ವಸುಧೇಂದ್ರ ಪರಿಚಯ

4 years ago

ವಸುಧೇಂದ್ರ

ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ 1969ರಲ್ಲಿ ಜನಿಸಿದ ವಸುಧೇಂದ್ರ ಅಲ್ಲಿಯೇ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಾಡಿದ್ದಾರೆ. NITK ಸೂರತ್ಕಲ್‌ನಿಂದ ಇಂಜಿನಿಯರಿAಗ್ ಮತ್ತು IISc ಬೆಂಗಳೂರಿನಿಂದ ಎಂ.ಇ. ಪದವಿ ಪಡೆದಿದ್ದಾರೆ. 20 ವರ್ಷಗಳ ಕಾಲ ಸಾಫ್ಟ್ವೇರ್ ಪ್ರಪಂಚದಲ್ಲಿ ಕೆಲಸ ಮಾಡಿದ್ದಾರೆ. ಈಗ ತಮ್ಮ ಸಮಯವನ್ನು ಪ್ರವಾಸ, ಓದು ಮತ್ತು ಬರೆಹಗಳಲ್ಲಿ ಕಳೆಯುತ್ತಾರೆ.

ಕಥಾಸಂಕಲನಗಳು: ಮನೀಷೆ, ಯುಗಾದಿ, ಚೇಳು, ಹಂಪಿ ಎಕ್ಸ್ಪ್ರೆಸ್

ಕಾದಂಬರಿಗಳು: ಹರಿಚಿತ್ತ ಸತ್ಯ, ತೇಜೋ ತುಂಗಭದ್ರ

ಲಲಿತ ಪ್ರಬಂಧಗಳು: ಕೋತಿಗಳು, ನಮ್ಮಮ್ಮ ಅಂದ್ರೆ ನಂಗಿಷ್ಟ, ರಕ್ಷಕ ಅನಾಥ, ವರ್ಣಮಯ

ಅನುವಾದ: ಮಿಥುನ (ಶ್ರೀರಮಣರ ತೆಲುಗು ಕತೆಗಳು)

ವಿಜ್ಞಾನ: ಇ-ಕಾಮರ್ಸ್

ಬ್ರೇಲ್‌ನಲ್ಲಿ: ಅದೃಶ್ಯ ಕಾವ್ಯ (ಆಯ್ದ ಸುಲಲಿತ ಪ್ರಬಂಧಗಳ ಸಂಕಲನ)

ಪ್ರಶಸ್ತಿಗಳು

ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ದ.ರಾ. ಬೇಂದ್ರೆ ಕಥಾ ಪ್ರಶಸ್ತಿ, ಮಾಸ್ತಿ ಕಥಾ ಪುರಸ್ಕಾರ, ಡಾ. ಯು. ಆರ್. ಅನಂತಮೂರ್ತಿ ಪ್ರಶಸ್ತಿ, ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ, ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ, ವರ್ಧಮಾನ ಉದಯೋನ್ಮುಖ ಪ್ರಶಸ್ತಿ, ಸೇಡಂನ ಅಮ್ಮ ಪ್ರಶಸ್ತಿ ಮತ್ತು ಕಥಾರಂಗಂ ಪ್ರಶಸ್ತಿಗಳನ್ನು ಪಡೆದಿದ್ದಾರೆ.

‘ಛಂದ ಪುಸ್ತಕ’ ಎಂಬ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿ, ಅದರ ಮೂಲಕ ನಾಡಿನ ಹಲವಾರು ಹೊಸ ಬರಹಗಾರರ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

Leave a Reply