1905 ಮಾರ್ಚ್ 17ರಂದು ಮೇಲುಕೋಟೆಯಲ್ಲಿ ಪು.ತಿ.ನ.ರವರು ಜನಿಸಿದರು. ಇವರ ತಂದೆ ತಿರುನಾರಾಯಣಚಾರ್ಯ, ತಾಯಿ ಶ್ರೀರಂಗಮ್ಮ. ಸಂಸ್ಕೃತ ವಿದ್ವತ್ತು ಮತ್ತು ಸಂಗೀತ ಪ್ರೇಮ ಇದ್ದಂತಹ ಮನೆತನ. 1926ರಲ್ಲಿ ಇವರು ಇನ್ಸ್ಪೆಕ್ಟರ್ ಆಫ್ ಚೀಫ್ ಕಮಾಂಡರ್ ಕಚೇರಿಯಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಹಲವಾರು ವರ್ಷಗಳ ಕಾಲ ಇಲ್ಲಿ ಉದ್ಯೋಗಸ್ಥರಾಗಿ ದುಡಿದಿದ್ದಾರೆ. 1952ರಿಂದ 1961ರವರೆಗೆ ಮೈಸೂರು ಶಾಸನಸಭೆಯಲ್ಲಿ ಸಂಪಾದಕರಾಗಿ ಕೆಲಸವನ್ನು ಮಾಡಿದರು. 1963 ರಿಂದ 66 ರವರೆಗೆ ಕನ್ನಡ ವಿಶ್ವಕೋಶ ಕಚೇರಿಯಲ್ಲಿಯೂ, 1966 ರಿಂದ 1971ರವರೆಗೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಕನ್ನಡ ನಿಘಂಟು ಕಚೇರಿಯಲ್ಲಿ ಕೆಲಸವನ್ನು ಮಾಡಿದರು.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ನವೋದಯ ಕವಿಗಳಲ್ಲಿ ಇವರು ಪ್ರಮುಖರು. ಸಂಗೀತವನ್ನು ಚೆನ್ನಾಗಿ ಬಲ್ಲ ಇವರ ಕವಿತೆಗಳು ಗೇಯ ಗುಣವನ್ನು ಚೆನ್ನಾಗಿ ಮೈಗೂಡಿಸಿಕೊಂಡಿದೆ. ಇವರು ಹಲವಾರು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ ಇವುಗಳಲ್ಲಿ. ಹಣತೆ, ರಸ ಸರಸ್ವತಿ, ಹಳೆಯ ಬೇರು ಹೊಸ ಚಿಗುರು, ಪ್ರಮುಖವಾದದ್ದು. ದೇಶಭಕ್ತಿ ರಾಷ್ಟ್ರೀಯ ವಿಚಾರಗಳುಳ್ಳ ಕವನಗಳನ್ನು ಇವರು ಬರೆದಿದ್ದಾರೆ. ಕನ್ನಡ ನಾಡು ನುಡಿಯ ಬಗ್ಗೆ ಅಪಾರವಾದ ಪ್ರೀತಿ ಇದ್ದ ಇವರು ಇವುಗಳ ವಿಚಾರದಲ್ಲೂ ಹಲವಾರು ಕವನಗಳನ್ನು ಬರೆದಿದ್ದಾರೆ. ಇವರ ಗೀತ ನಾಟಕ ಗೋಕುಲ ನಿರ್ಗಮನ ಅಪಾರ ಜನಪ್ರಿಯತೆ ತಂದುಕೊಟ್ಟಿದೆ. ಇವರ ಶ್ರೀಹರಿ ಚರಿತೆ ಎಂಬ ಖಂಡ ಕಾವ್ಯವನ್ನು ರಚಿಸಿದ್ದಾರೆ. ಇವರು ಒಳ್ಳೆಯ ಅನುವಾದಕರು ಸಹ ಆಗಿದ್ದರು. ತಮಿಳು ಮತ್ತು ಬೇರೆ ಭಾಷೆಯ ಹಾಗೂ ಇಂಗ್ಲಿಷ್ ಕವಿಗಳ ಕೆಲವು ಪದ್ಯಗಳನ್ನು ಇವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ಇವರು ಕವಿಯಾದರು ಗದ್ಯ ಪ್ರಕಾರದಲ್ಲೂ ಸಾಕಷ್ಟು ಸಾಧನೆಯನ್ನು ಮಾಡಿದ್ದಾರೆ. ಸಣ್ಣ ಕಥೆ, ಪ್ರಬಂಧ ಹಾಗೂ ಕಾವ್ಯ ಮೀಮಾಂಸೆ ಕುರಿತ ಲೇಖನಗಳನ್ನ ರಚಿಸಿದ್ದಾರೆ. ರಾಮಾಚಾರಿ ನೆನಪು, ರಥಸಪ್ತಮಿ ಇವರ ಇತರ ಕಥೆಗಳು.
ಇವರ ಶ್ರೀಹರಿ ಚರಿತೆಗೆ ಕರ್ನಾಟಕ ಸರ್ಕಾರದ 1991ರ ಪಂಪ ಪ್ರಶಸ್ತಿ ಬಂದಿರುತ್ತದೆ. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಿಲಿಟ್ ಪದವಿ, ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. 1981ರ ಚಿಕ್ಕಮಗಳೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಯದುಗಿರಿ ಇವರಿಗೆ ಅರ್ಪಿಸಲಾದ ಅಭಿನಂದನಾ ಗ್ರಂಥ.
ಸರ್ಕಾರ ಇವರ ಮನೆಯನ್ನು ಅಭಿವೃದ್ಧಿಪಡಿಸಿ, ಇವರ ಹೆಸರಲ್ಲಿ ಒಂದು ಟ್ರಸ್ಟ್ ಸ್ಥಾಪಿಸಿ, ಹಲವಾರು ಸಾಹಿತ್ಯದ ಕೆಲಸಗಳನ್ನು ಟ್ರಸ್ಟ್ ಮೂಲಕ ನಡೆಸುತ್ತಿದೆ. ಈ ರೀತಿಯಲ್ಲಿ ಇವರ ಸಾಧನೆ ಮತ್ತು ಸಾಹಿತ್ಯ ಸೇವೆಯನ್ನು ಸರ್ಕಾರ ಕೃತಜ್ಞತಾ ಪೂರ್ವಕವಾಗಿ ಸ್ಮರಿಸುತ್ತಿದೆ.
– ಕೆ ಎಸ್ ನಾಗರಾಜ್, ಬೆಂಗಳೂರು




