ನಮ್ಮ ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ರಾಷ್ಟ್ರಪತಿಗಳು ಪ್ರಥಮ ಪ್ರಜೆಗಳಾಗಿರುತ್ತಾರೆ. ದೇಶದ ಪ್ರತಿಯೊಂದು ಆದೇಶಗಳು ರಾಷ್ಟ್ರಪತಿಯವರ ಹೆಸರಿನಲ್ಲಿಯೇ ಹೊರಡುತ್ತದೆ. ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಗೆ ರಾಷ್ಟ್ರಪತಿಗಳೇ ಅಧಿಪತಿಗಳಾಗಿದ್ದಾರೆ. ಹೀಗಿದ್ದ ಮೇಲೆ ನೂತನ ಪಾರ್ಲಿಮೆಂಟ್ ಭವನವನ್ನು ಉದ್ಘಾಟನೆ ಮಾಡಬೇಕಾದದ್ದು ರಾಷ್ಟ್ರಪತಿಯವರು ಎಂಬುದು ಸರಿಯಾದಂತಹ ಅಭಿಪ್ರಾಯವಾಗಿರುತ್ತದೆ.
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
ಆದರೆ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವದ ಬಗ್ಗೆ ತುಂಬಾ ಮಾತನಾಡುವ ಬಿಜೆಪಿಯ ನಾಯಕರುಗಳಿಗೆ ನೂತನ ಪಾರ್ಲಿಮೆಂಟಿನ ನೂತನ ಪಾರ್ಲಿಮೆಂಟ್ ಭವನಕ್ಕೆ ಶಂಕುಸ್ಥಾಪನೆ ಮಾಡುವ ಸಂದರ್ಭದಲ್ಲಿ ಅಂದಿನ ರಾಷ್ಟ್ರಪತಿ ಗೌರವಾನ್ವಿತ ರಾಮನಾಥ ಗೋವಿಂದ್ ಅವರನ್ನು ಕರೆಯಲಿಲ್ಲ.
ಅದೇ ರೀತಿಯಲ್ಲಿ ನೂತನ ಪಾರ್ಲಿಮೆಂಟ್ ಭವನದ ಉದ್ಘಾಟನೆಗೆ ಹಾಲಿ ರಾಷ್ಟ್ರಪತಿಗಳಾಗಿರುವ ಗೌರವಾನ್ವಿತ ಶ್ರೀಮತಿ ದ್ರೌಪದಿ ಮುರ್ಮು ಇವರನ್ನು ಸಹ ಕರೆಯಲಿಲ್ಲ.
ಅದೇ ರೀತಿಯಲ್ಲಿ ಹಿಂದೂ ಧರ್ಮದ ಬಗ್ಗೆ ಅಪಾರವಾದ ಮಾತುಗಳನ್ನಾಡುವ ಬಿಜೆಪಿ ನಾಯಕರಿಗೆ ಅಯೋಧ್ಯೆಯಲ್ಲಿ ರಾಮಮಂದಿರ ಶಂಕುಸ್ಥಾಪನೆ ಸಮಾರಂಭಕ್ಕೆ ಅಂದಿನ ರಾಷ್ಟ್ರಪತಿ ರಾಮನಾಥ ಗೋವಿಂದ ಅವರನ್ನು ಕರೆಯಲಿಲ್ಲ.
ಈಗ ಇತ್ತೀಚೆಗೆ ರಾಮ ಮಂದಿರದ ಉದ್ಘಾಟನೆಗೂ ಸಹ ಹಾಲಿ ರಾಷ್ಟ್ರಪತಿ ಗೌರವಾನ್ವಿತ ದ್ರೌಪದಿ ಮುರ್ಮುರವರನ್ನು ಆಹ್ವಾನಿಸಲಿಲ್ಲ. ಈ ವಿಚಾರದಲ್ಲಿ ಇವರ ನಡವಳಿಕೆ ಎಷ್ಟರಮಟ್ಟಿಗೆ ಸರಿ ಎಂಬುದನ್ನ ಚಿಂತಿಸಬೇಕಾಗಿದೆ.
ದಲಿತರ ಬಗ್ಗೆ ಅಪಾರವಾದ ಮಾತುಗಳನ್ನಾಡುವ ನಾಯಕರುಗಳಿಗೆ ಇಂತಹ ಸಮಾರಂಭದಲ್ಲಿ ದೇಶದ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳನ್ನು ಆಹ್ವಾನಿಸಬೇಕೆಂಬ ನೆನಪು ಬರಲಿಲ್ಲವೇ? ಕಾರಣ ಇದಲ್ಲ. ರಾಷ್ಟ್ರಪತಿಗಳು ಇಂತಹ ಸಮಾರಂಭದಲ್ಲಿ ಭಾಗವಹಿಸಿದರೆ ಅವರಿಗೆ ಕಾರ್ಯಕ್ರಮದಲ್ಲಿ ಪ್ರಾಧಾನ್ಯತೆ ದೊರೆಯುತ್ತದೆ. ತಮಗೆ ದೊರೆಯುವುದಿಲ್ಲವೆಂಬ ನಮ್ಮ ಪ್ರಚಾರಪ್ರಿಯ ನಾಯಕರು ಮನಸ್ಸಿನ ಭಾವನೆಯು ಆಗಿರುತ್ತದೆ.
ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳುವ ಯಾವ ನಾಯಕರ ಮೇಲೂ ಯಾವ ಕ್ರಮವನ್ನು ಕೈಗೊಳ್ಳುವುದಿಲ್ಲ. ಅದೇ ರೀತಿಯಲ್ಲಿ ಸಂವಿಧಾನದ ಆಶಯಗಳ ವಿರುದ್ಧ ನಡೆದುಕೊಳ್ಳುವ ಸಂಘಟನೆಗಳ ಮೇಲು ಯಾವ ಕ್ರಮವನ್ನು ಕೈಗೊಳ್ಳುವುದಿಲ್ಲ. ಆದರೂ ಸಹ ಅಂಬೇಡ್ಕರ್ ಅವರ ಬಗ್ಗೆ ಅಪಾರವಾದಂತಹ ಗೌರವ ಇರುವ ರೀತಿಯಲ್ಲಿ ಸಾರ್ವಜನಿಕವಾಗಿ ವರ್ತಿಸುತ್ತಾರೆ.
– ಕೆ ಎಸ್ ನಾಗರಾಜ್, ಬೆಂಗಳೂರು




