ಕೃಷ್ಣ ಬೈರೇಗೌಡ ಅವರಿಗೆ ಪ್ರಕಾಶ್ ಕೋನಾಪುರ ಬರೆದ ಪತ್ರ

16 hours ago

ಸನ್ಮಾನ್ಯ ಶ್ರೀ Krishna Byre Gowda ಅವರ ಗಮನಕ್ಕೆ,

ಸನ್ಮಾನ್ಯ ಶ್ರೀ ಯಡಿಯೂರಪ್ಪ ಅವರು ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟು ಶಿಕಾರಿಪುರ ಪುರಸಭೆಗೆ ಅಧ್ಯಕ್ಷರಾದಾಗಲಿಂದಲೂ ಶಿಕಾರಿಪುರ ಪುರಸಭೆಗೆ ಪೌರಕಾರ್ಮಿಕರಾಗಿ ಕೆಲಸಕ್ಕೆ ಸೇರಿದ ಮೂವರು ಮಹಿಳಾ ಪೌರಕಾರ್ಮಿಕರನ್ನು ಯಡಿಯೂರಪ್ಪನವರ ಮನೆಕೆಲಸಕ್ಕೆ ನಿಯೋಜಿಸಲಾಗಿತ್ತು. ಅವರಲ್ಲಿ ಓರ್ವ ಮಹಿಳಾ ಪೌರಕಾರ್ಮಿಕಳನ್ನು ದೀರ್ಘ ಕಾಲ ಮನೆಕೆಲಸಕ್ಕೆ ದುಡಿಸಿಕೊಂಡು ನಂತರ ಆ ಮಹಿಳಾ ಪೌರಕಾರ್ಮಿಕಳನ್ನು ಪೌರಕಾರ್ಮಿಕ ಕೆಲಸ ಬಿಡಿಸಿ ನೇರವಾಗಿ ತಾವೇ ಸಂಬಳ ಕೊಡುವ ಹಾಗೆ ಮನೆಕೆಲಸಕ್ಕೆ ನೇಮಿಸಿಕೊಂಡಿದ್ದಾರೆ.


ಇನ್ನೋರ್ವ ಮಹಿಳೆ ತನ್ನ ವೈಯಕ್ತಿಕ ಕಾರಣಕ್ಕಾಗಿ ಪೌರಕಾರ್ಮಿಕ ಕೆಲಸ ಬಿಟ್ಟು ಹೋಗಿದ್ದಾಳೆ (ವೈಯುಕ್ತಿಕ ಕಾರಣ ಏನಿರಬಹುದು)
ಇನ್ನೋರ್ವ ಮಹಿಳೆ ನೇಮಕವಾಗಿರುವುದು ಪೌರಕಾರ್ಮಿಕ ಕೆಲಸಕ್ಕೆ
ಸಂಬಳ ಕೊಡುತ್ತಿರುವುದು ಕರ್ನಾಟಕ ಸರ್ಕಾರ
ಆದರೆ ಕೆಲಸ ಮಾಡುತ್ತಿರುವುದು ಯಡಿಯೂರಪ್ಪನ ಮನೆಕಲಸ
ಹೀಗೆ ಸುಮಾರು 25-30 ವರ್ಷಗಳಿಂದ ಮಾಡುತ್ತಿದ್ದಾಳೆ.
(ಇಲ್ಲಿ ಕೆಳಗೆ ಆ ಮಹಿಳೆಯ ಫೋಟೋ ಲಗತ್ತಿಸಲಾಗಿದೆ.ಹೆಸರು ಗೌರಮ್ಮ ಗಂಡ ಪಾರ್ಶ್ವವಾಯು ಪೀಡಿತ ರೋಗಿ. ಸದಾ ಹಾಸಿಗೆ ಮೇಲೆ ಮಲಗಿರುವಾತ.ಗೌರಮ್ಮ ಗಂಡನ ಸೇವೆ ಮಾಡುತ್ತಲೇ ಯಡಿಯೂರಪ್ಪನ ಮನೆಕೆಲಸಕ್ಕೆ ಹೋಗಬೇಕು)

ಶಿಕಾರಿಪುರ ಪುರಸಭೆಯ ಪೌರ ಕಾರ್ಮಿಕರಲ್ಲಿ

ಯಡಿಯೂರಪ್ಪ ನ ಮನೆಗೆ
ಪುರಸಭೆ ಅಧ್ಯಕ್ಷರ ಮನೆಗೆ
ಪುರಸಭೆ ಉಪಾಧ್ಯಕ್ಷರ ಮನೆಗೆ
ಪುರಸಭೆ ಮುಖ್ಯಾಧಿಕಾರಿ ಮನೆಗೆ
ಪುರಸಭೆ ಮುಖ್ಯ ಎಂಜಿನಿಯರ್ ಮನೆಗೆ
ಪುರಸಭೆ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಮನೆಗಳಿಗೆ
ಹೀಗೆ 8-10 ಪೌರ ಕಾರ್ಮಿಕರನ್ನು ಮನೆಕೆಲಸಕ್ಕೆ ನಿಯೋಜಿಸಲಾಗುತ್ತಿದೆ.

ನೀವು ಬೆಳಿಗ್ಗೆ ವಾಕಿಂಗ್ ಹೋದಾಗ ನಿಮ್ಮ ಗಮನಕ್ಕೆ 33% ಪೌರಕಾರ್ಮಿಕರು ಹಾಜರಾತಿ ಪುಸ್ತಕದಲ್ಲಿ ಹಾಜರಿ ಹಾಕಿಯೂ
ಬೆಂಗಳೂರು ನಗರದಲ್ಲಿ ಕರ್ತವ್ಯದಲ್ಲಿ ಇರಲಿಲ್ಲ ಮತ್ತು ಮೇಲಾಧಿಕಾರಿಗಳ ಅನುಮತಿ ಪಡೆಯದೆ ಕೆಲಸಕ್ಕೆ ಬಂದಿಲ್ಲ ಎಂದು ಮಾಧ್ಯಮಗಳ ಎದುರು ಹೇಳಿರುವಿರಿ.
ಈ ರೀತಿ ಮೇಲಾಧಿಕಾರಿಗಳು ಹೇಳಿದ್ದಾರೆ ಎಂದಿರುವಿರಿ.
ದಯವಿಟ್ಟು ಆ ಮೇಲಾಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆಂದು ನನಗೆ ಅನ್ನಿಸುತ್ತದೆ
ಬೆಂಗಳೂರಿನ ರಸ್ತೆಗಳಲ್ಲಿ ಇಲ್ಲದ ಪೌರಕಾರ್ಮಿಕರು
ಕಾರ್ಪೋರೇಟರ್
ಎಂಎಲ್ಎ
ಎಂಪಿ
ಬಿಬಿಎಂಪಿ ಅಧ್ಯಕ್ಷರು ಉಪಾಧ್ಯಕ್ಷರು
ಬಿಬಿಎಂಪಿ ಉನ್ನತ ಅಧಿಕಾರಿಗಳ ಮನೆಗಳಿಗೆ ಮನೆಕೆಲಸಕ್ಕೆ ನಿಯೋಜನೆಗೊಂಡಿರಬಹುದು. ದಯವಿಟ್ಟು ತನಿಖೆ ನಡೆಸಿ.

ಶಿಕಾರಿಪುರದ ರೀತಿಯಲ್ಲಿ ಇಡೀ ಕರ್ನಾಟಕದಲ್ಲಿ ಪೌರ ಕಾರ್ಮಿಕರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ತನಿಖೆ ನಡೆಸಿ ನಂತರ ಪೌರಕಾರ್ಮಿಕರ ಕುರಿತು ಮಾತನಾಡಿ.

– ಪ್ರಕಾಶ್ ಕೋನಾಪುರ

Leave a Reply