ಅಮಾಯಕ ಮುಸ್ಲೀಮರು, ದಲಿತರು, ಆದಿವಾಸಿ ಸಮುದಾಯಗಳ ಪಾಡೇನು ಆಗಿರಬಹುದು?

8 hours ago

ಪುತ್ತೂರು ಚಲೋ ಎಂಬ ದ್ವೇಷದ ಕಾರ್ಯಕ್ರಮದಲ್ಲಿ ಭಾಷಣಕಾರರೊಬ್ಬರು “ಪೊಲೀಸರೇ, ನೀವು ಯಾರ ಮುಂದೆ ಕೈಕಟ್ಟಿ ನಿಂತುಕೊಳ್ಳುತ್ತಿರೋ ಆ ವ್ಯಕ್ತಿಯ ಮೇಲೆ 9 ಕ್ರಿಮಿನಲ್ ಕೇಸುಗಳಿವೆ. ಪ್ರಿಯಾಂಕ್ ಖರ್ಗೆಯ ಮೇಲೆ 9 ಕ್ರಿಮಿನಲ್ ಕೇಸುಗಳಿದ್ದು ಆತನನ್ನು ಕಲಬುರಗಿಯ ರೌಡಿಶೀಟರ್ ಗಳ ಜೊತೆ ಪೆರೇಡ್ ಮಾಡಿಸಬೇಕು” ಎಂದು ಭಾಷಣ ಮಾಡಿದ್ದಾರೆ. ಇಷ್ಟಾದರೂ ಈ ವ್ಯವಸ್ಥೆ ಸುಮ್ಮನಿದೆ ಎಂದರೆ, ಅಮಾಯಕ ಮುಸ್ಲೀಮರು, ದಲಿತರು, ಆದಿವಾಸಿ ಸಮುದಾಯಗಳ ಪಾಡೇನು ಆಗಿರಬಹುದು?

ಹೌದು, ಪ್ರಿಯಾಂಕ್ ಖರ್ಗೆಯವರ ವಿರುದ್ಧ 9 ಪ್ರಕರಣಗಳು ದಾಖಲಾಗಿವೆ. ಆ ಪ್ರಕರಣಗಳ ಪಟ್ಟಿಯನ್ನೇ ನಾನು ಹಿಂದುತ್ವವಾದಿಗಳ ಮುಂದಿಡುತ್ತೇನೆ. ಅವರು ಆ ಪ್ರಕರಣಗಳ ಸ್ವರೂಪವನ್ನು ಪರಿಶೀಲಿಸಲಿ.

ಪ್ರಕರಣಗಳ ವಿವರ :
1. ಕ್ರೈಂ ನಂ. 2990/2023
2. ಕ್ರೈಂ ನಂ. 0019/2023
3. ಕ್ರೈಂ ನಂ. 0149/2022
4. ಕ್ರೈಂ ನಂ. 0054/2022
5. ಕ್ರೈಂ ನಂ. 12/2022
6. ಕ್ರೈಂ ನಂ. 20/2022
7. ಕ್ರೈಂ ನಂ. 0001/2022
8. ಕ್ರೈಂ ನಂ. 0001/2022 – ಕನಕಪುರ ಪೊಲೀಸ್ ಠಾಣೆ
9. ಕ್ರೈಂ ನಂ. 0002/2022 – ಸಾತನೂರು ಪೊಲೀಸ್ ಠಾಣೆ

ನಾನು ನೀಡಿರುವ ಮಾಹಿತಿಯ ಪ್ರಕಾರ, ಇವುಗಳಲ್ಲಿ ಎಲ್ಲಾ ಪ್ರಕರಣಗಳು ಕಾಂಗ್ರೆಸ್ ಪಕ್ಷದ ಹೋರಾಟಗಳ ಹಿನ್ನೆಲೆಯಲ್ಲಿ, ಹೈಗ್ರೌಂಡ್ಸ್ ಮತ್ತು ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಗಳಿಗೆ ಸಂಬಂಧಿಸಿದವು. ಕನಕಪುರ ಮತ್ತು ಸಾತನೂರು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳು ರಾಜ್ಯದ ಜನರಿಗೆ ನೀರು ಒದಗಿಸುವ ಮೇಕೆದಾಟು ಯೋಜನೆಗಾಗಿ ನಡೆದ ಹೋರಾಟಕ್ಕೆ ಸಂಬಂಧಿಸಿದವು. ಜನಹೋರಾಟದ ಹಿನ್ನಲೆಯುಳ್ಳ ವ್ಯಕ್ತಿಯೊಬ್ಬರು ರಾಜ್ಯದ ಗೃಹ ಸಚಿವರಾಗಿದ್ದಾರೆ ಎಂಬುದು ಖುಷಿಯ ವಿಷಯ ಅಲ್ಲವೇ ?

ಈ ಪ್ರಕರಣಗಳನ್ನು ಹೊರತುಪಡಿಸಿದರೆ ಅವರ ವಿರುದ್ದ ಬಿಜೆಪಿ ರಾಜ್ಯಾದ್ಯಕ್ಷರಂತೆ ಯಾವುದೇ ಭ್ರಷ್ಟಾಚಾರ, ತೆರಿಗೆ ವಂಚನೆ ಸೇರಿದಂತೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಬಿ ಎಸ್ ಯಡಿಯೂರಪ್ಪರಂತೆ ಪೋಕ್ಸೋ ಪ್ರಕರಣವೂ ದಾಖಲಾಗಿಲ್ಲ. ಭಾಷಣಕಾರ ಹೇಳುವಂತೆ ಪೊಲೀಸರು ಕೈಕಟ್ಟಿ ನಿಲ್ಲುವಷ್ಟು ಅರ್ಹತೆಯನ್ನು ಪ್ರೀಯಾಂಕ್ ಖರ್ಗೆಯವರ ಹೋರಾಟ ತಂದುಕೊಟ್ಟಿದೆ. ಭಾಷಣಕಾರ ಹೇಳುವಂತೆ ರೌಡಿಗಳ ಜೊತೆ ಪೆರೇಡ್ ಮಾಡಿಸುವಂತಹ ಯಾವ ಪ್ರಕರಣಗಳು ಪ್ರಿಯಾಂಕ್ ಖರ್ಗೆಯವರ ಮೇಲಿಲ್ಲ.

ಹಾಗಾಗಿ ಸೈದ್ದಾಂತಿಕ ಸ್ಪಷ್ಟತೆಯುಳ್ಳ, ಭ್ರಷ್ಟಾಚಾರ ಮುಕ್ತ, ಸಿಬಿಐ, ಇಡಿ, ಐಟಿ ದಾಳಿಗೆ ಸಿಲುಕುವ ಬೆದರಿಕೆ ಹೊಂದಿಲ್ಲದ, ಅಂಬೇಡ್ಕರ್ ವಾದಿ ಪ್ರಿಯಾಂಕ್ ಖರ್ಗೆ ಗೃಹ ಸಚಿವರಾಗಿರುವುದು ಸಂಘಪರಿವಾರಕ್ಕೆ ನುಂಗಲಾರದ ತುತ್ತಾಗಿದೆ. ಯಾವ ರೀತಿಯಲ್ಲೂ ಬೆದರಿಸಿ, ಬ್ಲ್ಯಾಕ್ ಮೇಲ್ ಮಾಡಿ ಬಗ್ಗಿಸಲಾಗದ ಪ್ರಿಯಾಂಕ್ ಖರ್ಗೆಯವರ ವಿರುದ್ದ ಏಕವಚನದಲ್ಲಿ ದಾಳಿ ಮಾಡಿ, ಅಪಪ್ರಚಾರ ಮಾಡುವುದಷ್ಟೇ ದ್ವೇಷಭಾಷಣಕಾರರಿಗೆ ಉಳಿದಿರುವ ದಾರಿ.

– ನವೀನ್ ಸೂರಿಂಜೆ, ಹಿರಿಯ ಪತ್ರಕರ್ತರು

Leave a Reply