ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರು ಕುವೆಂಪು ಎಂದೇ ಸಾಹಿತ್ಯ ಲೋಕದಲ್ಲಿ ಪರಿಚಿತರು. 29.12.1904ರಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಿರೇಕೊಡಿಗೆಯಲ್ಲಿ ವೆಂಕಟಪ್ಪ ಗೌಡ, ಸೀತಮ್ಮ ದಂಪತಿಗೆ ಜನಿಸಿದರು.

ಕತೆಗಳು, ಕವಿತೆಗಳು, ಪ್ರಬಂಧ, ಖಂಡಕಾವ್ಯ, ಮಹಾಕಾವ್ಯ, ಕಾದಂಬರಿ, ಕಾವ್ಯಮೀಮಾಂಸೆ, ವಿಮರ್ಶೆ ಮತ್ತು ಸಂಪಾದನೆ ಕ್ಷೇತ್ರದಲ್ಲಿ ಕನ್ನಡದಲ್ಲಿ ಮಹತ್ವದ ಕೃತಿಗಳನ್ನು ಕುವೆಂಪು ಹೊರತಂದಿದ್ದಾರೆ.

ಕರ್ನಾಟಕ ರತ್ನ, ಪಂಪ, ನಾಡೋಜ, ಕೇಂದ್ರ ಸಾಹಿತ್ಯ ಅಕಾಡೆಮಿ, ಜ್ಞಾನಪೀಠ ಸೇರಿದಂತೆ ಮಹತ್ವದ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ.

ಕುವೆಂಪು ಕೃತಿಗಳು
ಕವನ ಸಂಕಲನ, ಮಹಾಕಾವ್ಯ, ಖಂಡಕಾವ್ಯಗಳು

1922 -Beginner’s Muse – ಇಂಗ್ಲಿಷ್ ಕವನ ಸಂಕಲನ
1924 – ಅಮಲನ ಕಥೆ – ಮಕ್ಕಳಿಗಾಗಿ ಬರೆದ ಕಾಲ್ಪನಿಕ ಕಾವ್ಯ
1926 – ಹಾಳೂರು ನೀಳ್ಗವನ
1928 – ಬೊಮ್ಮನಹಳ್ಳಿಯ ಕಿಂದರಿಜೋಗಿ; ಬ್ರೌನಿಂಗ್ ಕವಿಯ The Pide Piper Of Hamelin ಕವಿತೆಯ ಪ್ರಭಾವದಿಂದ ರಚಿತವಾದ ನೀಳ್ಗಾವ್ಯ. ಮೊದಲು ‘ಕಿರಿಯರ ಕಾಣಿಕೆ’ ೧೯೨೮ರಲ್ಲಿ ಪ್ರಕಟವಾಯಿತು. ಪ್ರತ್ಯೇಕವಾಗಿ ಕಾವ್ಯಾಲಯ, ಮೈಸೂರಿನಲ್ಲಿ ೧೯೪೨ರಲ್ಲಿಯೂ, ೧೯೪೫ರಲ್ಲಿ ಆರ್.ಕೆ. ಲಕ್ಷ್ಮಣ್ ರ ಚಿತ್ರಗಳನ್ನು ಒಳಗೊಂಡು ಪ್ರಕಟವಾಯಿತು.

1930 – ಕೊಳಲು – ಕುವೆಂಪು ಅವರ ಮೊದಲನೆಯ ಪ್ರಾತಿನಿಧಿಕ ಕವನ ಸಂಕಲನ
1933 – ಪಾಂಚಜನ್ಯ – ಕ್ರಾಂತಿಕವನಗಳು
1934 – ನವಿಲು – ಪ್ರಕೃತಿ ಪ್ರಧಾನವಾದ ಕವನಗಳು (ನವಿಲು ಗರಿ-೧, ಗರಿ-೨ ಎಂಬುದಾಗಿ ಒಂದೇ ಸಂಪುಟವಾಗಿ ಕರ್ನಾಟಕ ಸಂಘ ಶಿವಮೊಗ್ಗದಿಂದ ಪ್ರಕಟವಾಗಿತ್ತು. ಅನಂತರ ನವಿಲು, ಕಲಾಸುಂದರಿ ಎಂದು ಬೇರೆಬೇರೆಯಾಗಿ ಪ್ರಕಟವಾಯಿತು).
1934 – ಕಲಾಸುಂದರಿ – ಪ್ರಕೃತಿ ಪ್ರಧಾನವಾದ ಕವಿತೆಗಳು
1936 – ಕಿಂದರಿಜೋಗಿ ಮತ್ತು ಇತರ ಕಥನ ಕವನಗಳು – ಕಥನ ಕವನಗಳ ಸಂಗ್ರಹ
1936 – ಚಿತ್ರಾಂಗದಾ – ಸರಳ ರಗಳೆಯ ಖಂಡಕಾವ್ಯ, ಮಹಾಛಂದಸ್ಸಿನ ಕೃತಿ

1944 – ಕೋಗಿಲೆ ಮತ್ತು ಸೋವಿಯತ್ ರಷ್ಯಾ – ಕ್ರಾಂತಿ ಕವನಗಳು
1946 – ನನ್ನ ಮನೆ – ಶಿಶುಗೀತೆಗಳು
1946 – ಕೃತ್ತಿಕೆ – ಪ್ರಕೃತಿ, ವ್ಯಕ್ತಿ ಪ್ರಧಾನವಾದ ಸಾನೆಟ್ಟುಗಳ ಕವನ ಸಂಕಲನ
1946 – ಪಕ್ಷಿಕಾಶಿ – ಪ್ರಕೃತಿ ಪ್ರಧಾನ ಕವನಗಳು
1946 – ಪ್ರೇಮಕಾಶ್ಮೀರ – ಪ್ರೇಮಗೀತೆಗಳು
1946 – ಅಗ್ನಿಹಂಸ – ಅನುಭಾವ ಪ್ರಧಾನವಾದ ಕವನಗಳು
1946 – ಕಿಂಕಿಣಿ – ವಚನ ಕವನಗಳು
1946 – ಶಿಶುಗೀತಾಂಜಲಿ (ಮರಿವಿಜ್ಞಾನಿ, ನನ್ನ ಮನೆ, ಮೇಘಪುರ)
1947 – ಮೇಘಪುರ – ಶಿಶುಗೀತೆಗಳು
1947 – ಮರಿವಿಜ್ಞಾನಿ – ಶಿಶುಗೀತೆಗಳು
1947 – ಷೋಡಶಿ – ಪ್ರೇಮಗೀತೆಗಳಲು
1947 – ಸ್ವಾತಂತ್ರ್ಯೋದಯ ಮಹಾಪ್ರಗಾಥ, ದೀರ್ಘಕವಿತೆ
1948 – ಬಾಪೂಜಿಗೆ ಶ್ರದ್ಧಾಂಜಲಿ
1949 – ಶ್ರೀರಾಮಾಯಣ ದರ್ಶನಂ – ಸಂಪುಟ 1 ಮಹಾಛಂದಸ್ಸಿನ ಮಹಾಕಾವ್ಯ

1951 – ಶ್ರೀ ರಾಮಾಯಣ ದರ್ಶನಂ ಸಂಪುಟ 2 ಮಹಾಭಂದಸ್ಸಿನ ಮಹಾಕಾವ್ಯ
1952 – ಜೇನಾಗುವಾ – ಪ್ರೇಮಗೀತೆಗಳು
1954 – ಚಂದ್ರ ಮಂಚಕೆ ಬಾ, ಚಕೋರಿ! – ಪ್ರೇಮ ಕವನಗಳು
1957 – ಇಕ್ಷುಗಂಗೋತ್ರಿ – ದೇಶ – ಸಮಾಜವನ್ನು ಕುರಿತ ಕವನಗಳು

1963 – ಅನಿಕೇತನ – ಅನುಭಾವ ಪ್ರಧಾನವಾದ ಕವಿತೆಗಳು
1965 – ಅನುತ್ತರಾ – ಪ್ರೇಮ ಕವಿತೆಗಳು
1966 – ಮಂತ್ರಾಕ್ಷತೆ – ಸಂಕೀರ್ಣ ಪುಡಿ ಕವನಗಳು
1967 – ಪ್ರೇತ ಕ್ಯೂ – ಸಾಮಾಜಿಕ, ರಾಜಕೀಯ ಸ್ಥಿತಿಗತಿಗಳನ್ನು ಕುರಿತ ಕವನಗಳು
1967 – ಕರದಡಕೆ – ಪ್ರಕೃತಿ ಪ್ರಧಾನವಾದ ಕವಿತೆಗಳು

1973 – ಎಲಿಯನ್ ಹಾರ್ಪ್ – ಇಂಗ್ಲಿಷ್ ಕವನಗಳು
1976 – ಹೊನ್ನ ಹೊತ್ತಾರೆ – ಕವಿತೆಗಳ ಸಂಕಲನ
1981 – ಸಮುದ್ರಲಂಘನ – ಸರಳ ರಗಳೆಯ ಖಂಡಕಾವ್ಯ
1981 – ಕೊನೆಯ ತೆನೆ ಮತ್ತು ವಿಶ್ವಮಾನವ ಸಂದೇಶ
1985 – ಮಹಾದರ್ಶನ ಮತ್ತು ಪ್ರಾಯಶ್ಚಿತ್ತ ಸರಳ ರಗಳೆಯ ಎರಡು ಖಂಡಕಾವ್ಯಗಳು
1997 – ಶ್ರೀ ರಾಮಾಯಣ ದರ್ಶನಂ – ಹಸ್ತಾಕ್ಷರದ ಮೂಲ ಪ್ರತಿಯ ತದ್ವತ್ ಪ್ರತಿಕೃತಿ ಪ್ರಕಟಣೆ

ನಾಟಕಗಳು

1926 – ಮೋಡಣ್ಣನ ತಮ್ಮ ಮಕ್ಕಳ ನಾಟಕ
1928 – ಯಮನ ಸೋಲು – ಸಾವಿತ್ರಿ ಸತ್ಯವಾನರ ಜನಪ್ರಿಯ ಕಥೆಯ ಆಧಾರಿತ ನಾಟಕ
1928 – ಜಲಗಾರ – ಎರಡು ದೃಶ್ಯಗಳನ್ನುಳ್ಳ ನಾಟಕ
1930 – ನನ್ನ ಗೋಪಾಲ – ಮಕ್ಕಳ ನಾಟಕ
1930 – ಬಿರುಗಾಳಿ – ಶೇಕ್ಸ್ ಪಿಯರ್ ಮಹಾಕವಿಯ ಟೆಂಪೆಸ್ಟ್ (Tempest) ನಾಟಕದ ರೂಪಾಂತರ
1931 – ಮೂರು ನಾಟಕಗಳು – ಮಹಾರಾತ್ರಿ, ಸ್ಮಶಾನ ಕುರುಕ್ಷೇತ್ರ, ಜಲಗಾರ
1931 – ಮಹಾರಾತ್ರಿ – ಸಿದ್ಧಾರ್ಥನು ಬುದ್ಧನಾಗಲು ಹೊರಡುವ ಮಹಾರಾತ್ರಿಯ ಕಥೆಯ ಆಧಾರಿತ ನಾಟಕ
1931 – ವಾಲ್ಮೀಕಿಯ ಭಾಗ್ಯ – ಸೀತಾವನವಾಸದ ವಸ್ತುವನ್ನು ಆಧಾರಿಸಿ ರಚಿತವಾದ ನಾಟಕ
1931 – ಸ್ಮಶಾನ ಕುರುಕ್ಷೇತ್ರಂ – ಯುದ್ಧ ದುರಂತತೆ, ಅನ್ಯಾಯ, ವಿನಾಶನ, ಕ್ರೌರ್ಯ, ಅವಿವೇಕತನಗಳಿಂದ ಒಂದು ಯುಗದ ನಾಶವನ್ನು ಪ್ರತಿಮಾದೃಷ್ಟಿಯಿಂದ ನೋಡುವ ದೃಶ್ಯರೂಪಕ
1932 – ರಕ್ತಾಕ್ಷಿ – ಶೇಕ್ಸ್ ಪಿಯರ್ ಮಹಾಕವಿಯ Hamlet ನಾಟಕಕ್ಕೆ ಬಿದನೂರಿನ ಇತಿಹಾಸವನ್ನು ಅಳವಡಿಸಿ ರಚಿಸಿರುವ ಸರಳ ರಗಳೆಯ ನಾಟಕ
1944 – ಶೂದ್ರತಪಸ್ವಿ – ಶಂಭೂಕನ ಕಥೆಯ ಸಾಮಗ್ರಿಯನ್ನು ಹೊಸರೀತಿಯಿಂದ ಅಳವಡಿಸಿರುವ ನಾಟಕ
1944 – ಎರಡು ನಾಟಕಗಳು – ಯಮನ ಸೋಲು ಮತ್ತು ವಾಲ್ಮೀಕಿಯ ಭಾಗ್ಯ
1947 – ಬೆರಳ್ಗೆ ಕೊರಳ್ – ಏಕಲವ್ಯನ ಕಥೆಯನ್ನು ಆಧರಿಸಿ ಬರೆದ ನಾಟಕ
1947 – ಬಲಿದಾನ – ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದ ಮೂರು ದೃಶ್ಯಗಳ ನಾಟಕ
1963 – ಚಂದ್ರಹಾಸ – ಕವಿತಾ ನಾಟಕ
1974 – ಕಾನೀನ – ಕರ್ಣನ ವೃತ್ತಾಂತ ಕುರಿತ ನಾಟಕ
1995 – ಸ್ಮಶಾನ ಕುರುಕ್ಷೇತ್ರಂ ಮತ್ತು ಮಹಾರಾತ್ರಿ
1995 – ಶ್ಮಶಾನ ಕುರುಕ್ಷೇತ್ರಂ ಮತ್ತು ಬೆರಳ್ಗೆ ಕೊರಳ್

ಕಾದಂಬರಿ, ಕಥೆ, ಗದ್ಯಚಿತ್ರ
1930 – ನರಿಗಳಿಗೇಕೆ ಕೋಡಿಲ್ಲ – ಮಕ್ಕಳ ಕಥೆ
1933 – ಮಲೆನಾಡಿನ ಚಿತ್ರಗಳು – ಗದ್ಯ ಚಿತ್ರಗಳ ಸಂಕಲನ
1936 – ಸಂನ್ಯಾಸಿ ಮತ್ತು ಇತರ ಕಥೆಗಳು – ಸಣ್ಣ ಕಥೆಗಳ ಸಂಕಲನ
1936 – ಕಾನೂರು ಹೆಗ್ಗಡಿತಿ – ಕುವೆಂಪು ಅವರ ಪ್ರಥಮ ಮಹಾಕಾದಂಬರಿ
1940 – ನನ್ನ ದೇವರು ಮತ್ತು ಇತರ ಕಥೆಗಳು – ಕಥಾ ಸಂಕಲನ
1967 – ಮಲೆಗಳಲ್ಲಿ ಮದುಮಗಳು – ಕುವೆಂಪು ಅವರ ಎರಡನೆಯ ಮಹಾಕಾದಂಬರಿ
1985 – ಕತೆಗಳೊಡನೆ ಆರಂಭದಲ್ಲಿ – ಕಥಾ ಸಂಕಲನ
ಕಾವ್ಯಮೀಮಾಂಸೆ, ಸಾಹಿತ್ಯ ವಿಮರ್ಶೆ, ಭಾಷಣ, ಪತ್ರಗಳು

1944 – ಸಾಹಿತ್ಯ ಪ್ರಚಾರ – ಭಾಷಣಗಳ ಸಂಗ್ರಹ
1944 – ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ – ಭಾಷಣಗಳ ಸಂಕಲನ
1946 – ಕಾವ್ಯವಿಹಾರ – ವಿಮಾರ್ತಾತ್ಮಕ ಲೇಖನಗಳು
1950 – ತಪೋನಂದನ – ದಾರ್ಶನಿಕ ವಿಮರ್ಶೆ
1953 – ವಿಭೂತಿ ಪೂಜೆ – ವಿಮರ್ಶೆಯ ಲೇಖನಗಳು
1959 – ವಿಶ್ವವಿದ್ಯಾನಿಲಯ ಪ್ರಸಾರಾಂಗ, ಕುಲಪತಿ ಭಾಷಣಗಳ ಆಯ್ದ ಭಾಗಗಳು
1960 – ದ್ರೌಪದಿಯ ಶ್ರೀಮುಡಿ – ಸಾಹಿತ್ಯ ವಿಮರ್ಶೆ ಮತ್ತು ಕಾವ್ಯ ಮೀಮಾಂಸೆ
1962 – ರಸೋ ವೈಸಃ – ಸಾಹಿತ್ಯ ವಿಮರ್ಶೆ ಮತ್ತು ಕಾವ್ಯ ಮೀಮಾಂಸೆ
1964 – ಪಷ್ಠಿನಮನ – ಭಾಷಣ, ಲೇಖನ, ಮುನ್ನುಡಿಗಳ ಸಂಗ್ರಹ
1966 – ಶ್ರೀ ಕುವೆಂಪು ಭಾಷಣಗಳು – ಬಿನ್ನವತ್ತಳೆಗಳು
1970 – ಇತ್ಯಾದಿ – ವಿಮರ್ಶಾ ಸಂಕಲನ
1971 – ಮನುಜಮತ ವಿಶ್ವಪಥ – ಭಾಷಣಗಳ ಲೇಖನ ಸಂಗ್ರಹ
1974 – ಕುವೆಂಪು ಪತ್ರಗಳು
1976 – ವಿಚಾರ ಕ್ರಾಂತಿಗೆ ಆಹ್ವಾನ – ಭಾಷಣ ಸಂಕಲನ
1976 – ರಾಷ್ಟ್ರಕವಿ ಭಾಷಣಗಳು
1978 – ಜನತಾಪ್ರಜ್ಞೆ ಮತ್ತು ವೈಚಾರಿಕ ಜಾಗೃತಿ – ಭಾಷಣ ಸಂಗ್ರಹ
1983 – ದಾರ್ಶನಿಕ ಕಾವ್ಯ ಮೀಮಾಂಸೆ – ಆಯ್ದ ವಿಮರ್ಶಾ ಲೇಖನಗಳ ಸಂಕಲನ
1989 – ಮುನ್ನುಡಿ ತೋರಣ
1993 – ಶ್ರೀ ರಾಮಕೃಷ್ಣ ವಚನವೇದ ನುಡಿನಮನ – ಕಿರು ಪುಸ್ತಿಕೆ
ಜೀವನ ಚರಿತ್ರೆ, ಆತ್ಮ ಚರಿತ್ರೆ

1932 – ಸ್ವಾಮಿ ವಿವೇಕಾನಂದ – ಜೀವನ ಚರಿತ್ರೆ
1934 – ಶ್ರೀ ರಾಮಕೃಷ್ಣ ಪರಮಹಂಸ – ಜೀವನ ಚರಿತ್ರೆ
1980 – ನೆನಪಿನ ದೋಣಿಯಲ್ಲಿ ಭಾಗ-1 – ಆತ್ಮಕಥೆ
1985 – ನೆನಪಿನದೋಣಿಯಲ್ಲಿ ಭಾಗ-2 ಆತ್ಮಕಥೆ
ಭಾಷಾಂತರ

1932 – ವಿವೇಕವಾಣಿ – ವಿವೇಕಾನಂದರ ಬರಹಗಳಿಂದ ಆಯ್ದ ಭಾಗಗಳ ಭಾಷಾಂತರ ಹಾಗೂ ಪ್ರೇರಿತ ಕವನ, ಗದ್ಯ ಚಿತ್ರಗಳು
1934 – ಋಷಿವಾಣಿ-ಉಪನಿಷತ್ತು – ಮಂತ್ರಗಳ ಅನುವಾದ
1934 – ವೇದಾಂತ – ಸ್ವಾಮಿ ವಿವೇಕಾನಂದರ ಭಾಷಣದ ಅನುವಾದ ಪುಸ್ತಿಕೆ
1950 – ಜನಪ್ರಿಯ ವಾಲ್ಮೀಕಿ ರಾಮಾಯಣ – ಮೂಲ ರಾಮಾಯಣದ ಕಥೆ
1954 – ಗುರುವಿನೊಡನೆ ದೇವರಡಿಗೆ ಭಾಗ – 1 – ಶ್ರೀ ಸ್ವಾಮಿ ಶಿವಾನಂದರ ಮಾತುಕತೆಗಳು
1964 – ಗುರುವಿನೊಡನೆ ದೇವರಡಿಗೆ ಭಾಗ – 2 – ಶ್ರೀ ಸ್ವಾಮಿ ಶಿವಾನಂದರ ಮಾತುಕತೆಗಳು

ಸಂಪಾದಿತ
1958 – ಕರ್ಣಾಟ ಭಾರತ ಕಥಾಮಂಜರಿ (ಮಾಸ್ತಿಯವರೊಂದಿಗೆ ಸಹ ಸಂಪಾದಿತ ಕೃತಿ)
ಆಯ್ದ ಕವನ ಸಂಕಲನಗಳು
1965 – ಕಾವ್ಯರ್ಷಿ ಕುವೆಂಪು ಕೊಟ್ಟ ಕನ್ನಡ ದೀಕ್ಷೆ
1968 – ಕನ್ನಡ ಡಿಂಡಿಮ
1972 – ಪ್ರಾರ್ಥನಾ ಗೀತಾಂಜಲಿ
1973 – ಕಬ್ಬಿಗನ ಕೈಬುಟ್ಟಿ
1977 – ಕ್ರಾಂತಿ ಕಹಳೆ
1984 – ಆಯ್ದ ಕುವೆಂಪು ಕವನಗಳು
ಸಮಗ್ರ ಸಂಪುಟಗಳು
2000 – ಕುವೆಂಪು ಸಮಗ್ರ ಕಾವ್ಯ ಸಂಪುಟ 1
2000 – ಕುವೆಂಪು ಸಮಗ್ರ ಕಾವ್ಯ ಸಂಪುಟ 2
2003 – ಕುವೆಂಪು ಸಮಗ್ರ ಗದ್ಯ ಸಂಪುಟ 1
2004 – ಕುವೆಂಪು ಸಮಗ್ರ ಗದ್ಯ ಸಂಪುಟ 2
2004 – ಕುವೆಂಪು ಸಮಗ್ರ ನಾಟಕ ಸಂಪುಟ
(ಕೃತಿ ಸೂಚಿಯ ಮಾಹಿತಿ: ಡಾ.ಕೆ.ಸಿ.ಶಿವಾರೆಡ್ಡಿಯವರು ಸಂಪಾದಿಸಿರುವ ಕುವೆಂಪು ಸಮಗ್ರ ನಾಟಕ ಕೃತಿಯಿಂದ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 2004)




