ನಮ್ಮ ದೇಶದಲ್ಲಿ ಬಹುತೇಕ ರಾಜಕಾರಣಿಗಳು ಮತ್ತು ವಿಐಪಿಗಳು ಪದೇಪದೇ ಧಾರ್ಮಿಕ ಸಂಸ್ಥೆಗಳಿಗೆ ಮಠಗಳಿಗೆ ದೇವಾಲಯಗಳಿಗೆ ಪ್ರವೇಶವನ್ನ ನೀಡುತ್ತಾರೆ. ಅಲ್ಲಿ ಅವರಿಗೆ ಆಡಳಿತ ಮಂಡಳಿಯವರು ವಿಶೇಷವಾದಂತಹ ಗೌರವದಿಂದ ಬರಮಾಡಿಕೊಂಡು ಸತ್ಕರಿಸುತ್ತಾ ಉಪಚಾರವನ್ನು ಮಾಡುತ್ತಾರೆ. ಇದು ಎಲ್ಲ ಸಂದರ್ಭಗಳಲ್ಲೂ ಸರಿಯಲ್ಲ.
- ಪ್ರತಾಪ್ ಸಿಂಹ ‘ದೇಶಭ್ರಷ್ಟರ’ ಪೋಸ್ಟ್ಗೆ ನೆಟ್ಟಿಗರ ಕಟು ವಿಮರ್ಶೆ
- ಹೆರಿಗೆಯಾದ ಗಂಟೆಯೊಳಗೆ ಮಗುವಿಗೆ ಎದೆಹಾಲು ನೀಡಿ: ಶಿವಾನಂದ ವಿ.ಪಿ
- ಪ್ರೊ. ಬರಗೂರು ಅವರ ದಿಟ್ಟ ಹೆಜ್ಜೆ – 25 ವರ್ಷಗಳ ಸಾರ್ಥಕ ಯಾನ!
- ಸಂಪುಟದಿಂದ ಹೊರಗಿಟ್ಟಿರುವುದು ನನಗೆ ಸಿಕ್ಕ ಪ್ರತಿಫಲವೇ?: ಬಿ ಆರ್ ಪಾಟೀಲ್
- ಸಂಪುಟದಲ್ಲಿ ಭ್ರಷ್ಟಾಚಾರಿಗಳು, ಪೇಮೆಂಟ್ ಕೋಟಾ ಮೂಲಕ ಅವಕಾಶ ಗಿಟ್ಟಿಸಿಕೊಂಡವರು ಇದ್ದಾರೆ: ಆರ್.ಅಶೋಕ
ಯಾವುದೇ ಒಬ್ಬ ರಾಜಕಾರಣಿ ಅಥವಾ ಗಣ್ಯ ವ್ಯಕ್ತಿಗಳು ಗಂಭೀರವಾದ ಅಂತಹ ಆರೋಪಗಳಿಗೆ ಗುರಿಯಾಗಿ ನ್ಯಾಯಾಲಯಗಳಲ್ಲಿ ತನಿಖೆಯನ್ನು ಎದುರಿಸುತ್ತಿದ್ದರೆ, ಇಲ್ಲವೇ ಜಾಮೀನನ ಮೇಲೆ ಬಂದಿದ್ದರೆ; ಅಂತಹ ವ್ಯಕ್ತಿಗಳಿಗೆ ಅವರು ಎಷ್ಟೇ ದೊಡ್ಡವರಾದರೂ ಸರಿ ಮಠಕ್ಕೆ ಮತ್ತು ದೇವಾಲಯಗಳಿಗೆ ಬಂದ ಸಂದರ್ಭದಲ್ಲಿ ವಿಶೇಷವಾದಂತಹ ಆತಿಥ್ಯವನ್ನ ನೀಡುವುದು ಸರಿಯಲ್ಲ.
ಬೇಕಾದರೆ ಅವರು ಬಂದು ದರ್ಶನವನ್ನ ಪಡೆದು ಪ್ರಾರ್ಥನೆಯನ್ನು ಮಾಡಿಕೊಂಡು ಹೋಗಲಿ. ಆದರೆ ಆರೋಪ ಹೊತ್ತಿರುವ ಜನರಿಗೆ ಅವರು ದೊಡ್ಡವರೆಂಬ ಕಾರಣದಿಂದ ವಿಶೇಷವಾದಂತಹ ಆತಿಥ್ಯವನ್ನು ನೀಡುವುದರಿಂದ ಜನಸಾಮಾನ್ಯರಲ್ಲಿ ಧಾರ್ಮಿಕ ಸಂಸ್ಥೆಗಳು ಮಠಗಳು ಮತ್ತು ದೇವಾಲಯದ ಆಡಳಿತ ಮಂಡಳಿಯ ನಡವಳಿಕೆ ಬಗ್ಗೆ ಅಸಮಾಧಾನವಾಗುತ್ತದೆ.
ಈ ಹಿನ್ನೆಲೆಯಲ್ಲಿ ಇನ್ನು ಮುಂದಾದರು ಯಾವುದೇ ದೊಡ್ಡ ವ್ಯಕ್ತಿಯಾದರು ಸರಿಯೇ ಜಾಮೀನು ಪಡೆದವರು, ಆರೋಪಗಳನ್ನು ಹೊತ್ತವರು ಹಾಗೂ ಅಪರಾಧಿಗಳಾಗಿ ಶಿಕ್ಷೆಯನ್ನ ಅನುಭವಿಸಿದವರು ಬಂದಂತಹ ಸಂದರ್ಭದಲ್ಲಿ ವಿಶೇಷ ಆತಿಥ್ಯ ನೀಡುವುದನ್ನು ನಿರಾಕರಿಸಿ ಅವರನ್ನು ಸಾಮಾನ್ಯರಂತೆ ಪರಿಗಣಿಸಿದರೆ ನೈತಿಕತೆ ಎತ್ತಿ ಹಿಡಿದಂತಾಗುತ್ತದೆ. ಇದರಿಂದ ಅಪರಾಧ ಮಾಡುವ ವ್ಯಕ್ತಿಗಳಿಗೆ ತಮ್ಮ ತಪ್ಪಿನ ಅರಿವಾಗುತ್ತದೆ. ಒಂದು ರೀತಿಯಲ್ಲಿ ಪಶ್ಚಾತಾಪವೂ ಪಡುವಂತಾಗುತ್ತದೆ. ಆದುದರಿಂದ ಈ ನಿಟ್ಟಿನಲ್ಲಿ ಧಾರ್ಮಿಕ ಸಂಸ್ಥೆಗಳು ಆಲೋಚಿಸಿದರೆ ಒಳ್ಳೆಯದು.
ಇಂತಹ ವ್ಯಕ್ತಿಗಳು ಬಂದಂತಹ ಸಂದರ್ಭದಲ್ಲಿ ವಿಶೇಷವಾದಂತಹ ಗೌರವ ನೀಡಿ ಆತಿಥ್ಯ ನೀಡುವುದನ್ನ ಗಮನಿಸಿದಾಗ ಇಲ್ಲಿ ಒಳ್ಳೆಯವರು ಒಳ್ಳೆತನದಿಂದ ಆತ್ಮ ಸಾಕ್ಷಿಗೆ ಅಂಜಿ ಬದುಕು ನಡೆಸುವವರು ಸಿಟ್ಟಾಗುತ್ತಾರೆ.
- ಕೆಎಸ್ ನಾಗರಾಜ್, ಬೆಂಗಳೂರು



