ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಆಯೋಜಿಸಿರುವ ಸಹಾಯಕ ತೋಟಗಾರಿಕೆ ಅಧಿಕಾರಿ (AHO) ಮತ್ತು ಸಹಾಯಕ ತೋಟಗಾರಿಕೆ ನಿರ್ದೇಶಕ (ADH) ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ದಿನಾಂಕಗಳನ್ನು ಮುಂದೂಡುವಂತೆ ಅಭ್ಯರ್ಥಿಗಳು ನನಗೆ ಮನವಿ ಸಲ್ಲಿಸಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
- AHO, ADH ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ದಿನಾಂಕಗಳನ್ನು ಮುಂದೂಡಿ: ಆರ್ ಅಶೋಕ್
- ಕೃಷ್ಣ ಬೈರೇಗೌಡ ಅವರಿಗೆ ಪ್ರಕಾಶ್ ಕೋನಾಪುರ ಬರೆದ ಪತ್ರ
- ಆಹಾರ, ಔಷಧ ಕ್ಷೇತ್ರದ ಯಾವುದೇ ಅಕ್ರಮ ಜಾಲವನ್ನು ಸರ್ಕಾರ ಸಹಿಸದು: ಯು.ಟಿ.ಖಾದರ್
- ಜಯಚಾಮರಾಜೇಂದ್ರ ಒಡೆಯರ್ ಕೃತಿಗಳಿಗೆ ಭರತನಾಟ್ಯ ಪ್ರಯೋಗ
- ಕಿದ್ವಾಯಿ ಕ್ಯಾನ್ಸರ್ ಮತ್ತು ಜಯದೇವ ಹೃದ್ರೋಗ ಆಸ್ಪತ್ರೆ ಆರಂಭಿಸುವಂತೆ ಒತ್ತಾಯ
ಸುಮಾರು 8 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ತೋಟಗಾರಿಕೆ ಇಲಾಖೆಯ ಈ ನೇಮಕಾತಿ ಪರೀಕ್ಷೆಗಳು ಸೆಪ್ಟೆಂಬರ್ 26 ಮತ್ತು 27, 2026ರಂದು ನಿಗದಿಯಾಗಿವೆ. ಆದರೆ, ಇದೇ ದಿನಾಂಕಗಳಲ್ಲಿ SSC ಹಾಗೂ SBI Clerk ಪರೀಕ್ಷೆಗಳೂ ನಡೆಯುತ್ತಿರುವುದರಿಂದ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ತೊಂದರೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ.
ಬಹಳಷ್ಟು ಅಭ್ಯರ್ಥಿಗಳು ಈ ಎಲ್ಲಾ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದ್ದು, ಪರೀಕ್ಷೆಗಳು ಒಂದೇ ದಿನಾಂಕಕ್ಕೆ ಬಂದಿರುವುದರಿಂದ ಅನಿವಾರ್ಯವಾಗಿ ಅವಕಾಶ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ ಎಂದಿದ್ದಾರೆ.
ಅಭ್ಯರ್ಥಿಗಳ ಭವಿಷ್ಯ ಮತ್ತು ಹಿತದೃಷ್ಟಿಯಿಂದ, ಇತರೆ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳೊಂದಿಗೆ ಘರ್ಷಣೆಯಾಗದಂತೆ ಸೂಕ್ತವಾದ ಹೊಸ ದಿನಾಂಕಕ್ಕೆ ಮರುನಿಗದಿಪಡಿಸುವುದು ನ್ಯಾಯಯುತ ಕ್ರಮವಾಗಿದೆ. ಆದ್ದರಿಂದ, ರಾಜ್ಯ ಸರ್ಕಾರ ಹಾಗೂ KEA ಆಡಳಿತ ಮಂಡಳಿಯು ತಕ್ಷಣ ಮಧ್ಯಪ್ರವೇಶಿಸಿ, ಅಭ್ಯರ್ಥಿಗಳಿಗೆ ಯಾವುದೇ ಗೊಂದಲ ಉಂಟಾಗದಂತೆ ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಬೇಕೆಂದು ಆಗ್ರಹಿಸಿದ್ದಾರೆ.
ವರ್ಷಗಳ ಕಾಲ ಕಾದು, ಹಗಲಿರುಳು ಸಿದ್ಧತೆ ನಡೆಸಿರುವ ನಮ್ಮ ಯುವಜನತೆಗೆ ಒಂದು ಅವಕಾಶವನ್ನೂ ಅನ್ಯಾಯವಾಗಿ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.




