ಸೌಜನ್ಯ ಕೇಸ್‌ ತನಿಖೆ ಮಾಡುವುದಕ್ಕೆ ನಮ್ಮ ಹೋರಾಟವಿಲ್ಲ: ಆರ್ ಅಶೋಕ್

1 year ago

ಹಿಂದೂ ವಿರೋಧಿ ಸರ್ಕಾರಕ್ಕೆ ಪಾಠ ಕಲಿಸಲು ಧರ್ಮಸ್ಥಳ ಚಲೋ: ವಿಜಯೇಂದ್ರ

ವೀರೇಂದ್ರ ಹೆಗ್ಗಡೆ ಬೆಂಬಲಿಸಿ ಬಿಜೆಪಿ ಧರ್ಮ ಯಾತ್ರೆ

ಬೆಂಗಳೂರು: ಅಸಹಜ ಸಾವುಗಳ ಆರೋಪದ ಪ್ರಕರಣದ ಹೆಸರಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯಕ್ಕೆ ಧಕ್ಕೆ ತರುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿರುವ ಬಿಜೆಪಿ ಈ ಬಗ್ಗೆ ರಾಷ್ಟ್ರೀಯ ತನಿಖಾ ದಳ(ಎನ್ ಐಎ)ದ ತನಿಖೆ ನಡೆಸಲು ಆಗ್ರಹಿಸಿದೆ.

ಧರ್ಮಸ್ಥಳದೊಂದಿಗೆ ನಾವಿದ್ದೇವೆ ಎಂದು ಬೃಹತ್ ಧರ್ಮ ಯಾತ್ರೆ ನಡೆಸಿದ ಬಿಜೆಪಿ ನಾಯಕರು ರಾಜ್ಯ ಸರ್ಕಾರ ಮತ್ತು ತಲೆ ಬುರುಡೆ ಖ್ಯಾತಿಯ ಹೋರಾಟಗಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, ಧರ್ಮಸ್ಥಳದಲ್ಲಿ ಸಾವಿರಾರು ಶವ ಹೂಳಲಾಗಿದೆ ಎಂದು ದೂರು ಕೊಟ್ಟ ನಂತರ ಎಸ್‌ಐಟಿ ರಚನೆ ಮಾಡಿದ್ರಿ. ಇದನ್ನು ನಾವು ಬೆಂಬಲಿಸಿದ್ದೆವು. ಆದರೆ, ತನಿಖಾ ತಂಡ ಪ್ರಕರಣದ ಹಿಂದಿರುವ ಸಣ್ಣ ಮೀನುಗಳನ್ನು ಹಿಡಿಯುತ್ತಿದೆ. ಆದರೆ, ತಿಮಿಂಗಿಲಕ್ಕಾಗಿ ಬಲೆ ಬೀಸಬೇಕು ಎಂದರು.

ಕಾಂಗ್ರೆಸ್‌ ಸರ್ಕಾರ ಧರ್ಮದ ರಾಜಕಾರಣ ಮಾಡುತ್ತಿದೆ. ಸೌಜನ್ಯ ಕೇಸ್‌ ತನಿಖೆ ಮಾಡುವುದಕ್ಕೆ ನಮ್ಮ ಹೋರಾಟವಿಲ್ಲ. ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡುತ್ತಿರುವುದರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ. ಮಂಜುನಾಥನ ಕ್ಷೇತ್ರಕ್ಕೆ ಬರೋಕೆ ಸಿಎಂ, ಡಿಸಿಎಂಗೆ ಮಾನಮಾರ್ಯಾದೆ ಇದ್ಯಾ? ವೀರೇಂದ್ರ ಹೆಗಡೆಯವರ ಕುಟುಂಬ ಚಿತ್ರಹಿಂಸೆಪಟ್ಟಿದೆ. ಅವರ ಶಾಪ ನಿಮ್ಮನ್ನು ತಟ್ಟದೆ ಬಿಡಲ್ಲ ಎಂದರು.

ಚಂದಮಾಮ ಬೇತಾಳನ ಧರ್ಮಸ್ಥಳಕ್ಕೆ ಹಿಡ್ಕೊಂಡು ಬಂದಿದ್ದಾರೆ. ಬುರುಡೆ ಗ್ಯಾಂಗ್‌ ಸಿನಿಮಾ ಮುಂದೆ ಆರ್‌ಆರ್‌ ಕೆಜಿಎಫ್‌ ಏನೂ ಇಲ್ಲ. ಡೈರೆಕ್ಟರ್‌ ಯಾರೋ ಇರಬಹುದು. ಇದಕ್ಕೆ ಪ್ರೊಡ್ಯೂಸರ್‌ ಮಾತ್ರ ಸರ್ಕಾರ. ಧರ್ಮಸ್ಥಳ ಆಯ್ತು ಈಗ ಚಾಮುಂಡಿ ಬೆಟ್ಟಕ್ಕೆ ಬಂದಿದ್ದೀರಾ. ದಸರಾ ಎಲ್ಲರದ್ದೂ ಅಂತೀರಾ. ಧರ್ಮಸ್ಥಳಕ್ಕೂ ಕರ್ಕೊಂಡು ಬನ್ನಿ ಬಾನು ಮುಷ್ತಾಕ್‌ರನ್ನ ಎಂದರು.

Leave a Reply