ಪ್ರಜಾತಂತ್ರದ
ಹಿತ್ತಲಲ್ಲಿ..
ಮಾನವತೆಯ
ತಂಪುಯುಗದಲ್ಲಿ
ಸತ್ತಂತೆ ನಟಿಸುವ
ಹಿಟ್ಲರನ ಮೊಟ್ಟೆಗಳು…
ಬಂಡವಾಳಕ್ಕೆ
ಬಿಸಿಯೇರಿದಂತೆ..
ಸುಡುಹಸಿವಿನ
ಬೇಗೆಯಲ್ಲಿ
ಕಾವುಪಡೆದು
ಜೀವತಳೆಯುತ್ತವೆ
ಮೊಟ್ಟೆಯೊಡೆದು
ಹೊರಬಂದು
ಹಿಟ್ಲರನ ಚಿಟ್ಟೆಗಳು
ಭೂಮ್ಯಾಕಾಶವ
ವ್ಯಾಪಿಸುತ್ತವೆ
ಅಂಧಕಾರ
ಸೃಷ್ಟಿಸುತ್ತವೆ…
ಆದರೆ…
ಹಿಟ್ಲರನ ರೆಕ್ಕೆಗಳ
ಸುಡವಷ್ಟು
ಸೂರ್ಯನ ಬೆಳಕು
ಬಿಸಿಯಿಲ್ಲವೇಕೆ?
ಉರಿವ ಬಂಡವಾಳವ
ಮಣಿಸಿ
ಜಗವ ಪೊರೆಯುವಷ್ಟು..
ತ್ರಾಣವಿಲ್ಲವೇಕೆ
ಪ್ರಜಾತಂತ್ರಕ್ಕೆ ?
- ಶಿವಸುಂದರ್, ಹಿರಿಯ ಕವಿಗಳು



