ಮಂಗಳೂರು: ಅಸಹಜ ಸಾವು ಆರೋಪ ಪ್ರಕರಣದ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಮಾಡಲಾದ ಅಪಪ್ರಚಾರದ ವಿರುದ್ಧ ರಾಜ್ಯದ ಹೆಣ್ಣು ಮಕ್ಕಳು ಸಿಡಿದೆದ್ದಿದ್ದಾರೆ. ಇದನ್ನು ಖಂಡಿಸಿ ದೊಡ್ಡ ಮಟ್ಟದ ಹೋರಾಟಕ್ಕೆ ಮುಂದಾಗಿದ್ದಾರೆ. ಆದರೆ ನಾವೇ ಅವರಿಗೆ ಯಾವುದೇ ಹೋರಾಟ ಮಾಡದಂತೆ ಮನವಿ ಮಾಡಿದ್ದೇವೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ರಾಜ್ಯದ ವಿವಿಧ ಭಾಗಗಳ ಜೈನ ಮುನಿಗಳ ನೇತೃತ್ವದಲ್ಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಶ್ರೀ ಕ್ಷೇತ್ರಕ್ಕೆ ಬಹಳ ವಿಶೇಷವಾದ ಕಳೆ ಬಂದಿದೆ. ಇಷ್ಟೊಂದು ಆಶಯಧಾರಿಗಳು, ಆಶೀರ್ವಚನ ನೀಡುತ್ತಿರೋದು ತುಂಬಾ ದೊಡ್ಡದು. ಇಷ್ಟೊಂದು ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಬಂದಿರೋದು ಸಂತಸ ತಂದಿದೆ. ಇಂದು ಮೂಡಬಿದ್ರೆ ಭಟ್ಟಾರಕರ ಪಟ್ಟಾಭೀಷೇಕದ ದಿನ, ಅವರು ಕೂಡ ನಿಮ್ಮೊಂದಿಗಿದ್ದೇವೆ ಎಂಬ ಸಂದೇಶ ಕೊಟ್ಟಿದ್ದಾರೆ ಇದಕ್ಕಿಂತ ದೊಡ್ಡ ಮಾತು ನನಗೆ ಬೇಡ ಎಂದರು.
ಧರ್ಮಸ್ಥಳದ ಬೆಳವಣಿಗೆಯಿಂದ ಪುರುಷರಿಗಿಂತ, ಮಹಿಳೆಯರೇ ಹೆಚ್ಚಾಗಿ ಕಣ್ಣೀರಿಟ್ಟಿದ್ದಾರೆ, ವೇದನೆ ಪಡ್ತಿದ್ದಾರೆ. ಕೆಲ ಹೆಣ್ಣುಮಕ್ಕಳು ಯಾವುದೇ ರೀತಿಯ ಹೋರಾಟಕ್ಕೆ, ಪ್ರತಿಭಟನೆಗೂ ತಯಾರಿದ್ದಾರೆ. ಆದ್ರೆ ಅಂತಹ ಹೋರಾಟ ಅಗತ್ಯವಿಲ್ಲ. ಎಲ್ಲವೂ ಮಂಜುನಾಥ ಸ್ವಾಮಿಗೆ ಬಿಟ್ಟಿದ್ದೇವೆ ಎಂದರು.
ಆರೋಪ ಪ್ರಕರಣಗಳ ಬಗ್ಗೆ ಎಸ್ಐಟಿ ತನಿಖೆ ನಡೆಸುತ್ತಿದೆ. ಈ ಸಮಯದಲ್ಲಿ ಯಾವುದೇ ರೀತಿಯ ಮಾತನಾಡಬಾರದು ಎಂಬ ಆದೇಶವಿದೆ. ಹೀಗಾಗಿ ತಾವು ಆರೋಪಗಳ ಕುರಿತಂತೆ ಏನನ್ನೂ ಹೇಳುವುದಿಲ್ಲ ಎಂದರು.
ಈ ಬೆಳವಣಿಗೆ ಆದಾಗಿನಿಂದ ಪುರುಷರಿಗಿಂತ ಮಹಿಳೆಯರು ಹೆಚ್ಚು ಕಣ್ಣೀರು ಹಾಕಿದ್ದಾರೆ, ವೇದನೆ ಪಡುತ್ತಿದ್ದಾರೆ. ನಮಗೆ, ಕುಟುಂಬಕ್ಕೆ ನೆಮ್ಮದಿಯಿಲ್ಲ. ನೀವೇ ಏನಾದರೂ ಮಾಡಿ ಎಂದು ಹೇಳಿಕೊಂಡಿದ್ದಾರೆ. ಕೆಲ ಹೆಣ್ಣುಮಕ್ಕಳು ಯಾವುದೇ ರೀತಿಯ, ಹೋರಾಟಕ್ಕೆ, ಪ್ರತಿಭಟನೆಗೆ ತಯಾರಿದ್ದಾರೆ. ಆದರೆ ಅಂತಹ ಹೋರಾಟ ಅಗತ್ಯವಿಲ್ಲ ಎಂದು ತಿಳಿಸಿರುವುದಾಗಿ ಹೇಳಿದರು.
ನಾವು ಸತ್ಯ ಬಿಟ್ಟು ಹಿಂದೆ ಹೋಗಿಲ್ಲ, ಮುಂದೆಯೂ ಹೋಗಲ್ಲ. ಆದ್ದರಿಂದ ಭಕ್ತರು ತಾಳ್ಮೆಯಿಂದಿರಬೇಕು, ಶಾಂತಿ ಕಾಪಾಡಬೇಕು. ನಮ್ಮ ಎಲ್ಲ ಪ್ರಯತ್ನಗಳಿಗೆ ಮಂಜುನಾಥ ಸ್ವಾಮಿಯ ಆಶೀರ್ವಾದ ಇದ್ದೇ ಇದೆ. ಹೀಗಾಗಿ ಎಲ್ಲರೂ ತಾಳ್ಮೆಯಿಂದ ಇರಬೇಕು ಎಂದರು.
ಸತ್ಯಕ್ಕೆ ಎರಡು ಮುಖ ಇಲ್ಲ, ಒಂದೇ ಮುಖ. ವ್ಯಕ್ತಿ ಯಾವುದೇ ಧರ್ಮದವರಾಗಲಿ, ಆ ಧರ್ಮಕ್ಕೆ ಶರಣಾಗಬೇಕು. ಇಲ್ಲದಿದ್ದರೆ ಅವರು ಅನುಯಾಯಿಗಳೇ ಅಲ್ಲ. ಇಷ್ಟೊಂದು ಜನ ಶ್ರೀಗಳು ನಮಗೆ ಧೈರ್ಯ ಕೊಟ್ಟಿದ್ದಾರೆ. ಎಲ್ಲರ ಮೇಲೂ ಮಂಜುನಾಥನ ಆಶೀರ್ವಾದ ಇರಲಿ. ಜನಿವಾರ ಜಾತಿ ವೇಷಕ್ಕಲ್ಲ, ಮೂರು ಧರ್ಮಗಳ ಆಚರಿಸೋದಕ್ಕಾಗಿ ಜನಿವಾರ ಧಾರಣೆ ಮಾಡ್ತೀವಿ. ಅದೇ ರೀತಿ ದಶಲಕ್ಷಣ ಇರೋದು ಪೂಜೆಗಲ್ಲ ಪ್ರಾರ್ಥನೆ ಮಾಡೋಕೆ ಎಂದರು.




