ಹಸಿದವರ ಬಗ್ಗೆ ಕುಚೇಷ್ಟೆ ಮಾತುಗಳು
ಬಿಸಿಲು, ಮಳೆ, ಚಳಿಯನ್ನದೆ ಕೆಲವು ನೂರುಗಳ ಕೂಲಿಗಾಗಿ ಶ್ರಮದ ಕಾಯಕವ ಹರಕಲು ಬಟ್ಟೆಯ, ಬೆವರಿನಲ್ಲಿ ದಿನವು ನೆನೆಯುವ ಹಸಿದವರಿಗೆ ಒಂದಷ್ಟು ನೆರವು ನೀಡಿದರೆ, ಹಸಿವಿನ ಬಾಧೆ ಅರಿಯದ ಹೊಟ್ಟೆ ತುಂಬಿದ ಬೆವರು ಸುರಿಸಿ ದುಡಿಯದ ಹವಾ ನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಸುಖದ ಬದುಕು ನಡೆಸುವ ಮಂದಿ ಸರ್ಕಾರದ ಖಜಾನೆ ಖಾಲಿ ಆಯಿತು, ಸರ್ಕಾರ ದಿವಾಳಿ ಆಯಿತು ಎಂದು ಬಾಯಿ ಬಡೆದುಕೊಳ್ಳುತ್ತಾರೆ.
- ಪ್ರೊ. ಬರಗೂರು ಅವರ ದಿಟ್ಟ ಹೆಜ್ಜೆ – 25 ವರ್ಷಗಳ ಸಾರ್ಥಕ ಯಾನ!
- ಸಂಪುಟದಿಂದ ಹೊರಗಿಟ್ಟಿರುವುದು ನನಗೆ ಸಿಕ್ಕ ಪ್ರತಿಫಲವೇ?: ಬಿ ಆರ್ ಪಾಟೀಲ್
- ಸಂಪುಟದಲ್ಲಿ ಭ್ರಷ್ಟಾಚಾರಿಗಳು, ಪೇಮೆಂಟ್ ಕೋಟಾ ಮೂಲಕ ಅವಕಾಶ ಗಿಟ್ಟಿಸಿಕೊಂಡವರು ಇದ್ದಾರೆ: ಆರ್.ಅಶೋಕ
- ಬಿಜೆಪಿ ನಾಯಕರು ಸಂವಿಧಾನ ಓದಿದನ ನಂತರ ಕಾಂಗ್ರೆಸ್ ಲೆಟರ್ಹೆಡ್ ಓದಲಿ: ಬಿ.ಕೆ.ಹರಿಪ್ರಸಾದ್
- ನೀರು ಸತ್ಯಾಗ್ರಹ ಕೃತಕ ಬುದ್ಧಿಮತ್ತೆ ಮತ್ತು ಕೃಷಿ ಕುರಿತು ಗಂಭೀರ ಚರ್ಚೆ
ಬೆಚ್ಚನೆಯ ಉಡುಪು ಧರಿಸಿ ಮನೆಯ ಒಳಗೆ ಕುಳಿತ ಮಂದಿಗೆ ಬಯಲಲ್ಲಿ ಕೊರೆಯುವ ಚಳಿಯಲ್ಲಿ ರಸ್ತೆಯ ಮೇಲೆ ಮಲಗುವ ಜನರ ಹಾಗೂ ಪುಟ್ಟ ಪುಟ್ಟ ಗುಡಿಸಲುಗಳಲ್ಲಿ ಜೀವನ ನಡೆಸುವ ಜನರ ಬಾದೆ ಹೇಗೆ ತಾನೇ ತಿಳಿದೀತು?
ಏರ್ ಕಂಡೀಷನ್ ವ್ಯವಸ್ಥೆ ಇರುವ ಬಂಗಲೆಗಳಲ್ಲಿ ಬದುಕುತ್ತಾ ಸೂರ್ಯನ ಬಿಸಿಲು ತಾಗದಂತೆ ಎಚ್ಚರದಿಂದ, ಸಮಯವ ಕಳೆಯುವ ಮಂದಿಗೆ ಬಯಲಿನಲ್ಲಿ ಸುಡುವ ಬಿಸಿಲಿನಲ್ಲಿ ಬೆವರು ಸುರಿಸುತ್ತಾ ಬೆನ್ನ ಮೇಲೆ ಮೂಟೆ ಹೊತ್ತು ದುಡಿಯುವ ಬೆವರಿನ ಜನರ ಭವಣೆ ಹೇಗೆ ತಾನೇ ತಿಳಿದೀತು?
ಹೆತ್ತವರು ಅವಿದ್ಯಾವಂತರು, ಇವರ ಮಕ್ಕಳು ಸರ್ಕಾರಿ ಶಾಲೆಯ ವ್ಯಾಸಂಗ, ಹೆಚ್ಚುವರಿ ಪಾಠ ಪ್ರವಚನದ ವ್ಯವಸ್ಥೆಗಳಿಲ್ಲದೆ ಇದ್ದರೂ ಸ್ವಂತ ಶ್ರಮದಿಂದ ವಿದ್ಯಾವಂತರಾಗಿ ಸಾಧಕರಾಗಿ ಸರ್ಕಾರಿ ಹುದ್ದೆಗಳನ್ನು ಅಲಂಕರಿಸಿದರೆ, ವಿದ್ಯಾವಂತ ಪೋಷಕರ ಮಕ್ಕಳು, ಪ್ರತಿಷ್ಠಿತ ಶಾಲೆಗಳಲ್ಲಿ ವ್ಯಾಸಂಗ, ಜೊತೆಗೆ ಪ್ರತಿಯೊಂದು ವಿಷಯಕ್ಕೂ ತಜ್ಞರಿಂದ ತರಬೇತಿ, ಓದಲು ಹಾಗೂ ಅಧ್ಯಯನಕ್ಕೆ ಯಾವ ಸೌಲಭ್ಯ ಸೌಕರ್ಯಗಳ ಕೊರತೆ ಇಲ್ಲದ ವ್ಯವಸ್ಥೆಯ ನಡುವೆ ವಿದ್ಯಾವಂತರದ ಮಂದಿ ಕೊರಗುತ್ತಾರೆ ಮೀಸಲಾತಿ ವ್ಯವಸ್ಥೆಯಿಂದ ನಮಗೆ ನಷ್ಟವಾಯಿತು ಎಂದು.
ಚಪ್ಪಲಿ ಹೊಲಿಯುವ ಕೆಲಸ, ಕ್ಷೌರಿಕರ ಕೆಲಸ, ಬಟ್ಟೆ ಶುಚಿಗೊಳಿಸುವ ಮಡಿವಾಳರ ದುಡಿಮೆ, ಬೆಂಕಿಯ ಮುಂದೆ ನಿಂತು ಅಡುಗೆ ತಯಾರಿಸುವ ಕಾಯಕ, ರಸ್ತೆ ರಸ್ತೆಗಳ ಕಸಗಳ ಬಳಿದು ಶುದ್ಧಗೊಳಿಸುವ ಪೌರಕಾರ್ಮಿಕರ ಹುದ್ದೆಗಳು, ಹೊಲಗದ್ದೆಗಳಲ್ಲಿ ಕೃಷಿಕರಾಗಿ ದುಡಿಯುವ ಶ್ರಮದ ದುಡಿಮೆ, ಪ್ರಾಣದ ಹಂಗು ತೊರೆದು ದೇಶ ಕಾಯುವ ದೇಶ ರಕ್ಷಕರ ಪವಿತ್ರ ಸೇವೆ, ಕಾರ್ಖಾನೆಗಳಲ್ಲಿ ಶ್ರಮದ ದುಡಿಮೆಯ ಹುದ್ದೆಗಳು ಯಾರಿಗೂ ಬೇಕಿಲ್ಲ ಇಲ್ಲಿ. ನಮಗೆ ಪಾಲು ಕೊಡಿ ಎಂದು ಹೇಳುವವರು ಯಾರು ಇಲ್ಲ.
ಮುಂಜಾನೆಯಿಂದ ಸಂಜೆಯ ತನಕ ಕ್ಲಬ್ಬುಗಳಲ್ಲಿ ಮೋಜಿನ ಜೀವನ ನಡೆಸುವ ಮಂದಿ ಅನ್ನುತ್ತಾರೆ ಮನೆ ಕೆಲಸ ಮಾಡುವ, ಕಟ್ಟಡದ ಕೆಲಸ ಮಾಡುವ, ತರಕಾರಿ ಮಾರುವ, ಹೂವು ಕಟ್ಟಿ ಬದುಕು ನಡೆಸುವ, ಸಣ್ಣಪುಟ್ಟ ಕಾರ್ಖಾನೆಗಳಲ್ಲಿ ಸಣ್ಣ ಸಣ್ಣ ಸಂಬಳಗಳಿಗೆ ದುಡಿಯುವ ಮಹಿಳೆಯರಿಗೆ ಒಂದಷ್ಟು ಅನುಕೂಲ ಮಾಡಿದರೆ ವ್ಯಂಗ್ಯದಿಂದ ಮಾತನಾಡುತ್ತಾರೆ. ಜನರನ್ನು ಸೋಮಾರಿಗಳನ್ನಾಗಿಸಿದರು, ತಪ್ಪು ದಾರಿಗೆ ತಂದು ನಿಲ್ಲಿಸಿದರೆಂದು ವ್ಯಂಗ್ಯದ ಮಾತುಗಳಲ್ಲಿ ಆಕ್ರೋಶಗಳ ವ್ಯಕ್ತಪಡಿಸುತ್ತಾರೆ.
ಹಸಿದವರಿಗೆ ಮಾತ್ರ ಹಸಿವಿನ ನೋವಿನ ಅರಿವಿರುತ್ತದೆ, ಬಿಸಿಲಿನಲ್ಲಿ ಬೆಂದವರಿಗಷ್ಟೇ ತಾಪದ ಅರಿವಿರುತ್ತದೆ, ಮಳೆಯಲ್ಲಿ ನೆಂದವರಿಗಷ್ಟೇ ನಡುಕದ ಅನುಭವವಾಗುತ್ತದೆ.
ಹೊಟ್ಟೆ ತುಂಬಿ, ಕುಳಿತು ತಿನ್ನುವವರ ಟೀಕೆಗಳಿಗೆ ಕವಡೆ ಕಾಸಿನ ಬೆಲೆಯೂ ಇಲ್ಲ, ಅವರು ಮಾತುಗಳಿಗೆ ಮಹತ್ವವು ಇಲ್ಲ.
– ಕೆ ಎಸ್ ನಾಗರಾಜ್, ಬೆಂಗಳೂರು




