ಮಹಾತ್ಮನ ಮನೋಭಾವ.

3 years ago

ಚಂಪಾರಣ್ಯದ ಸತ್ಯಾಗ್ರಹದಿಂದ ಅಲ್ಲಿನ ರೈತರನ್ನೂ ಒಳಗೊಂಡಂತೆ ಗಾಂಧೀಜಿ ಮತ್ತು ಅವರ ಸಂಗಡಿಗರಿಗೆ ಹೋರಾಟವು ಹಲವು ಮಹತ್ವದ ಅನುಭವಗಳನ್ನು ಮನದಟ್ಟು ಮಾಡಿಕೊಟ್ಟಿತು. ಅವರಲ್ಲಿ ಹೊಸ ಜಾಗೃತಿಯನ್ನು ಮೂಡಿಸಿತು.

ಅವುಗಳಲ್ಲಿ ಈ ಅಂಶಗಳು ಪ್ರಮುಖವಾದವು. ಈ ಕಾರಣದಿಂದಾಗಿ ಗಾಂಧೀಜಿಯವರು ಚಂಪಾರಣ್ಯ ಸತ್ಯಾಗ್ರಹದ ನಂತರ ಅಲ್ಲಿನ ರೈತರಿಗೆ ಮತ್ತು ಸಹಚರರಿಗೆ ಈ ಮಾತುಗಳನ್ನು ಮನದಟ್ಟು ಮಾಡಿಕೊಟ್ಟರು. 1918 ರ ಸಮಯದಲ್ಲಿ ಮಹಾತ್ಮನ ಮನೋಭಾವ ಹೇಗಿತ್ತು ಎಂಬುದಕ್ಕೆ ಇದು ಶ್ರೇಷ್ಠ ಉದಾಹರಣೆಯಾಗಬಲ್ಲದು.

ಒಂದು – ಯಾವುದೇ ವ್ಯಕ್ತಿಯು ನಮ್ಮ ಎದುರಾಳಿಯಲ್ಲ, ಆದರೆ, ಆತನ  ಅನ್ಯಾಯದ ನಡುವಳಿಕೆಗಳು ಮಾತ್ರ ನಮ್ಮ ಶತ್ರು;

ಎರಡು – ಹಿಂಸೆಯು ಕೋಪ ಮತ್ತು ದ್ವೇಷಕ್ಕೆ  ಕಾರಣವಾಗುತ್ತದೆ. ಆದರೆ,  ಕೋಮಲ ವ್ಯಕ್ತಿತ್ವವು ಮನುಷ್ಯನ ದೃಢತೆಗೆ ದಾರಿ ಮಾಡಿಕೊಡುತ್ತದೆ;

ಮೂರು – ಅನ್ಯಾಯದ ಕಾನೂನು ಅಥವಾ ವ್ಯವಸ್ಥೆಗೆ ಸುಸಂಸ್ಕೃತ ಅಸಹಕಾರ ಒಳ್ಳೆಯ ನಡುವಳಿಕೆಯಾಗಬಲ್ಲದು.  ದಂಡ ಅಥವಾ ಶಿಕ್ಷೆಗೆ ಸಿದ್ಧರಾಗುವ ಮನಸ್ಸು ಮತ್ತು  ಸದಾಚಾರಕ್ಕೆ ಬದ್ಧವಾಗಿರುವುದು ಇವುಗಳು ಯಾವುದೇ ನಿರಂಕುಶ ಶಕ್ತಿಯನ್ನು ನಾಶಮಾಡುವಷ್ಟು ಶಕ್ತಿಯನ್ನು ಸೃಷ್ಟಿಸುತ್ತದೆ.

ನಾಲ್ಕು –  ನಿರ್ಭಯತೆ; ಸ್ವಾವಲಂಬನೆ ಮತ್ತು ಶ್ರಮದ ಘನತೆ ಇವುಗಳು  ಸ್ವಾತಂತ್ರ‍್ಯದ ಮೂಲತತ್ವಗಳು

ಐದು – ದೈಹಿಕವಾಗಿ ದುರ್ಬಲನಾದ ವ್ಯಕ್ತಿಯೂ ಸಹ ನೈತಿಕ ಬಲವನ್ನು ಚಲಾಯಿಸಬಹುದು ಮತ್ತು ಪ್ರಬಲ ಎದುರಾಳಿಗಳನ್ನು ರಕ್ಷಣೆಯಿಲ್ಲದಂತೆ ಎದುರಿಸಬಹುದು.

ಆರು  –  ಸ್ವಾತಂತ್ರ‍್ಯವೆಂದರೆ,  ಕೇವಲ ರಾಜಕೀಯ ದಬ್ಬಾಳಿಕೆಯಿಂದ ಬಿಡುಗಡೆಯಲ್ಲ,  ಹಿಡಿತದಿಂದ ವಿಮೋಚನೆಯಿಂದ  ಬಡತನ, ಅನಕ್ಷರತೆ, ಕಳಪೆ ಆರೋಗ್ಯ ಮತ್ತು ನೈರ್ಮಲ್ಯದ ಕೊರತೆ ಇವುಗಳಿಂದಲೂ ಪ್ರತಿಯೊಬ್ಬರೂ ಸ್ವಾತಂತ್ರ್ಯಪಡೆಯಬೇಕಿದೆ. ಅದು ನಿಜವಾದ ಸ್ವರಾಜ್ಯ.

ಏಳು  –  ಭಾರತದಲ್ಲಿ ತಾಂಡವವಾಡುತ್ತಿರುವ ವರ್ಗ ಮತ್ತು ಜಾತಿ ವ್ಯವಸ್ಥೆಯನ್ನು  ಕತ್ತರಿಸುವುದರ ಮೂಲಕ ಜನಸಾಮಾನ್ಯರ ನಡುವೆ  ಭ್ರಾತೃತ್ವವನ್ನು ವಿಸ್ತರಿಸುವುದರಿಂದ ಸ್ವಾತಂತ್ರ‍್ಯ ಹೋರಾಟಕ್ಕೆ ಅರ್ಥವನ್ನು ನೀಡುತ್ತದೆ.

– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು

Leave a Reply