ಮರೆಯಬಾರದು, ಮರೆತು ಮೋಸಹೋಗಬಾರದು

2 years ago

ಮರೆಯಬಾರದು, ಮರೆತು ಮೋಸಹೋಗಬಾರದು

ಮರೆಯುವುದಿಲ್ಲ
ದ್ರೋಹವೆ,
ಯಾವೊಂದನ್ನೂ ಮರೆಯುವುದಿಲ್ಲ ..

ವರ್ಷಗಳ ಕೆಳಗೆ
ಫೇಕುರಾಜನ ಫೋಸು ತೀಟೆಗೆ ..

ಗಂಗೆತುಂಗೆಗಳಲ್ಲಿ
ಜೀವಜಲದ ಬದಲು
ಹೆಣಗಳು ಹರಿದದ್ದು
ಮರೆಯಬಹುದೇ?

ಚಿತೆಯ ಬೆಂಕಿಯಲ್ಲಿ 
ಕೊಲೆಗಾರ
ಹೊಸ ದಿರಿಸು
ಹುಡುಕುತ್ತಿದ್ದದ್ದು
ಮರೆಯಬಹುದೇ?

ಸ್ಮಶಾನದಲ್ಲಿರಲಿ
ದಫ್ತರಿನಲ್ಲೂ
ಜಾಗ  ಕೊಡದ
ನಾಯಕನಿಗೆ..

ಜೀವರಕ್ಷಕ ಸನ್ಮಾನಕ್ಕೆ
ವಶೀಲಿ ನಡೆಸುತ್ತಿದ್ದದ್ದು
ಮರೆಯಬಹುದೇ?

ವಿಕಾಸದ ಶ್ವಾಸದಲ್ಲಿ
ಜೀವವಾಯು ಬರಿದಾದದ್ದು
ಮರೆಯಬಹುದೇ?

ಮರೆಯಬಾರದು…
ಯಾವೊಂದನ್ನೂ ಮರೆಯಬಾರದು…

ಮರೆತರೇ…

ಕೊಲೆಗಳು ಸಹಜ ಸಾವೆಂದೂ..

ವಿನಾಶಗಳು ವಿಕಾಸವೆಂದೂ…

ಜೀವಭಯವು ವಿಶ್ವಾಸವೆಂದೂ…

ಇತಿಹಾಸದ ಪಠ್ಯದಲ್ಲಿ

ಶಾಶ್ವತವಾಗಿ ದಾಖಲಾಗುತ್ತವೆ..

ಮರೆಯಬಾರದು ಯಾವೊಂದನ್ನು….

ಮರೆತು
ಮತ್ತೆ ಮತ್ತೆ
ಶಿಕಾರಿಯಾಗಬಾರದು

ಈ ಬಾರಿ ಬೇಟೆಗಾರನು ಫಕೀರನ
ವೇಷ ಧರಿಸಿ
ಭಿಕ್ಷೆ ಕೇಳಲು ಬಂದಾಗ

ಮತ್ತೊಮ್ಮೆ ಮೋಸಹೋಗಬಾರದು..

– ಶಿವಸುಂದರ್

Leave a Reply