ಅಧಿಕಾರಕ್ಕೆ ಬಂದ ಸರ್ಕಾರಗಳು ಕರ್ನಾಟಕ ಲೋಕಸೇವಾ ಆಯೋಗಕ್ಕೆ ತಮಗೆ ಬೇಕಾದವರು ಮತ್ತು ತಮ್ಮ ಹಿತಚಿಂತಕರನ್ನು ಸದಸ್ಯರನ್ನಾಗಿ ಮತ್ತು ಅಧ್ಯಕ್ಷರನ್ನಾಗಿ ನೇಮಕ ಮಾಡುವುದು ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಇಲ್ಲಿನ ಎಲ್ಲಾ ಅನಾಹುತಗಳಿಗೆ ಇವರ ನಿರ್ಧಾರಗಳೇ ಪ್ರಮುಖ ಕಾರಣವಾಗಿದೆ.
- ಪ್ರಜಾಸೇವಾ ಆಂದೋಲನ ಪೂರ್ವಭಾವಿ ಸಭೆ ನಡೆಸಿದ ದರ್ಶನ್ ಪುಟ್ಟಣ್ಣಯ್ಯ
- ದಲಿತರು ಎಲ್ಲಿಗೇ ಭೇಟಿ ನೀಡಿದರೂ ಅಲ್ಲಿ ಶುದ್ಧೀಕರಣ ಮಾಡುವುದು ತಪ್ಪು: ಆರ್.ಅಶೋಕ
- ಕೆಪಿಎಸ್ಸಿ ಸದಸ್ಯರು ಮತ್ತು ಅಧ್ಯಕ್ಷರ ಆಯ್ಕೆಯಲ್ಲಿ ಬೇಕಿದೆ ಪಾರದರ್ಶಕತೆ
- ವಿದೇಶಿ ವೇದಿಕೆಯಲ್ಲಿ ಕೇಳಿಸುವ ಭಾವೈಕ್ಯತೆಯ ಭಾಷೆ ಭಾರತದ ಬೀದಿಗಳಲ್ಲೂ ಕೇಳಿಸಬೇಕು: ಬಿ ಕೆ ಹರಿಪ್ರಸಾದ್
- ಅಮಾಯಕ ಮುಸ್ಲೀಮರು, ದಲಿತರು, ಆದಿವಾಸಿ ಸಮುದಾಯಗಳ ಪಾಡೇನು ಆಗಿರಬಹುದು?
ಕರ್ನಾಟಕ ಲೋಕಸೇವಾ ಆಯೋಗ ರಾಜ್ಯದ ಆಡಳಿತವನ್ನು ನಿಯಂತ್ರಿಸಬಲ್ಲಂತಹ ಪ್ರಮುಖವಾದ ಅಧಿಕಾರಿಗಳನ್ನು ಆಯ್ಕೆ ಮಾಡುವಂತಹ ಸಂಸ್ಥೆಯಾಗಿರುತ್ತದೆ. ಇಲ್ಲಿ ಪ್ರಾಮಾಣಿಕರು ಮತ್ತು ಉತ್ತಮ ಜನ ಸದಸ್ಯರಾಗಿದ್ದರೆ ಮಾತ್ರ ಹುದ್ದೆಗಳಿಗೆ ಆಯ್ಕೆ ಮಾಡುವ ಸಂದರ್ಭದಲ್ಲಿ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಮಾನದಂಡವನ್ನಾಗಿಸಿಕೊಂಡು ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ. ಭ್ರಷ್ಟರು, ಸ್ವಾರ್ಥಿಗಳು, ಜಾತಿವಾದಿಗಳು ಸದಸ್ಯರು ಅಥವಾ ಅಧ್ಯಕ್ಷರಾದರೆ ಹಣದ ಚೀಲದ ಹಿಂದೆ, ಇಲ್ಲವೇ ಇತರೆ ಪ್ರಭಾವಗಳಿಗೆ ಮಣಿದು ಅಯೋಗ್ಯರನ್ನು ಮತ್ತು ಪ್ರತಿಭೆ ಇಲ್ಲದವರನ್ನು ಆಯ್ಕೆ ಮಾಡಿ ಆಡಳಿತ ಯಂತ್ರ ಸಂಪೂರ್ಣವಾಗಿ ದಾರಿ ತಪ್ಪುವಂತೆ ಮಾಡುತ್ತಾರೆ.
ಯಾವ ರೀತಿಯಲ್ಲಿ ಲೋಕಾಯುಕ್ತ ವ್ಯವಸ್ಥೆಗೆ ನಿವೃತ್ತ ಹೈಕೋರ್ಟಿನ ನ್ಯಾಯಾಧೀಶರು ನೇಮಕಮಾಡುವ ಪದ್ಧತಿ ಇದೆಯೋ, ಅದೇ ರೀತಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗುವವರು ನಿವೃತ್ತರಾದ ನ್ಯಾಯಾಧೀಶರಾಗಿರಬೇಕು ಎನ್ನುವ ಒಂದು ಮಾನದಂಡವನ್ನಾದರೂ ರೂಪಿಸಿ.
ಲೋಕಾಯುಕ್ತ ಮತ್ತು ಕರ್ನಾಟಕ ಲೋಕಸೇವಾ ಆಯೋಗ ಮುಂತಾದಂತಹ ಸಂಸ್ಥೆಗಳಿಗೆ ಆಯ್ಕೆಯಾಗುವ ಸದಸ್ಯರು ಮತ್ತು ಅಧ್ಯಕ್ಷರು ಪ್ರತಿ ವರ್ಷವೂ ತಮ್ಮ ಆದಾಯದ ಘೋಷಣೆಯನ್ನ ಮಾಡಿಕೊಳ್ಳುವಂತಹ ಕಾನೂನನ್ನು ರೂಪಿಸಿ.
ಪದೇಪದೇ, ಇಲ್ಲಿ ಲೋಪಗಳು ಆಗುತ್ತಲೇ ಇರುತ್ತದೆ. ವಿವಿಧ ರೀತಿಯ ವಿಚಾರಣೆಗಳು ನಡೆಯುತ್ತಲೇ ಇರುತ್ತದೆ. ಪ್ರಕರಣಗಳು ನ್ಯಾಯಾಲಯಗಳಲ್ಲಿ ಸುತ್ತಾಡಿ, ಸುತ್ತಾಡಿ, ಅಂತಿಮವಾಗಿ ತೀರ್ಪು ಬರುವ ವೇಳೆಗೆ ಪ್ರಕರಣದಲ್ಲಿ ಭಾಗಿಯಾದವರು ಇರುವುದಿಲ್ಲ. ಅನ್ಯಾಯಕ್ಕೆ ಒಳಗಾದವರು ಸುಸ್ತಾಗಿ ಮನೆ ಸೇರಿರುತ್ತಾರೆ.
ಕರ್ನಾಟಕ ಲೋಕಸೇವಾ ಆಯೋಗದ ವಿಚಾರದಲ್ಲಿ ಈಗಾಗಲೇ ಹಲವಾರು ಸಮಿತಿಗಳು ಸುಧಾರಣೆಗೆ ವರದಿಯನ್ನು ನೀಡಿದೆ ವರದಿಗಳು ಜಾರಿಗೆ ಬಂದಿರುವುದಿಲ್ಲ.
ರಾಜಕೀಯ ಪಕ್ಷಗಳು ಇಂತಹ ಪ್ರಮುಖವಾದ ಸಂಸ್ಥೆಗಳಿಗೆ ಸದಸ್ಯರು ಮತ್ತು ಅಧ್ಯಕ್ಷರನ್ನು ನೇಮಕ ಮಾಡುವ ಸಂದರ್ಭದಲ್ಲಿ ತಮಗೆ ಎಷ್ಟು ನಿಷ್ಠರು ಎನ್ನುವುದಕ್ಕಿಂತ, ಸಮಾಜಕ್ಕೆ ಮತ್ತು ರಾಜ್ಯದ ಜನರಿಗೆ ಎಷ್ಟರಮಟ್ಟಿಗೆ ನಿಷ್ಠರಾಗಿರುತ್ತಾರೆ ಎನ್ನುವುದನ್ನು ಮೊದಲು ಪರಿಗಣಿಸಿ.
ಇಲ್ಲಿ ಸದಸ್ಯರು ಮತ್ತು ಅಧ್ಯಕ್ಷರನ್ನು ಜಾತಿ, ಪಂಗಡ ಇವುಗಳ ಆಧಾರದ ಮೇಲೆ ನೇಮಕ ಮಾಡುವುದು ಸರಿಯಲ್ಲ. ಆಯ್ಕೆಯ ಸಂದರ್ಭದಲ್ಲಿ ಅವರ ಹಿನ್ನೆಲೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ.
ಕರ್ನಾಟಕ ಲೋಕಸೇವಾ ಆಯೋಗದ ಅನೇಕ ಹುದ್ದೆಗಳಿಗೆ ನಡೆದಿರುವ ಬಹಳಷ್ಟು ಪರೀಕ್ಷೆಗಳ ಫಲಿತಾಂಶದ ವಿಚಾರದಲ್ಲಿ ಅಭ್ಯರ್ಥಿಗಳು ನ್ಯಾಯಾಲಯಗಳಲ್ಲಿ ತೀರ್ಪುಗಳು ಬಂದ ನಂತರ ಮತ್ತೆ ಅವುಗಳನ್ನು ಪ್ರಶ್ನಿಸಿ ಮತ್ತೊಂದು ನ್ಯಾಯಾಲಯಕ್ಕೆ ಹೋಗುತ್ತಲೇ ಇದ್ದಾರೆ. ಬಹಳಷ್ಟು ಪ್ರಕರಣಗಳು ವಿಚಾರಣೆಯ ಹಂತದಲ್ಲಿಯೇ ಉಳಿದಿದೆ. ಆಯ್ಕೆ ಆದ ಅಭ್ಯರ್ಥಿಗಳು ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಲೋಕಸೇವಾ ಆಯೋಗದ ಮೂಲಕ ಹುದ್ದೆಯನ್ನ ಗಳಿಸಬಹುದೆಂಬ ನಿರೀಕ್ಷೆಯಲ್ಲಿರುವ ಯುವ ಸಮುದಾಯಕ್ಕೆ ಇಲ್ಲಿನ ವ್ಯವಸ್ಥೆಗಳಿಂದ ಅವಿಶ್ವಾಸ ಮೂಡಿ ಅನುಮಾನದಿಂದ ನೋಡುವಂತಾಗಿದೆ.
ಈಗಲಾದರೂ ಕರ್ನಾಟಕ ಲೋಕಸೇವಾ ಆಯೋಗದ ಸಂಸ್ಥೆಗೆ ಸಂಪೂರ್ಣವಾದಂತಹ ಚಿಕಿತ್ಸೆಯನ್ನ ಮಾಡಿ ಮುಂದಿನ ದಿನಗಳಲ್ಲಿ ಸಂಸ್ಥೆ ನಂಬಿಕೆ ಮತ್ತು ವಿಶ್ವಾಸವನ್ನು ಉಳಿಸಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಲಿ.
– ಕೆ ಎಸ್ ನಾಗರಾಜ್, ಬೆಂಗಳೂರು




