ಜಿಡಿಪಿ ದರ ನಾಗಾಲೋಟದಲ್ಲಿ ಸಾಗಿದೆ, ಚಪ್ಪಾಳೆ ಹೊಡೆದು ಸಂಭ್ರಮಿಸೋಣ!

22 minutes ago

ಜಿಡಿಪಿ ದರ ನಾಗಾಲೋಟದಲ್ಲಿ ಸಾಗಿದೆ, ಚಪ್ಪಾಳೆ ಹೊಡೆದು ಸಂಭ್ರಮಿಸೋಣ!

ಭಾರತ ದೇಶದಲ್ಲಿ ಮಕ್ಕಳು ತಿನ್ನುವ ಚಾಕಲೇಟ್, ಬಿಸ್ಕತ್ ಗಳಿಗೂ ಸೇರಿದಂತೆ ಎಲ್ಲದಕ್ಕೂ ಜಿಎಸ್ಟಿ ವಿಧಿಸುತ್ತಾ ದೇಶದ ಖಜಾನೆಯನ್ನು ಹಲವಾರು ಲಕ್ಷ ಕೋಟಿ ರೂಪಾಯಿಗಳ ಲೆಕ್ಕದಲ್ಲಿ ತುಂಬಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ, ಜಿಡಿಪಿ ದರ ಏರಿಕೆಯಾಗಿದೆ. ಚಪ್ಪಾಳೆ ಹೊಡೆದು ಸಂಭ್ರಮಿಸೋಣ.

ಪೆಟ್ರೋಲ್, ಡೀಸೆಲ್, ಅಡಿಗೆ ಅನಿಲ ಬೆಲೆ ನಾಗಾಲೋಟದಲ್ಲಿ ಆಕಾಶದ ಎತ್ತರಕ್ಕೆ ಬೆಳೆಯುತ್ತಿದೆ. ಜಿಡಿಪಿ ದರವು ನಾಗಾಲೋಟದಲ್ಲಿ ಮುಂದೆ ಸಾಗಿದೆ ಚಪ್ಪಾಳೆ ಹೊಡೆದು ಸಂಭ್ರಮಿಸೋಣ.

ಸಕ್ಕರೆ, ಅಕ್ಕಿ, ಅಡಿಗೆ ಎಣ್ಣೆ, ಕಾಳು ಪದಾರ್ಥಗಳ ಬೆಲೆ ಗಗನಕ್ಕೆ ಮುಟ್ಟುತ್ತಿದೆ, ಜಿಡಿಪಿ ದರ ನಾಗಾಲೋಟದಲ್ಲಿ ಸಾಗಿದೆ ಚಪ್ಪಾಳೆ ಹೊಡೆದು ಸಂಭ್ರಮಿಸೋಣ.

ಡಾಲರ್ ಎದುರು ರೂಪಾಯಿ ಮೌಲ್ಯ ಸದ್ಯದಲ್ಲಿ  ಶತಕ ತಲುಪಿ ತನ್ನ ಮೌಲ್ಯ ಪಾತಾಳ ಸೇರುತ್ತದೆ. ಜಿಡಿಪಿ ದರ ನಾಗಾ ಲೋಟದಲ್ಲಿ ಸಾಗಿದೆ ಚಪ್ಪಾಳೆ ಹೊಡೆದು ಸಂಭ್ರಮಿಸೋಣ.

ನಿರುದ್ಯೋಗದ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಜಿಡಿಪಿ ದರ ನಾಗಲೋಟದಲ್ಲಿ ಸಾಗಿದೆ ಚಪ್ಪಾಳೆ ಹೊಡೆದು ಸಂಭ್ರಮಿಸೋಣ.

ದೇಶದ ಸಾಲ 220 ಲಕ್ಷ ಕೋಟಿ ರೂಪಾಯಿಗಳ ದಾಟುವ ಹತ್ತಿರದಲ್ಲಿದೆ. ಜಿಡಿಪಿ ದರ ಹೆಚ್ಚಾಗಿದೆ. ಚಪ್ಪಾಳೆ ಹೊಡೆದು ಸಂಭ್ರಮಿಸೋಣ.

ಉದ್ಯಮಿಗಳು ಉದ್ಯಮಗಳ ಬಾಗಿಲು ಹಾಕಿ ಮನೆಯ ಹಾದಿ ಹಿಡಿದಿದ್ದಾರೆ. ಇರುವ ಉದ್ಯೋಗವು ಲಕ್ಷಾಂತರ ಮಂದಿಗೆ ಕಣ್ಮರೆಯಾಗುತ್ತಿದೆ. ಜಿಡಿಪಿ ದರ ನಾಗಲೋಟದಲ್ಲಿ ಸಾಗಿದೆ ಚಪ್ಪಾಳೆ ಹೊಡೆದು ಸಂಭ್ರಮಿಸೋಣ.

ಚಿನ್ನದ ಬೆಲೆ ಬೆಳ್ಳಿಯ ಬೆಲೆ ಕೈಗೆ ಎಟುಕಲಾರದಷ್ಟು ಎತ್ತರಕ್ಕೆ ಹೋಗಿದೆ. ಮಾಂಗಲ್ಯಗಳ ಬದಲಿಗೆ ಅರಿಶಿನ ಕೊಂಬು ಕಟ್ಟಿ ಕಲ್ಯಾಣ ಮಾಡುವ ಸ್ಥಿತಿಗೆ ಬಡವರು ಬಂದು ತಲುಪಿದ್ದಾರೆ. ಜಿಡಿಪಿ ದರ ಹೆಚ್ಚಾಗಿದೆ, ಚಪ್ಪಾಳೆ ಹೊಡೆದು ಸಂಭ್ರಮಿಸೋಣ.

ಜೀವ ರಕ್ಷಕ ಔಷಧಿಗಳ ಬೆಲೆ ಹೆಚ್ಚಾಗಿದೆ, ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ದರ ಹೆಚ್ಚಾಗಿದೆ, ಜಿಡಿಪಿ ದರ ನಾಗಾಲೋಟದಲ್ಲಿ ಸಾಗಿದೆ. ಚಪ್ಪಾಳೆ ಹೊಡೆದು ಸಂಭ್ರಮಿಸೋಣ.

ಬಡವರು ಮತ್ತು ಶ್ರೀಮಂತರ ಅಂತರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ .ಬಡವರ ಬದುಕು ದುಸ್ತರವಾಗಿದೆ. ಶ್ರೀಮಂತರ ಬದುಕು ಸಂಭ್ರಮವಾಗುತ್ತಿದೆ. ಜಿಡಿಪಿ ದರ ವೇಗವಾಗಿ ಸಾಗಿದೆ ಚಪ್ಪಾಳೆ ಹೊಡೆದು ಸಂಭಮಿಸೋಣ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply