮಾಡುವಂತೆ ಕರೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇರ್ಫಾನ್ ಉಲ್ಲಾ, ಜಿಲ್ಲಾ ಕೋಶಾಧಿಕಾರಿ ಅಯ್ಯುಬ್, ಜಿಲ್ಲಾ ಕಾರ್ಯದರ್ಶಿ ತೌಹೀದ್ ಹಾಗೂ ಜಿಲ್ಲಾ ಸಮಿತಿಯ ಅನೇಕ ಪ್ರಮುಖ ಸದಸ್ಯರು ಉಪಸ್ಥಿತರಿದ್ದು, ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

Leave a Reply