ಲೋಕಸಭಾ ಚುನಾವಣೆಯ ಪ್ರಚಾರದ ವೇಳೆಯಲ್ಲಿ ಮಾನ್ಯ ಪ್ರಧಾನ ಮಂತ್ರಿಗಳು ಪ್ರಸ್ತಾಪ ಮಾಡುತ್ತಿರುವ ವಿಚಾರಗಳನ್ನು ಗಮನಿಸಿದಾಗ ಅವರ ಡಬ್ಬಾ ಖಾಕಲಿಯಾಗಿದೆ. ಡಬ್ಬದಲ್ಲಿ ಯಾವುದೇ ಹೊಸ ಸರಕುಗಳು ಇಲ್ಲ ಅದಕ್ಕಾಗಿ ಸಂಬಂಧವಿಲ್ಲದ ಮತ್ತು ಸತ್ಯವಿಲ್ಲದ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದಾರೆ ಇವರು ಪ್ರಸ್ತಾಪಿಸುತ್ತಿರುವ ಯಾವ ವಿಚಾರಗಳು ದೇಶದ ಪ್ರಗತಿಗೆ ಪೂರಕವಾಗಿಲ್ಲ ಮತ್ತು ಜನರ ಬದುಕಿಗೆ ನೆರವು ದೊರೆಯುವುದಿಲ್ಲ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
15 ಲಕ್ಷ ಪ್ರತಿಯೊಬ್ಬರ ಖಾತೆಗೆ ಕೊಡಿಸುತ್ತೇನೆಂದು ಹೇಳುವ ಹಾಗಿಲ್ಲ ಅದು ಸುಳ್ಳು ಆಗಿದೆ. ಅದಕ್ಕಾಗಿ ಅಂತಹ ವಿಚಾರ ಪ್ರಸ್ತಾಪಿಸುತ್ತಿಲ್ಲ.
ಪ್ರತಿ ವರ್ಷ ಎರಡು ಕೋಟಿ ಉದ್ಯೋಗದ ಮಾತು ಸುಳ್ಳಾಗಿದೆ ಅದಕ್ಕಾಗಿ ಉದ್ಯೋಗ ಸೃಷ್ಟಿಸುವ ಮಾತುಗಳು ಆಡಲು ಸಾಧ್ಯವಿಲ್ಲ.
ರೈತರ ಆದಾಯ ದ್ವಿಗುಣ ಮಾಡಿಕೊಡುತ್ತೇವೆಂದು ಹೇಳಿದ ಮಾತು ಸುಳ್ಳಾಯಿತು ರೈತರ ಮೇಲೆ ದಬ್ಬಾಳಿಕೆಗಳಾಗಿ ನೂರಾರು ರೈತರ ಪ್ರಾಣ ತ್ಯಾಗ ಹೋರಾಟದ ಸಂದರ್ಭದಲ್ಲಿ ಸಂಭವಿಸಿರುತ್ತದೆ. ಹೀಗಾಗಿ ಇಂತಹ ವಿಚಾರಗಳನ್ನು ಪ್ರಸ್ತಾಪಿಸಲು ಸಾಧ್ಯವಿಲ್ಲ.
ಇನ್ನು ಆಹಾರ ಪದಾರ್ಥಗಳ ಬೆಲೆಗಳನ್ನು ಇಳಿಸುತ್ತೇನೆಂದು ಹೇಳುವ ಹಾಗಿಲ್ಲ ಈಗಾಗಲೇ ಕಳೆದ ಹತ್ತು ವರ್ಷದಲ್ಲಿ ಆಹಾರ ಪದಾರ್ಥಗಳ ಬೆಲೆ ಅಡಿಗೆ ಅನಿಲ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರಿದೆ. ಹೀಗಾಗಿ ಇಲ್ಲಿಯೂ ಹೇಳಿದ ಮಾತುಗಳೆಲ್ಲವೂ ಸುಳ್ಳಾಗಿರುತ್ತದೆ.
ಇನ್ನು ಡಾಲರ್ ಎದುರು ರೂಪಾಯಿಯ ಮೌಲ್ಯವನ್ನು ಹೆಚ್ಚಿಸುತ್ತೇನೆ ಎಂದು ಹೇಳುವ ಹಾಗಿಲ್ಲ. ಈಗಾಗಲೇ ಡಾಲರ್ ಮುಂದೆ ರೂಪಾಯಿ ಅಪ್ಪ ಮೌಲ್ಯವಾಗುತ್ತಿದೆ ಹೀಗಾಗಿ ಇಲ್ಲಿಯೂ ಸುಳ್ಳುಗಳಾಗಿವೆ
ಕೇಂದ್ರದಿಂದ ಬಿಜೆಪಿ ಪಕ್ಷದ ಸರ್ಕಾರಗಳಿಲ್ಲದ ರಾಜ್ಯಗಳ ಮೇಲೆ ಇಲ್ಲಸಲ್ಲದ ದಬ್ಬಾಳಿಕೆಗಳನ್ನು ನಡೆಸಿ ಸರ್ಕಾರಗಳನ್ನ ಅಸ್ಥಿರಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ರಾಜ್ಯಗಳ ಅಭಿವೃದ್ಧಿಗೆ ನೆರವು ನೀಡಿದೆ ಎಂದು ಹೇಳಲು ಸಾಧ್ಯವಿಲ್ಲ ಹೀಗಾಗಿ ಇಂತಹ ವಿಚಾರಗಳನ್ನು ಪ್ರಸ್ತಾಪಿಸುವುದಿಲ್ಲ
ದಿನದಿಂದ ದಿನಕ್ಕೆ ಯಾವುದೇ ಹೊಸ ವಿಚಾರಗಳು ಹೊಳೆಯುತ್ತಿಲ್ಲ. ಆಶ್ವಾಸನೆ ಕೊಡಲು ಯಾವುದೇ ವಿಚಾರಗಳು ಇಲ್ಲ. ಈ ಹಿನ್ನೆಲೆಯಲ್ಲಿ ಭಾವನಾತ್ಮಕವಾದ ವಿಚಾರಗಳನ್ನು ಧರ್ಮದ ವಿಚಾರದಲ್ಲಿ ಪ್ರಸ್ತಾಪಿಸುತ್ತಾ ಒಬ್ಬ ಪ್ರಧಾನಿ ಧರ್ಮ ಧರ್ಮಗಳ ನಡುವೆ ಅಸೂಯೆ ಮತ್ತು ಅಸಹಣೆಯ ವಾತಾವರಣ ಉಂಟು ಮಾಡಬಹುದೇ ಎಂಬ ಸಣ್ಣ ಪ್ರಮಾಣದಲ್ಲಿ ಆಲೋಚನೆಯನ್ನು ಮಾಡದೆ ಕೇವಲ ಓಟಿಗಾಗಿ ಪಾಕಿಸ್ತಾನ ಮುಸ್ಲಿಂ ಇಂತಹ ವಿಚಾರಗಳನ್ನು ಪ್ರಸ್ತಾಪಿಸುತ್ತಾ ಜನರನ್ನು ಧರ್ಮದ ಹೆಸರಿನಲ್ಲಿ ಪ್ರಚೋದಿಸುವಂತಹ ಭಾಷಣಗಳನ್ನು ಮಾಡುತ್ತಿರುವುದು ಅವರ ಹುದ್ದೆಗೆ ಒಪ್ಪುವಂಥದ್ದಲ್ಲ.
ಇದರ ಬದಲಿಗೆ ಕಳೆದ ಹತ್ತು ವರ್ಷದಲ್ಲಿ ತಾವು ಹೇಳಿದ ಮಾತುಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಕೊಟ್ಟ ಭರವಸೆ ಈಡೇರಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಕ್ಷಮಿಸಿ ಎಂದು ದೇಶದ ಜನರ ಮುಂದೆ ಪ್ರಾಮಾಣಿಕವಾಗಿ ಹೇಳುವಂತಹ ಧೈರ್ಯವನಾದರೂ ಮಾಡಲಿ.
ಚುನಾವಣಾ ಬಾಂಡ್ ಗಳ ಬಗ್ಗೆ ಒಮ್ಮೆಯೂ ಎಲ್ಲಿಯೂ ಮಾತನಾಡುವುದಿಲ್ಲ ಸಾವಿರಾರು ಕೋಟಿ ರೂಪಾಯಿಗಳ ಹಣವನ್ನು ಬಾಂಡ್ ಮೂಲಕ ಸಂಗ್ರಹಿಸಿರುವ ಆರೋಪವನ್ನು ಹೊತ್ತಿರುವ ಬಿಜೆಪಿ ನಾಯಕರಾಗಲಿ ಪ್ರಧಾನಿಯವರಾಗಲಿ ಇದಕ್ಕೆ ಸರಿಯಾದಂತಹ ಉತ್ತರವನ್ನು ನೀಡುತ್ತಿಲ್ಲ
ಕರೋನ ಲಸಿಕೆಯ ವಿಚಾರದಲ್ಲಿ ದೊಡ್ಡದಾದ ಆತಂಕ ಜನರಲ್ಲಿ ಉಂಟಾಗಿದೆ ಇದಲ್ಲದೆ ಈ ಲಸಿಕೆ ಕಂಪನಿಯಿಂದ 52 ಕೋಟಿ ರೂಪಾಯಿಗಳ ಮೊತ್ತವನ್ನು ಬಾಂಡ್ ರೂಪದಲ್ಲಿ ಬಿಜೆಪಿ ಪಡೆದಿರುವುದು ಮತ್ತೊಂದು ದೊಡ್ಡ ಸುದ್ದಿಯಾಗಿದೆ ಈ ವಿಚಾರದಲ್ಲೂ ಸಹ ದೇಶದ ಜನರಲ್ಲಿ ಭರವಸೆ ಮೂಡಿಸುವ ಮಾತುಗಳನ್ನು ಲಸಿಕೆಯ ವಿಚಾರದಲ್ಲಿ ಒಮ್ಮೆಯೂ ಪ್ರಧಾನ ಮಂತ್ರಿಗಳು ಮಾತನಾಡಿರುವುದು ಎಲ್ಲಿಯೂ ದಾಖಲಾಗಿರುವುದಿಲ್ಲ
– ಕೆ ಎಸ್ ನಾಗರಾಜ್, ಬೆಂಗಳೂರು




